Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ಗೃಹಿಣಿಯರೇ 40 ವರ್ಷದ ನಂತರವೂ ಫಿಟ್ ಆಗಿರಲು ಇಲ್ಲಿದೆ ಸಿಂಪಲ್ ಟಿಪ್ಸ್..!

ಸುಂದರವಾಗಿ ಕಾಣಬೇಕು ಅನ್ನುವ ಆಸೆ ಎಲ್ಲರಿಗೂ ಇರುತ್ತೆ. ಆದ್ರೆ ಮಹಿಳೆಯರಲ್ಲಿ ಮದುವೆಯಾಗಿ ಮಕ್ಕಳಾದ ಮೇಲೆ ತೂಕ ಹೆಚ್ಚಾಗುವಂತಹ ಸಮಸ್ಯೆಯನ್ನು ಖಂಡಿತ ಅನುಭವಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಮೊದಲಿನ ತೂಕಕ್ಕೆ ಮತ್ತೆ ಮರಳೋದಕ್ಕೆ ಆಗೋದೇ ಇಲ್ಲ.
ಅದ್ರಲ್ಲೂ 40 ವರ್ಷದ ನಂತರ ತೂಕ ಇಳಿಸಿಕೊಂಡು ಫಿಟ್ ಆಗಿರಬೇಕು ಅನ್ನುವ ಆಸೆ ನಿಮ್ಮಲ್ಲಿದೆಯಾ? ಅತಿಯಾದ ತೂಕವನ್ನು ಇಳಿಸಿ ನೀವು ಫಿಟ್ ಆಗ್ಬೇಕಾ? ಹಾಗಾದ್ರೆ ನಾವು ಹೇಳೋ ಸಿಂಪಲ್ ಟಿಪ್ಸ್‌ನ ಫಾಲೋ ಮಾಡಿ.

ಮಕ್ಕಳಾದ ನಂತರ ಫಿಟ್‌ನೆಟ್ ಕಾಪಾಡಿಕೊಳ್ಳುವುದು ಹೇಗೆ?
ನಿಮಗೆಲ್ಲಾ ಬಾಲಿವುಡ್ ಹೀರೋಯಿನ್ ಕರೀನಾ ಕಪೂರ್ ಬಗ್ಗೆ ಗೊತ್ತಿದ್ಯಲ್ಲ. ಎರಡು ಮಕ್ಕಳಾದ್ರು ಈಗಲೂ ಕೂಡ ನವ ಯುವತಿಯಂತೆ ಫೀಟ್ ಆಗಿದ್ದಾರೆ. ಈಗಿನ ಜನರೇಷನ್ ಹುಡುಗಿಯರು ನಾಚುವಂತೆ ದೇಹ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ನಿಜ ಹೇಳಬೇಕೆಂದರೆ ಕರೀನಾಗೆ ಇಬ್ಬರು ಮಕ್ಕಳಾದ ಮೇಲೆ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಸುಲಭದ ಮಾತು ಅಲ್ಲ. ಯಾಕಂದ್ರೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿರುತ್ತದೆ. ಇಂತಹ ಸಮಯದಲ್ಲಿ ನಾವು ಫಿಟ್‌ನೆಸ್ ಅಂತ ಆಹಾರವನ್ನು ಸರಿಯಾಗಿ ತಿನ್ನದೇ ಹೋದರೆ ನಮ್ಮ ಪ್ರಾಣಕ್ಕೆ ಆಪತ್ತು ಬರಬಹುದು.
ಇವತ್ತು ನಾವು ನಿಮಗೆ ಅಧಿಕ ಫೋಷಕಾಂಶಗಳನ್ನು ಸೇವಿಸಿ. 40 ವರ್ಷದ ನಂತರವೂ ಫಿಟ್ ಆಗಿ ಇರೋದು ಹೇಗೆ ಎಂಬುದನ್ನು ಹೇಳ್ತೀವಿ. ಅದಕ್ಕಾಗಿ ನೀವು ಕರೀನಾ ಕಪೂರ್ ಫಿಟ್‌ನೆಸ್ ಟಿಪ್ಸ್ ಅನ್ನು ಫಾಲೋ ಮಾಡಿ. ಇದು ಖುದ್ದು ಕರೀನಾ ಕಪೂರ್ ಅವರೇ ಹೇಳಿರೋ ಕೆಲವೊಂದು ಡಯೇಟ್ ಟಿಪ್ಸ್.

