Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ತೂಕ ಇಳಿಕೆಗೆ ತುಂಬಾ ಸಹಕಾರಿ ಈ ಸಬ್ಜಾ ಬೀಜ
ಕಾಮಕಸ್ತೂರಿ ಬೀಜದ ಬಗ್ಗೆ ನಿಮಗೆ ಗೊತ್ತಿರುತ್ತದೆ. ಇದನ್ನು ಬೇಸಿಗೆಯಲ್ಲಿ ನೀರಿಗೆ ಹಾಕಿ ಕುಡಿದರೆ ಶರೀರಕ್ಕೆ ತುಂಬಾ ತಂಪು. ಇದನ್ನು ಇನ್ನು ಫಲೋಡಾ, ಐಸ್ ಕ್ರೀಮ್‌ಗೆ ಹಾಕಿ ಕುಡಿಯಲಾಗುವುದು.

ಇನ್ನು ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ನೀರಿಗೆ ಹಾಕಿ ಕುಡಿದರೆ ತುಂಬಾ ಒಳ್ಳೆಯದು. ಇದನ್ನು ಸಬ್ಜಾ ಎಂದು ಕೂಡ ಕರೆಯುತ್ತಾರೆ. ಈ ಕಾಮಕಸ್ತೂರಿ ತೂಕ ಇಳಿಕೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಎಂಬುವುದು ನಿಮಗೇ ಗೊತ್ತೇ?
ಡಯಟಿಷಿಯನ್ ಕೂಡ ಕಾಮಕಸ್ತೂರಿ ಅಥವಾ ಸಬ್ಜಾ ತೂಕ ಇಳಿಕೆ ಮಾಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳುತ್ತಾರೆ. ಸಬ್ಜಾ ತೂಕ ಇಳಿಕೆಯಲ್ಲಿ ಹೇಗೆ ಸಹಕಾರಿ, ಇದನ್ನು ಹೇಗೆ ಬಳಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ನೋಡಿ.

ಸಬ್ಜಾದ ಗುಣಗಳು
ಕಡಿಮೆ ಕಾರ್ಬೋಹೈಡ್ರೇಟ್ಸ್ ಅಧಿಕ ಪ್ರೊಟೀನ್ ಈ ಬೀಜದಲ್ಲಿದೆ. ಈ ರೀತಿಯ ಕಾಂಬಿನೇಷನ್‌ನ ಸಸ್ಯಾಹಾರ ಅಪರೂಪ. ಆದ್ದರಿಂದ ಇದನ್ನು ಆಹಾರಕ್ರಮದಲ್ಲಿ ಸೇರಿಸುವುದು ಅತ್ಯುತ್ತಮವಾಗಿದೆ. ಕಾಮ ಕಸ್ತೂರಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಕೊಬ್ಬಿನಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ತೂಕ ಇಳಿಕೆಗೆ ಹೇಗೆ ಸಹಕಾರಿ?
ಎರಡು ಚಮಚ ಸಬ್ಜಾವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಎರಡು ಚಮಚ ಸಬ್ಜಾದಲ್ಲಿ 40ಕ್ಯಾಲೋರಿ ಇದ್ದು 11 ಗ್ರಾಂ ಪ್ರೊಟೀನ್, 5 ಗ್ರಾಂ ಕಾರ್ಬೋಹೈಡ್ರೇಟ್ಸ್, 2 ಗ್ರಾಂ ನಾರಿನಂಶವಿರುವುದರಿಂದ ತೂಕ ಇಳಿಕೆಗೆ ಸರಿಯಾದ ವಸ್ತು ಇದಾಗಿದೆ. ಇದನ್ನು ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳುವುದರಿಂದ ಮೈ ಬೊಜ್ಜು ಕರಗುವುದು.
ಇದನ್ನು ಸೇವಿಸುವುದರಿಂದ ತೂಕ ಇಳಿಕೆಯ ಜೊತೆಗೆ ಈ ಪ್ರಯೋಜನಗಳನ್ನೂ ಪಡೆಯಬಹುದು:

ರೋಗ ನಿರೋಧಕ ಶಕ್ತಿ ಹೆಚ್ಚುವುದು
ಇದರಲ್ಲಿ ಫ್ಲೇವೋನಾಯ್ಡ್ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಗಂಟಲು ಬೇನೆ ಇರುವವರು ಕಾಮಕಸ್ತೂರಿ ಎಲೆಗಳ ರಸವನ್ನು ಹಿಂಡಿ ಅದನ್ನು ಬಟ್ಟೆಯಲ್ಲಿ ಸೋಸಿ ಜೇನು ತುಪ್ಪ ಬೆರೆಸಿ ತಿಂದರೆ ನೋವು ಕಡಿಮೆಯಾಗುವುದು. ಅಲ್ಲದೆ ಇದರ ಎಲೆಯ ಕಷಾಯ ಮಾಡಿ ಕುಡಿದರೆ ಶೀತ ಮತ್ತು ಜ್ವರ ಕೂಡ ಕಡಿಮೆಯಾಗುವುದು.

