Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಸಿಸ್ಟರ್.. ಪಾದ ನೋವಿಗೆ ಸಿಂಪಲ್ ಮದ್ದು..! 20 ನಿಮಿಷ ಉಪ್ಪು ನೀರಿನಲ್ಲಿ ಕಾಲು ನೆನೆಸಿ.. ಈ ಸಮಸ್ಯೆಗಳೆಲ್ಲಾ ಮಾಯ!
ಪಾದಗಳ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? 20 ನಿಮಿಷ ಈ ವಿಧಾನ ಮಾಡಿದ್ರೆ ಸಾಕು. ದಿನವಿಡೀ ಕಾಡುವ ಆಯಾಸ, ನೋವು, ಒತ್ತಡಕ್ಕೆ ಮದ್ದು ಇಲ್ಲಿದೆ. ಹೌದು, ದೈನಂದಿನ ಜೀವನದಲ್ಲಿ ಒತ್ತಡ ಮತ್ತು ಆಯಾಸ ಸಾಮಾನ್ಯ. ಅದರಲ್ಲೂ ಇಡೀ ದಿನ ದುಡಿದು ಮನೆಗೆ ಬಂದ ನಂತರ ದೇಹ ಮತ್ತು ಮನಸ್ಸು ಎರಡೂ ಬಳಲಿರುತ್ತವೆ. ಕೆಲಸದ ಭರಾಟೆ, ಓಡಾಟದಿಂದಾಗಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಡುವುದು ಸಹಜ. ನಿದ್ರಾಹೀನತೆ, ನಿರಂತರ ಆಯಾಸ, ಮಾನಸಿಕ ಒತ್ತಡ, ಟೆನ್ಷನ್ ಮುಂತಾದ ಸಮಸ್ಯೆಗಳು ಇಂದಿನ ಜೀವನಶೈಲಿಯ ಅವಿಭಾಜ್ಯ ಅಂಗಗಳಾಗಿವೆ.
ಆದರೆ, ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಒಂದು ಸರಳ ಮತ್ತು ಪರಿಣಾಮಕಾರಿ ಮನೆಮದ್ದು ಇದೆ. ಅದೇನು ಗೊತ್ತಾ? ರಾತ್ರಿ ಮಲಗುವ ಮುನ್ನ ಕೇವಲ 20 ನಿಮಿಷಗಳ ಕಾಲ ಉಪ್ಪು ಮಿಶ್ರಿತ ನೀರಿನಲ್ಲಿ ನಿಮ್ಮ ಪಾದಗಳನ್ನು (soaking feet in salt water) ಇಡುವುದು. ಈ ಸುಲಭ ಉಪಾಯವು ಆಯಾಸ ಮತ್ತು ನೋವನ್ನು ನಿವಾರಿಸಿ, ನಿಮಗೊಂದು ಮ್ಯಾಜಿಕ್ ಅನುಭವ ನೀಡಬಲ್ಲದು. ಈ ಸರಳ ವಿಧಾನದಿಂದಾಗುವ ಅದ್ಭುತ ಪ್ರಯೋಜನಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಉಪ್ಪು ನೀರಿನಲ್ಲಿ ಪಾದಗಳನ್ನು ನೆನೆಸುವುದರ ಪ್ರಯೋಜನಗಳು
ಪ್ರತಿದಿನ ಮಲಗುವ ಮುನ್ನ ಉಪ್ಪು ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಈ ಕೆಳಗಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
1. ಆಯಾಸ ಮತ್ತು ಬಿಗಿತ ನಿವಾರಣೆ
ಉಪ್ಪು ನೀರಿನಲ್ಲಿ ಪಾದಗಳನ್ನು (Foot Care) ನೆನೆಸಿಡುವುದರಿಂದ ಮಾಂಸಖಂಡಗಳಲ್ಲಿನ ಬಿಗಿತ ಕಡಿಮೆಯಾಗುತ್ತದೆ. ಇದರಿಂದ ದಿನವಿಡೀ ಕಾಡಿದ ಆಯಾಸ ದೂರವಾಗುತ್ತದೆ. ಉಪ್ಪಿನಲ್ಲಿರುವ ಮ್ಯಾಗ್ನೀಸಿಯಮ್ ಅಂಶವು ನರಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ, ನೀವು ಸಂಪೂರ್ಣ ವಿಶ್ರಾಂತಿ ಪಡೆಯುತ್ತೀರಿ.
2. ನೋವು ಮತ್ತು ಊತ ನಿವಾರಣೆ
ಉಪ್ಪು ನೀರು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಪಾದಗಳಲ್ಲಿನ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯಕ. ದೀರ್ಘಕಾಲ ನಿಂತು ಕೆಲಸ ಮಾಡುವವರಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ.
