Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಆಲಂ ಕಲ್ಲಿನ ಬಗ್ಗೆ ಗೊತ್ತೇ? ಇದನ್ನು ಬಳಸಿದರೆ ಆರೋಗ್ಯ ವೃದ್ಧಿ, ಸೌಂದರ್ಯ ವೃದ್ಧಿ
ನೀವು ಆಲಂ ಕಲ್ಲಿನ ಕುರಿತು ಕೇಳಿದ್ದೀರಾ? ನೋಡಲು ಕಲ್ಲುಪ್ಪಿನಂತೆ ಕಾಣುವುದು, ಇದನ್ನು ಸೌಂದರ್ಯವೃದ್ಧಿಗೆ ಹೆಚ್ಚಾಗಿ ಬಳಸಲಾಗುವುದು. ಇದನ್ನು fitkari ಸ್ಟೋನ್ ಎಂದು ಕೂಡ ಕರೆಯಲಾಗುವುದು. ಇದರಿಂದ ಸೌಂದರ್ಯ ವೃದ್ಧಿ ಮಾತ್ರವಲ್ಲ ಅನೇಕ ಆರೋಗ್ಯಕರ ಪ್ರಯೋಜನಗಳಿವೆ, ಒಟ್ಟಿನಲ್ಲಿ ಇದೊಂದು ಅದ್ಭುತವಾದ ಕಲ್ಲಾಗಿದೆ, ಈ ಕಲ್ಲಿನ ಕುರಿತು ಮತ್ತುಷ್ಟು ವಿವರ ನೋಡುವುದಾದರೆ....

ಆಯುರ್ವೇದದಲ್ಲಿ ಹೆಚ್ಚಾಗಿ ಬಳಸಲಾಗುವುದು
ಇದು ಪೊಟಾಷ್ಯಿಯಂನಿಂದ ರೂಪಿತವಾದ ಕಲ್ಲಾಗಿದ್ದು ನೈಸರ್ಗಿಕವಾಗಿ ರೂಪುಗೊಳ್ಳುವ ಕಲ್ಲಾಗಿದೆ. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದನ್ನು ಮನೆಮದ್ದಾಗಿ ಕೂಡ ಬಳಸಲಾಗುವುದು. ಇದರ ಪ್ರಮುಖ ಪ್ರಯೋಜನಗಳ ಬಗ್ಗೆ ನೋಡುವುದಾದರೆ
1. ಬಾಯಿಯ ಸ್ವಾಸ್ಥ್ಯಕ್ಕೆ ಒಳ್ಳೆಯದು
ಬಾಯಿಯ ಸ್ವಾಸ್ಥ್ಯಕ್ಕೆ ಇದು ತುಂಬಾ ಒಳ್ಳೆಯದು, ಇದು ವಸಡುಗಳನ್ನು ಬಿಗಿಯಾಗಿಸುವುದು, ಅಲ್ಲದೆ ವಸಡಿನಲ್ಲಿ ರಕ್ತಸ್ರಾವದ ಸಮಸ್ಯೆ ಇರುವವರು ಇದನ್ನು ಬಳಸಿದರೆ ವಸಡಿನ ರಕ್ತಸ್ರಾವದ ಸಮಸ್ಯೆ ಕಡಿಮೆಯಾಗುವುದು. ಅಲ್ಲದೆ ಬಾಯಿಯಲ್ಲಿರುವ ಬೇಡದ ಬ್ಯಾಕ್ಟಿರಿಯಾವನ್ನು ಕೊಲ್ಲುವುದರ ಜೊತೆಗೆ ಬಾಯಿ ದುರ್ವಾಸನೆ ತಡೆಗಟ್ಟುತ್ತದೆ. ಇನ್ನು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಹಲ್ಲುಗಳನ್ನು ಬಿಳುಪಾಗಿಸಲು ಕೂಡ ಇದು ಪ್ರಯೋಜನಕಾರಿ.
