Latest Updates
-
ನಿಮ್ಮ ಅತ್ತಿಗೆಗೆ ಈ ಹಾರ್ಟ್ ಟಚಿಂಗ್ ಶಾಯರಿ ಕಳಿಸಿ! ಲವ್ & ಕನೆಕ್ಷನ್ ಡಬಲ್ ಆಗುತ್ತೆ - Happy Holi 2026 -
ಸಿಸ್ಟರ್.. 40ರ ಬಳಿಕ ಪಿಸ್ತಾ ಒಂದು ವರ! ಮೂಳೆ, ಹೃದಯ & ಹಾರ್ಮೋನ್ ಬ್ಯಾಲೆನ್ಸ್.. ಪಿಸ್ತಾನೇ ಏಕೆ ಬೇಕು? -
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ? -
ದೇಸಿ ಮಸಾಲೆಯ ಘಮ, ಮಣ್ಣಿನ ಮಡಕೆಯ ರುಚಿ! ಮನೆಯಲ್ಲೇ ಮಾಡಿ ಛತ್ತೀಸ್ಗಢ ಸ್ಪೆಷಲ್ ಚಿಕನ್ ಕರಿ.. ಈಸಿ ರೆಸಿಪಿ ಇಲ್ಲಿದೆ -
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ -
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ?
ಅಂಗ ವೈಫಲ್ಯದ ಚಿಕಿತ್ಸೆಯಲ್ಲಿ ಮೃತ ಅಂಗಾಂಗ ದಾನದ ಪಾತ್ರ: ವೈದ್ಯರು ತಿಳಿಸಿದ 5 ಮಹತ್ವದ ಸಂಗತಿಗಳು
ಮೃತ ಅಂಗಾಂಗ ದಾನವು ತೀವ್ರವಾದ ಅಥವಾ ಅಂತಿಮ ಹಂತದ ಅಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ನಿರ್ಣಾಯಕ ಅಂಶವಾಗಿದೆ. ಮೂತ್ರಪಿಂಡ ಕಾಯಿಲೆ, ಲಿವರ್ ಡಿಕಂಪೆನ್ಸಷನ್ (ಸಿರೋಸಿಸ್ ರೋಗಿಗಳಲ್ಲಿ ಯಕೃತ್ತಿನ ಕಾರ್ಯದಲ್ಲಿ ತೀವ್ರ ಕ್ಷೀಣತೆ), ಕೊನೆಯ ಹಂತದ ಹೃದಯ ವೈಫಲ್ಯ ಮತ್ತು ತೀವ್ರವಾದ ಶ್ವಾಸಕೋಶದ ಕಾಯಿಲೆಯಂತಹ ಪರಿಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಅಂಗಾಂಗ ಕಸಿಯ ಅಗತ್ಯತೆ ಅನಿವಾರ್ಯವಾಗಿದೆ. ಕೆಲವರಿಗೆ ಸಂಯೋಜಿತ ಅಂಗ ಕಸಿಯ ಅವಶ್ಯಕವಾಗಬಹುದು. ಆದಾಗ್ಯೂ, ಈ ಜೀವ ಉಳಿಸುವ ಕಾರ್ಯವಿಧಾನಗಳ ಯಶಸ್ಸು ಮೃತ ದಾನಿಗಳಿಂದ ಅಂಗಗಳ ಲಭ್ಯತೆಯ ಮೇಲೆ ನಿರ್ಧರಿತವಾಗಿದೆ.

