For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಸಿಹಿಗೆಣಸು ತಿನ್ನಬೇಕು ಎನ್ನುವುದು ಈ ಕಾರಣಕ್ಕೆ ನೋಡಿ

|

ಕರ್ನಾಟಕದಲ್ಲಿ ಮರಗೆಣಸು ಬಳಕೆ ಮಾಡುವವರು ತುಂಬಾ ಕಡಿಮೆ, ಹೆಚ್ಚಿನವರಿಗೆ ಈ ಗೆಣಸು ತಿನ್ನಬಹುದು ಎಂಬುವುದು ಕೂಡ ಗೊತ್ತಿರಲ್ಲ, ಆದರೆ ಸಿಹಿಗೆಣಸಿನ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ.

winter food

ಸಿಹಿಗೆಣಸು ಬೇಯಿಸಿ ತಿನ್ನಬಹುದು, ಇದರಿಂದ ಚಿಪ್ಸ್ ಮಾಡಿ ಸವಿಯಬಹುದು. ಇದು ಹೆಸರಿಗೆ ತಕ್ಕಂತೆ ತಿನ್ನಲು ಸಿಹಿಯಾಗಿರುತ್ತದೆ, ಮಧುಮೇಹಿಗಳಿಗೂ ಇದು ಅತ್ಯುತ್ತಮವಾದ ಆಹಾರವಾಗಿದೆ. ಚಳಿಗಾಲದ ಸೀಸನ್‌ ಫುಡ್‌ನಲ್ಲಿ ಸಿಹಿ ಗೆಣಸು ಕೂಡ ಒಂದು.

ನೀವು ಚಳಿಗಾಲದಲ್ಲಿ ಸಿಹಿ ಗೆಣಸು ತಿನ್ನುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು ನೋಡಿ:

ಸಿಹಿಗೆಣಸು ಚಳಿಗಾಲದ ಸೂಪರ್‌ ಫುಡ್ ಏಕೆ?

ಸಿಹಿಗೆಣಸು ಚಳಿಗಾಲದ ಸೂಪರ್‌ ಫುಡ್ ಏಕೆ?

ಒಂದು ಸಿಹಿ ಗೆಣಸು ತಿಂದರೆ ನಿಮ್ಮ ದೇಹಕ್ಕೆ ಆ ದಿನಕ್ಕೆ ಅವಶ್ಯಕವಿರುವಷ್ಟು ವಿಟಮಿನ್ ಸಿ, ಬೀಟಾ ಕೆರೋಟಿನ್‌ ದೊರೆಯುತ್ತದೆ.

ಸಿಹಿಗೆಣಸಿನಲ್ಲಿರುವ ವಿಟಮಿನ್ ಹಾಗೂ ಖನಿಜಾಂಶಗಳು

ವಿಟಮಿನ್ ಬಿ

ವಿಟಮಿನ್ ಸಿ

ಕ್ಯಾಲ್ಸಿಯಂ

ಕಬ್ಬಿಣದಂಶ

ಮೆಗ್ನಿಷ್ಯಿಯಂ

ರಂಜಕ

ಪೊಟಾಷ್ಯಿಯಂ

ಸತು

ಥೈಯಾಮಿನ್

 ಚಳಿಗಾಲದಲ್ಲಿ ಸಿಹಿಗೆಣಸು ತಿನ್ನುವುದರಿಂದ ಪ್ರಯೋಜನಗಳು

ಚಳಿಗಾಲದಲ್ಲಿ ಸಿಹಿಗೆಣಸು ತಿನ್ನುವುದರಿಂದ ಪ್ರಯೋಜನಗಳು

ತ್ವಚೆ ಆರೋಗ್ಯಕ್ಕೆ ಒಳ್ಳೆಯದು

ಸಿಹಿಗೆಣಸಿನಲ್ಲಿ ಬೀಟಾ ಕೆರೋಟಿನ್ ಅಧಿಕವಿರುವುದರಿಂದ ತ್ವಚೆ ಕಶ್ಮಲಗಳ ವಿರುದ್ಧ ಹೋರಾಡಲು ಸಹಕಾರಿ, ಇದು ತ್ವಚೆಯ ಹೊಳಪು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ತ್ವಚೆ ಮಂಕಾಗುವುದು, ಸಿಹಿ ಗೆಣಸು ತ್ವಚೆಗೆ ಹೊಳಪು ನೀಡುವುದು.

 ಗ್ಲುಕೋಸ್‌ ನಿಯಂತ್ರಿಸುತ್ತದೆ

ಗ್ಲುಕೋಸ್‌ ನಿಯಂತ್ರಿಸುತ್ತದೆ

ಮಧುಮೇಹಿಗಳಿಗೆ ಸಿಹಿಗೆಣಸು ತುಂಬಾ ಒಳ್ಳೆಯದು. ಇದರಲ್ಲಿ ಕಾರ್ಬ್ಸ್ ಮತ್ತು ಅಡಿಪೊನೆಕ್ಟಿನ್ ಹಾರ್ಮೋನ್‌ ಇರುವುದರಿಂದ ಗ್ಲುಕೋಸ್‌ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

 ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಇದರಲ್ಲಿ ಬೀಟಾ ಕೆರೋಟಿನ್ ಮತ್ತು ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಸೋಂಕು, ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ. ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಈ ಬಗೆಯ ಆಹಾರಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕಾಯಿಲೆ ಬೀಳುವುದನ್ನು ತಡೆಗಟ್ಟಲು ಸಹಕಾರಿ.

