Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಳಿಗಾಲದಲ್ಲಿ ಈ ರೀತಿಯೆಲ್ಲಾ ಮಾಡಿದರೆ ಅನಾರೋಗ್ಯ ಬರುತ್ತೆ ಎಂಬುವುದು ತಪ್ಪು ಕಲ್ಪನೆ!
ಬೆಳಗ್ಗೆ ಒದ್ದೆ ತಲೆಯಲ್ಲಿ ಹೊರಗಡೆ ಹೋದರೆ ಜ್ವರ ಬರುತ್ತೆಈ ಬಗೆಯ ಕಲ್ಪನೆ ಹಲವರಲ್ಲ ಇರಲಿದೆ. ಆದರೆ ಈ ಕಲ್ಪನೆ ಸರಿಯಲ್ಲ, ವಾತಾವರಣ ತಂಪಾಗಿದ್ದರೆ ಜ್ವರ ಬರಲ್ಲ, ಮತ್ತೊಬ್ಬರಿಗೆ ಜ್ವರವಿದ್ದು ಆ ಸೋಂಕು ತಗುಲಿದರೆ ಜ್ವರ ಬರುವುದು.ಆದ್ದರಿಂದ ಬೆಳಗ್ಗೆ ತಲೆಸ್ನಾನ ಮಾಡಿದರೆ ಜ್ವರ ಬರುತ್ತದೆ ಎಂಬುವುದು ತಪ್ಪು ಕಲ್ಪನೆ.

1. ಚಳಿಗಾಲದಲ್ಲಿ ಸ್ವಿಮ್ಮಿಂಗ್ ಮಾಡಿದರೆ ಶೀತ ಹೆಚ್ಚಾಗುವುದು
ದೈಹಿಕ ಚಟುವಟಿಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಈಜುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ, ಆದ್ದರಿಂದ ಚಳಿಗಾಲದಲ್ಲಿ ಸ್ವಿಮ್ಮಿಂಗ್ ಮಾಡುವುದರಿಂದ ಶೀತವಾಗಲ್ಲ. ನೀವು ಸ್ವಿಮ್ಮಿಂಗ್ ಮಾಡುತ್ತಿದ್ದರೆ ಚಳಿಗಾಲ ಎಂದು ಮಾಡದೆ ಇರಬೇಡಿ, ಸ್ವಿಮ್ಮಿಂಗ್ ನಿಮ್ಮಲ್ಲಿ ಶಕ್ತಿಯನ್ನು ತುಂಬುವುದು.
2. ಚಳಿಗಾಲದಲ್ಲಿ ಸ್ವಿಮ್ಮಿಂಗ್ ಮಾಡಿದರೆ ಕಿವಿ ಸೋಂಕು ಉಂಟಾಗುವುದು
ಕಿವಿಸೋಂಕು ಚಳಿಗಾಲ, ಬೇಸಿಗೆ ಅಂತಲ್ಲ ಯಾವುದೇ ಸಮಯದಲ್ಲಿ ಬರಬಹುದು, ಆದ್ದರಿಂದ ಚಳಿಗಾಲದಲ್ಲಿ ಸ್ವಿಮ್ಮಿಂಗ್ ಮಾಡಿದರೆ ಕಿವಿ ಸೋಂಕು ಉಂಟಾಗುವುದು ಎಂಬುವುದು ತಪ್ಪು ಕಲ್ಪನೆ. ಕಿವಿ ಸೋಂಕು ನಾನಾ ಕಾರಣಗಳಿಂದ ಉಂಟಾಗುವುದು, ಕಿವಿ ಸೋಂಕು ಇದ್ದಾಗ ಸ್ವಿಮ್ಮಿಂಗ್ ಮಾಡಿದರೆ ಸಮಸ್ಯೆ ಹೆಚ್ಚಾಗುವುದು.
3. ಮದ್ಯ ಸೇವನೆಯಿಂದ ಮೈ ಬೆಚ್ಚಗಿಡಬಹುದು
ಚಳಿಗಾಲದಲ್ಲಿ ಮೈ ಬೆಚ್ಚಗಿಡಲು ನೀವು ಸ್ವೆಟರ್ ಅಥವಾ ಬೆಚ್ಚಗಿನ ಉಡುಪು ಧರಿಸಿ. ಮದ್ಯ ಸೇವಿಸಿದರೆ ಸೆನ್ಸೇಷನ್ ಕಡಿಮೆಯಾಗುವುದು, ಮದ್ಯ ಅಧಿಕ ಕುಡಿದು ಕೆಲವರು ಚಳಿಯಲ್ಲಿಯೇ ಹೊರಗಡೆ ಬಿದ್ದು ಹೋಗಿ ಸಾವನ್ನಪ್ಪುತ್ತಾರೆ, ಹಾಗಾಗಿ ಚಳಿ ತಡೆಯಲು ಮದ್ಯ ಸೇವನೆ ಪರಿಹಾರವಲ್ಲ.
