Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವು 5 ಗ್ರಾಮ್‌ಗಿಂತ ಹೆಚ್ಚು ಉಪ್ಪು ಸೇವಿಸುತ್ತೀರಾ? ಇದರಿಂದ ಎಷ್ಟು ಹಾನಿ ಗೊತ್ತಾ?
ನಾವು ನಿತ್ಯವೂ ಉಪ್ಪು ಸೇವಿಸುತ್ತೇವೆ. ನೇರವಾಗಿ ಅಲ್ಲದಿದ್ದರೂ ಆಹಾರಕ್ಕೆ ಹಾಕಿಯೆ ಹಾಕುತ್ತೇವೆ. ಒಂದು ಚಿಟಿಕೆಯಷ್ಟು ಉಪ್ಪು ಕಡಿಮೆಯಾದರು ಅಡುಗೆ ರುಚಿಸುವುದಿಲ್ಲ. ಉಪ್ಪಿಗೆ ಅಷ್ಟೊಂದು ರುಚಿ ಹೆಚ್ಚಿಸುವ ಗುಣವಿದೆ. ಹಾಗೆ ನಾವು ಹೆಚ್ಚು ಉಪ್ಪು ತಿಂದರೂ ಕೂಡ ಆರೋಗ್ಯಕ್ಕೆ ಹಾನಿಯಾಗುತ್ತದೆ. ನಿತ್ಯ ನಾವು ಎಷ್ಟು ಉಪ್ಪು ಸೇವಿಸಬೇಕು ಎಂಬುದು ಕೂಡ ಪೂರ್ವ ನಿಗದಿ ಮಾಡಲಾಗಿದೆ.
ಹಾಗಾದ್ರೆ ನಾವು ನಿತ್ಯ 5 ಗ್ರಾಮ್‌ಗಿಂತಲೂ ಹೆಚ್ಚು ಪ್ರಮಾಣದಲ್ಲಿ ಉಪ್ಪು ಸೇವಿಸಿದರೆ ಏನಾಗುತ್ತದೆ. ಇದರಿಂದ ನಮ್ಮ ದೇಹದ ಮೇಲೆ ಯಾವ ರೀತಿಯ ಹಾನಿ ಉಂಟಾಗಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಉಪ್ಪು ಸೋಡಿಯಂ ಕ್ಲೋರೈಡ್‌ನಿಂದ ತುಂಬಿದೆ. ಇದ ಮಾನವ ದೇಹಕ್ಕೆ ಅಗತ್ಯವಾದ ಖನಿಜವಾಗಿದೆ.

ಹಾಗೆ ವಿಶ್ವ ಆರೋಗ್ಯ ಸಂಸ್ಥೆ ನಾವು ದಿನಕ್ಕೆ 5 ಗ್ರಾಮ್‌ಗಿಂತ ಕಡಿಮೆ ಉಪ್ಪು ಸವಿಯಬೇಕು ಎಂದು ಶಿಫಾರಸು ಮಾಡುತ್ತದೆ. ಅದಕ್ಕೂ ಹೆಚ್ಚಿನ ಪ್ರಮಾಣದ ಉಪ್ಪು ಹಾನಿಕಾರಕ ಎಂದು ತಿಳಿಸಿದೆ. ಉಪ್ಪು ಹೆಚ್ಚಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಎಂದು ನಾವು ತಿಳಿದಿದ್ದೇವೆ. ಇದು ಹೃದಯದ ಕಾರ್ಯಗಳ ಮೇಲು ಕೆಟ್ಟ ಪರಿಣಾಮ ಬೀರುತ್ತದೆ. ಹೃದಯ ಮತ್ತು ಅಪಧಮನಿಗಳ ಕೆಲಸದ ಹೊರೆಯನ್ನು ಇದು ಹೆಚ್ಚಾಗಿಸುತ್ತದೆ.
ಮೂತ್ರಪಿಂಡಗಳು ರಕ್ತದಲ್ಲಿರುವ ಹೆಚ್ಚುವರಿ ಉಪ್ಪನ್ನು ಫಿಲ್ಟರ್ ಮಾಡುತ್ತವೆ. ಆದರೆ ನೀವು ಹೆಚ್ಚು ಹೆಚ್ಚು ಉಪ್ಪು ಸವಿದಾಗ ಅದನ್ನು ಫಿಲ್ಟರ್ ಮಾಡಲು ಮೂತ್ರಪಿಂಡಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಅಂದರೆ ಮೂತ್ರಪಿಂಡ ಸಮಸ್ಯೆ ಇರುವವರು ಉಪ್ಪನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ.