 ಇತರ ಪ್ರಯೋಜನಗಳು

ಇತರ ಪ್ರಯೋಜನಗಳು

ಕ್ಯಾನ್ಸರ್ ತಡೆಗಟ್ಟುತ್ತೆ: ಸಿಹಿಗೆಣಸು ತಿನ್ನುವುದರಿಂದ ಕ್ಯಾನ್ಸರ್ ಅಪಾಯ ಕಡಿಮೆಯಾಗುವುದು. ಸಿಹಿ ಗೆಣಸಿನಲ್ಲಿರುವ anthocyanin ಅಂಶವಿರುವುದರಿಂದ ಕ್ಯಾನ್ಸರ್‌ನ ಅಪಾಯ ಕಡಿಮೆಯಾಗುವುದು.

ಮಧುಮೇಹಿಗಳಿಗೆ ಅತ್ಯುತ್ತವಾದ ಆಹಾರ: ಇದು ಸಿಹಿಯಾದ ಆಹಾರವಾದರೂ ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ. ಸಿಹಿಗೆಣಸು ಬೇಯಿಸಿದಾಗ ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ರಕ್ತದಲ್ಲಿ ಸಕ್ಕರೆಯಂಶ ತಕ್ಷಣ ಹೆಚ್ಚಾಗುವುದಿಲ್ಲ.

ಹೃದಯ ಸಮಸ್ಯೆ ಇರುವವರಿಗೆ ಒಳ್ಳೆಯದು:

ಹೃದಯ ಸಮಸ್ಯೆ ಇರುವವರಿಗೆ ಒಳ್ಳೆಯದು:

ಇದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದರಿಂದ ಹೃದಯ ಆರೋಗ್ಯಕ್ಕೆ ಒಳ್ಳೆಯದು, ಹೃದಯ ಸಮಸ್ಯೆ ಇರುವವರು ಈ ಆಹಾರ ಸೇವಿಸುವುದು ಒಳ್ಳೆಯದು.

ಕಣ್ಣಿನ ಆರೋಗ್ಯ ಕಾಪಾಡುತ್ತೆ:ಇದರಲ್ಲಿ ಬೀಟಾ ಕೆರೋಟಿನ್ ಹಗೂ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ. ಕಣ್ಣಿನ ಪೊರೆ ಬರುವುದು, ದೃಷ್ಟಿ ಮಂದಾಗುವುದನ್ನು ತಡೆಗಟ್ಟುತ್ತದೆ.

 ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಮೆದುಳು ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಸಿಹಿಗೆಣಸು ಸಹಕಾರಿ. ಇದರಲ್ಲಿರುವ antioxidant ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಒಂದು ವರ್ಷ ಕಳೆದ ಮೇಲೆ ಮಕ್ಕಳಿಗೆ ಕೊಡಬಹುದು

ಇದನ್ನು ಬೇಯಿಸಿ, ಹಾಲಿನ ಜೊತೆ ಮಿಕ್ಸ್ ಮಾಡಿ ಚಿಕ್ಕ ಮಕ್ಕಳಿಗೆ ಕೊಟ್ಟರೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಮಕ್ಕಳ ಬೆಳವಣಿಗೆಗೆ ಸಹಕಾರಿ.

ಒಬೆಸಿಟಿ

ನೀವು ಆರೋಗ್ಯಕರವಾಗಿ ಮೈ ತೂಕ ಕಡಿಮೆಯಾಗಬೇಕೆಂದು ಬಯಸುವುದಾದರೆ ನೀವು ನಿಮ್ಮ ಡಯಟ್‌ನಲ್ಲಿ ಸಿಹಿಗೆಣಸು ಸೇರಿಸಿ. ಇದನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುತ್ತದೆ, ಮೈ ತೂಕ ಕೂಡ ಹೆಚ್ಚಾಗುವುದಿಲ್ಲ.

ಸಿಹಿ ಗೆಣಸು ಹೇಗೆ ತಿಂದರೆ ಆರೋಗ್ಯಕರ?

ಇದನ್ನು ಫ್ರೈ ಮಾಡಿ ತಿಂದರೆ ಹೆಚ್ಚು ರುಚಿಕರ ಆದರೆ ಬೇಯಿಸಿ ಅಥವಾ ರೋಸ್ಟ್ ಮಾಡಿ ತಿಂದರೆ ಆರೋಗ್ಯಕರ. ಇದನ್ನು ಹಸಿ ಬೇಕಾದರೂ ತಿನ್ನಬಹುದು.

English summary

Reasons You Should Include Sweet Potato In Your Winter Diet in Kannada

Winter Food: Why sweet potato so good for you in this winter read on...
X
Desktop Bottom Promotion