Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಧ್ಯರಾತ್ರಿ ನಿದ್ರೆಯಿಂದ ಎಚ್ಚರಗೊಂಡಾಗ ಈ ತಪ್ಪು ಮಾಡಬೇಡಿ..! ತಜ್ಞರು ಹೇಳೋದೇನು ನೋಡಿ..
ಇತ್ತೀಚಿಗೆ ಜನರ ಜೀವನ ಶೈಲಿ ಬದಲಾಗಿ ಒತ್ತಡದಲ್ಲೇ ದಿನ ಕಳೆಯುತ್ತಾರೆ. ಈ ರೀತಿಯ ಜೀವನ ಶೈಲಿಯು ಹಲವು ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗೆ ದಾರಿಯಾಗುತ್ತಿದೆ. ಹೀಗಾಗಿ ಇಂದು ಅನೇಕರಲ್ಲಿ ನಿದ್ರಾಹೀನತೆಯಂತಹ ಸಮಸ್ಯೆ ಕಂಡುಬರುವುದು ಸಾಮಾನ್ಯ ಎನ್ನುವಂತಾಗಿದೆ. ನಿದ್ರಾಹೀನತೆಗೆ ಹಲವಾರು ಬಾಹ್ಯ ಮತ್ತು ಆಂತರಿಕ ಕಾರಣವಿರಬಹುದು. ಅದರಲ್ಲೂ ಕೆಲವರಿಗೆ ನಿದ್ರೆಯಲ್ಲಿ ಎಚ್ಚರವಾಗಿ ಮತ್ತೆ ನಿದ್ರೆ ಬಾರದೆ ಇರುವ ಸಮಸ್ಯೆ ಹೆಚ್ಚಾಗುತ್ತಿದೆ.
ಈ ರೀತಿ ನಿದ್ರೆಯಿಂದ ಎಚ್ಚರಗೊಂಡಾಗ ಕೆಲವರು ನೀರು, ಕಾಫಿ, ಟೀ ಕುಡಿಯುತ್ತಾರೆ, ಮೊಬೈಲ್ ಬಳಸುತ್ತಾರೆ ಇಷ್ಟೆ ಅಲ್ಲ ಕೆಲವರು ಎದ್ದು ಟಿವಿ ಆನ್ ಮಾಡಿ ಕುಳಿತುಕೊಳ್ಳುತ್ತಾರೆ. ಈ ರೀತಿ ಮಾಡುವುದು ಸಹ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗಲಿದೆ. ರಾತ್ರಿ ಒಮ್ಮೆ ಮಲಗಿದ ಮೇಲೆ ಕಣ್ಣು ಮುಚ್ಚಿದ್ದರೂ ನಿದ್ರೆ ಬರುವಾಗ ಬಹಳ ಸಮಯ ಹಿಡಿಯುವುದು ಹಲವರ ಸಮಸ್ಯೆಯಾಗಿರುತ್ತದೆ. ಜೊತೆಗೆ ಹಲವು ಬಾರಿ ನಿದ್ರೆ ಬಾರದೆ ಬೆಳಗ್ಗೆವರೆಗೂ ಪೀಕಲಾಟವಾಗುತ್ತದೆ.

ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ನಿಮ್ಮ ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರಬಹುದು. ಹಾಗಾದ್ರೆ ಮಧ್ಯರಾತ್ರಿ ಎಚ್ಚರಗೊಂಡಾಗ ಯಾವ ತಪ್ಪು ಮಾಡಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾತ್ರಿ ಉತ್ತಮ ನಿದ್ರೆಯ ಅವಶ್ಯಕತೆ ಇದ್ದರೆ ರಾತ್ರಿ ಮಲಗುವ ಮುನ್ನ ನೀವು ಸೇವಿಸುವ ಆಹಾರ ಕ್ರಮವೂ ಇದಕ್ಕೆ ನೇರ ಕಾರಣವಾಗಿರುತ್ತದೆ. ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸದೆ ಸಾದಾ ಆಹಾರವನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಜೊತೆಗೆ ಮಲಗುವ ಕೆಲ ನಿಮಿಷಗಳ ಮುನ್ನ ಒಂದು ಲೋಟ ಹಾಲು ಹಾಗೂ ನೀರು ಕುಡಿಯುವುದು ಉತ್ತಮ.
ಇನ್ನ ತಡರಾತ್ರಿಯವರೆಗೂ ನೀಲಿ ಬೆಳಕಿನ ಗ್ಯಾಜೆಟ್‌ಗಳ ಬಳಸುವುದು ಉತ್ತಮ ಹವ್ಯಾಸವಲ್ಲ. ಇದು ಕಣ್ಣಿನ ಮೇಲೆ ನೇರಳಾತೀತ ಕಿರಣ ಬೀಳುವುದರಿಂದಾಗಿ ನಿದ್ರೆಯಲ್ಲಿ ಏರುಪೇರಾಗುತ್ತದೆ. ಒಮ್ಮೆ ನಿದ್ರೆಯಿಂದ ಎಚ್ಚರಗೊಂಡರೆ ಮತ್ತೆ ನಿದ್ರೆಗೆ ಮರಳಲು ಹೆಣಗಾಣಬೇಕಾಗುತ್ತದೆ.
ರಾತ್ರಿ ಎಚ್ಚರಗೊಂಡರೆ ಏನು ಮಾಡಬೇಕು?