ಹೆಚ್ಚಿನ ಉಪ್ಪು ಸೇವನೆಯು ದೇಹವು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಕೆಲವರ ಕಾಲು, ಕೈಗಳು ಉಬ್ಬಿಕೊಳ್ಳುವುದು ನೋಡಬಹುದು. ಏಕೆಂದರೆ ದೇಹದಲ್ಲಿ ನೀರು ತುಂಬಿಕೊಳ್ಳುವುದು ಎಂದು ಹೇಳಲಾಗುತ್ತದೆ. ಇಂತಹ ಸಮಸ್ಯೆ ಇದ್ದವರು ಉಪ್ಪನ್ನು 5 ಗ್ರಾಮ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲೇಬಾರದು.
ಅತಿಯಾದ ಉಪ್ಪು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಎಂದು ನಾವು ಮೊದಲೇ ಹೇಳಿದ್ದೇವೆ. ಈ ರಕ್ತದೊತ್ತಡವು ಹೃದ್ರೋಗ ಮತ್ತು ಪಾರ್ಶ್ವವಾಯುಗೆ ಪ್ರಮುಖ ಅಪಾಯಕಾರಿಯಾದ ಅಂಶವಾಗಿದೆ. ಹಾಗೆ ಇದರಿಂದ ತಲೆನೋವು, ಗೊಂದಲ, ದೃಷ್ಟಿ ದೋಷದಂತಹ ಸಮಸ್ಯೆಗಳು ಸಹ ಎದುರಾಗಬಹುದು.
ದೇಹದಲ್ಲಿ ಹೆಚ್ಚಿನ ಸೋಡಿಯಂ ಅಂಶ ಸೇರಿದಾಗ ದೇಹದಲ್ಲಿ ಸಮತೋಲನ ತರುವಂತೆ ಮಾಡಲು ದೇಹ ಹೆಚ್ಚಿನ ಪ್ರಮಾಣದ ನೀರು ಬಳಸಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಜೀವಕೋಶಗಳಿಂದ ನೀರನ್ನು ಬಳಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ ನೀವು ಡಿಹೈಡ್ರೇಷನ್‌ಗೆ ಒಳಗಾಗಬಹುದು. ಹೀಗಾಗಿಯೇ ಉಪ್ಪು ಹೆಚ್ಚು ಸೇವಿಸಿದಾಗ ಹೆಚ್ಚು ನೀರು ಕುಡಿಯಬೇಕು ಎನಿಸುತ್ತಿರುತ್ತದೆ.
ಉಪ್ಪು ಕಡಿಮೆ ಸೇವಿಸಿದರೆ ಏನಾಗುತ್ತದೆ?
ಉಪ್ಪು ಹೆಚ್ಚಿನ ಪ್ರಮಾಣದಲ್ಲಿ ದೇಹ ಸೇರಿದರು ಸಮಸ್ಯೆ ಹಾಗೆ ಕಡಿಮೆ ಪ್ರಮಾಣದಲ್ಲಿ ದೇಹಕ್ಕೆ ಸೇರಿದರು ಸಮಸ್ಯೆ ಉಂಟಾಗುತ್ತದೆ. ಸಹಜವಾಗಿ ಉಪ್ಪಿನ ಕಡಿಮೆ ಬಳಕೆಯು ನಿಮ್ಮ ರಕ್ತದೊತ್ತಡ ಕಡಿಮೆಯಾಗಲು ಕಾರಣವಾಗುತ್ತದೆ. ಹಾಗೆ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗುವ ಸೋಡಿಯಂ ಅಂಶ ಕಡಿಮೆಯಾದರೆ ಮೂಳೆಗಳು ಸರಿಯಾಗಿ ಬೆಳವಣಿಗೆಯಾಗದೆ ಮುಂದೆ ಮೂಳೆಗಳು ಬಹುಬೇಗ ಸವೆಯುವ ಸಾಧ್ಯತೆಯೂ ಇರಲಿದೆ.
ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಉಪ್ಪಿನ ಅಂಶ ಸೇರುತ್ತಿದ್ದರೆ ಬೆವರುವುದು, ವಾಂತಿ, ಅತಿಸಾರ, ಆಯಾಸ, ಕಡಿಮೆ ರಕ್ತದೊತ್ತಡ, ಸ್ನಾಯು ಸೆಳೆತ ಮತ್ತು ಸ್ನಾಯು ದೌರ್ಬಲ್ಯಕ್ಕೆ ಇದು ಕಾರಣವಾಗಬಹುದು. ಹೀಗಾಗಿ ಸಮತೋಲನ ಆಹಾರ ಸೇವನೆ ಮಾಡಬೇಕಾಗುತ್ತದೆ. ಕಡಿಮೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವಿಸಬಾರದು. ಒಂದೇ ಪ್ರಮಾಣದಲ್ಲಿ ಉಪ್ಪು ಸೇವಿಸಿದರೆ ದೇಹಕ್ಕೆ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
