Latest Updates
-
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ
ಗೋಧಿ ನುಚ್ಚಿನ ಪುಡಿ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ..!
ಸಂಪಾದನೆಯ ಹಿಂದೆ ಬಿದ್ದ ಮನುಷ್ಯನಿಗೆ ಜೇಬು ತುಂಬುವಷ್ಟು ಹಣ ಏನೋ ಆಯ್ತು ಆದರೆ ಅದೇನೇ ಮಾಡಿದರು ಆರೋಗ್ಯ ಸಮಸ್ಯೆ ಮಾತ್ರ ಮನುಷ್ಯನನ್ನು ಕಾಡಡೇ ಬಿಡೋದಿಲ್ಲ. ನಮ್ಮ ಆಹಾರ ಕ್ರಮ ಸರಿಯಾಗಿದ್ರೆ ಆರೋಗ್ಯದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಗೋಧಿ ನುಚ್ಚಿನ ಪುಡಿ ಹೆಚ್ಚಿನವರಿಗೆ ಗೊತ್ತಿರ್ಲಿಕ್ಕಿಲ್ಲ. ಆದರೆ ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯಕಾರಿ ಉಪಯೋಗಗಳಿದೆ.
ಸ್ತನ ಕ್ಯಾನ್ಸರ್, ತೂಕ ಇಳಿಕೆಯಿಂದ ಹಿಡಿದು ಎಲ್ಲಾ ತರಹದ ಕಾಯಿಲೆಗಳಿಗೂ ಗೋಧಿ ನುಚ್ಚಿನ ಪುಡಿಯನ್ನು ಸೇವಿಸುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಅಷ್ಟಕ್ಕು ಪ್ರತಿನಿತ್ಯ ಗೋಧಿ ನುಚ್ಚಿನ ಪುಡಿ ಸೇವಿಸುವುದರಿಂದ ಯಾವ ರೀತಿ ಆರೋಗ್ಯಕಾರಿ ಲಾಭಗಳು ಇದೇ ಎನ್ನುವುದನ್ನು ತಿಳಿದುಕೊಳ್ಳೋಣ.

ಗೋಧಿ ನುಚ್ಚಿನ ಪುಡಿಯು ಅನೇಕ ಪೌಷ್ಠಿಕಾಂಶಗಳನ್ನು ಹೊಂದಿರುವ ಆಹಾರಗಳಲ್ಲಿ ಒಂದಾಗಿದೆ. ದಿನನಿತ್ಯದ ಆಹಾರದಲ್ಲಿ ಇದನ್ನು ಸೇವಿಸಿದರೆ ತುಂಬಾನೇ ಒಳ್ಳೆಯದು. ಜೊತೆಗೆ ಹುಷಾರಿಲ್ಲ ಸಮಯದಲ್ಲಿ ರೋಗಿಗಳಿಗೆ ಇದನ್ನು ನೀಡಿದರೆ ಇದು ಅವರ ದೇಹಕ್ಕೆ ಪರಿಣಾಮಕಾರಿಯಾಗುತ್ತದೆ. ಒಂದು ಬೌಲ್‌ನಷ್ಟು ಗೋಧಿಯ ನುಚ್ಚಿನ ಪುಡಿಯನ್ನು ಸೇವಿಸಿದರೆ ಸಾಕಷ್ಟು ಫೈಬರ್‌ಗಳು, ಪ್ರೋಟೀನ್‌ಗಳು ಮತ್ತು ವಿಟಮಿನ್‌ಗಳು ನಿಮ್ಮ ದೇಹ ಸೇರಿಕೊಂಡು ನೀವು ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ.
ಎಲ್ಲಾ ವಯೋಮಾನದವರಿಗೂ ಇದು ಉತ್ತಮ ಆಹಾರ
ಗೋಧಿ ನುಚ್ಚಿನ ಪುಡಿಯಲ್ಲಿ ಕಿಚಿಡಿ, ಉಪ್ಪಿಟ್ಟು ಹೀಗೆ ಅನೇಕ ವಿಧವಾಗಿ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ಇದನ್ನು ಇಂತಹದ್ದೇ ವಯೋಮಾನದವರು ತಿನ್ನಬೇಕು ಎಂದಿಲ್ಲ. ಚಿಕ್ಕಮಕ್ಕಳಿಂದಿಂದ ಹಿಡಿದು ವಯಸ್ಸಾದವರಿಗೂ ಇದು ಆರೋಗ್ಯಕಾರಿ ಆಹಾರ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟ ಹೀಗೆ ಯಾವ ಸಮಯಲ್ಲಾದರೂ ಇದನ್ನು ಸೇವಿಸಬಹುದು.
ಗೋಧಿ ನುಚ್ಚಿನ ಪುಡಿಯ ಆರೋಗ್ಯಕಾರಿ ಲಾಭಗಳು

