Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಿಪಿ ನಿಯಂತ್ರಿಸಲು ಅಜ್ವೈನ್ ಹೇಗೆ ಬಳಸಬೇಕು?
ವಯಸ್ಸು 40 ದಾಟುತ್ತಿದ್ದಂತೆ ಬಹುತೇಕರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಅತ್ಯಧಿಕ ರಕ್ತದೊತ್ತಡ ಕೂಡ ಒಂದಾಗಿದೆ. ಬಿಪಿ ಸಮಸ್ಯೆ ಮುಕ್ತ ವ್ಯಕ್ತಿಗಳಿರುವ ಮನೆಯೇ ತುಂಬಾ ಅಪರೂಪ, ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಬಿಪಿ ಸಮಸ್ಯೆ ಕಂಡು ಬರುತ್ತಿದೆ. ಬದಲಾದ ಜೀವನಶೈಲಿ, ಅತ್ಯಧಿಕ ಮಾನಸಿಕ ಒತ್ತಡದ ಕೆಲಸ ಇವೆಲ್ಲಾ ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ.

ಬಿಪಿ ಸಮಸ್ಯೆ ನಿರ್ಲಕ್ಷ್ಯ ಮಾಡುವಂತಿಲ್ಲ, ಏಕೆಂದರೆ ಬಿಪಿ ಹೆಚ್ಚಾದರೆ ಪಾರ್ಶ್ವವಾಯು, ಹೃದಯಾಘಾತ ಈ ಬಗೆಯ ಅಪಾಯ ಅಧಿಕ. ರಕ್ತದೊತ್ತಡ ನಿಯಂತ್ರಣಕ್ಕೆ ಹಲವಾರು ಮದ್ದುಗಳಿವೆ, ಅದರಲ್ಲೊಂದು ಅಜ್ವೈನ್. ಬಿಪಿ ನಿಯಂತ್ರಣಕ್ಕೆ ಈ ಅಜ್ವೈನ್ ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ:
ಅನೇಕ ರೀತಿಯಲ್ಲಿ ಅಜ್ವೈನ್ ಪ್ರಯೋಜನಕಾರಿ:'
ಅಜ್ವೈನ್‌ನಲ್ಲಿ ಗಾಯ ಗುಣಪಡಿಸುವ ಗುಣವಿದೆ, ಇದರಲ್ಲಿ ನಾರಿನಂಶ, ಪ್ರೊಟೀನ್, ಕಬ್ಬಿಣದಂಶ, ಸೊಡಿಯಂ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ವಿಟಮಿನ್ ಎ, ವಿಟಮಿನ್ ಬಿ 9, ಒಮೆಗಾ 3 ಕೊಬ್ಬಿನಂಶ, ಆ್ಯಂಟಿಆಕ್ಸಿಡೆಂಟ್ ಅಂಶಗಳಿರುವುದರಿಂದ ಅನೇಕ ರೀತಿಯಲ್ಲಿ ಪ್ರಯೋಜನಕಾರಿ.
ಅಜ್ವೈನ್ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಇದು ಹೃದಯ ಆರೋಗ್ಯ ಕಾಪಾಡುತ್ತದೆ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ, ಕೊಲೆಸ್ಟ್ರಾಲ್ ಕೂಡ ನಿಯಂತ್ರಿಸುತ್ತದೆ.
ರಕ್ತದೊತ್ತಡ ನಿಯಂತ್ರಣಕ್ಕೆ ಅಜ್ವೈನ್
ರಕ್ತದೊತ್ತಡ ನಿಯಂತ್ರಣಕ್ಕೆ ಅಜ್ವೈನ್ ಬಳಸುವ ವಿಧಾನ ತುಂಬಾ ಸರಳವಾಗಿದೆ:
* ರಾತ್ರಿ ಮಲಗುವ ಒಂದು ಚಮಚ ಅಜ್ವೈನ್ ಅನ್ನು ಒಂದು ಕಪ್ ನೀರಿನಲ್ಲಿ ನೆನೆಹಾಕಿ.
* ಮಾರನೇಯ ದಿನ ಆ ನೀರನ್ನು ಕುದಿಸಬೇಕು, ನಂತರ ಸೋಸಿ ತಣ್ಣಗಾಗಲು ಬಿಡಿ. ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಅಜ್ವೈನ್‌ನ ಪ್ರಮುಖ ಪ್ರಯೋಜ ಸಿಗಲು ನೀವು ಅಜ್ವೈನ್ ಅನ್ನು ಮಿತಿಯಲ್ಲಿ ಸೇವಿಸಬೇಕು. 1 ಚಮಚಕ್ಕಿಂತ ಅಧಿಕ ಸೇವಿಸಬೇಡಿ.
