ಈ ಯೋಗಾಸನಗಳಿಂದ ಸ್ತನದಲ್ಲಿ ಸಂಗ್ರಹವಾದ ಬೊಜ್ಜು ಕರಗುವುದು!

ಸುಂದರವಾದ ದೇಹಾಕಾರವನ್ನು ಹೊಂದಿರಬೇಕು ಎಂಬುದು ಪ್ರತಿಯೊಬ್ಬ ಮಹಿಳೆಯ ಆಸೆಯಾಗಿದೆ. ಆದರೆ ಜೀವನದ ಜಂಜಾಟ, ಅಸಮತೋಲನದ ಆಹಾರ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ಅನೇಕ ಮಹಿಳೆಯರು ಬೊಜ್ಜಿನ ಜೊತೆಗೆ ಅನೇಕ ದೈಹಿಕ ಸಮಸ್ಯೆಗಳಿಗೆ ಬಲಿಯಾಗುತ್ತಾರೆ. ಅದು ನಿಮ್ಮ ಸ್ತನ ಗಾತ್ರದ ಮೇಲೆ ಪರಿಣಾಮ ಬೀರುತ್ತದೆ.

ಈ ಸ್ತನದ ಕೊಬ್ಬು ಅನೇಕ ಸಂದರ್ಭಗಳಲ್ಲಿ ಮಹಿಳೆಯರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಆದರೆ, ಯೋಗವು ಈ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಸ್ತನ ಕೊಬ್ಬನ್ನು ಕಡಿಮೆ ಮಾಡುವ ಕೆಲವು ಯೋಗಾಸನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಸ್ತನ ಗಾತ್ರ ಕಡಿಮೆ ಮಾಡುವ ಯೋಗಾಸನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ತಾಡಾಸನ:

ತಾಡಾಸನ:

ಇದನ್ನು ಪರ್ವತ ಭಂಗಿ ಎಂದು ಕೂಡ ಕರೆಯಲಾಗುತ್ತದೆ. ನಿಂತುಕೊಂಡು ಮಾಡುವಂತಹ ಎಲ್ಲಾ ರೀತಿ ಆಸನಗಳಿಗೆ ಇದು ಮೂಲ ಎಂದು ಹೇಳಲಾಗುತ್ತದೆ. ರಕ್ತ ಚಲನೆಯನ್ನು ಸುಧಾರಿಸಿ, ಸ್ತನ ಗಾತ್ರವನ್ನು ಕಡಿಮೆ ಮಾಡುವುದು.

ಇದನ್ನು ಮಾಡುವ ರೀತಿ ಹೀಗಿದೆ:

ಇದನ್ನು ಮಾಡುವ ರೀತಿ ಹೀಗಿದೆ:

1.ಕಾಲಿನ ಮೇಲೆ ನೇರವಾಗಿ ನಿಲ್ಲಿ, ಪಾದಗಳು ಜತೆಯಾಗಿರಲಿ. ಹಿಂಗಾಲು ಸ್ವಲ್ಪ ದೂರವಾಗಿರಲಿ. ಕೈಗಳನ್ನು ನೇರವಾಗಿ ದೇಹದ ಎರಡು ಬದಿಯಲ್ಲಿ ಇಡಿ.

2. ತೊಡೆಯ ಸ್ನಾಯುಗಳನ್ನು ಬಿಗಿಯಾಗಿಸಿ. ಮೊಣಕಾಲುಗಳನ್ನು ಸ್ವಲ್ಪ ಎತ್ತಿ. ಆದರೆ ಇದು ಹೊಟ್ಟೆಯ ಕೆಳಭಾಗಕ್ಕೆ ಹೆಚ್ಚು ಭಾರ ಹಾಕಬಾರದು ಎಂದು ನೆನಪಿಡಿ.

3. ಕಣಕಾಲುಗಳ ಮೂಲಕ ಬಿಳಿ ಬೆಳಕು ಒಳಭಾಗದ ತೊಡೆ, ತೊಡೆಸಂಧು, ಬೆನ್ನಹುರಿ, ಕುತ್ತಿಗೆ ಹೀಗೆ ಹಾದು ತಲೆಗೆ ಹೋಗುವುದು ಎಂದು ಭಾವಿಸಿ. ಮೇಲ್ಭಾಗದ ತೊಡೆಯನ್ನು ಒಳಭಾಗಕ್ಕೆ ತನ್ನಿ. ಮೂಳೆತುದಿಯು ನೆಲವನ್ನು ನೋಡುವಂತೆ ಇರಲಿ. ನೇರವಾಗಿ ನೋಡುತ್ತಲಿರಿ.

4. ಭುಜಗಳು, ಕೈಗಳು ಮತ್ತು ಎದೆಯನ್ನು ಬಿಗಿಯಾಗಿಸಿ ಉಸಿರಾಡಿ.

