Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಭಾರತದಲ್ಲಿ ನಾಲ್ವರಲ್ಲಿ ಒಬ್ಬರಿಗೆ ಕಂಡು ಬರುತ್ತಿದೆ ರಕ್ತದೊತ್ತಡ: ಬಿಪಿ ನಿಯಂತ್ರಣದಲ್ಲಿಡಲು ಮನೆಮದ್ದು
ಅತ್ಯಧಿಕ ರಕ್ತದೊತ್ತಡ ಅಥವಾ ಬಿಪಿ ಸಮಸ್ಯೆ ಸರ್ವೇ ಸಾಮಾನ್ಯ ಎಂಬಂತೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಭಾರತದ ಆರೋಗ್ಯ ಇಲಾಖೆ ಭಾರತದಲ್ಲಿ ನಾಲ್ವರಲ್ಲಿ ಒಬ್ಬರಲ್ಲಿ ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಇದೆ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಶೇ. 12 ರಷ್ಟು ಜನರಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿದೆ ಎಂದು ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಲು ಕಾರಣವೇನು ಎಂದು ನೋಡುವುದಾದರೆ ಈಗೀನ ಜೀವನಶೈಲಿಯೇ ಪ್ರಮುಖ ಕಾರಣವಾಗಿದೆ.
ಪೋಷಕಾಂಶದ ಕೊರತೆ (ಫಾಸ್ಟ್ ಫುಡ್‌ಗಳಲ್ಲಿ ಪೋಷಕಾಂಶ ಸಿಗಲ್ಲ)
ದೈಹಿಕವಾಗಿ ಚಟುವಟಿಕೆ ಇಲ್ಲದಿರುವುದು
ಅತ್ಯಧಿಕ ಮೈ ತೂಕ
ವಂಶವಾಹಿಯಾಗಿ ಬರುವುದು
ಮದ್ಯಪಾನ, ತಂಬಾಕು ಸೇವನೆ
ಅತ್ಯಧಿಕ ಉಪ್ಪಿನಂಶದ ಆಹಾರ ಸೇವನೆ
ಧೂಮಪಾನ
ಅತ್ಯಧಿಕ ಒತ್ತಡ
ಅತ್ಯಧಿಕ ರಕ್ತದೊತ್ತಡ ಅಪಾಯಕಾರಿ ಏಕೆ?
ಅತ್ಯಧಿಕ ರಕ್ತದೊತ್ತಡದಿಂದಾಗಿ ಹೃದಯಾಘಾತ, ಹೃದಯಸ್ತಂಭನ, ಪಾರ್ಶ್ವವಾಯು ಈ ಬಗೆಯ ಅಪಾಯಗಳ ಸಾಧ್ಯತೆ ಹೆಚ್ಚು.
ಆಯುರ್ವೇದಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಇವುಗಳು ಪರಿಣಾಮಕಾರಿ ಎಂದು ಹೇಳಿದೆ:
ಗ್ರೀನ್ ಟೀ
ಗ್ರೀನ್ ಟೀಯನ್ನು ಹೆಚ್ಚಿನವರು ಮೈ ತೂಕ ಕಡಿಮೆ ಮಾಡಲೆಂದು ಕುಡಿಯುತ್ತಾರೆ, ಆದರೆ ಗ್ರೀನ್ ಟೀ ಕುಡಿಯುವುದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿಡಬಹುದು ಎಂದು ಆಯುರ್ವೇದ ಹೇಳುತ್ತದೆ. ಗ್ರೀನ್ ಟೀ ಅತ್ಯಧಿಕ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ.
ಲೆಮನ್ ಟೀ
ನೀವು ನೀರಿಗೆ ಸ್ವಲ್ಪ ಶುಂಠಿ ಟೀ ಪುಡಿ ಹಾಕಿ ಕಾಯಿಸಿ ಅದಕ್ಕೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ.
ಬೀಟ್‌ರೂಟ್ ಜ್ಯೂಸ್
ಬೀಟ್‌ರೂಟ್ ಜ್ಯೂಸ್ ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೆ ಸಹಕಾರಿ. ಬೀಟ್‌ರೂಟ್ ರಕ್ತ ಹೆಚ್ಚಿಸಲು, ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ.
ದಾಸವಾಳದ ಟೀ
ದಾಸವಾಳದ ಟೀ ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೆ ಸಹಕಾರಿ. ಇದು ದೇಹದಲ್ಲಿರುವ ಅತ್ಯಧಿಕ ಸೋಡಿಯಂ ಅಂಶ ಹೊರಹಾಕುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಈ ಅಂಶಗಳತ್ತ ಗಮನಹರಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು:
ಅತ್ಯಧಿಕ ರಕ್ತದೊತ್ತಡ ಕಡಿಮೆ ಮಾಡಿ, ಅದರಲ್ಲಿಯೂ ಸೊಂಟದ ಸುತ್ತಳತೆ ಕಡಿಮೆ ಮಾಡಿ
ಅತ್ಯಧಿಕ ಮೈತೂಕವಿದ್ದರೆ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುವುದು. ರಕ್ತನಾಳಗಳಲ್ಲಿ ಕೊಬ್ಬು ತುಂಬಿಕೊಂಡರೆ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ರಕ್ತದೊತ್ತಡ ಸಮಸ್ಯೆ ಉಂಟಾಗುವುದು.
ಈ ಅಂಶಗಳತ್ತ ಗಮನಹರಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು:
ಅತ್ಯಧಿಕ ರಕ್ತದೊತ್ತಡ ಕಡಿಮೆ ಮಾಡಿ, ಅದರಲ್ಲಿಯೂ ಸೊಂಟದ ಸುತ್ತಳತೆ ಕಡಿಮೆ ಮಾಡಿ
ಅತ್ಯಧಿಕ ಮೈತೂಕವಿದ್ದರೆ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುವುದು. ರಕ್ತನಾಳಗಳಲ್ಲಿ ಕೊಬ್ಬು ತುಂಬಿಕೊಂಡರೆ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ರಕ್ತದೊತ್ತಡ ಸಮಸ್ಯೆ ಉಂಟಾಗುವುದು. ಹಾಗಾಗಿ ಮೈ ಕೊಬ್ಬು ಕರಗಿಸಲು ಸಹಕಾರಿ.
ಪ್ರತಿದಿನ ವ್ಯಾಯಾಮ ಮಾಡಿ
ಪ್ರತಿದಿನ ನೀವು 30 ನಿಮಿಷ ವ್ಯಾಯಾಮ ಮಾಡಬೇಕು. ವ್ಯಾಯಾಮ ಮಾಡುವುದರಿಂದ ಮೈ ಕೊಬ್ಬು ಕರಗುವುದು ಮಾತ್ರವಲ್ಲ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ. ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ. ನಡೆಯುವುದು, ಜಿಮ್ ಹೀಗೆ ನಿಮಗೆ ಅನುಕೂಲಕರವಾದ ವ್ಯಾಯಾಮ ಮಾಡಿ.
ಆಹಾರಕ್ರಮದ ಕಡೆಗೆ ಗಮನಹರಿಸಿ
ಹೊಟ್ಟೆ ತುಂಬಲು ಅಹಾರ ಸೇವಿಸಬೇಡಿ, ಬದಲಿಗೆ ನಿಮ್ಮ ದೇಹಕ್ಕೆ ಶಕ್ತಿಯನ್ನು ತುಂಬುವ ಆಹಾರ ಸೇವಿಸಿ. ನಿಮ್ಮ ಪ್ಲೇಟ್‌ನಲ್ಲಿ ಪೋಷಕಾಂಶಗಳಿರುವ ಆಹಾರ ತುಂಬಿರಲಿ. ಜಂಕ್ ಫುಡ್‌ಗಳಿಂದ ದೂರವಿರಿ.
ಸೋಡಿಯಂ ಕಡಿಮೆ ಇರುವ ಆಹಾರ ಸೇವಿಸಿ.
ಸಂಸ್ಕರಿಸಿದ ಆಹಾರ ಕಡಿಮೆ ಸೇವಿಸಿ
ಟೇಬಲ್ ಸಾಲ್ಟ್ ಬಳಸಬೇಡಿ: ಟೇಬಲ್ ಸಾಲ್ಟ್ ಸಂಪೂರ್ಟ್ ಬಿಟ್ಟುಬಿಡಿ.
ಅಡುಗೆಗೆ ಕೂಡ ಉಪ್ಪು ಕಡಿಮೆ ಬಳಸಿ
ಮದ್ಯ ಮಿತಿಯಲ್ಲಿ ಸೇವಿಸಿ.
ಧೂಮಪಾನ ಮಾಡಬೇಡಿ
ಆಹಾರಕ್ರಮ, ವ್ಯಾಯಾದತ್ತ ಗಮನಹರಿಸುವ ಮೂಲಕ ನೀವು ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು. ಹಾಗಾಗಿ ಆರೋಗ್ಯಕರ ಜೀವನಶೈಲಿ ಕಡೆಗೆ ಗಮನಹರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications