Latest Updates
-
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ!
ಮತ್ತೊಂದು ಸುತ್ತಿನ ಕೋವಿಡ್ ಹೋರಾಟಕ್ಕೆ ಭಾರತ ಸಿದ್ಧವಾಗಬೇಕು: ತಜ್ಞರ ಎಚ್ಚರಿಕೆ..!
ಕಳೆದ ನಾಲ್ಕು ವರ್ಷದ ಹಿಂದೆ ಈಡೀ ಮನುಕುಲವನ್ನೇ ದುರಂತಕ್ಕೆ ತಳ್ಳಿದ್ದ ಕೋವಿಡ್ ಹೆಸರು ಕೇಳಿದ ತಕ್ಷಣ ಭಯ ಕಾಡುತ್ತದೆ. ಹಲವು ಅಲೆಗಳಾಗಿ, ರೂಪಾಂತರವಾಗಿ ಜನರನ್ನು ಕಾಡಿತ್ತು. ಇಂದಿಗೂ ನಮ್ಮ ನಡುವೆಯೇ ಈ ವೈರಸ್ ಉಳಿದುಬಿಟ್ಟಿದೆ. ವಿಜ್ಞಾನಿಗಳ ಪ್ರಕಾರ ಈ ವೈರಸ್ ಭೂಮಿ ಇರುವವರೆಗೂ ನಮ್ಮ ನಡುವೆ ಜೀವಿಸಲಿದೆಯಂತೆ.
ಆದ್ರೆ ಈಗ ಭಾರತ ಮತ್ತೊಮ್ಮೆ ಈ ವೈರಸ್ ದಾಳಿಗೆ ರೆಡಿಯಾಗಬೇಕಿದೆ ಎಂದು ತಜ್ಞರು ಸೂಚನೆ ನೀಡಿದ್ದಾರೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿ ಮತ್ತೆ ಕೋವಿಡ್ ಹರಡಲು ಆರಂಭಗೊಂಡಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಅಂದಾಜಿನ ಪ್ರಕಾರ, ದೇಶದ 25 ರಾಜ್ಯಗಳಲ್ಲಿ ಕೋವಿಡ್ ಸೋಂಕುಗಳು ಹೆಚ್ಚಾಗುತ್ತಿವೆ. ಅದರಲ್ಲೂ ದಕ್ಷಿಣ ಕೊರಿಯಾದಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ವರದಿಯ ಪ್ರಕಾರ, ಜೂನ್ 24 ಮತ್ತು ಜುಲೈ 21 ರ ನಡುವೆ, 85 ದೇಶಗಳಲ್ಲಿ ಪ್ರತಿ ವಾರ ಸರಾಸರಿ 17,358 ಕೋವಿಡ್ ಮಾದರಿಗಳನ್ನು SARS-CoV-2 ಗಾಗಿ ಪರೀಕ್ಷಿಸಲಾಗಿದೆ ಎಂದು ವರದಿಯಾಗಿದೆ. WHO ಪ್ರಕಾರ ಭಾರತವು 908 ಹೊಸ ಕೋವಿಡ್ -19 ಪ್ರಕರಣಗಳಿಗೆ ಸಾಕ್ಷಿಯಾಗಿದೆ ಮತ್ತು ಈ ವರ್ಷ ಜೂನ್ ಮತ್ತು ಜುಲೈ ನಡುವೆ ಎರಡು ಸಾವುಗಳು ಕೋವಿಡ್‌ನಿಂದ ಸಂಭವಿಸಿದೆ ಎಂದು ತಿಳಿಸಿದೆ.