1. ತೂಕ ಇಳಿಕೆಗೆ ಸಹಾಯಕಾರಿ
ನೀವೇನಾದರೂ ತೂಕ ಇಳಿಸಿಕೊಳ್ಳಬೇಕು ಅಂತಿದ್ದರೆ ಗೋಧಿ ನುಚ್ಚಿನ ಪುಡಿ ನಿಮಗೆ ಸೂಕ್ತವಾದ ಡಯೇಟ್ ಆಹಾರವಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚು ಮಾಡುತ್ತದೆ ಹಾಗೂ ದೇಜದ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಬಿಸಿ ಹಾಲಿನೊಂದಿಗೆ ಇದನ್ನು ಸೇವಿಸಬಹುದು. ಇದನ್ನು ತಿಂದ ತಕ್ಷಣ ಹೊಟ್ಟೆ ತುಂಬಿದಂತೆ ಅನುಭವವಾಗುತ್ತದೆ ಹಾಗೂ ಅತಿಯಾಗಿ ತಿನ್ನುವುದನ್ನು ಇದು ತಡೆಯುತ್ತದೆ.

2. ಜೀರ್ಣಕ್ರಿಯೆಗೆ ಸಹಾಯಕಾರಿ
ಗೋಧಿ ನುಚ್ಚಿನ ಪುಡಿಯಲ್ಲಿರುವ ಫೈಬರ್ ಅಂಶವು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೂ ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ ಇದು ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೀಗಾಗಿ ನಿತ್ಯವು ಒಂದು ಹೊತ್ತಾದರೂ ಈ ಆಹಾರವನ್ನು ತೆಗೆದುಕೊಳ್ಳುವುದು ಉತ್ತಮ.

3. ಸಕ್ಕರೆ ಕಾಯಿಲೆ ಇರುವವರಿಗೆ ಉತ್ತಮ ಆಹಾರ
ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿರುವವರು ಈ ಆಹಾರವನ್ನು ಸೇವಿಸಲೇಬೇಕು. ಗೋಧಿ ನುಚ್ಚಿನ ಪುಡಿಯಲ್ಲಿ ಅಧಿಕ ಕಾರ್ಬೋಹೈಡ್ರೇಡ್ ಇರುವುದರಿಂದ ರಕ್ತದಲ್ಲಿರುವ ಗ್ಲೂಕೋಸ್ ಅನ್ನು ಸ್ಥಿರವಾಗಿ ಬಿಡುಗಡೆಗೊಳಿಸುವಂತೆ ಮಾಡುತ್ತದೆ. ಹಾಗೂ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

4. ಸ್ನಾಯುವನ್ನು ಬಲಪಡಿಸುತ್ತದೆ.
ಗೋಧಿ ನುಚ್ಚಿನ ಪುಡಿಯಲ್ಲಿ ಪ್ರೋಟಿನ್ ಹಾಗೂ ವಿಟಮಿನ್ ಅಂಶ ಸಮೃದ್ಧವಾಗಿದೆ. ಇದು ಸ್ನಾಯುವನ್ನು ಬಲಪಡಿಸಲು ಸಹಾಯಕಾರಿಯಾಗಿದೆ. ನೀವು ನಿತ್ಯವು ವ್ಯಾಯಾಮ ಮಾಡುವವರಾದರೆ ನಿಮ್ಮ ಆರೋಗ್ಯಕ್ಕೆ ಇದು ತುಂಬಾನೇ ಒಳ್ಳೆಯದು. ದೈನಂದಿನ ಆಹಾರದಲ್ಲಿ ಗೋಧಿ ನುಚ್ಚಿನ ಪುಡಿಯನ್ನು ಸೇವಿಸುವುದನ್ನು ಮರೆಯಬೇಡಿ.

5. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ
ಗೋಧಿ ನುಚ್ಚಿನ ಪುಡಿಯಲ್ಲಿ ಫೈಬರ್ ಅಂಶ ಅಧಿಕವಾಗಿರುವುದರಿಂದ ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಗೋಧಿ ನುಚ್ಚಿನ ಪುಡಿ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಸ್ಟ್ರೋಕ್ ಸೇರಿದಂತೆ ಎದೆನೋವಿನಂತಹ ಸಮಸ್ಯೆಗಳನ್ನು ತಡೆಯುತ್ತದೆ.