5. ದೇಹದಲ್ಲಿ ಬಿಗಿತ್ವವನ್ನು ಕಾಲಿನಿಂದ ತಲೆಯ ತನಕ ನೀವು ಅನುಭವಿಸಿ. ಹೀಗೆ ಕೆಲವು ಸೆಕೆಂಡುಗಳ ಕಾಲ ಇರಿ. ಇದರ ಬಳಿಕ ಉಸಿರು ಬಿಟ್ಟು ಆರಾಮ ಮಾಡಿ.

6. ತಲೆನೋವು, ನಿದ್ರಾಹೀನತೆ, ಕಡಿಮೆ ರಕ್ತದೊತ್ತಡಗಳಂತಹ ಯಾವುದೇ ಸಮಸ್ಯೆಯಿದ್ದರೆ ಆಗ ನೀವು ಈ ಆಸನ ಮಾಡಬೇಡಿ.

ಪಶ್ಚಿಮೋತ್ತಾಸನ:

ಪಶ್ಚಿಮೋತ್ತಾಸನ:

ಪಶ್ಚಿಮೋತ್ತಾಸನ ನೆಲದಮೇಲೆ ಕುಳಿತು ಮುಂದಕ್ಕೆ ಬಾಗಿ ಮಾಡುವ ಆಸನ. ಈ ಆಸನದಿಂದ ಬೆನ್ನು ಮತ್ತು ಸೊಂಟದ ಭಾಗಗಳಿಗೆ ಹೆಚ್ಚಿನ ವ್ಯಾಯಾಮ ಸಿಕ್ಕಿ ಆ ಭಾಗಕ್ಕೆ ರಕ್ತ ಸಂಚಾರ ಉತ್ತಮಗೊಳ್ಳಲು ಸಹಾಯಕಾರಿಯಾಗುತ್ತದೆ.

ಇದನ್ನು ಮಾಡುವ ರೀತಿ ಹೀಗಿದೆ:

1. ನಿಮ್ಮ ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ ದಂಡಾಸನದಲ್ಲಿ ಬೆನ್ನು ನೇರವಾಗಿರಿಸಿ ಕುಳಿತುಕೊಳ್ಳಿ.

2. ನಿಮ್ಮ ಎರಡು ಕೈಗಳನ್ನು ಬದಿಗಿರಿಸಿ. ಈಗ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ನೇರವಾಗಿ ತಲೆಯ ಮೇಲಕ್ಕೆತ್ತಿ.

3. ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಮುಂದಕ್ಕೆ ಬಾಗಿ ಕೈ ಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದುಕೊಂಡು ಹಣೆಯನ್ನು ಮೊಣಕಾಲಿಗೆ ತಾಗಿಸಲು ಪ್ರಯತ್ನಿಸಿ. ಮೊಣಕಾಲು ನೇರವಾಗಿರಲಿ.

4. ಇದೇ ಸ್ಥಿತಿಯಲ್ಲಿ ಐದು ಬಾರಿ ಆಳವಾಗಿ ಉಸಿರಾಟ ಮಾಡಿ. ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಮೇಲಕ್ಕೆ ಬನ್ನಿ.

5. ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಕೈಯನ್ನು ಕೆಳಗೆ ಇಳಿಸಿ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ.

ವೃಕ್ಷಾಸನ:

ವೃಕ್ಷಾಸನ:

ವೃಕ್ಷ ಎಂದರೆ ಮರ ಎಂದರ್ಥ. ಮರದ ರೀತಿಯಲ್ಲಿ ಸ್ಥಿರವಾಗಿ ನಿಲ್ಲುವಂಥದ್ದು.

ಇದನ್ನು ಮಾಡುವ ರೀತಿ ಹೀಗಿದೆ :

1. ಮೊದಲು ಸಮಸ್ಥಿತಿಯಲ್ಲಿ ನಿಲ್ಲಿ. ಈಗ ಬಲಗಾಲನ್ನು ಮೇಲೆ ತೆಗೆದುಕೊಳ್ಳಿ. ಎಡ ತೊಡೆಯ ಮೂಲಕ್ಕೆ ಬಲ ಹಿಮ್ಮಡಿಯನ್ನು ತಾಗಿಸಿ. ಕಾಲು ಬೆರಳುಗಳು ಕೆಳಮುಖವಾಗಿರಬೇಕು. ಮಂಡಿ ಸೊಂಟದ ನೇರಕ್ಕೆ ಇರಬೇಕು.

2. ಎಡ ತೊಡೆಯಿಂದ ಬಲ ಪಾದವನ್ನು, ಬಲ ಪಾದದಿಂದ ಎಡ ತೊಡೆಯನ್ನು ಒಂದಕ್ಕೊಂದು ಒತ್ತುತ್ತಿರಬೇಕು.

