Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹೊಟ್ಟೆ ತುಂಬಾ ತಿಂದರೂ ಬೇಗನೆ ಹಸಿವು ಉಂಟಾಗುವುದೇ? ಈ ಕಾರಣಗಳಿರಬಹುದು
ಹೊಟ್ಟೆ ತುಂಬಾ ತಿಂದರೂ ತಿಂದ ಸ್ವಲ್ಪ ಹೊತ್ತಿಗೆ ಮತ್ತೆ ಹಸಿವು, ನಮಗೆ ನಾವು ಇಷ್ಟು ಏಕೆ ತಿನ್ನುತ್ತಿದ್ದೇವೆ ಎಂದು ಅನಿಸುತ್ತೆ, ಆದರೆ ಹಸಿವು ನಿಯಂತ್ರಿಸಲು ಸಾಧ್ಯವಾಗದೆ ತಿಂದು ಬಿಡುತ್ತೇವೆ, ಈ ಬಗೆಯ ಸಮಸ್ಯೆ ಹಲವರಿಗಿದೆ.
ಆದರೆ ಏಕೆ ಹೀಗೆ ಹಸಿವು ಉಂಟಾಗುತ್ತಿದೆ ಎಂದು ಯೋಚಿಸಬೇಕು, ನಿರ್ಲಕ್ಷ್ಯ ಮಾಡಬೇಡಿ, ಬನ್ನಿ ಯಾವ ಕಾರಣಕ್ಕೆ ಈ ರೀತಿ ವಿಪರಿತ ಹಸಿವಿನ ಮಸಸ್ಯೆ ಕಾಡುತ್ತದೆ ಎಂದು ನೋಡೋಣ:

ಊಟ ಮಾಡಿದರೂ ಸ್ವಲ್ಪ ಹೊತ್ತಿನಲ್ಲಿಯೇ ಹಸಿವು, ಕಾರಣವೇನು?
ಪ್ರೊಟೀನ್ ಹಾಗೂ ನಾರಿನಶ ಕಡಿಮೆಯಿದ್ದರೆ
ನಮ್ಮ ಹೊಟ್ಟೆಯನ್ನು ತುಂಬಿಸುವಲ್ಲಿ ನಾರಿನಂಶದ ಮಾತ್ರ ತುಂಬಾನೇ ಮುಖ್ಯವಾಗಿರುತ್ತದೆ, ನಾರಿನಂಶವಿದ್ದರೆ ಹೊಟ್ಟೆ ಬೇಗನೆ ತುಂಬುವುದು, ಅಲ್ಲದೆ ಬೇಗನೆ ಹಸಿವು ಉಂಟಾಗುವುದಿಲ್ಲ. ಆದ್ದರಿಂದ ನಿಮ್ಮ ಆಹಾರದಲ್ಲಿ ನಾರಿನಂಶದ ಆಹಾರಗಳು(ತರಕಾರಿ), ಪ್ರೊಟೀನ್ ಅಧಿಕವಿರಲಿ.
ತುಂಬಾ ಬಾಯಾರಿಕೆಯಾದಾಗ
ತುಂಬಾ ಬಾಯಾರಿಕೆಯಾದಾಗ ಕೂಡ ಹಸಿವು ಉಂಟಾಗುವುದು, ಇದರಿಂದಾಗಿ ಸ್ನ್ಯಾಕ್ಸ್ ತಿನ್ನುತ್ತಾರೆ. ನಿಮ್ಮ ದೇಹಕ್ಕೆ ಅವಶ್ಯಕವಾದ ನೀರು ಕುಡಿಯಿರಿ, ಇದು ಹಸಿವು ನಿಯಂತ್ರಿಸುತ್ತದೆ.
ನೀವು ಬೇಗನೆ ತಿನ್ನುವವರಾದರೆ
ಕೆಲವರು ಬೇಗನೆ ತಿನ್ನುತ್ತಾರೆ, ಈ ರೀತಿ ತಿಂದಾಗ ಬೇಗನೆ ಹೊಟ್ಟೆ ತುಂಬಿದಂತೆ ಅನಿಸುವುದು ಆದರೆ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಹೊಟ್ಟೆ ಹಸಿವು ಉಂಟಾಗುವುದು
ತುಂಬಾನೇ ವ್ಯಾಯಾಮ ಮಾಡುವುದರಿಂದ
ತುಂಬಾನೇ ವ್ಯಾಯಾಮ ಮಾಡುವುದರಿಂದ ಕೂಡ ಹೊಟ್ಟೆ ಹಸಿವು ಉಂಟಾಗುವುದು, ನೀವು ತುಂಬಾ ವ್ಯಾಯಾಮ ಮಾಡಿ ಹೊಟ್ಟೆ ಹಸಿವು ಉಂಟಾದರೆ ನೀವು ನಿಮ್ಮ ದೇಹಕ್ಕೆ ಅವಶ್ಯಕವಾದ ಆಹಾರ ಸೇವಿಸಿ.
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಿದ್ದರೆ
ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದರೆ ತುಂಬಾನೇ ಹಸಿವು ಉಂಟಾಗುವುದು, ಮಧುಮೇಹಿಗಳಲ್ಲಿ ಅಥವಾ ಮಧುಮೇಹವಿದೆ ಎಂದು ತಿಳಿಯದೇ ಇದ್ದಾಗ ಈ ರೀತಿ ಹಸಿವು ಉಂಟಾಗುವುದು, ಈ ರೀತಿ ಹಸಿವು ಉಂಟಾಗುತ್ತಿದ್ದರೆ ರಕ್ತ ಪರೀಕ್ಷೆ ಮಾಡಿಸಿ.
ಥೈರಾಯ್ಡ್ ಇರಬಹುದು
ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ಕೂಡ ಈ ರೀತಿ ತುಂಬಾನೇ ಹಸಿವು ಉಂಟಾಗಬಹುದು.
ಆಗಾಗ ಹಸಿವು ಉಂಟಾದರೆ ಅಡ್ಡಪರಿಣಾಮವೇನು?
ನೀವು ಆಗಾಗ ತಿನ್ನುವುದರಿಂದ ಮೈ ತೂಕ ತುಂಬಾನೇ ಹೆಚ್ಚಾಗುವುದು, ಮೈ ತೂಕ ಹೆಚ್ಚಾದರೆ ಅನೇಕ ರೀತಿಯ ಸಮಸ್ಯೆಗಳು ಕಂಡು ಬರುವುದು.
ಹಸಿವು ನಿಯಂತ್ರಿಸಲು ಏನು ಮಾಡಬೇಕು?
ನೀವು ಆರೋಗ್ಯಕರ ಆಹಾರಕ್ರಮ ಸೇವಿಸಿ
ಪೋಷಕಾಂಶ ಅಧಿಕವಿರುವ ಆಹಾರ ಸೇವಿಸಿ
ಸಾಕಷ್ಟು ನೀರು ಕುಡಿಯಿರಿ
ಹಸಿವು ಉಂಟಾದಾಗ ಆರೋಗ್ಯಕರ ಸ್ನ್ಯಾಕ್ಸ್ ಸೇವಿಸಿ
ಆಹಾರವನ್ನು ಚೆನ್ನಾಗಿ ಅಗಿದು ತಿನ್ನಿ
ಮಾನಸಿಕ ಒತ್ತಡ ಕಡಿಮೆ ಮಾಡಿ, ಚೆನ್ನಾಗಿ ನಿದ್ದೆ ಮಾಡಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