ಕೆಲವು ರೋಗಿಗಳಿಗೆ ಜೀವಂತ ದಾನಿಗಳ ಕಸಿ ಸಾಧ್ಯವಿದ್ದರೂ, ಮೂತ್ರಪಿಂಡ ವೈಫಲ್ಯ ಅಥವಾ ಲಿವರ್ ಡಿಕಂಪೆನ್ಸಷನ್, ಹೃದಯ, ಶ್ವಾಸಕೋಶ ಅಥವಾ ಮೇದೋಜ್ಜೀರಕ ಗ್ರಂಥಿಯ ವೈಫಲ್ಯ ಹೊಂದಿರುವ ವ್ಯಕ್ತಿಗಳು ಹೆಚ್ಚಾಗಿ ಮೆದುಳು ಸತ್ತ (ಬ್ರೈನ್ ಡೆಡ್) ಅಥವಾ ಮರಣೋತ್ತರ ದಾನಿಗಳ ಅಂಗಗಳ ಮೇಲೆ ಅವಲಂಬಿತರಾಗಿರುತ್ತಾರೆ. ಹೆಚ್ಚಿನ ಬೇಡಿಕೆಯ ಹೊರತಾಗಿಯೂ, ಅಂಗಗಳ ಪೂರೈಕೆ ಮತ್ತು ಬೇಡಿಕೆಯ ನಡುವೆ ಗಮನಾರ್ಹ ಅಸಮಾನತೆ ಇದೆ. ಭಾರತದಲ್ಲಿ, ಅಂಗಾಂಗ ದಾನದ ಪ್ರಮಾಣವು ಗಂಭೀರ ಪ್ರಮಾಣದಲ್ಲಿ ಕಡಿಮೆಯಾಗಿದೆ, ಪ್ರತಿ ಮಿಲಿಯನ್ ಜನಸಂಖ್ಯೆಗೆ 0.2 ರಿಂದ 1 ರಷ್ಟಿದೆ, ಇದು ಅಂಗಾಂಗ ಕಸಿ ಅಗತ್ಯವಿರುವ ಮೂರರಿಂದ ನಾಲ್ಕು ಲಕ್ಷ ವ್ಯಕ್ತಿಗಳಿಗೆ ಹೋಲಿಸಿದರೆ ಕ್ಷೀಣಿಸುತ್ತದೆ. ಈ ಅಂಕಿಅಂಶಗಳು ಬದಲಾಗುತ್ತಿದ್ದರೂ, ಹೆಚ್ಚಿನ ಪ್ರಮಾಣದ ಅಂಗದಾನದ ಅಗತ್ಯವನ್ನು ಕಡೆಗಣಿಸಲಾಗದು.
ಭಾರತದಲ್ಲಿ ಮೃತ ಅಂಗಾಂಗ ದಾನಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಸಾರ್ವಜನಿಕ ಶಿಕ್ಷಣ, ಅಂಗಾಂಗ ದಾನದ ಬಗ್ಗೆ ಅರಿವು, ಮತ್ತು ಹೆಚ್ಚೆಚು ಜನರನ್ನು ಅಂಗಾಂಗ ದಾನಕ್ಕೆ ಮುಂದಾಗುವಂತೆ ಪ್ರೇರೇಪಿಸುವುದು ಅನಿವಾರ್ಯವಾಗಿದೆ. ಸಾರ್ವಜನಿಕ ಶಿಕ್ಷಣದ ಜೊತೆಗೆ ವೈದ್ಯಕೀಯ ವೃತ್ತಿಪರರಲ್ಲಿ ಜಾಗೃತಿ ಮೂಡಿಸುವುದು ಸಹ ಅತ್ಯಗತ್ಯ. ಇದಕ್ಕಾಗಿ ಈ ಕೆಳಗಿನ ಮಾರ್ಗಗಳನ್ನು ಅನುಸರಿಸುವುದು ಪ್ರಯೋಜನಕಾರಿಯಾಗಬಹುದು:
• ಸಾರ್ವಜನಿಕರಲ್ಲಿ ಅರಿವು ಮತ್ತು ಜ್ಞಾನವನ್ನು ಹೆಚ್ಚಿಸುವುದು
ಅಂಗಾಂಗ ದಾನದ ಬಗ್ಗೆ ಸಾಮಾನ್ಯ ಮಿಥ್ಯೆಗಳು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಅತ್ಯಗತ್ಯ. ಪ್ರಚಲಿತ ಧಾರ್ಮಿಕ ತಪ್ಪುಗ್ರಹಿಕೆಯಿಂದಾಗಿ ಅನೇಕ ವ್ಯಕ್ತಿಗಳು ಅಂಗ ದಾನವು