Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗುತ್ತಾ? ಇದರ ಹಿಂದಿನ ಸತ್ಯವೇನು?
ಇತ್ತೀಚಿಗೆ ಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗುವ ಸಮಸ್ಯೆ ಹೆಚ್ಚಾಗುತ್ತಿದೆ. ದೈನಂದಿನ ಜೀವನ ಕ್ರಮ ಇದಕ್ಕೆ ಕಾರಣ ಎಂಬುದು ತಿಳಿದಿರುವ ವಿಚಾರವಾಗಿದೆ. ಒತ್ತಡ, ಆಹಾರ, ನೀರು ಕುಡಿಯದಿರುವುದು ಹೀಗೆ ಹತ್ತಾರು ಕಾರಣಗಳಿಂದ ಈ ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿ ಈ ಕುರಿತು ಅರಿವಿಗೆ ಬಂದರೆ ಚಿಕಿತ್ಸೆಯೂ ಸುಲಭವಾಗುತ್ತದೆ.
ಇನ್ನು ಕಿಡ್ನಿ ಸ್ಟೋನ್ ಆದಾಗ ವಿಪರೀತ ನೋವು, ಮೂತ್ರ ವಿಸರ್ಜನೆಗೆ ಅಡಚಣೆಯಂತಹ ಸಮಸ್ಯೆ ಎದುತಾಗುತ್ತದೆ. ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲದೆಯೇ ಇದಕ್ಕೆ ಚಿಕಿತ್ಸೆ ಇದೆ. ಆದರೆ ಕೆಲವರು ಕಿಡ್ನಿ ಸ್ಟೋನ್‌ಗೆ ನಾಟಿ ಔಷಧಿ, ಆಯುರ್ವೇದದ ಮೊರೆ ಹೋಗಿ ಗುಣಮುಖರಾದ ಉದಾಹರಣೆಗಳೂ ಸಹ ನಮ್ಮ ನಡುವೆ ಇರಬಹುದು.

ಇನ್ನೊಂದು ಕಡೆ ಬಿಯರ್ ಸೇವಿಸಿದರೆ ಕಿಡ್ನಿ ಸ್ಟೋನ್ ನಿವಾರಣೆಯಾಗುತ್ತದೆ. ಮುಂದೆ ಭವಿಷ್ಯದಲ್ಲಿ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ ಎಂಬ ಮಾತು ನಾವು ಕೇಳುತ್ತಲೇ ಇರುತ್ತೇವೆ. ಕಿಟ್ನಿ ಸ್ಟೋನ್ ಆದವರು ಬಿಯರ್ ಕುಡಿಯಲು ಆರಂಭಿಸಿರುತ್ತಾರೆ. ಹಾಗಾದ್ರೆ ಕಿಡ್ನಿ ಸ್ಟೋನ್‌ಗೆ ಈ ಬಿಯರ್ ಔಷಧಿಯೇ? ಇದರ ನಿಜಾಂಶವೇನು? ಬಿಯರ್ ಕುಡಿಯುವುದರಿಂದ ಲಾಭವಿದ್ಯಾ? ಎಂಬೆಲ್ಲಾ ಪ್ರಶ್ನೆಗೆ ನಾವಿಂದು ಉತ್ತರ ಕಂಡುಕೊಳ್ಳೋಣ.
ಬಿಯರ್ ಕುಡಿಯುವುದು ಕಿಡ್ನಿ ಸ್ಟೋನ್‌ಗೆ ಔಷಧಿಯಲ್ಲ
ಬಿಯರ್ ಸೇವನೆಯಿಂದ ಕಿಡ್ನಿ ಸ್ಟೋನ್ ಮೂತ್ರದಲ್ಲಿ ಹೊರಬರುತ್ತದೆ. ಜೊತೆಗೆ ಇದರಿಂದ ಕಿಡ್ನಿಯಲ್ಲಿ ಕಲ್ಲುಗಳ ರಚನೆ ಉಂಟಾಗುವುದಿಲ್ಲ ಎನ್ನುತ್ತಾರೆ. ಆದರೆ ಇದು ಅಕ್ಷರಶಃ ಸುಳ್ಳು. ಕಿಡ್ನಿ ಸ್ಟೋನ್ ಇದ್ದವರು ಬಿಯರ್ ಕುಡಿದರೆ ಪರಿಣಾಮ ಮತ್ತಷ್ಟು ಹದಗೆಡುತ್ತದೆ. ಕಿಡ್ನಿ ಸ್ಟೋನ್ ಇದ್ದವರಿಗೆ ಮೂತ್ರ ವಿಸರ್ಜನೆ ಮಾಡುವಾಗ ವಿಪರೀತ ನೋವು ಉಂಟಾಗುತ್ತದೆ. ಅದೆ ರೀತಿ ಬಿಯರ್ ಕುಡಿದಾಗ ವಿಪರೀತ ಮೂತ್ರ ಉಂಟಾಗುತ್ತದೆ. ಪದೇ ಪದೇ ಮೂತ್ರ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹೀಗಾದಾಗ ಕಿಡ್ನಿ ಸ್ಟೋನ್‌ನ ನೋವು ಮತ್ತಷ್ಟು ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ.