2. ಬಾಯಿಯ ದುರ್ವಾಸನೆ ತಡೆಗಟ್ಟಲು ಸಹಕಾರಿ
ಇದನ್ನು ನೈಸರ್ಗಿಕವಾದ ಸುಗಂಧದ್ರವ್ಯ ಎಂದು ಕರೆಯಬಹುದು, ಇದು ದೇಹದ ದುರ್ವಾಸನೆ ತಡೆಗಟ್ಟಲು ಸಹಕಾರಿಯಾಗಿದೆ. ನೀವು ಕೆಮಿಕಲ್ ಹಾಕಿರುವ ಸುಗಂಧ ದ್ರವ್ಯದ ಬದಲಿಗೆ ಇದನ್ನು ಬಳಸಿದರೆ ತ್ವಚೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸ್ನಾನದ ಬಳಿಕ ಕಂಕುಳದಲ್ಲಿ ನೇರವಾಗಿ ಉಜ್ಜಬಹುದು, ಇದು ಕಂಕುಳ ದುರ್ವಾಸನೆ ಬೀರುವುದನ್ನು ತಡೆಗಟ್ಟುತ್ತದೆ.
3. ಹೆಮರಾಯ್ಡ್ಸ್ ಅಥವಾ ಮೂಲವ್ಯಾಧಿ
ಮೂಲವ್ಯಾಧಿ ಬಹುತೇಕರನ್ನು ಕಾಡುವ ಸಮಸ್ಯೆಯಾಗಿದೆ. ಟಾಯ್ಲೆಟ್‌ಗೆ ಹೋದಾಗ ತುಂಬಾ ಹೊತ್ತು ಟಾಯ್ಲೆಟ್‌ನಲ್ಲಿ ಕೂರುವವರಲ್ಲಿ, ಅಥವಾ ಮಲಬದ್ಧತೆ ಸಮಸ್ಯೆ ಇರುವವರಿಗೆ ಈ ಸಮಸ್ಯೆ ಕಾಡುವುದು. ಆ ಭಾಗದಲ್ಲಿ ನೋವು, ಊತ ತಡೆಗಟ್ಟಲು ಇದು ಸಹಕಾರಿ. ಒಂದು ಟಬ್‌ಗೆ ಹದ ಬಿಸಿ ನೀರು ಹಾಕಿ ಅದರಲ್ಲಿ ಇದನ್ನು ಹಾಕಿ ಆ ನೀರಿನಲ್ಲಿ 15 ನಿಮಿಷ ಕೂರುವುದರಿಂದ ತುಂಬಾನೇ ರಿಲೀಫ್ ಸಿಗುವುದು.
4. ಗಂಟಲು ಕೆರೆತಕ್ಕೆ ಮನೆಮದ್ದು
ಗಂಟಲಿನಲ್ಲಿ ಕಿಚಕಿಚವಿದ್ದಾಗ ವಿಪರೀತ ಕೆಮ್ಮು ಉಂಟಾಗುವುದು, ಇದರಲ್ಲಿರುವ ಆಂಟಿಸೆಪ್ಟಿಕ್ ಗುಣ ಗಂಟಲಿನ ಕೆರೆತ ಕಡಿಮೆ ಮಾಡಿ, ಉರಿಯೂತ ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಕಫ ತಡೆಗಟ್ಟಲು ಸಹಕಾರಿ.
ಬಿಸಿ ನೀರಿಗೆ ಇದನ್ನು ಹಾಕಿ ಆ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಗಂಟಲು ಕೆರೆತ ಕಡಿಮೆಯಾಗುವುದು.
5. ಸೌಂದರ್ಯ ವೃದ್ಧಿಗೆ
ಮೊಡವೆ, ಬ್ಲ್ಯಾಕ್ ಹೆಡ್ಸ್ ಈ ಬಗೆಯ ಸಮಸ್ಯೆ ಇದ್ದಾಗ ಮುಖದ ಸೌಂದರ್ಯ ಹಾಳಾಗುವುದು, ಇದನ್ನು ತಡೆಗಟ್ಟಲು ಈ ಆಲಂ ಕಲ್ಲು ತುಂಬಾನೇ ಪ್ರಯೋಜನಕಾರಿಯಾಗಿದೆ. ಅಲ್ಲದೆ ಇದನ್ನು ಬಳಸುವುದರಿಂದ ಅಕಾಲಿಕ ನೆರಿಗೆ ಸಮಸ್ಯೆ ತಡೆಗಟ್ಟಬಹುದು. ಇದರಿಂದ ಮುಖವನ್ನು ಮೆಲ್ಲನೆ ಸ್ಕ್ರಬ್ ಮಾಡುವುದರಿಂದ ಈ ಬಗೆಯ ಸಮಸ್ಯೆಗಳು ಕಡಿಮೆಯಾಗುವುದು ತ್ವಚೆ ಕಾಂತಿ ಹೆಚ್ಚುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
