Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮನೆಯಲ್ಲೇ ಸುಂದರ ಪಾದ ಪಡೆಯೋಕೆ ಇಲ್ಲಿದೆ ಸರಳ ಪೆಡಿಕ್ಯೂರ್..! ಒಮ್ಮೆ ಬಳಸಿ ನೋಡಿ..!
ಸೌಂದರ್ಯ ಅಂದ್ರೆ ದೇಹದ ಎಲ್ಲಾ ಅಂಗಗಳು ಕೂಡ ಸುಂದರವಾಗಿ ಕಾಣಿಸಬೇಕು ಎಂದುಕೊಳ್ಳುತ್ತೇವೆ. ಆದ್ರೆ ನಾವು ಹೆಚ್ಚಾಗಿ ಮುಖದ ಸೌಂದರ್ಯಕ್ಕೆ ಒತ್ತು ನೀಡುತ್ತೇವೆ. ಮುಖಕ್ಕೆ ಬೇಕಾದಷ್ಟು ಕ್ರೀಮ್ ಹಚ್ಚುತ್ತೇವೆ. ಹಾಗೆ ಕಲೆಗಳು ಆಗದಂತೆ ನೋಡಿಕೊಳ್ಳುತ್ತೇವೆ. ಮುಖದ ಕಾಳಜಿ ಇನ್ನಿಲ್ಲದಂತೆ ಮಾಡುತ್ತೇವೆ. ಪಾರ್ಲರ್‌ಗೆ ತೆರಳುತ್ತೇವೆ. ಮಲಗುವಾಗ, ಬಿಸಿಲಿಗೆ ಹೋಗುವಾಗ, ಚಳಿಗಾಲಕ್ಕೆ, ಬೇಸಿಗೆಯಲ್ಲಿ ಮುಖದ ಕಾಂತಿ ಹೆಚ್ಚಿಸುವ ಕುರಿತಂತೆಯೇ ಆಲೋಚಿಸುತ್ತಾರೆ.
ಇನ್ನು ನಮ್ಮ ಮುಖದಂತೆ ಉಳಿದ ಅಂಗದ ಕಡೆಗೂ ನಾವು ಗಮನವಿಡಬೇಕಾಗುತ್ತದೆ. ಕಾಲು-ಕೈ ಸಹ ಸುಂದರವಾಗಿ ಕಾಣಿಸಬೇಕು ಎಂಬುದು ಎಲ್ಲರ ಆಲೋಚನೆಯ ಭಾಗವಾಗಿರುತ್ತೆ. ಆದ್ರೆ ನಾವು ಪೆಡಿಕ್ಯೂರ್ ಮಾಡಲು ಪಾರ್ಲರ್‌ಗೆ ತೆರಳಿದರೆ ಸಾವಿರಾರು ರೂಪಾಯಿ ವ್ಯಯಿಸಬೇಕಾಗುತ್ತದೆ. ಆದರೆ ಮನೆಯಲ್ಲೇ ಪೆಡಿಕ್ಯೂರ್ ಮಾಡಿಕೊಳ್ಳುವ ಸುಲಭದ ಉಪಾಯಗಳು ಸಹ ಇವೆ.

ಆದ್ರೆ ಮನೆಯಲ್ಲೇ ನಾವು ಪೆಡಿಕ್ಯೂರ್ ಮಾಡುವ ಸರಿಯಾದ ವಿಧಾನ ತಿಳಿದರೆ ಹಣ ವ್ಯಯಿಸದೆಯೇ ಮಾಡಿಕೊಳ್ಳಬಹುದು. ಪಾದಗಳ ಪೆಡಿಕ್ಯೂರ್ ಮಾಡಿಸುವುದರಿಂದ ಸುಂದರವಾಗಿ, ಕೋಮಲವಾಗುತ್ತವೆ. ಹಾಗೆ ನಮ್ಮ ಪಾದಗಳಲ್ಲಿ ಕ್ರ್ಯಾಕ್, ಗಾಯ ಇದ್ದರೆ ಪೆಡಿಕ್ಯೂರ್ ಮೂಲಕ ಸರಿಪಡಿಸುವ ಯತ್ನ ಮಾಡಬಹುದು. ನಿಮ್ಮ ಪಾದಗಳು ಕಪ್ಪಾಗಿದ್ದರೆ ಅಥವಾ ಮುಖದ ಬಣ್ಣಕ್ಕಿಂತಲೂ ಪಾದ ಕಪ್ಪಾಗಿದ್ದರೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.
ಹೀಗಾಗಿ ಹಲವರು ಪಾರ್ಲರ್‌ಗೆ ತೆರಳಿ ಪೆಡಿಕ್ಯೂರ್ ಮಾಡಿಸಿಕೊಳ್ಳುತ್ತಾರೆ. ಈಗಂತು ಹಲವರು ಮುಖದಲ್ಲಿ ಮೇಕಪ್ ಇದೆ ಎಂಬ ಕಾರಣಕ್ಕೆ ಅವರ ಕಾಲುಗಳನ್ನು ನೋಡಿಯೇ ಅವರ ನಿಜವಾದ ಬಣ್ಣ ಗುರುತು ಹಿಡಿಯುವ ಸಾಧನವನ್ನಾಗಿ ಮಾಡಿಕೊಂಡಿರುತ್ತಾರೆ. ಏಕೆಂದರೆ ಕಾಲಿನ ಬಣ್ಣ ನಮ್ಮ ದೇಹದ ನೈಜ ಬಣ್ಣ ಎಂದು ನಂಬಲಾಗುತ್ತದೆ.