ನೀವು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಅಜ್ವೈನ್ ನೀರು ಕುಡಿಯುವುದರಿಂದ ರಕ್ತದೊತ್ತಡ ನಿಯತ್ರಣದಲ್ಲಿಡುವುದು ಮಾತ್ರವಲ್ಲ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
ಜೀರ್ಣಕ್ರಿಯೆಗೆ ಒಳ್ಳೆಯದು: ಹೊಟ್ಟೆಯ ಆರೋಗ್ಯಕ್ಕೆ ಅಜ್ವೈನ್ ತುಂಬಾ ಒಳ್ಳೆಯದು. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವುದು. ಅಜ್ವೈನ್ ಹಾನಿಕಾರಕ ಬ್ಯಾಕ್ಟಿರಿಯಾಗಳಾದ ಇ ಕಾಲಿ, ಸಲ್ಮೋನಿಲಾ ಇವುಗಳ ವಿರುದ್ಧ ಹೋರಾಡಿ ಫುಡ್ ಪಾಯಿಸನ್ ಆಗುವುದನ್ನು ತಡೆಗಟ್ಟುತ್ತದೆ. ಅನ್ನನಾಳ, ಕರಳಿನಲ್ಲಿ ಉಂಟಾದ ಉರಿಯೂತ ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ. ಅಸಿಡಿಟಿ, ಅಲ್ಸರ್ ಈ ಬಗೆಯ ಸಮಸ್ಯೆ ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗಿದೆ.
ಸಾಮಾನ್ಯ ಶೀತ, ಕೆಮ್ಮು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ: ಇದು ಶ್ವಾಸಕೋಶದ ಆರೋಗ್ಯ ಉತ್ತಮವಾಗಿಡುವುದರಿಂದ ಶೀತ, ಕೆಮ್ಮು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ನಿಮಗೆ ಆಗಾಗ ಶೀತ, ಕೆಮ್ಮು ಸಮಸ್ಯೆ ಕಾಡುತ್ತಿದ್ದರೆ ಅಥವಾ ಅಸ್ತಮಾ ಸಮಸ್ಯೆಯಿದ್ದರೆ ಅಜ್ವೈನ್ ಪುಡಿ ಮಾಡಿಟ್ಟು ಅದನ್ನು ಸ್ವಲ್ಪ ಬೆಲ್ಲದ ಜೊತೆ ಸೇವಿಸುವುದರಿಂದ ನೀವು ಉತ್ತಮ ಪ್ರಯೋಜನ ಪಡೆಯಬಹುದು.
ಸಂಧಿವಾತಕ್ಕೆ ಒಳ್ಳೆಯದು: ನೀವು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅಜ್ವೈನ್ ನೀರು ಕುಡಿಯುವುದರಿಂದ ಸಂಧಿವಾತದ ಸಮಸ್ಯೆಗೂ ಒಳ್ಳೆಯದು. ಇದನ್ನು ಬಳಸುವುದರಿಂದ ರುಮೆಟೊ ಆರ್ಥರೈಟಿಸ್‌ನಂಥ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ, ಅಲ್ಲದೆ ಕ್ರೋನಿಕ್ ಅಟೊಇಮ್ಯೂನೆ ಇನ್‌ಫ್ಲೇಮಟರಿ ಕಾಯಿಲೆ ತಡೆಗಟ್ಟಬಹುದು.
ಅಜ್ವೈನ್ ನೀರು ಕುಡಿಯುವುದರಿಂದ ಅಡ್ಡಪರಿಣಾಮವಿದೆಯೇ?
ಅಜ್ವೈನ್ ನೀರನ್ನು ಮಿತಿಯಲ್ಲಿ ಸೇವಿಸುವುದರಿಂದ ಯಾವುದೇ ಅಡ್ಡೊರಿಣಾಮ ಉಂಟಾಗುವುದಿಲ್ಲ. ಆದರೆ ಅತಿಯಾದರೆ ಅಸಿಡಿಟಿ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು, ಸುಸ್ತು, ವಾಂತಿ, ತ್ವಚೆ ಅಲರ್ಜಿ, ತಲೆನೋವು ಮುಂತಾದ ಸಮಸ್ಯೆ ಕಂಡು ಬರುವುದು. ದಿನದಲ್ಲಿ ಒಂದು ಚಮಚ ಅಜ್ವೈನ್ ಬಳಸಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