"ಇತರ ದೇಶಗಳಂತೆ ಭಾರತದಲ್ಲಿ ಪರಿಸ್ಥಿತಿಯು ತೀವ್ರವಾಗಿಲ್ಲದಿದ್ದರೂ, ನಾವು ಅದಕ್ಕೆ ನಿಜವಾಗಿಯೂ ಸಿದ್ಧರಾಗಿರಬೇಕು" ಎಂದು ನೋಯ್ಡಾದ ಶಿವ ನಾಡರ್ ವಿಶ್ವವಿದ್ಯಾಲಯದ ವೈರಾಲಜಿಸ್ಟ್ ಪ್ರೊಫೆಸರ್ ದೀಪಕ್ ಸೆಹಗಲ್ ತಿಳಿಸಿದ್ದಾರೆ. ಏಕೆಂದರೆ ಭಾರತದಲ್ಲಿ ಈ ವೈರಸ್ ಹರಡುವಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗುವುದು ಸುಲಭವಾಗಿದೆ.
ಈ ಕೋವಿಡ್ ಪ್ರಕರಣದಿಂದ ಸಾವಿಗೀಡಾಗುತ್ತಿರುವ ಪ್ರಮಾಣ ಶೇ26ರಷ್ಟಿದೆ. ಈ ಸಂಖ್ಯೆಯಲ್ಲಿ ಶೇ. 11ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ. ಇದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಇತ್ತೀಚಿನ ರೂಪಾಂತರಗಳು ಓಮಿಕ್ರಾನ್ ವಂಶಕ್ಕೆ ಸೇರಿದೆ. ಓಮಿಕ್ರಾನ್ ಹೆಚ್ಚು ಹರಡುತ್ತದೆ. ಹಾಗೆ ಅತೀ ಹೆಚ್ಚು ಸಾವಿನ ಪ್ರಮಾಣ ಹೊಂದಿರುವ ರೂಪಾಂತರವಾಗಿದೆ. ಈ ವಂಶಕ್ಕೆ ಸೇರಿದ ಹತ್ತಾರು ವೈರಸ್ ಈಗ ಹಲವು ಕಡೆ ಹರಡಿದೆ.
ಜನವರಿಯಲ್ಲಿ ಮೊದಲ ಬಾರಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ, KP.2 ಓಮಿಕ್ರಾನ್‌ನ JN.1 ರ ವಂಶಸ್ಥರು. ಭಾರತದಲ್ಲಿ, KP.2 ಅನ್ನು ಮೊದಲು ಡಿಸೆಂಬರ್ 2023 ರಲ್ಲಿ ಒಡಿಶಾದಲ್ಲಿ ಪತ್ತೆ ಮಾಡಲಾಯಿತು. ಭಾರತದಲ್ಲಿ ಈ ವಂಶಕ್ಕೆ ಸೇರಿದ ಮೂರಕ್ಕೂ ಹೆಚ್ಚು ತಳಿಗಳು ಹರಡುತ್ತಿದೆ. FLiRT ರೂಪಾಂತರ ಅಥವಾ KP.2 -- ಜುಲೈ ಕೊನೆಯ ವಾರದಲ್ಲಿ ಸಂಗ್ರಹಿಸಲಾದ ಭಾರತದಲ್ಲಿನ ಎಲ್ಲಾ ಕೋವಿಡ್ ಅನುಕ್ರಮ ಮಾದರಿಗಳಲ್ಲಿ ಸುಮಾರು ಶೇ.39 ಪ್ರತಿಶತವನ್ನು ಹೊಂದಿದೆ.
ಅದರಲ್ಲೂ ದೇಶದ ಅಸ್ಸಾಂ, ನವದೆಹಲಿ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸೋಂಕುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (NCDC) ಪ್ರಕಾರ, ಹೆಚ್ಚು ಹರಡುವ JN.1 Omicron ರೂಪಾಂತರದಿಂದ ವಿಕಸನಗೊಂಡ KP.1 ಮತ್ತು KP.2 ತಳಿಗಳು ಭಾರತದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಇತ್ತ ಭಾರತದಲ್ಲಿ ಬಹುತೇಕ ಜನರಿಗೆ ಬೂಸ್ಟರ್ ಡೋಸ್ ತಲುಪಿಸಿರುವುದು ಕೋವಿಡ್ ಗಣನೀಯವಾಗಿ ಏರಿಕಯಾಗದಂತೆ ತಡೆಯುವಲ್ಲಿ ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