4. ಚಳಿಗಾಲದಲ್ಲಿ ಸನ್‌ಸ್ಕ್ರೀನ್ ಬಳಸಬೇಕಾಗಿಲ್ಲ
ತ್ವಚೆ ಆರೈಕೆಗೆ ನೀವು ಎಲ್ಲಾ ಸಮಯದಲ್ಲಿ ಸನ್‌ಸ್ಕ್ರೀನ್ ಬಳಸಬೇಕು, ಚಳಿಗಾಲದಲ್ಲಿಯೂ ಸನ್‌ಸ್ಕ್ರೀನ್ ಬಳಸಬೇಕು. ಚಳಿಗಾಲದಲ್ಲಿಯೂ ಮಧ್ಯಾಹ್ನ ಹೊತ್ತಿನಲ್ಲಿ ಬರುವ ಸೂರ್ಯನ ಕಿರಣಗಳು ತೀಕ್ಷಣವಾಗಿರುತ್ತದೆ, ಆದ್ದರಿಂದ ಚಳಿಗಾಲದಲ್ಲಿ ಕೂಡ ಸನ್‌ಸ್ಕ್ರೀನ್ ಬಳಸಿ.
5. ಚಳಿಗಾಲದಲ್ಲಿ ತುಂಬಾ ನೀರು ಕುಡಿಯಬೇಕಾಗಿಲ್ಲ
ಇದು ಕೂಡ ತಪ್ಪು ಕಲ್ಪನೆ, ಚಳಿಗಾಲದಲ್ಲಿ ದಾಹವಾಗುವುದು ಕಡಿಮೆ ಆದರೆ ನಾವು ಕಡಿಮೆಯೆಂದರೂ 2 ಲೀಟರ್ ನೀರು ಕುಡಿಯಲೇಬೇಕು. ತಣ್ಣೀರು ಕುಡಿಯಲು ಅನಿಸಲ್ಲ, ಬಿಸಿ ನೀರು ಮಾಡಿ ಕುಡಿಯಿರಿ.
6. ತಂಪಾದ ವಾತಾವರಣದಲ್ಲಿ ವ್ಯಾಯಾಮ ಮಾಡಬಾರದು
ವ್ಯಾಯಾಮ ಮಾಡಿದರೆ ಚಳಿ ದೂರಾಗುವುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು ಅಲ್ಲದೆ ಫಿಟ್ನೆಸ್ ಕಾಪಾಡಲು ಸಹಕಾರಿ. ಶ್ವಾಸಕೋಶದ ಆರೋಗ್ಯಕ್ಕೆ ವ್ಯಾಯಾಮ, ಉಸಿರಾಟದ ವ್ಯಾಯಾಮ ತುಂಬಾ ಒಳ್ಳೆಯದು.
ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ಏನು ಮಾಡಬೇಕು?
ಆಹಾರಕ್ರಮ, ಆಹಾರ
ನಿಮ್ಮ ಆಹಾರದಲ್ಲಿ ಧಾನ್ಯಗಳು, ಮೀನು, ಪೌಲ್ಟ್ರಿ ಮಾಂಸ, ನಟ್ಸ್, ಬೀಜಗಳು, ಗಿಡ ಮೂಲಿಕೆಗಳು ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.
ವ್ಯಾಯಾಮ ಮಾಡಿ
ಪ್ರತಿದಿನ ಅರ್ಧ ಗಂಟೆ ವ್ಯಾಯಾಮ, ಇದು ನಿಮ್ಮ ಆರೋಗ್ಯ ರಕ್ಷಣೆ ಮಾಡಲು ಸಹಾಯ ಮಾಡುತ್ತದೆ.
ತ್ವಚೆ ಸಮಸ್ಯೆ ತಡೆಗಟ್ಟಲು
ತ್ವಚೆ ಸಮಸ್ಯೆ ತಡೆಗಟ್ಟಲು ಮಾಯಿಶ್ಚರೈಸರ್ ಬಳಸಿ. ಸನ್ ಪ್ರೊಟೆಕ್ಷನ್ ಕ್ರೀಮ್ ಬಳಸಿ, ಸಾಕಷ್ಟು ನೀರು ಕುಡಿಯಿರಿ.
ನಿದ್ದೆ
ಒಳ್ಳೆಯ ನಿದ್ದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಅಲ್ಲದೆ ಸ್ಟ್ರೆಷ್ ಹಾರ್ಮೋನ್‌ಗಳನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ಚೆನ್ನಾಗಿ ನಿದ್ದೆ ಮಾಡಿ.
ವಿಟಮಿನ್ ಡಿ: ಚಳಿಗಾಲದಲ್ಲಿ ವಿಟಮಿನ್ ಡಿ ಕಡಿಮೆ ಇರುತ್ತದೆ, ಆದ್ದರಿಂದ ವಿಟಮಿನ್ ಡಿ ಅಧಿಕವಿರುವ ಆಹಾರ ಸೇವಿಸಿ. ಮೀನು, ಮೊಟ್ಟೆ, ಅಣಬೆ, ಅಗಸೆ ಬೀಜ ಈ ಬಗೆಯ ಆಹಾರಗಳನ್ನು ಸೇವಿಸಿ.
ಬೆಚ್ಚನೆಯ ಉಡುಪು ಧರಿಸಿ
ಚಳಿಗಾಲದಲ್ಲಿ ಬೆಚ್ಚನೆಯ ಉಡುಪು ಧರಿಸಿ. ಮೈ ಬೆಚ್ಚಗಿಡುವುದರಿಂದ ಶೀತದ ಸಮಸ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
