Latest Updates
-
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ!
ಅತಿಸಾರ ಕಡಿಮೆಯಾಗಲು ಮನೆಮದ್ದು.! 5 ನಿಮಿಷಕ್ಕೆ ಗುಣವಾಗುತ್ತೆ..!
ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ, ಹೀಗಾಗಿ ಹಲವು ಬಾರಿ ನಾವು ಫುಡ್ ಪಾಯಿಸನ್ ಸೇರಿ ಹಲವು ರೀತಿಯ ಅನಾರೋಗ್ಯಕ್ಕೆ ನಾವು ಒಳಗಾಗುತ್ತಿರುತ್ತೇವೆ. ಅದರಲ್ಲು ಅತಿಸಾರ ಅಥವಾ ಭೇದಿ ಸಹ ಹಲವು ಬಾರಿ ಕಾಡುವ ಸಮಸ್ಯೆಯಾಗಿದೆ. ಪದೇ ಪದೇ ಶೌಚಾಲಯಕ್ಕೆ ಹೋಗುವುದು, ಹೋದರೂ ಮತ್ತೆ ಮತ್ತೆ ಅತಿಸಾರವಾಗುವುದು ನಮ್ಮ ಹೊಟ್ಟೆಯ ಅನಾರೋಗ್ಯದ ಸೂಚಕವಾಗಿದೆ.
ಅದರಲ್ಲೂ ಅತಿಸಾರ ನಿರಂತರವಾಗಿದ್ದರೆ ಸಾವಿಗೂ ಕಾರಣವಾಗುತ್ತದೆ. ಹೀಗಾಗಿ ಒಂದು ದಿನ ಅಥವಾ ಎರಡು ದಿನಕ್ಕಿಂತ ಹಚ್ಚಿನ ಅತಿಸಾರವು ಜೀವಕ್ಕೆ ಹಾನಿ ಮಾಡಬಹುದು ಹೀಗಾಗಿ ಇದಕ್ಕೂ ಅಗತ್ಯ ಚಿಕಿತ್ಸೆ ಪಡೆಯಬೇಕಾಗುತ್ತದೆ. ಅದರೆ ಇತ್ತೀಚಿಗೆ ಯಾವ ಕಾರಣಕ್ಕೆ ಅತಿಸಾರ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಅಂದಾಜು ಮಾಡಲು ಸಹ ಸಾಧ್ಯವಾಗುವುದಿಲ್ಲ.

ನಿತ್ಯವೂ ಒಂದಲ್ಲಾ ಒಂದು ವೈರಸ್‌ಗಳಿಗೆ ತುತ್ತಾಗುವ ದಿನಗಳಲ್ಲಿ ಅತಿಸಾರ ಉಂಟಾಗಲು ಕೂಡ ಯಾವುದಾದರು ವೈರಸ್ ಕಾರಣವಾಗಬಹುದು. ಆದ್ರೆ ಹಲವರು ಅತಿಸಾರದಲ್ಲಿ ಮನೆಮದ್ದು ಮಾಡುತ್ತಾರೆ, ಆದ್ರೆ ಸರಿಯಾದ ಮನೆಮದ್ದು ಯಾವುದು ಎಂಬುದು ಅವರಿಗೆ ತಿಳಿದಿರುವುದಿಲ್ಲ.
ಹೀಗಾಗಿ ನಾವಿಂದು ಅತಿಸಾರಕ್ಕೆ ತಕ್ಷಣದಲ್ಲಿ ಮಾಡಬಹುದಾದ ಮನೆಮದ್ದು ಯಾವುದು ಎಂಬುದನ್ನು ತಿಳಿದುಕೊಳ್ಳೋಣ. ಹೆಚ್ಚಾಗಿ ಅತಿಸಾರವಾಗುವುದು ಆಹಾರದಲ್ಲಿ ಬದಲಾವಣೆಯಾದಾಗ, ನೀರಿನಿಂದ, ಹವಾಮಾನ ಬದಲಾವಣೆಯಿಂದಲೂ ಸಂಭವಿಸುತ್ತದೆ. ಆದರೆ ಯಾವ ಮನೆಮದ್ದು ಮಾಡಬೇಕು ಎಂಬುದನ್ನು ನೋಡಿ.
ಬೆಲ್ಲದ ನೀರು
ಮೊದಲು ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಬಿಸಿ ಮಾಡಲು ಇಡಿ. ಬಳಿಕ ಇದಕ್ಕೆ 1 ಸ್ಪೂನ್ ಜಜ್ಜಿದ ಬೆಲ್ಲ ಹಾಕಿ ಕುದಿಸಿಕೊಳ್ಳಿ. ಬೆಲ್ಲ ಚೆನ್ನಾಗಿ ಕರಗಿ ಕುದಿಬರಲು ಬಿಡಿ. ಚೆನ್ನಾಗಿ ಕುದಿಬಂದ ಬಳಿಕ ಈ ನೀರನ್ನು ಇಳಿಸಿಕೊಳ್ಳಿ. ಇದನ್ನು ನೇರವಾಗಿ ಕುಡಿದರೆ ಅತಿಸಾರ ಕಡಿಮೆಯಾಗುತ್ತದೆ.
ಬ್ಲಾಕ್ ಟೀ
ಪಾತ್ರೆಗೆ ಅರ್ಧ ಲೋಟ ನೀರು ಹಾಕಿ ಅದಕ್ಕೆ 1 ಸ್ಪೂನ್ ಟೀ ಪುಡಿ ಹಾಕಿ ಕುದಿಸಿಕೊಳ್ಳಿ. ಕುದಿಬಂದ ಬಳಿಕ ಇದನ್ನು ಜರಡಿ ಹಿಡಿದು ಸೋಸಿಕೊಳ್ಳಿ. ಇದಕ್ಕೆ ಸಕ್ಕರೆ ಹಾಕದೆಯೇ ಅದಕ್ಕೆ ಅರ್ಧ ಸ್ಪೂನ್ ಬೆಣ್ಣೆ ಇದ್ದರೆ ಹಾಕಿಕೊಂಡು ಕುಡಿಯಬೇಕು. ಇದನ್ನು ಮಾಡಿದ ಅರ್ಧ ಗಂಟೆಯಲ್ಲಿ ಅತಿಸಾರ ನಿಲ್ಲುತ್ತದೆ.
ಕೊಡಸಿಗ
ಕೊಡಸಿಗ ಎಂಬ ಹೂ ಬಿಡುವ ಗಿಡವನ್ನು ನೀವು ನೋಡಿರಬಹುದು. ಬಿಳಿ ಬಣ್ಣದ ಮಲ್ಲಿಗೆ ಹೂವಿನಂತೆ ಇರುತ್ತದೆ. ಈ ಗಿಡದ ಬೇರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೇದಿ ಅದನ್ನು ಒಂದು ಸ್ಪೂನ್ ಹಾಗೆಯೇ ಸೇವಿಸಬೇಕು. ಹೀಗೆ ಮಾಡುವುದರಿಂದ ಅತಿಸಾರ ಕ್ಷಣದಲ್ಲಿ ಕಡಿಮೆಯಾಗುತ್ತದೆ. ಈ ಗಿಡದಲ್ಲಿ ಅಂಟು ಅಂಟಾದ ಹಾಲು ಬರುತ್ತದೆ, ಗಿಡದ ಎಲೆ ಮುರಿದಾಗ, ಕಡ್ಡಿ ಮುರಿದಾಗ ಇದರಿಂದ ಬಿಳಿ ಬಣ್ಣದ ಅಂಟಾದ ಹಾಲು ಬರುತ್ತದೆ.
ಕೊತ್ತಂಬರಿ ನೀರು
ಸ್ವಲ್ಪ ಕೊತ್ತಂಬರಿ ಬೀಜ ತೆಗೆದುಕೊಂಡು ಅದಕ್ಕೆ ಜೀರಿಗೆ ಹಾಕಿಕೊಂಡು ಚೆನ್ನಾಗಿ ಜಜ್ಜಿ ಪುಡಿ ಮಾಡಿಕೊಳ್ಳಬೇಕು. ಮಿಕ್ಸಿಗೆ ಹಾಕಿ ಒಂದು ಸುತ್ತು ಹೊಡೆಸಿದರು ಆಗುತ್ತದೆ. ನಂತರ ಇದರ ಪುಡಿಯನ್ನು ತೆಗೆದಿಟ್ಟುಕೊಳ್ಳಿ. ಈಗ ಒಲೆ ಮೇಲೆ ಇಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯುವಾಗ ಈ ಪುಡಿಯನ್ನು ನೀರಿಗೆ ಹಾಕಿ ಕುದಿಯಲು ಬಿಡಿ. ಕುದಿಬಂದ ಬಳಿಕ ಇದಕ್ಕೆ ಒಂದು ಸ್ಪೂನ್ ಕಲ್ಲು ಸಕ್ಕರೆ ಇದ್ದರೆ ಹಾಕಿಕೊಂಡು ಕುದಿಸಿ, ಬಳಿಕ ಜರಡಿ ಹಿಡಿದು ಶೋದಿಸಿಕೊಳ್ಳಿ. ನಂತರ ಇದರ ನೀರನ್ನು ಕುಡಿಯಿರಿ, ತಕ್ಷಣ ಅತಿಸಾರ ಕಡಿಮೆಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications