Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಬೆಳಗ್ಗೆ ಖಾಲಿ ಹೊಟ್ಟೆಗೆ ಈ ಹಣ್ಣು ಸೇವಿಸಿ: ಲಿವರ್ ಸಮಸ್ಯೆ ದೂರಾಗಿಸಿ!
ವಿಶ್ವದಲ್ಲಿ ಹಲವರು ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ಈ ಲಿವರ್ ಸಮಸ್ಯೆ ಕೂಡ ಒಂದಾಗಿದೆ. ಲಿವರ್ ಸಮಸ್ಯೆ ಇರುವವರು ತಮ್ಮ ಆರೋಗ್ಯವನ್ನು ಸುಧಾರಿಸಲು ಆಹಾರ ಕ್ರಮವನ್ನು ಸುಧಾರಿಸಿಕೊಳ್ಳುವುದು ಬಹಳ ಮುಖ್ಯ. ಯಕೃತ್ತಿನ ಕಾರ್ಯದಲ್ಲಿ ಅಡಚಣೆಯು ನಿಮ್ಮ ದೇಹದ ಪ್ರಮುಖ ಅಂಗಗಳು ಹಾಗೆ ಸಮತೋಲನ ಹಾಳಾಗಲು ಕಾರಣವಾಗುತ್ತದೆ.
ದೇಹದ ಅತ್ಯಂತ ಅಗತ್ಯವಾದ ಅಂಗಗಳಲ್ಲಿ ಒಂದಾದ ಯಕೃತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಯಕೃತ್ತಿನ ಕಾರ್ಯದಲ್ಲಿನ ಸಣ್ಣಪುಟ್ಟ ಅಡಚಣೆಗಳು ಸಹ ದೇಹದಾದ್ಯಂತ ವ್ಯಾಪಕ ಸಮಸ್ಯೆಗಳನ್ನು ಉಂಟುಮಾಡಬಹುದು. ಕೊಬ್ಬಿನಿಂದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿರುವ ಯುವಜನರ ಸಂಖ್ಯೆ ಹೆಚ್ಚುತ್ತಿದೆ.

ಯುಎಸ್‌ನಲ್ಲಿ ನಡೆಸಿದ ಕ್ಲಿನಿಕಲ್ ಅಧ್ಯಯನದಲ್ಲಿ ಆಹಾರಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದಿದೆ. ಯಕೃತ್ತು ಹಾನಿಯಾಗದೆ ಆರೋಗ್ಯವಾಗಿರಬೇಕಾದರೆ ನೀವು ಸೇಬು ಹಣ್ಣನ್ನು ಸೇವಿಸಬೇಕಾಗುತ್ತದೆ. ಹಾಗೆ ನಿಮ್ಮ ಯಕೃತ್ತು ಆರೋಗ್ಯವಾಗಿರಬೇಕಾದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಿದರೆ ಬಹಳ ಉತ್ತಮ.
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಸೇಬು ಹಣ್ಣುಗಳನ್ನು ತಿನ್ನುವುದು ನಿಮ್ಮ ಯಕೃತ್ತಿನ ಆರೋಗ್ಯ ಕಾಪಾಡಲು ಬಹಳ ಮುಖ್ಯ ಹಾಗೂ ಆರೋಗ್ಯಕರ ಮಾರ್ಗವಾಗಿರಲಿದೆ. ಇದರಲ್ಲಿನ ಫೈಬರ್, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಸೇಬುಗಳು ಯಕೃತ್ತನ್ ನಿರ್ವಿಷಗೊಳಿಸಲು ಮತ್ತು ಕೊಬ್ಬಿನ ಅಂಶ ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕಾಲಾನಂತರದಲ್ಲಿ ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡಲಿದೆ.
ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಿಂದ ಉಂಟಾಗುವ ಕೊಬ್ಬಿನ ಯಕೃತ್ತಿನ ಕಾಯಿಲೆಯು ವಿವಿಧ ಲಕ್ಷಣಗಳ ತೋರಿಸಲಿದೆ. ತೂಕ ಇಳಿಸಿಕೊಳ್ಳಲು ಅಮುಂದಾಗುವ ವ್ಯಕ್ತಿ ಲಿವರ್ ಆರೋಗ್ಯದ ಬಗ್ಗೆಯೂ ಗಮನ ನೀಡಬೇಕು. ಈ ಸಮಯದಲ್ಲಿ ನೀವು ಯಕೃತ್ತಿನಲ್ಲಿ ಶೇಖರಣೆಯಾಗುವ ಕೊಬ್ಬನ್ನ ಕರಗಿಸಕು ಪಥ್ಯ ಮಾಡಬಹುದು. ಅದರಲ್ಲೂ ಖಾಲಿ ಹೊಟ್ಟೆಗೆ ಸೇಬು ಸೇವನೆ ಪ್ರಯೋಜನಕಾರಿಯಾಗಲಿದೆ.
ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆ ಕಾಫಿ ಸೇವನೆ ಮುಖ್ಯವಾಗುತ್ತದೆ. ಆದರೆ ಎಂದಿಗೂ ಹೆಚ್ಚು ಕರಿದ ಆಹಾರ, ಸಕ್ಕರೆ, ಮದ್ಯಪಾನ, ಧೂಮಪಾನ ಮಾಡುವುದನ್ನು ನಿಲ್ಲಿಸುವುದು ಲಿವರ್ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.
ಯಕೃತ್ತು ಸಮಸ್ಯೆ ಇರುವವರು ಈ ಆಹಾರ ಸೇವಿಸಬಾರದು
ನೀವು ಮಾಂಸಹಾರಿಯಾಗಿದ್ದು ನಿಮಗೆ ಲಿವರ್ ಸಮಸ್ಯೆ ಇದ್ದರೆ ನೀವು ಮಾಂಸಹಾರ ಸೇವನೆ ನಿಲ್ಲಿಸಬೇಕು. ಹೆಚ್ಚು ಮಾಂಸಾಹಾರ ಸೇವಿಸಿದಾಗ ಹೆಚ್ಚು ಅಮೋನಿಯಾ ಉತ್ಪತ್ತಿಯಾಗುತ್ತದೆ, ಇದನ್ನು ಹೊರ ಹಾಕಲು ಲಿವರ್ ಮೇಲೆ ಅಧಿಕ ಒತ್ತಡ ಬೀಳಲಿದೆ. ಹಾಗೆ ಲಿವರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇಲ್ಲವೆ ಈ ಅಮೋನಿಯ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಅತೀಯಾಗಿ ಕೊಬ್ಬು, ಹಾಗೂ ಕ್ಯಾಲೋರಿ ಹೊಂದಿರುವ ಆಹಾರದಿಂದ ನಿಮ್ಮ ತೂಕ ಹೆಚ್ಚಳ ಆಗುತ್ತಿದ್ದರೆ ಆ ಆಹಾರದಿಂದಲೂ ದೂರವೇ ಇರಬೇಕು. ಮುಖ್ಯವಾಗಿ ಬರ್ಗರ್, ಮಟನ್, ಪಿಜ್ಜಾದಂತಹ ಆಹಾರ ಹಾಗೆ ಪ್ಯಾಕ್ ಮಾಡಲಾದ ಸಂಸ್ಕರಿಸಿದ ಆಹಾರಗಳ ಸೇವನೆ ಬಿಡಬೇಕು. ಸಸ್ಯಹಾರಿ ಆಹಾರ ಹಾಗೂ ನಿಯಮಿತ ವ್ಯಾಯಾಮ ಮಾಡಬೇಕು. ಅದರಲ್ಲು ನೀರು ಹೆಚ್ಚು ಸೇವಿಸುವುದು, ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
ಇತ್ತೀಚಿಗೆ ಫ್ಯಾಟಿ ಲಿವರ್ ಸಮಸ್ಯೆ ಅಧಿಕವಾಗಿದೆ. ಜೀವನ ಶೈಲಿಯಲ್ಲಿನ ಬದಲಾವಣೆ ಹಾಗೂ ಆಹಾರ ಶೈಲಿಯ ಬದಲಾವಣೆಯಿಂದಾಗಿ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚಾಗಿದೆ. ಲಿವರ್ ಸಮಸ್ಯೆ ಇದ್ದರೆ ಸೂಕ್ತ ವೈದ್ಯಕೀಯ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications