Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಚಂಡಿಪುರ ವೈರಸ್‌ಗೆ ಅಸುನೀಗಿದ ನಾಲ್ವರು ಮಕ್ಕಳು..! ಇದರ ಲಕ್ಷಣವೇನು? ಹರಡುವುದು ಹೇಗೆ?
ಕಾಲ ಉರುಳಿದಂತೆ ಹೊಸ ಹೊಸ ಕಾಯಿಲೆಗಳು, ವೈರಸ್ ಗಳು ಮಾನವ ಕುಲವನ್ನು ಕಾಡಲು ಆರಂಭಿಸಿದೆ. ಅದ್ರಲ್ಲೂ ಕೋವಿಡ್ ವೈರಸ್ ಹೆಸರು ಕೇಳಿದರೆ ಒಮ್ಮೆ ಎಲ್ಲರು ಆಘಾತಕ್ಕೊಳಗಾಗುತ್ತಾರೆ. ಇದಾದ ಬಳಿಕ ನಮ್ಮ ನಡುವೆ ಹತ್ತಾರು ವೈರಸ್ ಪ್ರಕರಣಗಳು ಸುಳಿದಿವೆ. ಎಬೋಲಾ, ಡೆಂಘ್ಯು, ವೆಸ್ಟ್ ನೈಲ್, ಮಲೇರಿಯಾ, ಝಿಕಾ ಹೀಗೆ ಒಂದಲ್ಲಾ ಒಂದು ವೈರಸ್‌ಗಳು ಹರಡುತ್ತಲೇ ಇರುತ್ತದೆ.
ಈಗ ಮತ್ತೊಂದು ಹೊಸ ವೈರಸ್ ಕಾಡಲು ಆರಂಭಿಸಿದ್ದು, 4 ಮಂದಿ ಮಕ್ಕಳು ಈ ವೈರಸ್‌ಗೆ ಈಗ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಹೌದು ಗುಜರಾತ್‌ನಲ್ಲಿ ಹೊಸದೊಂದು ವೈರಸ್ ಪತ್ತೆಯಾಗಿದೆ. ಚಂಡೀಪುರ ವೈರಸ್ ಎಂದು ಕರೆಲಾಗುತ್ತಿರುವ ಈ ವೈರಸ್‌ನಿಂದಾಗಿ 4 ಮಕ್ಕಳು ಅಸುನೀಗಿದ್ದಾರೆ ಎಂದು ವರದಿಯಾಗಿದೆ.

ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯಲ್ಲಿ ಚಂಡಿಪುರ ವೈರಸ್‌ನ ಶಂಕಿತ ಸೋಂಕು ನಾಲ್ಕು ಮಕ್ಕಳನ್ನು ಬಲಿ ತೆಗೆದುಕೊಂಡಿದೆ ಮತ್ತು ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಇಬ್ಬರು ಮಕ್ಕಳು ಜಿಲ್ಲೆಯ ಹಿಮ್ಮತ್‌ನಗರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲಾ ಆರು ಮಕ್ಕಳ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ದೃಢೀಕರಣಕ್ಕಾಗಿ ಕಳುಹಿಸಲಾಗಿದೆ ಮತ್ತು ಅವರ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. ಈ ವೈರಸ್ ಹೇಗೆ ಹರಡುತ್ತಿದೆ, ಇದರ ಅಪಾಯವೇನು? ಸಾವಿನ ಪ್ರಮಾಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದ್ದು, ಜನರಲ್ಲಿ ಹೊಸ ಆತಂಕ ಸೃಷ್ಟಿಯಾಗಿದೆ.
ಚಂಡಿಪುರ ವೈರಸ್‌ನ ಲಕ್ಷಣಗಳೇನು ಗೊತ್ತಾ?