1. ಬೆಳಗ್ಗಿನ ಆಹಾರ ಪೋಷಕಾಂಶಯುಕ್ತವಾಗಿರಲಿ
ಬೆಳಗ್ಗಿನ ಸಮಯ ನಾವು ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆ ಅನ್ನೋದು ಇಲ್ಲಿ ತುಂಬಾನೇ ಮುಖ್ಯವಾಗುತ್ತದೆ. ಬೆಳಗ್ಗಿನ ವರ್ಕ್‌ಔಟ್‌ಗೂ 60 ರಿಂದ 90 ನಿಮಿಷದ ಮೊದಲು ಫೈಬರ್‌ಯುಕ್ತ ಆಹಾರವನ್ನು ಸೇವಿಸಬೇಕು. ಇದು ನಿಮ್ಮ ತೋಳುಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಇದರಿಂದಾಗಿ ನೀವು ವ್ಯಾಯಾಮದ ಸಮಯದಲ್ಲಿ ಅತೀ ಹೆಚ್ಚಿನ ಪ್ರಮಾಣದ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ.

2. ಲಿಂಬೆ ನೀರಿನೊಂದಿಗೆ ಕೇಸರಿ ಸೇರಿಸಿ ಕುಡಿಯಿರಿ
ಮಧ್ಯಾಹ್ನದ ಊಟ ಆದ ಸರಿಸುಮಾರು ಒಂದು ಗಂಟೆಯ ನಂತರ ನೀರಿಗೆ ಲಿಂಬೆ ರಸ ಸೇರಿಸಿ, ಅದರ ಜೊತೆಗೆ ಕಪ್ಪು ಉಪ್ಪು, ಶುಂಟಿ, ಕೇಸರಿಯನ್ನು ಸೇರಿಸಿ ಕುಡಿಯಿರಿ. ಕೇಸರಿ ನಿಮ್ಮ ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನೂ ಇದನ್ನು ಕುಡಿಯುವುದರಿಂದ ಒತ್ತಡದ ಸಮಯದಲ್ಲಿ ಕೊಂಚ ಮಟ್ಟಿಗೆ ರಿಲಾಕ್ಸ್ ಆಗುತ್ತದೆ.

3. ರಾತ್ರಿಯ ಊಟ ಚೆನ್ನಾಗಿರಲಿ
ರಾತ್ರಿಗೆ ಹಣ್ಣುಗಳನ್ನೇ ತಿನ್ನಬೇಕೆಂದಿಲ್ಲ. ಯಾಕೆಂದರೆ ಗೃಹಿಣಿಯಾದವಳಿಗೆ ದೇಹಕ್ಕೆ ಪೋಷಕಾಂಶಗಳು ಅಗತ್ಯವಾಗಿ ಬೇಕಾಗಿರುತ್ತದೆ. ಹೀಗಾಗಿ ಅನ್ನ-ಬೇಳೆಸಾರು ಜೊತೆಗೆ ತುಪ್ಪ, ಕಿಚ್ಡಿ ಜೊತೆಗೆ ಮೊಸರು, ತುಪ್ಪದ ಜೊತೆಗೆ ಜೋಳದ ರೊಟ್ಟಿ, ರಾಗಿ ಮುದ್ದೆ ಜೊತೆಗೆ ಸೊಪ್ಪು ಸಾರು, ಹೀಗೆ ನಿಮ್ಮ ಅನುಕೂಲಕ್ಕೆ ತಕ್ಕ ಯಾವುದಾದರೂ ಆಹಾರವನ್ನು ಸೇವಿಸಬಹುದು. ಇಂತಹ ಆಹಾರವನ್ನು ಸೇವಿಸುವುದರಿಂದ ಸಾಮಾನ್ಯವಾಗಿ ನಿಮಗೆ ಹಾರ್ಮೋನಿಗೆ ಸಂಬಂಧಪಟ್ಟ ಸಮಸ್ಯೆ ಎದುರಾಗುವುದನ್ನು ಕೊಂಚ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಇದರ ಜೊತೆ ನಿಮ್ಮ ತ್ವಚೆ ಮತ್ತಷ್ಟು ಸುಂದರವಾಗಿ ಕಾಣುತ್ತದೆ.

