Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರವಾಹದ ಭೀತಿ: ಪ್ರವಾಹದ ಮುನ್ನ ಹಾಗೂ ನಂತರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಿವು
ಕರ್ನಾಟಕದ ಹಲವು ಕಡೆ ಮಳೆಯ ಅಬ್ಬರ ಜೋರಾಗಿ ಇದೆ. ಪ್ರಾರಂಭದಲ್ಲಿ ಮುಂಗಾರಿನ ಅಭಾವ ಉಂಟಾಗಿತ್ತು, ಆದರೆ ಇದೀಗ ಹಲವು ಕಡೆ ಮಳೆ ಅತಿಯಾಗಿ ಸುರಿಯುತ್ತಿದ್ದು ಪ್ರವಾಹದ ಭೀತಿ ಉಂಟಾಗಿದೆ. ನಿಸರ್ಗದ ಆಟದ ಮುಂದೆ ಮನುಷ್ಯ ಏನೂ ಮಾಡಲು ಸಾಧ್ಯವಿಲ್ಲ. ಹಾಗಂತ ಕೈ ಚೆಲ್ಲಿ ಕೂರುವುದೂ ಸರಿಯಲ್ಲ, ಈ ಸಮಯದಲ್ಲಿಆದಷ್ಟು ನಮ್ಮ ಸುರಕ್ಷತೆ ಕಡೆ ಗಮನಹರಿಸಬೇಕು. ಪ್ರವಾಹದ ಅಪಾಯವಿದೆ ಎಂದಾದಾಗ ಈ ಬಗೆಯ ಮುನ್ನೆಚ್ಚರಿಕೆವಹಿಸಿದರೆ ಹೆಚ್ಚಿನ ಅಪಾಯ ಉಂಟಾಗುವುದನ್ನು ತಡೆಗಟ್ಟಬಹುದು:

ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ, ಅಷ್ಟು ಮಾಡಿದರೂ ಮನೆಯೊಳಗೆ ಬರುವ ಪರಿಸ್ಥಿತಿ ಎದುರಾದರೆ ಈ ಬಗೆಯ ಮುನ್ನೆಚ್ಚರಿಕೆ ವಹಿಸಿ:
ಬೆಲೆಬಾಳುವ ವಸ್ತುಗಳನ್ನು ಸುರಕ್ಷತೆ ಕಡೆಗೆ ಸಾಗಿಸಿ: ಪ್ರವಾಹ ಬರುವಾಗ ಹೆಚ್ಚಿನ ಸಮಯ ಸಿಗುವುದಿಲ್ಲ, ನೋಡು ನೋಡುತ್ತಿದ್ದಂತೆ ನೀರು ತುಂಬಿಕೊಳ್ಳುತ್ತದೆ, ಆದರೆ ಈ ಹಿಂದೆ ನೀರು ಬಂದಿದ್ದರೆ ಈ ಬಾರಿ ರಿಸ್ಕ್ ತೆಗೆದುಕೊಳ್ಳಬೇಡಿ. ಬೆಲೆಬಾಳುವ ವಸ್ತುಗಳನ್ನು ಮೇಲಿನ ಫ್ಲೋರ್‌ಗೆ ಅಥವಾ ನಿಮಗೆ ಸುರಕ್ಷತೆ ಅನಿಸುವ ಕಡೆಗೆ ಮೊದಲೇ ಸಾಗಿಸಿ.
* ವಿದ್ಯುತ್ ಸಂಪರ್ಕ ಮೊದಲು ತೆಗೆಯಿರಿ: ಮಳೆ ನೀರು ಅಧಿಕವಾಗುತ್ತಿದೆ ಎಂದಾಗ ವಿದ್ಯುತ್ ಸಂಪರ್ಕ ಮೊದಲು ತೆಗೆಯಬೇಕು, ಇಲ್ಲದಿದ್ದರೆ ಶಾರ್ಟ್ ಸರ್ಕ್ಯೂಟ್ ಆಗುವ ಅಪಾಯವಿದೆ, ಆದ್ದರಿಂದ ಮೊದಲಿಗೆ ವಿದ್ಯುತ್ ಸಂಪರ್ಕವನ್ನು ಮೊದಲು ತೆಗೆಯಬೇಕು.