ದೇಹವನ್ನು ತಂಪಾಗಿಡುತ್ತದೆ
ಬೇಸಿಗೆಯ ಶಾಖ ನಿಯಂತ್ರಿಸುವಲ್ಲಿ ಇದು ತುಂಬಾ ಸಹಕಾರಿಯಾಗಿದೆ. ಇದನ್ನು ಮಿಲ್ಕ್‌ಶೇಕ್, ಫಲೋಡಾ ಇವುಗಳಲ್ಲಿ ಹಾಕಿ ಕುಡಿದರೆ ಚೆನ್ನಾಗಿರುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು.

ರಕ್ತದೊತ್ತಡ ಹಾಗೂ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ
ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಇದು ಚಯಾಪಚಯ ಕ್ರಿಯೆ ನಿಧಾನಗೊಳಿಸುವುದರಿಂದ ಇದು ಕಾರ್ಬೋಹೈಡ್ರೇಟ್ಸ್ ಗ್ಲೂಕೋಸ್ ಆಗಿ ಪರಿವರ್ತನೆಯಾಗುವುದನ್ನು ನಿಯಂತ್ರಿಸುತ್ತದೆ. ಇದರಿಂದ ಟೈಪ್ 2 ಮಧುಮೇಹಿಗಳು ಇದನ್ನು ಸೇವಿಸುವುದು ಒಳ್ಳೆಯದು.

ಪಿತ್ತ ಮತ್ತು ಎದೆಯುರಿ ಸಮಸ್ಯೆ ಕಡಿಮೆ ಮಾಡುವುದು
ಹೊಟ್ಟೆ ಉರಿ, ಎದೆ ಉರಿ ಸಮಸ್ಯೆ ಇದ್ದರೆ ಸಬ್ಜಾ ನೆನೆಸಿ ಕುಡಿಯುವುದರಿಂದ ಕಡಿಮೆಯಾಗುವುದು. ಇದನ್ನು ಕುಡಿಯುವುದರಿಮದ ಪಿತ್ತ ಸಮಸ್ಯೆ ಕಾಡುವುದಿಲ್ಲ.

ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ
ಬಾಳೆಹಣ್ಣಿನ ಜ್ಯೂಸ್ ಅಥವಾ ಸ್ಮೂತಿ ಮಾಡಿ ಅದಕ್ಕೆ ಇದನ್ನು ಹಾಕಿ ಕುಡಿಯಿರಿ. ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಮಲಬದ್ಧತೆ ಆಗಾಗ ಕಾಡುತ್ತಿದ್ದರೆ ಇದನ್ನು ರಾತ್ರಿ ನೆನೆಹಾಕಿ ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳುವುದರಿಂದ ಮಲಬದ್ಧತೆ ಸಮಸ್ಯೆ ಇಲ್ಲವಾಗುವುದು.

ಕೂದಲು ಹಾಗೂ ಚರ್ಮದ ಆರೋಗ್ಯಕ್ಕೂ ಒಳ್ಳೆಯದು
ಸಬ್ಜಾ ಬೀಜಗಳನ್ನು ತೆಂಗಿನೆಣ್ಣೆಯಲ್ಲಿ ಪುಡಿ ಮಾಡಿ ಹಾಕಿ ಅದನ್ನು ಕಜ್ಜಿ ಇರುವ ಹಚ್ಚಿದರೆ ಗುಣಮುಖವಾಗುವುದು. ಇನ್ನು ಇದನ್ನು ಸೇವಿಸುವುದರಿಂದ ತ್ವಚೆಯ ಕೊಲೆಜಿನ್ ಉತ್ಪತ್ತಿಗೂ ಸಹಕಾರಿ. ಇದರಲ್ಲಿ ವಿಟಮಿನ್ ಕೆ ಮತ್ತು ಪ್ರೊಟೀನ್ ಇರುವುದರಿಂದ ಕೂದಲನ್ನು ಕೂಡ ಆಂತರಿಕವಾಗಿ ಆರೈಕೆ ಮಾಡುವುದು.



Click it and Unblock the Notifications