3. ಈಗ ಎರಡೂ ಕೈಗಳನ್ನು ನಿಧಾನವಾಗಿ ಮೇಲಕ್ಕೆ ಭುಜದ ನೇರಕ್ಕೆ ಅಂಗೈಗಳನ್ನು ಮೇಲ್ಮುಖ ಮಾಡಿ ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳು ಮೇಲೆ ನಮಸ್ಕಾರ ಸ್ಥಿತಿಯಲ್ಲಿರಲಿ. ದೃಷ್ಟಿ ನೇರವಾಗಿರಲಿ.

4. ಈ ಸ್ಥಿತಿಯಲ್ಲಿ ಉಸಿರಾಟ ಸಹಜವಾಗಿರಲಿ.ಹಾಗೆ ನಿಧಾನವಾಗಿ ಕೈಗಳನ್ನು ಕೆಳಗಡೆ ಇಳಿಸಿ. ಎರಡೂ ಕೈಗಳನ್ನು ಸೊಂಟದ ಮೇಲೆ ತಂದ ನಂತರ ಬಲಪಾದವನ್ನು ಕೆಳಗಿಳಿಸಿ. ಇದೇ ರೀತಿ ಎಡಗಾಲಿನಿಂದ ಆಸನವನ್ನು ಮುಂದುವರೆಸಿ.

ವೀರಭದ್ರಾಸನ;

ವೀರಭದ್ರಾಸನ;

ಇದನ್ನು ಮಾಡುವ ರೀತಿ ಹೀಗಿದೆ :

1. 3 ರಿಂದ 4 ಅಡಿಯಷ್ಟು ನಿಮ್ಮ ಕಾಲುಗಳನ್ನು ಅಗಲಿಸಿ ನೇರವಾಗಿ ನಿಂತುಕೊಳ್ಳಿರಿ

ನಿಮ್ಮ ಬಲ ಪಾದವನ್ನು 90 ಡಿಗ್ರಿಗಳಷ್ಟು ಹೊರಗಡೆಗೆ ತಿರುಗಿಸಿ ಹಾಗೂ ನಿಮ್ಮ ಎಡ ಪಾದವನ್ನು 15 ಡಿಗ್ರಿಗಳಷ್ಟು ಒಳಗಿರಿಸಿ.

2. ಎರಡೂ ತೋಳುಗಳನ್ನು ಅಕ್ಕಪಕ್ಕದಿಂದ ಭುಜದವರೆವಿಗೂ ತಂದು ನಿಮ್ಮ ಕೈಗಳು ಮೇಲ್ಭಾಗಕ್ಕೆ ತೋರುವಂತಿರಲಿ.

3. ಉಸಿರನ್ನು ಹೊರಗೆ ಬಿಡುತ್ತಾ ನಿಮ್ಮ ಬಲ ಮಂಡಿಯನ್ನು ಬಾಗಿಸಿ

4. ನಿಮ್ಮ ತಲೆಯನ್ನು ತಿರುಗಿಸಿ ನಿಮ್ಮ ಬಲಕ್ಕೆ ನೋಡಿರಿ.

5. ನೀವು ಯೋಗದ ಭಂಗಿಗೆ ಬರುತ್ತಿದಂತೆ ನಿಮ್ಮ ತೋಳುಗಳನ್ನು ವಿಸ್ತರಿಸಿ.

6. ನಿಮ್ಮ ಜಠರವನ್ನು ನವಿರಾದ ಪ್ರಯತ್ನದೊಂದಿಗೆ ಕೆಳಗಿಳಿಸಿ. ಈ ಯೋಗದ ಭಂಗಿಯಲ್ಲಿ ಧೀರತನದಿಂದ ಇರಿ. ಸಂತೋಷದಿಂದ ನಗುತ್ತಾ ಧೀರತೆಯಿಂದಿರಿ. ಕೆಳಗೆ ಬರುತ್ತಾ ಉಸಿರಾಟವನ್ನು ಮುಂದುವರಿಸಿ.

7. ಉಸಿರು ಒಳಗೆ ತೆಗೆದುಕೊಳ್ಳುತ್ತಾ ಮೇಲಕ್ಕೆ ಬನ್ನಿರಿ

8. ಉಸಿರು ಬಿಡುತ್ತಾ ನಿಮ್ಮ ಅಕ್ಕಪಕ್ಕದ ಕೈಗಳನ್ನು ಕೆಳಗಿಳಿಸಿ.

9. ಎಡ ಭಾಗದ ಯೋಗದ ಭಂಗಿಯನ್ನು ಪನರಾವರ್ತಿಸಿ ( ನಿಮ್ಮ ಎಡ ಪಾದವನ್ನು 90 ಡಿಗ್ರಿಗಳಷ್ಟಕ್ಕೆ ತಿರುಗಿಸಿ. ಹಾಗೂ ಬಲ ಪಾದವನ್ನು 15 ಡಿಗ್ರಿಗಳಿಗೆ ತಿರುಗಿಸಿ).

English summary

Yoga Poses to reduce Breast Size in Kannada

Here we talking about Yoga Poses to reduce Breast Size in Kannada, read on
Story first published: Thursday, December 9, 2021, 12:30 [IST]
X
Desktop Bottom Promotion