Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ರಾತ್ರಿ ಈ ರೀತಿ ಆಹಾರ ಸೇವಿಸಿದ್ರೆ ಕೆಲವೇ ದಿನದಲ್ಲಿ ಹೊಟ್ಟೆಯ ಬೊಜ್ಜು ಮಾಯ!
ತೂಕ ಇಳಿಸಿಕೊಂಡು ಫಿಟ್ ಆಗಿ ಇರ್ಬೇಕು ಅನ್ನೋ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ. ಫಿಟ್ ನೆಸ್ ಕಾಪಾಡಿಕೊಳ್ಳೋದಕ್ಕೆ ಮಾಡೋ ಪ್ರಯತ್ನ ಅಷ್ಟಿಷ್ಟಲ್ಲ. ಹಾಗೋ ಹೀಗೋ ಯೋಗ-ವ್ಯಾಯಾಮಗಳನ್ನು ಮಾಡಿ ತೂಕ ಇಳಿಸಿಕೊಂಡರೂ ಕೂಡ ಈ ಹೊಟ್ಟೆ ಕರಗಿಸುವುದು ಇದ್ಯಲ್ಲ ಈ ಕೆಲಸ ತುಂಬಾನೇ ಕಷ್ಟ. ದೇಹ ಕರಗಿದ್ರೂ ಕೂಡ ಈ ಹೊಟ್ಟೆಯಂತೂ ಜಪ್ಪಯ್ಯ ಅಂದ್ರು ಕರಗೋದಿಲ್ಲ.

ಕೆಲವೊಂದು ಸಾರಿ ನಾವು ಪಾಲಿಸೋ ಕೆಲವೊಂದು ಆಹಾರ ಕ್ರಮಗಳು ಕೂಡ ನಮ್ಮ ಹೊಟ್ಟೆಯ ಭಾಗದಲ್ಲಿ ಬೊಜ್ಜು ತುಂಬಿಕೊಳ್ಳೋದಕ್ಕೆ ಕಾರಣವಾಗುತ್ತದೆ. ಅಷ್ಟಕ್ಕೂ ರಾತ್ರಿಯ ಹೊತ್ತು ಯಾವ ಆಹಾರಗಳನ್ನು ತಿಂದ್ರೆ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಬಹುದು ಅನ್ನೋದನ್ನು ತಿಳಿಯೋಣ.
ರಾತ್ರಿ ಆದಷ್ಟು ಬೇಗ ಊಟ ಮಾಡಿ!
ರಾತ್ರಿ 8 ಗಂಟೆಯ ಒಳಗಡೆ ಊಟ ಮಾಡಿದ್ರೆ ತುಂಬಾನೇ ಒಳ್ಳೆಯದು. ತಡವಾಗಿ ಊಟ ಮಾಡುವುದರಿಂದ ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಮತ್ತು ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರಬಹುದು. ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ 2 ರಿಂದ 3 ಗಂಟೆಗಳ ಅಂತರವಿರುವಂತೆ ನೋಡಿಕೊಳ್ಳಬೇಕು.
ಲಘು ಭೋಜನ ಮಾಡಿ!
ಬೆಳಿಗ್ಗೆ ರಾಜನಂತೆ, ಮಧ್ಯಾಹ್ನ ರಾಜಕುಮಾರನಂತೆ ಮತ್ತು ರಾತ್ರಿ ಬಡವರಂತೆ ತಿನ್ನಿರಿ ಎಂಬ ಗಾದೆಯನ್ನು ನೀವೆಲ್ಲಾ ಕೇಳಿರ್ಬಹುದು. ಈ ಮಾತಿನಂತೆ ರಾತ್ರಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ಅಂದ್ರೆ ಲಘು ಆಹಾರವನ್ನೇ ಸೇವನೆ ಮಾಡ್ಬೇಕು. ರಾತ್ರಿ ಭಾರೀ ಭೋಜನ ಮಾಡೋದ್ರಿಂದ ನಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮತ್ತು ನಮ್ಮ ತೂಕ ಹೆಚ್ಚಾಗಲು ಕೂಡ ಕಾರಣವಾಗಬಹುದು.