ಅಚ್ಚರಿ ಅಂದರೆ ಈ ಚಂಡೀಪುರ ವೈರಸ್ ಸಹ ಸೊಳ್ಳೆಗಳಿಂದಲೇ ಹರಡುತ್ತದೆ. ಸೊಳ್ಳೆಗಳು ಕಚ್ಚುವುದರಿಂದ ಈ ವೈರಸ್ ಹರಡುತ್ತದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಈ ವೈರಸ್ ವಿಪರೀತ ಜ್ವರ ಉಂಟು ಮಾಡುತ್ತದೆ. ಜ್ವರದಂತೆಯೇ ರೋಗಲಕ್ಷಣಗಳು ಮತ್ತು ತೀವ್ರವಾದ ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ) ಸಹ ಕಂಡುಬರುತ್ತದೆ. ಈ ವೈರಸ್ ತಗುಲಿದ ಬಳಿಕ ತೀವ್ರ ಅನಾರೋಗ್ಯ, ಕೋಮಾ ಮತ್ತು ಸಾವಿನ ತ್ವರಿತ ಪ್ರಗತಿಗೆ ಕಾರಣವಾಗಬಹುದು.
ರೋಗಕಾರಕವು ರಾಬ್ಡೋವಿರಿಡೆ ಕುಟುಂಬದ ವೆಸಿಕ್ಯುಲೋವೈರಸ್‌ನ ವಂಶದಿಂದ ಬಂದಿದ್ದಾಗಿದೆ. ಸೊಳ್ಳೆಯಿಂದ ಮಾತ್ರವಲ್ಲ ಈ ವೈರಸ್ ನೊಣಗಳು, ಒಣಗು ಸೇರಿ ಪ್ರಾಣಿಗಳ ಮೈಮೇಲೆ ಕೂರುವ ಕೀಟಗಳ ಮೂಲಕವೂ ಹರಡಬಹುದು ಎಂದು ಅಂದಾಜಿಸಲಾಗಿದೆ. ಅದರೆ ಈ ಕುರಿತು ಇನ್ನಷ್ಟೇ ಅಧ್ಯಯನ ನಡೆಯುತ್ತಿದೆ.
ಜುಲೈ 10 ರಂದು ನಾಲ್ಕು ಮಕ್ಕಳು ಸಾವನ್ನಪ್ಪಿದ ನಂತರ ಹಿಮ್ಮತ್‌ನಗರ ಸಿವಿಲ್ ಆಸ್ಪತ್ರೆಯ ಮಕ್ಕಳ ವೈದ್ಯರು ಚಂಡಿಪುರ ವೈರಸ್‌ನ ಪಾತ್ರವನ್ನು ಶಂಕಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ವೈರಸ್ ಮತ್ತಷ್ಟು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪೀಡಿತ ಪ್ರದೇಶಗಳಲ್ಲಿ ಕೀಟಗಳು ಮತ್ತು ಸೊಳ್ಳೆಗಳನ್ನು ಕೊಲ್ಲಲು ಕ್ರಮ ಕೈಗೊಳ್ಳಲಾಗಿದೆ.
ಚಂಡಿಪುರ ವೈರಸ್‌ನ ತಡೆಯುವುದು ಹೇಗೆ?
ಎಲ್ಲಾ ವೈರಸ್‌ಗಳಿಗೂ ಮೂಲ ಹುಡುಕಿದರೆ ಅವು ನಮ್ಮ ನಿರ್ಲಕ್ಷದಿಂದ ಹರಡುವುದೇ ಹೆಚ್ಚಾಗಿದೆ. ಅದ್ರಲ್ಲೂ ಈ ಸೊಳ್ಳೆಗಳಿಂದ ಹರಡುವ ವೈರಸ್‌ಗಳು ನಮ್ಮ ಜೀವಕ್ಕೆ ಹಾನಿ ಉಂಟು ಮಾಡುತ್ತಿದೆ. ಈಗ ಚಂಡಿಪುರ ವೈರಸ್ ಮೂಲ ಸಹ ಸೊಳ್ಳೆಗಳಾಗಿವೆ. ಹೀಗಾಗಿ ಸೊಳ್ಳೆಗಳ ಕಡಿತದಿಂದ ಪಾರಾಗುವುದು ಈ ವೈರಸ್ ಹರಡುವಿಕೆಯಿಂದ ಪಾರಾಗಲು ಇರುವ ಮೊದಲ ತಡೆಗಟ್ಟುವ ಕ್ರಮವಾಗಿದೆ.
ಇನ್ನೊಂದೆಡೆ ಪ್ರಾಣಿಗಳ ಸಂಪರ್ಕಕ್ಕೆ ಬಾರದೆ ಇರುವುದು, ಮನೆ ಬಳಿ ನೀರು ನಿಲ್ಲದಂತೆ, ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಮನೆ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಲ್ಲದೆ ಸಣ್ಣ ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