ಮರಣಾನಂತರದ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆಗಳನ್ನು ಹೊಂದಿದ್ದಾರೆ. ಅಂಗಾಂಗ ದಾನವನ್ನು ಜೀವಗಳನ್ನು ಉಳಿಸುವ ಉದಾತ್ತ ಕಾರ್ಯವೆಂದು ನೋಡುವುದು ಮುಖ್ಯವಾಗಿದೆ. ಅಂಗಾಂಗ ದಾನ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ದೇಹದಿಂದ ಅಂಗಾಂಗಗಳನ್ನು ತಗೆಯುವಾಗ ನಿಖರವಾದ ಕಾರ್ಯವಿಧಾನಗಳ ಅಳವಡಿಕೆಯಿಂದಾಗಿ ದೇಹದ ವಿಕಾರವನ್ನು ಕಡಿಮೆ ಮಾಡುವ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುವುದು ಈ ತಪ್ಪುಗ್ರಹಿಕೆಗಳನ್ನು ಪರಿಹರಿಸುವಲ್ಲಿ ಪ್ರಮುಖವಾಗಿದೆ.
• ಸಾರ್ವಜನಿಕ ವರ್ತನೆಗಳು ಮತ್ತು ನಂಬಿಕೆಗಳನ್ನು ಬದಲಾಯಿಸುವುದು
ಅಂಗಾಂಗ ದಾನದ ಕಡೆಗೆ ಧನಾತ್ಮಕ ವರ್ತನೆಗಳನ್ನು ಉತ್ತೇಜಿಸುವುದು ಅತ್ಯಗತ್ಯ. ಅಂಗಾಂಗ ದಾನವನ್ನು ನಿಸ್ವಾರ್ಥ, ಪರಹಿತಚಿಂತನೆಯ ಕ್ರಿಯೆಯಾಗಿ ನೋಡಬೇಕು, ದಾನ ಮಾಡಿದ ಅಂಗಗಳು ಮತ್ತು ಅಂಗಾಂಶಗಳನ್ನು ಅವಲಂಬಿಸಿ ಒಬ್ಬ ದಾನಿ ಅನೇಕ ಜೀವಗಳನ್ನು (ಕೆಲವೊಮ್ಮೆ ಹತ್ತಕ್ಕಿಂತ ಹೆಚ್ಚು) ಉಳಿಸಬಹುದು. ಈ ದೃಷ್ಟಿಕೋನವು ದಾನದ ಸಂಸ್ಕೃತಿಯನ್ನು ಉದಾತ್ತ ಮತ್ತು ಉದಾರ ಕಾರ್ಯವಾಗಿ ಬೆಳೆಸಲು ಸಹಾಯ ಮಾಡುತ್ತದೆ.
• ದಾನ ಮಾಡುವ ಇಚ್ಛೆಯನ್ನು ಪ್ರೋತ್ಸಾಹಿಸುವುದು
ಭಾರತದಾದ್ಯಂತ ವಿವಿಧ ಉಪಕ್ರಮಗಳು ಅಂಗಾಂಗಗಳನ್ನು ದಾನ ಮಾಡುವ ಇಚ್ಛೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಶಾಲೆಗಳು ಮತ್ತು ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಸಾರ್ವಜನಿಕ ಶಿಕ್ಷಣ ಅಭಿಯಾನಗಳು ವಿಶೇಷವಾಗಿ ಪರಿಣಾಮಕಾರಿಯಾಗಿದೆ, ಏಕೆಂದರೆ ಅವು ಯುವ ಪೀಳಿಗೆಯಲ್ಲಿ ಸಕಾರಾತ್ಮಕ ಮನೋಭಾವವನ್ನು ಹುಟ್ಟುಹಾಕುತ್ತವೆ, ಇದು ಅಂಗಾಂಗ ದಾನದ ಬಗ್ಗೆ ಕುಟುಂಬದ ಮೌಲ್ಯಗಳು ಮತ್ತು ಸಾಮಾಜಿಕ ನಿಯಮಗಳ ಮೇಲೆ ಪ್ರಭಾವ ಬೀರಬಹುದು.
• ನೀತಿ ಮತ್ತು ಕಾನೂನು ಚೌಕಟ್ಟನ್ನು ಅರ್ಥಮಾಡಿಕೊಳ್ಳುವುದು
ಭಾರತದಲ್ಲಿ ಅಂಗಾಂಗ ದಾನವನ್ನು ನಿಯಂತ್ರಿಸುವ ಕಾನೂನು ಚೌಕಟ್ಟಿನ ಬಗ್ಗೆ, ನಿರ್ದಿಷ್ಟವಾಗಿ ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ಕಾಯಿದೆಯ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಅತ್ಯಗತ್ಯ. ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಬೆಳೆಸುವುದು, ಅಂಗಾಂಗಗಳನ್ನು ಹೇಗೆ ವಿತರಿಸಲಾಗುತ್ತದೆ ಎಂಬುದರಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅಂಗಾಂಗ ಕಸಿಯಲ್ಲಿ ಅವರ ಪಾತ್ರಕ್ಕೆ ಆಸ್ಪತ್ರೆಗಳನ್ನು ಹೊಣೆಗಾರರನ್ನಾಗಿ ಮಾಡುವುದು ಇವೆಲ್ಲವೂ ಮೃತ ಅಂಗಾಂಗ ದಾನದ ಸಾರ್ವಜನಿಕ ಸ್ವೀಕಾರವನ್ನು ಸುಧಾರಿಸುವಲ್ಲಿ ನಿರ್ಣಾಯಕ ಹಂತಗಳಾಗಿವೆ.
• ಮಾಧ್ಯಮದೊಂದಿಗೆ ತೊಡಗಿಸಿಕೊಳ್ಳುವುದು
ಅಂಗದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂಟೆನ್ಸಿವಿಸ್ಟ್‌ಗಳು ಮತ್ತು ಕಸಿ ಶಸ್ತ್ರಚಿಕಿತ್ಸಕರು ಸೇರಿದಂತೆ ಆರೋಗ್ಯ ವೃತ್ತಿಪರರೊಂದಿಗೆ ಸಹಕರಿಸುವ ಮೂಲಕ, ಮಾಧ್ಯಮವು ಅಂಗಾಂಗ ದಾನಗಳ ತುರ್ತು ಅಗತ್ಯವನ್ನು ಮತ್ತು ಅಂತಿಮ ಹಂತದ ಅಂಗ ವೈಫಲ್ಯದ ರೋಗಿಗಳ ಮೇಲೆ ಜೀವ ಉಳಿಸುವ ಪರಿಣಾಮವನ್ನು ಎತ್ತಿ ತೋರಿಸಬಹುದು.
(ಈ ಲೇಖನವನ್ನು ಬರೆದವರು: ಡಾ ರಾಜೀವ್ ಲೋಚನ್, ಲೀಡ್ ಕನ್ಸಲ್ಟೆಂಟ್ - HPB, ಲಿವರ್ ಟ್ರಾನ್ಸ್‌ಪ್ಲಾಂಟೇಶನ್, ಮತ್ತು ರೋಬೋಟಿಕ್ ಸರ್ಜರಿ, ಮಣಿಪಾಲ್ ಹಾಸ್ಪಿಟಲ್ ಓಲ್ಡ್ ಏರ್‌ಪೋರ್ಟ್ ರಸ್ತೆ & ಯಶವಂತಪುರ)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