ಇನ್ನೊಂದು ಕಡೆ ಕಲ್ಲು ರಚನೆಯಾಗಲು ಕಾರಣವಾಗಿರುವ ಆಕ್ಸಲೇಟ್‌ಗಳ ರಚನೆಗೆ ಈ ಬಿಯರ್ ಕಾರಣವಾಗುತ್ತದೆ. ಹೀಗಾಗಿ ಬಿಯರ್‌ನಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗುತ್ತದೆ ಎಂಬುದು ಶುದ್ಧ ಸುಳ್ಳಾಗಿದೆ. ಅಲ್ಲದೆ ಬಿಯರ್‌ನಲ್ಲೂ ಆಲ್ಕೋಹಾಲಿಕ್ ಕಂಟೆಂಟ್ ಇರುತ್ತದೆ, ಇದು ಯಕೃತ್ತಿನ ಹಾನಿಗೆ ಕಾರಣವಾಗಿತ್ತದೆ. ಅಲ್ಲದೆ ದೇಹದಲ್ಲಿ ನಿರ್ಜಲೀಕರಣಕ್ಕೆ ಬಿಯರ್ ಕಾರಣವಾಗುತ್ತದೆ. ಹೀಗಾಗಿ ಬಿಯರ್ ಕುಡಿದ ಮರುದಿನ ಹೆಚ್ಚು ನೀರು ಕುಡಿಯಬೇಕಾಗುತ್ತದೆ. ಇನ್ನು ಬಿಯರ್‌ನಲ್ಲಿ ಸೋಡಾದ ಅಂಶ ಸಹ ಇರುತ್ತದೆ.
ಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗಲು ಕಾರಣವೇನು?
ಸಾಮಾನ್ಯವಾಗಿ 20ರಿಂದ 50 ವರ್ಷದವರಲ್ಲಿ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಎದುರಾಗುತ್ತದೆ. ವಿವಿಧ ಪ್ರಕಾರಗಳಲ್ಲಿನ ಕಲ್ಲುಗಳ ಬೆಳವಣಿಗೆ ಮೂತ್ರ ಪಿಂಡದ ಹಾನಿಗೆ ಕಾರಣವಾಗಿದೆ. ಈ ಕಲ್ಲುಗಳು ರಾಸಾಯನಿಕಯುಕ್ತ ಅಂಶಗಳಿಂದ ಕೂಡಿರುತ್ತದೆ. ಒಂದು ವೇಳೆ ಬೆಳೆದು ದೊಡ್ಡದಾದರೆ ಶಸ್ತ್ರ ಚಿಕಿತ್ಸೆಯ ಅನಿವಾರ್ಯತೆ ಎದುರಾಗುತ್ತದೆ. ಅಧ್ಯಯನಗಳ ಪ್ರಕಾರ ಮಹಿಳೆಯರಿಗಿಂತ ಪುರುಷದಲ್ಲಿ ಈ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಕಡಿಮೆ ನೀರು ಕುಡಿಯುವುದು ಹಾಗೂ ನಿರ್ಜಲೀಕರಣ ಈ ಕಿಡ್ನಿ ಸ್ಟೋನ್‌ಗೆ ಪ್ರಮುಖ ಕಾರಣವಾಗಿದೆ. ದೇಹದಿಂದ ನೀರು ಹೊರಹೋಗದಿದ್ದರೆ ಕಿಡ್ನಿಯಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಅನಗತ್ಯ ಅಂಶಗಳು ಉಳಿದುಬಿಡುತ್ತವೆ. ಹಾಗೆ ದೇಹದ ಅಧಿಕ ಬೊಜ್ಜು ಸಹ ಕಿಡ್ನಿಯ ಕಲ್ಲಿಗೆ ಕಾರಣವಾಗುತ್ತದೆ. ಅಲ್ಲದೆ ಹೆಚ್ಚು ಉಪ್ಪು, ಪ್ರೋಟೀನ್ ಆಹಾರ ಸಹ ಕಿಡ್ನಿ ಸ್ಟೋನ್‌ಗೆ ಕಾರಣ ಎಂದು ತಿಳಿದುಬಂದಿದೆ. ಕ್ಯಾಲ್ಸಿಯಂ ಮಾತ್ರೆಗಳು ಹಾಗೂ ಔಷಧಿಗಳು ಸಹ ಮೂತ್ರಪಿಂಡದ ಕಲ್ಲಿಗೆ ಕಾರಣವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