ಮಳೆ ಹೆಚ್ಚಾಗುತ್ತಿದ್ದರೂ ಮನೆಯಲ್ಲಿಯೇ ಇರುವ ರಿಸ್ಕ್ ತೆಗೆದುಕೊಳ್ಳಬೇಡಿ: ಕೆಲವರು ಮಳೆ ನೀರು ಹೆಚ್ಚಾಗುತ್ತಿದ್ದರೂ ಮನೆ ಬಿಟ್ಟು ಹೊರಗಡೆ ಬರಲು ನಿರಾಕರಿಸುತ್ತಾರೆ. ಆದರೆ ಆ ತಪ್ಪನ್ನು ಮಾಡುವುದರಿಂದ ನೀವು ತೊಂದರೆಗೆ ಸಿಲುಕಿಕೊಳ್ಳುವುದು ಮಾತ್ರವಲ್ಲ, ನಿಮ್ಮನ್ನು ರಕ್ಷಿಸಲು ಜನರು ಪರದಾಡಬೇಕಾದ ಪರಿಸ್ಥಿತಿ ಉಂಟಾಗುವುದು.
ಸಾಹಸ ಬೇಡ: ನೀರು ತುಂಬಿ ಹರಿಯುತ್ತಿರುವ ಕಡೆ ವಾಹನ ಚಲಾಯಿಸುವುದು ಅಥವಾ ನಡೆದುಕೊಂಡು ಹೋಗಲು ಪ್ರಯತ್ನಿಸುವುದು ಮುಂತಾದ ಅಪಾಯವನ್ನು ತೆಗೆದುಕೊಳ್ಳಬೇಡಿ.
ಪ್ರವಾಹದ ನಂತರ ಏನು ಮಾಡಬೇಕು?
* ಮನೆಯಲ್ಲಿ ಏನೆಲ್ಲಾ ಹಾನಿಯಾಗಿದೆ ಎಂಬುವುದನ್ನು ಪರೀಕ್ಷಿಸಬೇಕು.
* ಮನೆಯೊಳಗಡೆ ಕತ್ತಲೆಯಿದ್ದರೆ ಬೆಂಕಿಕಡ್ಡಿ ಗೀರುವುದು, ಕ್ಯಾಂಡಲ್ ಅಥವಾ ದೀಪ ಹಚ್ಚುವುದು ಮಾಡಬೇಡಿ, ಟಾರ್ಚ್ ಲೈಟ್ ಹಾಕಿ ಪರೀಕ್ಷಿಸಿ.
* ಎಲೆಕ್ಟ್ರಿಷಿಯನ್ ಅನುಮತಿ ಪಡೆಯದೆ ಮನೆಯಲ್ಲಿ ವಿದ್ಯುತ್ ಸಂಪರ್ಕ ಹಾಕಬೇಡಿ.
* ಹಾಳಾದ ವಸ್ತುಗಳಿಗೆ ಇನ್ಶ್ಯೂರೆನ್ಸ್ ಇದ್ದರೆ ಕ್ಲೈಮ್ ಮಾಡಿ.
* ಮನೆಯನ್ನು ಸ್ವಚ್ಛ ಮಾಡುವಾಗ ಮಾಸ್ಕ್ ಧರಿಸಿ. ಮನೆಯನ್ನು ಸ್ವಚ್ಛಗೊಳಿಸಲು ಪ್ರೊಫೆಷನಲ್ ಹೆಲ್ಪ್ ಪಡೆಯಿರಿ.
ಈ ಸಲಹೆ ಪಾಲಿಸಿ
* ಮಕ್ಕಳನ್ನು ಪ್ರವಾಹದ ನೀರಿನಲ್ಲಿ ಆಡಲು ಬಿಡಬೇಡಿ
* ಪ್ರವಾಹದ ನೀರನ್ನು ಮುಟ್ಟಿದರೆ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ
* ಗಾಯವಾಗಿದ್ದರೆ ಅದಕ್ಕೆ ಮಳೆನೀರು ತಾಗದಂತೆ ಜಾಗ್ರತೆವಹಿಸಿ.
* ರಭಸವಾಗಿ ಹರಿಯುವ ನೀರಿನ ಸಮೀಪ ಹೋಗಬೇಡಿ, ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