ರಾತ್ರಿ ನೀವು ಏಕಾಏಕಿ ಎಚ್ಚರಗೊಂಡರೆ ಹಾಸಿಗೆ ಬಿಟ್ಟು ತೆರಳದಿರುವುದು ಉತ್ತಮ. ಒಂದಿಷ್ಟು ಹೊತ್ತು ಹಾಸಿಗೆಯಲ್ಲೇ ಇರುವುದರಿಂದ ಮತ್ತೆ ನಿದ್ರೆಗೆ ಜಾರಬಹುದು. ಒಂದು ವೇಳೆ ಬಹಳ ಸಮಯ ನಿದ್ರೆ ಬಾರದಿದ್ದರೆ ಹಾಸಿಗೆಯಿಂದ ಎದ್ದು ಹೊರಬಂದು ಪ್ರಶಾಂತ ಜಾಗದಲ್ಲಿ ಕೆಲ ಹೊತ್ತು ಕುಳಿತುಕೊಳ್ಳಬೇಕು. ಇಲ್ಲದೆ ಯಾವುದಾದರು ಪುಸ್ತಕ ತೆರೆದು ಮರಳಿ ನಿದ್ರೆ ಬರುವವರೆಗೂ ಓದಬೇಕು. ಇದಿಷ್ಟೂ ಕೆಲಸ ಮಾಡದಿದ್ದರೆ ಉಗುರು ಬೆಚ್ಚಗಿನ ನೀರು ಕುಡಿದು ಕೆಲ ಹೊತ್ತು ಕುರ್ಚಿಯ ಮೇಲೆ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು. ಮರಳಿ ನಿದ್ರೆ ಬರುವ ಮುನ್ಸೂಚನೆ ಸಿಕ್ಕ ಕೂಡಲೆ ಮರಳಿ ಹಾಸಿಗೆ ಮೇಲೆ ಮಲಗಲು ತೆರಳಬೇಕು ಎಂದು ತಜ್ಞರು ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಎಚ್ಚರಗೊಂಡಾಗ ಏನೆಲ್ಲಾ ಮಾಡಬಾರದು?
ಮಧ್ಯರಾತ್ರಿ ನಿದ್ರೆಯಿಂದ ಎಚ್ಚರವಾದ ತಕ್ಷಣ ಕಣ್ಣು ತೆರೆದು ಸುಮ್ಮನೆ ಮಲಗಬಾರದು, ಅಲ್ಲದೆ ಮೊಬೈಲ್ ಬಳಕೆ ಮಾಡಲೇಬಾರದು. ಅದರಲ್ಲೂ ಕೆಲವರು ಮೊಬೈಲ್ ತೆಗೆದು ಸಮಯ ಎಷ್ಟಾಗಿದೆ ಎಂಬುದನ್ನು ಪರೀಕ್ಷಿಸುತ್ತಾರೆ. ಹೀಗೆ ಮೊಬೈಲ್‌ನಲ್ಲಿ ಸಮಯ ನೋಡುವುದರಿಂದ ಆತಂಕ ಹೆಚ್ಚಾಗಬಹುದು. ಜೊತೆಗೆ ಮೊಬೈಲ್ ಬಳಕೆಯ ಕಡೆ ನಿಮ್ಮ ಗಮನ ಹರಿಯಬಹುದು. ಹೀಗಾದರೆ ಮತ್ತೆ ನಿದ್ರೆಗೆ ಜಾರುವುದು ತಡವಾಗಬಹುದು ಎಂದು ಲೂಮುಸ್ ಟೆಕ್‌ನ ಸಿಇಒ ಡಾ. ಬಿಕ್ವಾನ್ ಲುವೋ ಸಲಹೆ ನೀಡುತ್ತಾರೆ.
ನಿದ್ರೆಯಿಂದ ಎಚ್ಚರಗೊಂಡ ಕೆಲವರು ಆ ಸ್ಥಳ ಬಿಟ್ಟು ಮತ್ತೊಂದು ಕಡೆ ತೆರಳಿ ಮಲಗಲು ಯತ್ನಿಸುತ್ತಾರೆ. ಹೀಗೆ ಮಾಡುವುದರಿಂದ ಕೆಲವರಿಗೆ ನಿದ್ರೆ ಬರಬಹುದು. ಆದ್ರೆ ಅವರು ಜಾಗ ಬದಲಿಸಿದ್ದರಿಂದ ನಿದ್ರೆ ಬರುವುದು ಬಹಳ ಅಪರೂಪ, ಬಹುಪಾಲು ನೀವು ಜಾಗ ಬದಲಿಸದೆ ಅದೇ ಜಾಗದಲ್ಲಿ ಮತ್ತೆ ನಿದ್ರಿಸಲು ಯತ್ನಿಸುವುದು ಉತ್ತಮ. ಬೇರೊಂದು ಕಡೆ ತೆರಳಿ ಮಲಗಲು ಯತ್ನಿಸಿದಾಗ ನಿದ್ರೆ ಬರುವುದು ಅತೀ ವಿರಳ. ನೀವು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುವ ವಿವಿಧ ವಿಧಾನಗಳನ್ನು ಪ್ರಯತ್ನಿಸಬಹುದು, ಆದರೆ ನೀವು ಸ್ಥಿರವಾದ ನಿದ್ರೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಬೇಕು. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಅವರು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