3. ಉತ್ತಮ ನಿದ್ರೆ ಮತ್ತು ಮಾನಸಿಕ ಶಾಂತಿ
ದಿನವಿಡೀ ಕೆಲಸ ಮಾಡಿ ಆದ ಆಯಾಸವನ್ನು ನಿವಾರಿಸುವುದರಿಂದ, ಉಪ್ಪು ನೀರಿನ ಪಾದ ಸ್ನಾನವು ರಾತ್ರಿ ನಿಮಗೆ ಉತ್ತಮ ನಿದ್ರೆ ಪಡೆಯಲು ನೆರವಾಗುತ್ತದೆ. ದೇಹ ಮತ್ತು ಮನಸ್ಸಿಗೆ ಶಾಂತಿ ದೊರೆಯುವುದರಿಂದ ಆತಂಕ ಮತ್ತು ಒತ್ತಡ ಕಡಿಮೆಯಾಗಿ ಆರಾಮವಾಗಿ ನಿದ್ರಿಸಬಹುದು.
4. ಒತ್ತಡ ಮತ್ತು ಟೆನ್ಷನ್‌ಗೆ ಮುಕ್ತಿ
ಈ ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ದೇಹದಲ್ಲಿ ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ 'ಸಂತೋಷದ ಹಾರ್ಮೋನ್' ಎಂದೇ ಪ್ರಸಿದ್ಧವಾಗಿದೆ. ಇದು ಒತ್ತಡ ಮತ್ತು ಟೆನ್ಷನ್ ಅನ್ನು ದೂರ ಮಾಡಿ ಮನಸ್ಥಿತಿಯನ್ನು ಹಗುರಗೊಳಿಸುತ್ತದೆ.
5. ಚರ್ಮದ ಆರೈಕೆ ಮತ್ತು ಬಿರುಕು ನಿವಾರಣೆ
ಉಪ್ಪು ನೀರಿನಲ್ಲಿ ಇರುವ ಖನಿಜಗಳು ಚರ್ಮದ ರಕ್ಷಣಾ ತಡೆಗೋಡೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಆಗಿ ಇಡುತ್ತದೆ. ಹೀಗಾಗಿ, ಪಾದಗಳಲ್ಲಿನ ಒಣಗುವಿಕೆ ಮತ್ತು ಹಿಮ್ಮಡಿಗಳ ಬಿರುಕುಗಳ ಸಮಸ್ಯೆಯೂ ಕ್ರಮೇಣ ಕಡಿಮೆಯಾಗುತ್ತದೆ.
ಫ್ರೆಶ್ ಆಗಲು ಹೀಗೆ ಮಾಡಿ
ಉತ್ತಮ ಪರಿಹಾರ ಪಡೆಯಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.
• ಒಂದು ಟಬ್ ಅಥವಾ ದೊಡ್ಡ ಬಕೆಟ್‌ನಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ.
• ನೀರಿಗೆ ಸಾಮಾನ್ಯ ಉಪ್ಪು ಅಥವಾ ಸೈಂಧವ ಲವಣ (Rock Salt) ಅಥವಾ ಇಪ್ಸಮ್ ಸಾಲ್ಟ್ (Epsom Salt) ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
• ನಿಮ್ಮ ಪಾದಗಳನ್ನು ಈ ನೀರಿನಲ್ಲಿ ಕನಿಷ್ಠ 20 ನಿಮಿಷಗಳ ಕಾಲ ಮುಳುಗಿಸಿರಿ.
• ನಂತರ ಪಾದಗಳನ್ನು ಟವಲ್‌ನಿಂದ ಚೆನ್ನಾಗಿ ಒರೆಸಿ. ಹಾಗೆಯೇ ಉತ್ತಮ ಮಾಯಿಶ್ಚರೈಸರ್ ಅನ್ನು ಹಚ್ಚಿ.
ಒಟ್ಟಾರೆ ಈ ಸರಳ ವಿಧಾನವನ್ನು ಪ್ರತಿದಿನ ಮಲಗುವ ಮುನ್ನ ಅನುಸರಿಸಿದರೆ, ದಿನವಿಡೀ ಕಾಡಿದ ಎಲ್ಲಾ ಸಮಸ್ಯೆಗಳಿಂದ ಪರಿಹಾರ (benefit of soaking feet in salt water) ದೊರೆಯುತ್ತದೆ. ಜೊತೆಗೆ, ನೀವು ಫ್ರೆಶ್ ಆಗಿ ದಿನವನ್ನು ಮುಗಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
