Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಹೃದಯಾಘಾತದ ಮುನ್ಸೂಚನೆಗಳಿವು, ಅಪಾಯ ತಪ್ಪಿಸಲು ಯಾವ ಬಗೆಯ ಚಿಕಿತ್ಸೆ ಸಹಕಾರಿ?
ಈ ಎರಡು-ಮೂರು ವರ್ಷಗಳಲ್ಲಿ ನೋಡಿದಾಗ ಹೃದಯಾಘಾತ ಯಾರಿಗೆ ಬೇಕಾದರೂ ಬರಬಹುದು, ಉತ್ತರ ಪ್ರದೇಶದ 5 ವರ್ಷದ ಮಗು ಹದಯಾಘಾತ ತೀರಿಕೊಂಡಿದೆ, ಹದಿಹರೆಯದ ಪ್ರಾಯದವರಲ್ಲಿ, ಯೌವನ ಪ್ರಾಯದವರಲ್ಲಿ ಹೃದಯಾಘಾತ ಕಂಡು ಬರುತ್ತಿದೆ, ಆದ್ದರಿಂದ ಹೃದಯಾಘಾತ ಯಾರಿಗೆ ಬರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ.

ಹೃದಯಾಘಾತ ಇದ್ದಕ್ಕಿದ್ದಂತೆ ಬಂತು ಎಂದು ಹೇಳುವುದನ್ನು ಕೇಳುತ್ತೇವೆ, ಆದರೆ ಹೃದಯಾಘಾತಕ್ಕೆ ಮುನ್ನವೇ ಕೆಲವೊಂದು ಸೂಚನೆಗಳು ಕಂಡು ಬಂದಿರುತ್ತದೆ, ಆದರೆ ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ, ಹೀಗಾಗಿ ಹೃದಯಘಾತದ ಅಪಾಯ ಹೆಚ್ಚಾಗುವುದು. ಎಕ್ಸ್‌ಪರ್ಟ್ ಪ್ರಕಾರ ನೀವು ಹೃದಯಾಘಾತಯ ಅಪಾಯಗಳನ್ನು ಈ ಲಕ್ಷಣಳಿಂದ ತಿಳಿಯಬಹುದಂತೆ:
ಲಕ್ಷಣಗಳು ಎಲ್ಲರಿಗೆ ಒಂದೇ ರೀತಿ ಇರಲ್ಲ
ಪುರುಷರಲ್ಲಿ, ಮಹಿಳೆಯರಲ್ಲಿ ಈ ಲಕ್ಷಣಗಳು ಭಿನ್ನವಾಗಿರಬಹುದು, ಎದೆ ಬಿಗಿಯಾದಂತೆ ಅನಿಸುವುದು, ಭುಜದಲ್ಲಿ ನೋವು, ಕುತ್ತಿಗೆಯಲ್ಲಿ ನೋವು, ದವಡೆ, ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಈ ಬಗೆಯ ಲಕ್ಷಣಗಳು ಕಂಡು ಬರುವುದು. ಇದರ ಜೊತೆಗೆ ತಲೆಸುತ್ತು, ಅಜೀರ್ಣ, ಮೈ ಬೆವರುವುದು, ವಾಂತಿ ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಯಾರಲ್ಲಿ ಹೃದಯಾಘಾತ ಅಪಾಯ ಹೆಚ್ಚು?
ಮಧುಮೇಹ, ಅತ್ಯಧಿಕ ರಕ್ತದೊತ್ತಡ, ಮಧುಮೇಹ, ಅತ್ಯಧಿಕ ಮದ್ಯಪಾನ, ಒಬೆಸಿಟಿ, ಕಿಡ್ನಿ ಕಾಯಿಲೆ, ಅತ್ಯಧಿಕ ಕೊಲೆಸ್ಟ್ರಾಲ್ ಈ ಬಗೆಯ ಸಮಸ್ಯೆ ಇರುವವರಿಗೆ ಹೃದಯಾಘಾತ ಹೆಚ್ಚಿರುತ್ತದೆ.
ಹೃದಯಾಘಾತ ಉಂಟಾದಾಗ ಭಯಪಡಬಾರದು, ಈ ರೀತಿ ಮುನ್ನೆಚ್ಚರಿಕೆವಹಿಸಬೇಕು?
*325 mg aspirin ಟ್ಯಾಬ್ಲೆಟ್ ತೆಗೆದುಕೊಳ್ಳಿ.
