Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ತುನಾ ಮೀನಿನಲ್ಲಿ ಮರ್ಕ್ಯೂರಿ ಇರುವುದರಿಂದ ಹೇಗೆ ತಿಂದರೆ ಸುರಕ್ಷಿತ?
ತುನಾ ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅಲ್ಲದೆ ರುಚಿಯಲ್ಲೂ ಈ ಮೀನು ಸೂಪರ್ ಆಗಿರುವುದರಿಂದ ಬಹುತೇಕ ಜನರು ಈ ಮೀನು ತಿನ್ನಲು ಇಷ್ಟಪಡುತ್ತಾರೆ.

ಇನ್ನು ವರ್ಕೌಟ್ ಮಾಡುವವರಿಗೆ ತುನಾ ಮೀನು ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಇಷ್ಟೆಲ್ಲಾ ಆರೋಗ್ಯಕರ ಗುಣಗಳನ್ನು ಹೊಂದಿದ್ದರೂ ತುನಾ ಮೀನು ತಿನ್ನುವಾಗ ಸ್ವಲ್ಪ ಜಾಗ್ರತೆ, ಏಕೆಂದರೆ ಇದರಲ್ಲಿ ಮರ್ಕ್ಯೂರಿ ಅಂದರೆ ಪಾದರಸದ ಅಂಶವಿದೆ!
ಆದ್ದರಿಂದ ತುನಾ ಮೀನು ಹೇಗೆ ತಿನ್ನಬೇಕು, ಯಾರು ಸೇವಿಸಬಾರದು? ಎಂಬೆಲ್ಲಾ ಮಾಹಿತಿ ವಿವರವಾಗಿ ತಿಳಿಯೋಣ:

ಇತರ ಸಮುದ್ರ ಮೀನುಗಳಿಗಿಂತ ತುನಾದಲ್ಲಿ ಮರ್ಕ್ಯೂರಿ ಅಧಿಕ
ಸಾಲಮೋನ್, ಮೃದ್ವಂಗಿ, ಸೀಗಡಿ, ಮೃದ್ವಂಗಿಗಳು ಮತ್ತಿತರ ಮೀನುಗಳಿಗಿಂತ ತುನಾ ಮೀನಿನಲ್ಲಿ ಮರ್ಕ್ಯೂರಿ ಅಂಶ ಅಧಿಕವಿದೆ. 85ಗ್ರಾಂ ಮೀನಿನಲ್ಲಿ 58.57ನಷ್ಟು ಮರ್ಕ್ಯೂರಿ ಇದೆ.
Environmental Protection Agency ಪ್ರಕಾರ ಒಂದು ಕೆಜಿಗೆ 0.1mcg ಮರ್ಕ್ಯೂರಿ ಸುರಕ್ಷಿತವಾಗಿದೆ. ನಮ್ಮ ಮೈ ತೂಕಕ್ಕೆ ತಕ್ಕಂತೆ ಇಂತಿಷ್ಟು ಪ್ರಮಾಣದ ಮರ್ಕ್ಯೂರಿ ಸುರಕ್ಷಿತ ಎಂದು ಹೇಳಲಾಗಿದೆ.
45 ಕೆಜಿ ತೂಕದವರಿಗೆ 31.5mcg ಮರ್ಕ್ಯೂರಿ ಸುರಕ್ಷಿತವಾಗಿದೆ. ಅದೇ 91 ಕೆಜಿ ಮೈ ತೂಕ ಹೊಂದಿದ್ದರೆ 63.7mcg ಮರ್ಕ್ಯೂರಿ ಸುರಕ್ಷಿತವಾಗಿದೆ.

ಅತ್ಯಧಿಕ ಮರ್ಕ್ಯೂರಿ ದೇಹವನ್ನು ಸೇರಿದರೆ ಉಂಟಾಗುವ ಅಡ್ಡಪರಿಣಾಮವೇನು?
ಅತ್ಯಧಿಕ ಮರ್ಕ್ಯೂರಿ ದೇಹವನ್ನು ಸೇರಿದರೆ ಒಳ್ಳೆಯದಲ್ಲ, ಒಂದು ಅಧ್ಯಯನ ವರದಿ ಪ್ರಕಾರ ಅತ್ಯಧಿಕ ಮರ್ಕ್ಯೂರಿ ದೇಹವನ್ನು ಸೇರಿದರೆ ಇದರಿಂದ ಖಿನ್ನತೆ ಉಂಟಾಗುವುದು, ಮಾನಸಿಕ ಒತ್ತಡದ ಸಮಸ್ಯೆ ಹೆಚ್ಚಾಗುವುದು.
ಮತ್ತೊಂದು ಅಧ್ಯಯನದಲ್ಲಿ ಅತ್ಯಧಿಕ ಮೀನು ಸೇವಿಸುವ 1800 ಪುರುಷರನ್ನು ಒಳಪಡಿಸಲಾಗಿತ್ತು, ಅವರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ.

ತುನಾ ಹೇಗೆ ಸೇವಿಸಬೇಕು?
ತುನಾವನ್ನು ವಾರದಲ್ಲಿ ಒಂದೆರಡು ಬಾರಿ ತಿಂದರೆ ತೊಂದರೆಯಿಲ್ಲ, ಆದರೆ ಪ್ರತಿದಿನ ತಿನ್ನಬಾರದು. ಪ್ರತಿದಿನ ಮೀನು ಸೇವನೆ ಮಾಡುವವರಾದರೆ ತುನಾ ಬದಲಿಗೆ ಬೂತಾಯಿ, ಬಂಗುಡೆ, ಸಾಲಮೋನ್ ಈ ಬಗೆಯ ಮೀನು ಸೇವಿಸಿ.

