Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಕ್ಕಳಿಗೆ ಫಿಜ್ಜ್‌ನಂಥ ಎನರ್ಜಿ ಡ್ರಿಂಕ್ ನೀಡಿದರೆ ಆತ್ಮಹತ್ಯೆಯ ಆಲೋಚನೆ ಹೆಚ್ಚುವುದು, ಪೋಷಕರೇ ಎಚ್ಚರ!
ಪಬ್ಲಿಕ್ ಹೆಲ್ತ್ ಜರ್ನಲ್ ಎನರ್ಜಿ ಡ್ರಿಂಕ್ ಕುರಿತು ಅಧ್ಯಯನ ನಡೆಸಿ ಹೇಳಿರುವ ವಿಷಯ ಕೇಳಿದರೆ ಖಂಡಿತ ಭಯವಾಗುತ್ತೆ. ಇದನ್ನು ತಿಳಿದ ಮೇಲೆ ಪೋಷಕರು ಖಂಡಿತ ಮಕ್ಕಳಿಗೆ ಎನರ್ಜಿ ಡ್ರಿಂಕ್ ಕೊಡಿಸುವುದಿಲ್ಲ. ಅಧ್ಯಯನ ನಡೆಸಿ ಈ ವರದಿಯನ್ನು ನೀಡಿದ್ದು ಎನರ್ಜಿ ಡ್ರಿಂಕ್ ಕೊಡಿಸುವುದರಿಂದ ಮಕ್ಕಳಲ್ಲಿ ಆತ್ಮಹತ್ಯೆಯ ಆಲೋಚನೆ ಹೆಚ್ಚಾಗುವುದು ಎಂದು ಹೇಳಲಾಗಿದೆ.

ಎನರ್ಜಿ ಡ್ರಿಂಕ್ ಸೇವಿಸುವುದರಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಮಕ್ಕಳ ತಲೆ ಹಾಗೂ ಹೊಟ್ಟೆಯ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತದೆ. ಡಾ. ಶೆಲಿನಾ ವಿಸ್ರಾಮ್ ( Newcastle University)ಅವರು ಎನರ್ಜಿ ಡ್ರಿಂಕ್ ಮಕ್ಕಳಲ್ಲಿ ಅತಿಯಾದ ಮಾನಸಿಕ ಒತ್ತಡ ಉಂಟು ಮಾಡುತ್ತದೆ, ಇದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ಹೇಳಿದ್ದಾರೆ.
12 ಲಕ್ಷಕ್ಕೂ ಅಧಿಕ ಮಕ್ಕಳನ್ನು ಈ ಅಧ್ಯಯನದಲ್ಲಿ ಒಳಪಡಿಸಲಾಗಿತ್ತು
ಈ ಅಧ್ಯಯನದಲ್ಲಿ 1.2 ಮಿಲಿಯನ್ ಮಕ್ಕಳು ಒಳಪಟ್ಟಿದ್ದರು. ಎನರ್ಜಿ ಡ್ರಿಂಕ್ ಮಕ್ಕಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುವುದರ ಬಗ್ಗೆ 51 ಅಧ್ಯಯನಗಳನ್ನು ಮಾಡಲಾಯಿತು. ಅದರಲ್ಲೂ ಹುಡುಗರು ಫಿಜ್ಜಿ ರೀತಿಯ ಪಾನೀಯಗಳನ್ನು ಕುಡಿಯಲು ಬಯಸುತ್ತಾರೆ. ಈ ಪಾನೀಯಗಳನ್ನು ಅತಿ ಹೆಚ್ಚಾಗಿ ಕುಡಿಯುವ ಮಕ್ಕಳು ಮುಂದೆ ಚಟಗಳಿಗೆ ಬೇಗನೆ ದಾಸರಾಗುತ್ತಾರೆ ಎಂದು ಹೇಳಲಾಗುವುದು. ಇವರಿಗೆ ಡ್ರಗ್ಸ್ ತೆಗೆದುಕೊಳ್ಳುವುದು, ಹಿಂಸೆ,ಸುರಕ್ಷಿತ ಲೈಂಗಿಕ ಚಟುವಟಿಕೆ ಈ ಬಗೆಯ ಕೆಟ್ಟ ಹಾದಿಗಳನ್ನು ಹಿಡಿಯುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ವರದಿ ಹೇಳಿದೆ.
ಅಧ್ಯಯನದ ಮೇಲೂ ಪರಿಣಾಮ ಬೀರುವುದು
ಫಿಜ್ಜಿ ಡ್ರಿಂಕ್ ಮಕ್ಕಳ ಅಧ್ಯಯನದ ಮೇಲೂ ಪರಿಣಾಮ ಬೀರುವುದು, ಅಧ್ಯಯನದ ಕಡೆಗೆ ಗಮನ ಕಡಿಮೆಯಾಗುವುದು. ನಿದ್ರಾಹೀನತೆ, ಒತ್ತಡ, ಖಿನ್ನತೆ, ಅನಾರೋಗ್ಯಕರ ಆಹಾರ ಸೇವನೆ ಈ ಬಗೆಯ ಸಮಸ್ಯೆಗಳು ಹೆಚ್ಚಾಗುವುದು.
ಮಕ್ಕಳ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುವುದು
ಮಕ್ಕಳಿಗೆ ಎನರ್ಜಿ ಡ್ರಿಂಕ್ ಹೆಚ್ಚಾಗಿ ನೀಡುವುದರಿಂದ ಅವರ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಯುಕೆಯಲ್ಲಿ 16 ವರ್ಷದ ಕೆಳಗಿನ ಮಕ್ಕಳಿಗೆ ಎನರ್ಜಿ ಟ್ರಿಂಕ್ ನೀಡುವುದನ್ನು ಸ್ವಯಂಪ್ರೇರಿತವಾಗಿ ಬಹಿಷ್ಕರಿಸಿದೆ.
ಕೆಲವೊಂದು ದೇಶಗಳಲ್ಲಿ ಮಕ್ಕಳಿಗೆ ಎನರ್ಜಿ ಟ್ರಿಂಕ್ ಕೊಡುವುದನ್ನು ಬ್ಯಾನ್ ಮಾಡಲು ಆಲೋಚನೆ ಮಾಡುತ್ತಿದೆ. ಭಾರತದಲ್ಲಿ ಕೆಲವೊಂದು ಎನರ್ಜಿ ಡ್ರಿಂಕ್‌ಗಳ ಮೇಲೆ ಮಕ್ಕಳಿಗೆ ನೀಡುವಂತಿಲ್ಲ ಎಂದು ಬರೆದಿರುತ್ತದೆ, ಆದರೂ ಇದನ್ನು ಪಾಲಿಸುವವರು ತುಂಬಾ ಕಡಿಮೆ, ಮಕ್ಕಳು ಕೇಳಿದರು ಎಂದು ಪೋಷಕರು ನೀಡುತ್ತಾರೆ. ಆದ್ದರಿಂದ ಇನ್ನು ಮುಂದೆ ನಿಮ್ಮ ಮಕ್ಕಳಿಗೆ ಎನರ್ಜಿ ಡ್ರಿಂಕ್ ಕೊಡಿಸುವ ಮುನ್ನ ಆಲೋಚಿಸಿ....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