6. ಸ್ತನ ಕ್ಯಾನ್ಸರ್ ತಡೆಗಟ್ಟುತ್ತದೆ
ಗೋಧಿ ನುಚ್ಚಿನ ಪುಡಿಯನ್ನು ನಿಯಮಿತವಾಗಿ ಸೇವಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿರೋದ್ರಿಂದ ಸ್ತನ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

7. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ
ಗೋಧಿ ನುಚ್ಚಿನ ಪುಡಿಯ ಮತ್ತೊಂದು ಪ್ರಯೋಜನವೆಂದರೆ ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಮತ್ತು ಇದು ಉರಿಯೂತ ನಿವಾರಕ ಗುಣವನ್ನು ಹೊಂದಿದ್ದು, ಹಾಲಿನೊಂದಿಗೆ ಸೇವಿಸಿದಾಗ ಚರ್ಮದ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

8. ಕಡಿಮೆ ಕೊಬ್ಬಿನ ಅಂಶ ಹೊಂದಿದೆ
ಗೋಧಿ ನುಚ್ಚಿನ ಪುಡಿಯಲ್ಲಿ ಕೊಬ್ಬಿನ ಅಂಶ ತುಂಬಾ ಕಡಿಮೆ ಪ್ರಮಾಣದಲ್ಲಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಇದನ್ನು ಸೇರಿಸಿದರೆ ಉತ್ತಮ ಯಾಕಂದ್ರೆ ಇದು ನಿಮ್ಮ ಕ್ಯಾಲೋರಿಗಳನ್ನು ನಿಯಂತ್ರಣದಲ್ಲಿಡುತ್ತದೆ. ಇದರ ಜೊತೆಗೆ ಕಡಿಮೆ ಕ್ಯಾಲೋರಿ ಅಂಶ ಹೊಂದಿರುವುದರಿಂದ ದೇಹಕ್ಕೆ ಯಾವುದೇ ರೀತಿಯ ತೂಕ ಹೆಚ್ಚಾಗುವಂತಹ ಸಮಸ್ಯೆ ಎದುರಾಗುವುದಿಲ್ಲ.

9. ಮಕ್ಕಳ ಬೆಳವಣಿಗೆಗೆ ಉತ್ತಮ ಆಹಾರ
ಗೋಧಿ ನುಚ್ಚಿನ ಪುಡಿಯು ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಫೈಬರ್‌ನ ನೈಸರ್ಗಿಕ ಮೂಲವಾಗಿದೆ. ಇದು ಬೆಳೆಯುತ್ತಿರುವ ಮಕ್ಕಳಿಗೆ ಇತರ ಯಾವುದೇ ಪ್ಯಾಕೇಜ್ ಮಾಡಿದ ಆಹಾರಕ್ಕಿಂತ ಹೆಚ್ಚು ಆರೋಗ್ಯಕರವಾಗಿದೆ. ಗೋಧಿ ನುಚ್ಚಿನ ಪುಡಿಯಿಂದ ಮಕ್ಕಳಿಗೆ ಇಷ್ಟವಾಗುವ ಖಾದ್ಯ ತಯಾರಿಸಿ ನೀಡಬಹುದು. ಖಂಡಿತ ಅವರು ಇಷ್ಟಪಟ್ಟು ತಿನ್ನುತ್ತಾರೆ. ಇದರಿಂದ ಅವರ ಬೆಳವಣಿಗೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ನೀವು ಗಮನಿಸುತ್ತೀರಾ.

10. ಮೆದುಳಿನ ಆರೋಗ್ಯಕ್ಕೆ ಉತ್ತಮ
ಗೋಧಿ ನುಚ್ಚಿನ ಪುಡಿಯು ಮೆಗ್ನೀಸಿಯಮ್ ಸೇರಿದಂತೆ ಅನೇಕ ಖನಿಜಗಳಿಂದ ಸಮೃದ್ಧವಾಗಿದೆ, ಇದು ಮೆದುಳಿನ ನರಗಳನ್ನು ಶಾಂತವಾಗಿ ಮತ್ತು ಆರೋಗ್ಯಕರವಾಗಿಡಲು ಸಹಕರಿಸುತ್ತದೆ. ಮೆಗ್ನೀಸಿಯಮ್ ಅಂಶವು ಸ್ನಾಯು ನೋವನ್ನು ಶಮನಗೊಳಿಸುತ್ತದೆ ಮತ್ತು ನಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದು ನಮ್ಮ ಮೆದುಳಿನ ಆರೋಗ್ಯಕರ ನಿರ್ವಹಣೆಗೂ ಸಹಕರಿಸುತ್ತದೆ.
ಗೋಧಿ ನುಚ್ಚಿನ ಪುಡಿಯಿಂದ ಇಷ್ಟಲ್ಲಾ ಆರೋಗ್ಯಕಾರಿ ಲಾಭಗಳಿದೆ. ದಿನದಲ್ಲಿ ಒಂದು ಬಾರಿ ಈ ಆಹಾರವನ್ನು ಸೇವಿಸುವುದನ್ನು ಮರೀಬೇಡಿ.



Click it and Unblock the Notifications