ಆದ್ರೆ ಪೆಡಿಕ್ಯೂರ್ ಮಾಡಿದರೆ ಪಾದದ ಬಣ್ಣ ಕೂಡ ಹೊಳೆಯುತ್ತದೆ. ಮುಖದಂತೆ ಪಾದಗಳು ಕೂಡ ಸುಂದರವಾಗುತ್ತವೆ, ಹಾಗಾದ್ರೆ ಮನೆಯಲ್ಲಿ ನಾವು ಪೆಡಿಕ್ಯೂರ್ ಮಾಡಿಕೊಳ್ಳುವುದು ಹೇಗೆ? ಮನೆಯಲ್ಲಿ ಪೆಡಿಕ್ಯೂರ್ ಮಾಡಿಕೊಳ್ಳುವ ಸರಿಯಾದ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲು ಪೆಡಿಕ್ಯೂರ್ ಮಾಡುವ ಮುನ್ನ ಒಂದಿಷ್ಟು ಮುಂಜಾಗೃತೆ ತೆಗೆದುಕೊಳ್ಳಬೇಕು. ಮೊದಲು ಕಾಲನ್ನು ಚೆನ್ನಾಗಿ ತೊಳೆದುಕೊಳ್ಳಿ. ಅನಂತರ ಕಾಲಿನ ಬೆರಳಿಗೆ ಬಣ್ಣ ಹಚ್ಚಿದ್ದರೆ ಅದನ್ನು ನೈಲ್ ಪೇಯಿಂಟ್ ರಿಮೂವಲ್‌ನಿಂದ ತೆಗೆದುಕೊಳ್ಳಿ. ಈ ವೇಳೆ ಕಾಲಿನ ಚರ್ಮಕ್ಕೆ ರಿಮೂವರ್ ಹಿಡಿಯದಂತೆ ನೋಡಿಕೊಳ್ಳಿ. ಅನಂತರ ಒಂದು ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಕಾಲು ಅದ್ದಿ ಅದರಲ್ಲಿ ಇಟ್ಟುಕೊಳ್ಳಬೇಕು.
ಈ ನೀರಿಗೆ ಅರ್ಧ ನಿಂಬೆ, ಅಡುಗೆ ಸೋಡಾ ಹಾಕಿ 10 ನಿಮಿಷ ನೆನೆಸಿಡಬೇಕು. ಅನಂತರ ಕಾಲನ್ನು ನೀರಿನಿಂದ ತೆಗೆದು ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಕಾಲಿಗೆ ನಿಂಬೆ ಹಾಗೂ ಅಡುಗೆ ಸೋಡಾ ಹಾಕಿ ಕಾಲಿಗೆ ಉಜ್ಜಿಕೊಳ್ಳಬೇಕು. ನಂತರ ಬೆಚ್ಚಗಿನ ನೀರಿನಿಂದ ಕಾಲನ್ನು ತೊಳೆದುಕೊಳ್ಳಬೇಕು. ಹೀಗಾಗಿ ನೀರಿನಲ್ಲಿ ಕಾಲು ಇಟ್ಟು ಒಂದು ಚಿಕ್ಕ ಕಲ್ಲು ಅಥವಾ ಬ್ರಷ್‌ನಿಂದ ಉಜ್ಜಿಕೊಳ್ಳಬೇಕು ನಂತರ ಬಟ್ಟೆಯಿಂದ ಕಾಲನ್ನು ಬಟ್ಟೆಯಿಂದ ಒರೆಸಿಕೊಳ್ಳಬೇಕು.
ಈಗ ಕಾಲಿಗೆ ಹಚ್ಚಲು ಮಾಡಿಕೊಂಡಿರುವ ಪೇಸ್ಟ್ ಅನ್ನು ಹಚ್ಚಿಕೊಳ್ಳಬೇಕು. ನಿಧಾನವಾಗಿ ಬೆರಳು ಸಂಧಿ, ಉಗುರು, ಹಿಮ್ಮಡಿ ಮೇಲೆ ಮಸಾಜ್ ಮಾಡಿಕೊಳ್ಳಬೇಕು. ಮಸಾಜ್ ಮಾಡಿ 10 ನಿಮಿಷ ಬಿಟ್ಟು ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿಕೊಳ್ಳಿ. ತದನಂತರ ಉಗುರುಗಳ ಸ್ವಚ್ಛ ಮಾಡಲು ನೈಲ್ ಕಟರ್‌ನಲ್ಲಿ ನೀಡುವ ಚೂಪಾದ ವಸ್ತುವಿನಿಂದ ತೆಗೆದುಬಿಡಿ. ನಂತರ ಮತ್ತೆ ಕಾಲು ತೊಳೆದುಕೊಳ್ಳಿ. ಕೊನೆಯದಾಗಿ ಕಾಲಿಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿದರೆ ಪೆಡಿಕ್ಯೂರ್ ಮುಗಿಯುತ್ತದೆ.
ಪೆಡಿಕ್ಯೂರ್‌ಗೆ ಪೇಸ್ಟ್ ಮಾಡುವುದು ಹೇಗೆ?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಆಲೂವೆರಾ ಜೆಲ್ ಹಾಕಿಕೊಳ್ಳಿ. ಹಾಗೆ ಸ್ವಲ್ಪ ಅರಶಿನ, ಮೊಸರು, ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಗಟ್ಟಿಯಾದರೆ ಸ್ವಲ್ಪ ಉಗುರು ಬೆಚ್ಚಗಿನ ತೆಂಗಿನ ಎಣ್ಣೆ ಕಾಯಿಸಿ ಹಾಕಿಕೊಳ್ಳಿ. ಇದನ್ನು ಚೆನ್ನಾಗಿ ಕಲಸಿಕೊಂಡರೆ ಪೇಸ್ಟ್ ರೆಡಿಯಾಗುತ್ತದೆ.



Click it and Unblock the Notifications