* nitroglycerine (sorbitrate) ತಕ್ಷಣವೇ ನಾಲಗೆಯ ಕೆಳಗಡೆ ಇಡುವುದು ಒಳ್ಳೆಯದು.
* ಕೂಡಲೇ ಸಮೀಪದ ಒಳ್ಳೆಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ.
* ಹೃದಯಾಘಾತದಿಂದ ವ್ಯಕ್ತಿ ಪ್ರಜ್ಞೆ ತಪ್ಪಿದಾಗ CPR ಮಾಡಿದರೆ ಒಳ್ಳೆಯದು.
ಹೃದಯದ ಆರೋಗ್ಯಕ್ಕೆ ಆಹಾರ ಸೇವಿಸಿ
ಆಹಾರಕ್ರಮದ ನಾವು ಹೆಚ್ಚು ಜಾಗ್ರತೆವಹಿಸುತ್ತೇವೋ ಅಷ್ಟೇ ಆರೋಗ್ಯ ಚೆನ್ನಾಗಿರುತ್ತದೆ. ಸಂಸ್ಕರಿಸಿದ, ಅತ್ಯಧಿಕ ಉಪ್ಪಿನಂಶದ ಅಹಾರ ಸೇವಿಸಬೇಡಿ. ಹಣ್ಣು, ತರಕಾರಿಗಳು, ಧಾನ್ಯಗಳು, ನಟ್ಸ್ ಈ ಬಗೆಯ ಆಹಾರಗಳನ್ಉ ಅಧಿಕ ಸೇವಿಸಿ. ಫಾಸ್ಟ್‌ಫುಡ್, ಜಂಕ್‌ಫುಡ್ ಇವುಗಳಿಂದ ದೂರವಿರಿ.
ಅತ್ಯಧಿಕ ಮೈ ತೂಕವಿದ್ದರೆ ತೂಕ ಕಡಿಮೆ ಮಾಡಿ
ಮೈ ತೂಕ ಕಡಿಮೆ ಮಾಡುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು. ಮೈಕಟ್ಟು ಸದೃಢವಾಗಿದ್ದರೆ ಕಾಯಿಲೆ ಬೀಳುವುದು ಕಡಿಮೆಯಾಗುವುದು, ಹೃದಯ ಆರೋಗ್ಯಕ್ಕೂ ಒಳ್ಳೆಯದು.
ಪ್ರತಿದಿನ ವ್ಯಾಯಾಮ ಮಾಡಿ
ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಿ, ನಡೆಯುವ ವ್ಯಾಯಾಮವಾದರೂ ಸರಿ. ದೈಹಿಕ ಚಟುವಟಿಕೆಯಿಂದ ಇರುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.
ಮದ್ಯವನ್ನು ಮಿತಿಯಲ್ಲು ಸೇವಿಸಿ
ಮದ್ಯಪಾನ ಮಾಡದಿದ್ದರೆ ಒಳ್ಳೆಯದು, ಮಿತಿಯಲ್ಲಿ ಮಾಡಿದರೂ ತೊಂದರೆಯಿಲ್ಲ, ಆದರೆ ಅತಿಯಾದ ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ.
ಹೃದಯದ ಆರೋಗ್ಯಕ್ಕೆ ಪಾಲಿಸಬೇಕಾದ ಆಹಾರಕ್ರಮ'
ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ
* ಹಣ್ಣುಗಳು, ತರಕಾರಿ
* ಬೀನ್ಸ್
* ಧಾನ್ಯಗಳು
* ಕಡಿಮೆ ಕೊಬ್ಬಿನಂಶವಿರುವ ಆಹಾರ
* ಬೆಣ್ಣೆಹಣ್ಣು
ಯಾವ ಬಗೆಯ ಆಹಾರದಿಂದ ದೂರವಿರಬೇಕು?
* ಉಪ್ಪು ಅಥವಾ ಸೋಡಿಯಂ ಅಧಿಕವಿರುವ ಆಹಾರ ಸೇವಿಸಬೇಡಿ
* ಸಕ್ಕರೆ ಅಥವಾ ಕೃತಕ ಸಿಹಿ ಪಾನೀಯಗಳಿಂದ ದೂರವಿರಿ
* ಮದ್ಯ
* ಸಂಸ್ಕರಿಸಿದ ಆಹಾರ'
* ಸ್ಯಾಚುರೇಟಡ್ ಇರುವ ಆಹಾರ
ಟ್ರ್ಯಾನ್ಸ್ ಫ್ಯಾಟ್ ಆಹಾರ
ಈ ಬಗೆಯ ಆಹಾರಗಳಿಂದ ದೂರವಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
