Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಪಾದಗಳಲ್ಲಿ ಬಿರುಕು ಹೋಗಲಾಡಿಸಲು 5 ವಿಧಾನ
ಪಾದ ಒಡೆಯುವುದು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಅದರಲ್ಲೂ ಚಳಿಗಾಲದಲ್ಲಂತೂ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಕೆಲವರಿಗೆ ಪಾದ ಒಡೆದು ರಕ್ತ ಬರುವುದು, ಇದರಿಂದ ಕಾಲು ನೋಡಲು ಅಸಹ್ಯ ಕಾಣುವುದಿರಲಿ, ನಡೆಯುವಾಗ ತುಂಬಾ ನೋವಾಗುತ್ತದೆ.
ಪಾದ ಸ್ವಲ್ಪ ಒಡೆದರೆ ಅದಕ್ಕೆ ಕೂಡಲೇ ಚಿಕಿತ್ಸೆ ನೀಡದಿದ್ದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಇದಕ್ಕೆ ಚಿಕಿತ್ಸೆ ಮಾಡುವ ಮುನ್ನ ಈ ರೀತಿ ಏಕೆ ಉಂಟಾಗುತ್ತದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು,. ಪಾದಗಳಲ್ಲಿ ತೇವಾಂಶ ಕಡಿಮೆಯಾದರೆ ಒಣ ತ್ವಚೆಯಿಂದಾಗಿ ಈ ರೀತಿ ಉಂಟಾಗುತ್ತದೆ. ತುಂಬಾ ಹೊತ್ತು ನಿಂತು ಕೆಲಸ ಮಾಡುವವರಲ್ಲಿ ಕೂಡ ಈ ಸಮಸ್ಯೆ ಕಂಡು ಬರುತ್ತದೆ. ಹೆಚ್ಚಿನವರು ಮುಖದ ಆರೈಕೆಗೆ ಕೊಡುವ ಗಮನವನ್ನು ಪಾದಗಳ ಆರೈಕೆಗೆ ಕೊಡುವುದಿಲ್ಲ. ಇದರಿಂದ ಪಾದಗಳಲ್ಲಿ ಬಿರುಕು ಕಂಡು ಬರುತ್ತದೆ.
ಒಡೆದ ಪಾದಗಳಿಗೆ ಚಿಕಿತ್ಸೆ ಮಾಡುವಾಗ ಯಾವ ರೀತಿ ನಿಮ್ಮ ಪಾದ ಒಡೆದಿದೆ ಅದರ ಆದರ ಮೇಲೆ ಮಾಡಿ. ಪಾದಗಳು ಸ್ವಲ್ಪಒಡೆದರೆ ಏನು ಮಾಡಬೇಕು, ತುಂಬಾ ಒಡೆದಿದ್ದರೆ ಹೇಗೆ ಹೋಗಲಾಡಿಸಬೇಕು? ಅನ್ನುವುದನ್ನು ಇಲ್ಲಿ ಹೇಳಲಾಗಿದೆ. ಈ 5 ಪರಿಣಾಮಕಾರಿ ಮನೆ ಮದ್ದನ್ನು ಪಾಲಿಸಿದ್ದೇ ಆದರೆ ಸುಂದರ ಪಾದಗಳ ಒಡೆಯರು ನೀವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ನಿಂಬೆರಸ, ಉಪ್ಪು, ಗ್ಲಿಸೆರಿನ್, ರೋಸ್ ವಾಟರ್ ಮಾಸ್ಕ್
ಈ ಮಾಸ್ಕ್ ಮಾಡಿದರೆ ಪಾದಗಳು ಒಡೆಯುವುದಿಲ್ಲ, ಒಂದು ವೇಳೆ ಪಾದಗಳಲ್ಲಿ ಬಿರುಕು ಇದ್ದರೆ ಗುಣಮುಖವಾಗುವುದು. 1 ಚಮಚ ನಿಂಬೆರಸ, 2 ಚಮಚ ಉಪ್ಪು, 1 ಚಮಚ ಗ್ಲಿಸೆರಿನ್, 3-4 ಹನಿರೋಸ್ ವಾಟರ್ ಅನ್ನು ಹದ ಬಿಸಿ ನೀರಿನಲ್ಲಿ ಹಾಕಿ 10ರಿಂದ 15 ನಿಮಿಷ ಕಾಲ ಇಡಬೇಕು. ನಂತರ ಪಾದಗಳನ್ನು ಸ್ಕ್ರಬ್ ಮಾಡಿ ಕಾಲು ತೊಳೆಯಬೇಕು. ನಂತರ ರಾತ್ರಿ ಹಚ್ಚಿ ಮಲಗಬೇಕು. ನಂತರ ಬೆಳಗ್ಗೆ ಎದ್ದು ಪಾದಗಳನ್ನು ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ಪಾದಗಳಲ್ಲಿ ಬಿರುಕು ಕಂಡು ಬರುವುದಿಲ್ಲ.

2. ಎಣ್ಣೆ ಮಸಾಜ್
ತೆಂಗಿನೆಣ್ಣೆ, ಹರಳೆಣ್ಣೆ ಇವುಗಳನ್ನು ಮಿಶ್ರಣ ಮಾಡಿ ಪಾದಗಳಿಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಬೇಕು. ಈ ರೀತಿ ಪ್ರತಿದಿನ ಮಾಡಿದರೆ ಈ ಚಳಿಗಾಲದಲ್ಲಿ ಪಾದಗಳು ಒಡೆಯುವ ಸಮಸ್ಯೆ ನಿಮಗಿರುವುದಿಲ್ಲ.

ಫ್ರೂಟ್ ಮಾಸ್ಕ್
ಒಂದು ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಂಡು ಹಿಸುಕಬೇಕು, ನಂತರ ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ನಂತರ ಸ್ವಲ್ಪ ಪಪ್ಪಾಯಿ ಮತ್ತು ಸ್ವಲ್ಪ ಬೆಣ್ಣೆ ಹಣ್ಣನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ತೆಂಗಿನ ಕಾಯಿಯ ಹಾಲನ್ನು ಹಿಂಡಿ ಮಿಶ್ರಣ ಮಾಡಬೇಕು. ಈಗ ಈ ಮಿಶ್ರಣವನ್ನು ಪಾದಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಪಾದಗಳನ್ನು ತೊಳೆಯಬೇಕು. ಈ ಫ್ರೂಟ್ ಮಾಸ್ಕ್ ಅನ್ನು ತ್ವಚೆಗೆ ಹಚ್ಚಿದರೆ ತ್ವಚೆ ಒಡೆಯುವ ಸಮಸ್ಯೆ ಕಂಡು ಬರುವುದಿಲ್ಲ.

ಎಣ್ಣೆ ಟ್ರೀಟ್ ಮೆಂಟ್
ಎಲ್ಲಾ ಕಾಲದಲ್ಲೂ ಪಾದ ಒಡೆಯುವ ಸಮಸ್ಯೆ ಇದ್ದರೆ ವಾರದಲ್ಲಿ 2-3 ಬಾರಿ ಸ್ವಲ್ಪ ಅಕ್ಕಿ ಹಿಟ್ಟಿಗೆ 1 ಚಮಚ ಜೇನು ಮತ್ತು 1 ಚಮಚ ಆಪಲ್ ಸೈಡರ್ ವಿನಿಗರ್ ಹಾಕಿ ಸ್ಕ್ರಬ್ ಮಾಡಬೇಕು. ನಂತರ 10 ನಿಮಿಷ ಬಿಟ್ಟು ಕಾಲುಗಳನ್ನು ತೊಳೆದು ಎಣ್ಣೆ ಯಿಂದ ಮಾಯಿಶ್ಚರೈಸರ್ ಮಾಡಿದರೆ ಸಾಕು ಪಾದಗಳಲ್ಲಿ ಬಿರುಕು ಕಂಡು ಬರುವುದಿಲ್ಲ.

ಸಾಸಿವೆ ಎಣ್ಣೆ ಮತ್ತು ಮೇಣದ ಟ್ರೀಟ್ ಮೆಂಟ್
ಪಾದ ಒಡೆದು ರಕ್ತ ಬರುವಂತಿದ್ದರೆ ಈ ರೀತಿ ಮಾಡಿ. ಮೇಣವನ್ನು ಕರಗಿಸಿ ಎಣ್ಣೆಯಲ್ಲಿ ಹಾಕಿ ಕುದಿಸಿ, ನಂತರ ಪಾದಳನ್ನು ಚೆನ್ನಾಗಿ ಉಜ್ಜಿ ತೊಳೆದು ನಂತರ ಈ ಎಣ್ಣೆ ಮತ್ತು ಮೇಣ ಮಿಶ್ರಣವಾದ ಪೇಸ್ಟ್ ಅನ್ನು ಹಚ್ಚಿ ಸಾಕ್ಸ್ ಧರಿಸಿ ಮಲಗಿ. ಬೆಳಗ್ಗೆ ಎದ್ದು ಪಾದಗಳನ್ನು ತೊಳೆಯಿರಿ. ಈ ರೀತಿ ಮಾಡಿದರೆ ಎಂತಹ ಒಡೆದ ಪಾದವೂ ಸರಿಯಾಗುವುದು.



Click it and Unblock the Notifications