ಪುದೀನಾ ಟೀ ಕುಡಿಯಿರಿ!
ರಾತ್ರಿ ಹೊತ್ತಿನಲ್ಲಿ ಪುದೀನಾ ಟೀ ಕುಡಿಯೋದ್ರಿಂದ ನಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮತ್ತು ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಮಲಗುವ ಮುನ್ನ ಪುದೀನಾ ಟೀಯನ್ನು ಕುಡಿಯಬೇಕು. ರಾತ್ರಿ ಸಮಯದಲ್ಲಿ ಚಹಾ ಮತ್ತು ಕಾಫಿ ಸೇವನೆಯು ನಮ್ಮ ನಿದ್ರೆಗೆ ಅಡಚಣೆಯನ್ನು ಉಂಟುಮಾಡುತ್ತದೆ.
ರಾತ್ರಿ ಮಧ್ಯಪಾನ ಮಾಡಬೇಡಿ!
ರಾತ್ರಿ ಹೊತ್ತು ಯಾವುದೇ ಕಾರಣಕ್ಕೂ ಮಧ್ಯಪಾನ ಸೇವನೆ ಮಾಡಬಾರದು. ರಾತ್ರಿಯಲ್ಲಿ ಆಲ್ಕೋಹಾಲ್ ಕುಡಿಯುವುದರಿಂದ ದೇಹವು ಕೊಬ್ಬನ್ನು ಸುಡುವುದನ್ನು ತಡೆಯುತ್ತದೆ. ಇಷ್ಟು ಮಾತ್ರವಲ್ಲದೆ ಮದ್ಯದ ಜೊತೆಗೆ ಮಸಾಲೆಯುಕ್ತ ಪದಾರ್ಥವನ್ನು ಸೇವಿಸಲು ಮನಸ್ಸು ಬಯಸುತ್ತದೆ. ಇದರಿಂದ ಗಣನೀಯವಾಗಿ ನಿಮ್ಮ ತೂಕ ಹೆಚ್ಚಾಗುತ್ತದೆ.
ರಾತ್ರಿ ಹಸಿವಾದಾಗ ಆರೋಗ್ಯಕರ ತಿಂಡಿ ಸೇವಿಸಿ!
ಹೆಚ್ಚಿನ ಸಮಯದಲ್ಲಿ ನಮಗೆ ಮಧ್ಯರಾತ್ರಿ ಹಸಿವಾಗೋದಕ್ಕೆ ಶುರುವಾಗುತ್ತದೆ. ಇಂತಹ ಸಂದರ್ಭದಲ್ಲಿ ಮೊದಲು ಹೋಗಿ ಫ್ರಿಡ್ಜ್ ನಲ್ಲಿ ಏನಿದೆ ಎಂದು ನೋಡುತ್ತೇವೆ. ಕೇಕ್, ಪೇಸ್ಟ್ರಿ, ಐಸ್ ಕ್ರೀಮ್ ಗೆ ನಾವು ಮೊದಲ ಆಧ್ಯತೆ ನೀಡುತ್ತೇವೆ. ಇದನ್ನು ತಿಂದರೆ ನಿಮ್ಮ ತೂಕ ಹೆಚ್ಚಾಗುತ್ತದೆ. ಹೀಗಾಗಿ ಹಣ್ಣು, ಕಡಲೆ ಬೀಜದಂತಹ ಪದಾರ್ಥಗಳನ್ನು ರಾತ್ರಿ ಹಸಿವಾದಾಗ ಸೇವನೆ ಮಾಡಬಹುದು.
ಈ ವಿಚಾರಗಳನ್ನು ತಪ್ಪದೇ ಪಾಲನೆ ಮಾಡಿದ್ರೆ ತೂಕ ಇಳಿಸಿಕೊಳ್ಳುವುದರ ಜೊತೆಗೆ ಹೊಟ್ಟೆಯ ಬೊಜ್ಜನ್ನು ಕೂಡ ಕರಗಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