40 ವರ್ಷದ ನಂತರ ನಿಮ್ಮ ಆಹಾರ ಕ್ರಮ ಹೀಗಿರಲಿ.
40 ವರ್ಷಕ್ಕೆ ಕಾಲಿಟ್ಟ ತಕ್ಷಣ ನೀವು ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಮಹಿಳೆಯರಿಗೆ ಪ್ರೋಟಿನ್ ಅಂಶ ಮುಖ್ಯವಾಗುತ್ತದೆ. ಮೀನು, ಬೀನ್ಸ್, ಕಾಳು, ಮಾಂಸ, ಡೈರಿ ಪ್ರಾಡಕ್ಟ್‌ಗಳಲ್ಲಿ ಅಧಿಕ ಪ್ರಮಾಣದ ಪ್ರೋಟಿನ್ ಅಭ್ಯವಾಗುತ್ತದೆ. ಇದರ ಜೊತೆಗೆ ಕಾರ್ಬೋಹೈಡ್ರೇಡ್, ವಿಟಮಿನ್, ಕೊಬ್ಬು, ಮಿನರಲ್, ನೀರನ್ನು ದೇಹ ಬಯಸುತ್ತದೆ. ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವುದರಿಂದ ಆನೇಕ ರೋಗ-ರುಜಿನಗಳು ಬರುವುದರಿಂದ ತಪ್ಪಿಸಿಕೊಳ್ಳಬಹುದು. ಅಸ್ಟೋಪೊರೋಸಿಸ್, ಡಯಾಬಿಟೀಸ್, ಹೃದಯಸಂಬಂಧಿ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಅಷ್ಟೇ ಯಾಕೆ ಕ್ಯಾನ್ಸರ್‌ನಿಂದಲೂ ತಪ್ಪಿಸಿಕೊಳ್ಳಬಹುದು.
* ಹಸಿರು ತರಕಾರಿ, ಬಟಾಣಿ, ಕ್ಯಾರೆಟ್, ಟೊಮೆಟೋ, ಪಿಷ್ಟಯುಕ್ತ ಹಾಗೂ ಪಿಷ್ಟವಲ್ಲದ ಎಲ್ಲಾ ಬಗೆಯ ತರಕಾರಿಗಳು ನೀವು ಸೇವಿಸುವ ಆಹಾರದಲ್ಲಿದ್ದರೆ ಉತ್ತಮ.
* ಬೇರೆ ಬೇರೆ ವಿಧಧ ಹಣ್ಣುಗಳನ್ನು ಸೇವಿಸಿ
* ನೀವು ದಿನನಿತ್ಯ ಸೇವಿಸುವ ಅಧಿಕ ಆಹಾರದ ಅರ್ಧದಷ್ಟು ಆಹಾರವನ್ನು ಸೇವಿಸಲೇಬೇಕು.
* ಕೊಬ್ಬಿನ ಅಂಶ ಕಡಿಮೆ ಇರುವ ಡೈರಿ ಪ್ರಾಡಕ್ಟ್‌ಗಳನ್ನು ಸೇವಿಸಿ ಅವುಗಳೆಂದರೆ ಹಾಲು, ಮೊಸರು, ಚೀಸ್, ಸೋಯಾ ಮುಂತಾದವುಗಳು.
* ಆರೋಗ್ಯಕರ ಎಣ್ಣೆಯನ್ನೇ ಅಡುಗೆಗೆ ಬಳಸಿ
* ಪ್ರತಿನಿತ್ಯ ಸೇವಿಸುವ ಕ್ಯಾಲೋರಿಗಿಂತ ಹತ್ತರಷ್ಟು ಕಡಿಮೆ ಪ್ರಮಾಣದ ಕ್ಯಾಲೋರಿಯನ್ನೇ ಸೇವಿಸಿ.
* ಸಕ್ಕರೆಗೆ ಬದಲಾಗಿ ಬೆಲ್ಲ ಅಥವಾ ಬೇರೆ ಪದಾರ್ಥಗಳನ್ನು ಸೇರಿಸಿ
* 2300 ಮಿಲಿಗ್ರಾಂಗಿಂತ ಕಡಿಮೆ ಪ್ರಮಾಣದ ಸೋಡಿಯಂ ಅನ್ನು ಪ್ರತಿನಿತ್ಯ ಸೇವಿಸಿ
* ದಿನದಲ್ಲಿ ಒಂದಕ್ಕಿಂತ ಅಧಿಕ ಬಾರಿ ಅಲ್ಕೊಹಾಲ್ ಸೇವನೆ ಒಳ್ಳೆಯದಲ್ಲ.
* ನಿಮ್ಮ ನಿತ್ಯದ ಡಯೇಟ್‌ನಲ್ಲಿ ಅಧಿಕ ಕ್ಯಾಲ್ಸಿಯಂ, ಫೈಬರ್, ಪೊಟ್ಯಾಷಿಯಂ, ವಿಟಮಿನ್ ಎ ಮತ್ತು ಸಿ ಇರಲಿ.
ಈ ಎಲ್ಲಾ ಆಹಾರ ಕ್ರಮಗಳ ಜೊತೆಗೆ ದಿನನಿತ್ಯದ ವ್ಯಾಯಾಮ ಕೂಡ ನಿಮ್ಮನ್ನು ಫಿಟ್ ಆಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ ಈ ಬಗ್ಗೆ ನಿಮಗೆ ಮತ್ತಷ್ಟು ಮಾಹಿತಿ ಬೇಕಾದಲ್ಲಿ ತಜ್ಞರನ್ನು ಸಂಪರ್ಕಿಸಿ. ಇದರಿಂದಾಗಿ ನಲ್ವತ್ತರ ನಂತರವು ನೀವು ಫಿಟ್ ಆಗಿರಲು ಸಾಧ್ಯ.



Click it and Unblock the Notifications