ಯಾರಿಗೆ ತುನಾ ಮೀನು ಒಳ್ಳೆಯದಲ್ಲ?
* ತುನಾ ಮೀನು ಚಿಕ್ಕ ಮಕ್ಕಳಿಗೆ ಒಳ್ಳೆಯದಲ್ಲ, ಏಕೆಂದರೆ ಇದರಲ್ಲಿ ಮರ್ಕ್ಯೂರಿ ಅಧಿಕವಿರುವುದರಿಂದ ಮಕ್ಕಳಿಗೆ ಒಳ್ಳೆಯದಲ್ಲ.
* ಎದೆಹಾಲುಣಿಸುವ ತಾಯಂದಿರಿಗೆ ಕೂಡ ತುನಾ ಮೀನು ಒಳ್ಳೆಯದಲ್ಲ
* ಗರ್ಭಿಣಿಯರು ಮರ್ಕ್ಯೂರಿ ಸೇವಿಸಬಾರದು.

ತುನಾ ತಿನ್ನಲು ಭಯ ಪಡಬೇಡಿ
ತುನಾದಲ್ಲಿ ಮರ್ಕ್ಯೂರಿ ಅಂಶವಿದೆ ಎಂದ ಮಾತ್ರಕ್ಕೆ ನೀವು ಭಯಬಿದ್ದು ತಿನ್ನುವುದು ಬಿಡಬೇಡಿ, ಏಕೆಂದರೆ ತುನಾದಲ್ಲಿ ಮರ್ಕ್ಯೂರಿ ಇದೆ, ಆದರೆ ಅದಕ್ಕಿಂತ ಮಿಗಿಲಾಗಿ ತುಂಬಾ ಆರೋಗ್ಯಕರ ಗುಣಗಳಿವೆ, ಆದ್ದರಿಂದ ನೀವು ತುನಾವನ್ನು ಒಂದೆರಡು ಬಾರಿ ತಿನ್ನುವುದು ಒಳ್ಳೆಯದು.
ತುನಾ ಮೀನು ತಿನ್ನುವುದರಿಂದ ಈ ಪ್ರಮುಖ ಆರೋಗ್ಯಕರ ಗುಣಗಳಿವೆ
1. ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಅತಿಯಾದರೆ ಅಮೃತವೂ ವಿಷ ಅಂತಾರೆ ಅಲ್ವಾ? ಅದೇ ರೀತಿ ತುನಾ ಕೂಡ ಅತಿಯಾಗಿ ತಿನ್ನಬೇಡಿ, ಮಿತಿಯಲ್ಲಿ ತಿನ್ನಿ ಆರೋಗ್ಯಕ್ಕೆ ಒಳ್ಳೆಯದು.
2. ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತೆ: ಇದರಲ್ಲಿ ಪೊಟಾಷ್ಯಿಯಂ ಅಧಿಕವಿರುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ. ಇನ್ನು ಇದರಲ್ಲಿ ಒಮೆಗಾ 3 ಕೊಬ್ಬಿನಂಶ ಕೂಡ ಅಧಿಕವಿದೆ.
3. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ತುನಾದಲ್ಲಿ ಮ್ಯಾಂಗನೀಸ್, ಸತು, ವಿಟಮಿನ್ ಸಿ, ಸೆಲೆನಿಯಮ್ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇನ್ನು ಇದು ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
4. ತ್ವಚೆ ಆರೋಗ್ಯಕ್ಕೆ ಒಳ್ಳೆಯದು
ಇದನ್ನು ತಿನ್ನುವುದರಿಂದ ತ್ವಚೆ ಆರೋಗ್ಯಕ್ಕೆ ಒಳ್ಳೆಯದು, ತ್ವಚೆ ಕ್ಯಾನ್ಸರ್ ಕೂಡ ತಡೆಗಟ್ಟುತ್ತದೆ. ಅಲ್ಲದೆ ಸ್ತನ ಕ್ಯಾನ್ಸರ್, ಕಿಡ್ನಿ ಸಮಸ್ಯೆ ತಡೆಗಟ್ಟಲು ಕೂಡ ಸಹಕಾರಿ.
5. ತುನಾ ದೇಹಕ್ಕೆ ಶಕ್ತಿಯನ್ನು ತುಂಬುವುದು
ದೇಹದಲ್ಲಿ ಚಯಪಚಯ ಕ್ರಿಯೆಗೆ ತುಂಬಾನೇ ಸಹಕಾರಿ. ಇದು ಮೂಳೆಯ ಆರೋಗ್ಯ ಹೆಚ್ಚಿಸುತ್ತದೆ.
ಕೊನೆಯದಾಗಿ: ಹೀಗೆ ತುನಾ ಮೀನಿನಲ್ಲಿ ಇಷ್ಟೆಲ್ಲಾ ಆರೋಗ್ಯಕರ ಗುಣಗಳಿರುವುದರಿಂದ ನೀವು ತುನಾ ಮೀನು ಮರ್ಕ್ಯೂರಿ ಇದೆ ಎಂಬ ಕಾರಣಕ್ಕೆ ದೂರವಿಡಬೇಡಿ, ಮಿತಿಯಲ್ಲಿ ತಿನ್ನಿ, ಪ್ರತಿದಿನ ತಿನ್ನಬೇಡಿ ಅಷ್ಟೇ...



Click it and Unblock the Notifications











