Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಅಬ್ಬಾ! ತುನಾ ಮೀನು ತಿಂದ್ರೆ ಹೀಗೆಲ್ಲಾ ಆಗುತ್ತಾ?
ನೀವು ಮೀನು ಪ್ರಿಯರಾಗಿದ್ದರೆ ತುನಾ ಮೀನಿನ ರುಚಿಯನ್ನು ಖಂಡಿತ ನೋಡಿರುತ್ತೀರಿ. ಮುಳ್ಳು ಹೆಚ್ಚಿಲ್ಲದ ಕಾರಣ ಈ ಮೀನನ್ನು ಬಡಿಸಿಕೊಂಡು ತಿನ್ನುವುದು ಕಷ್ಟವೇನಲ್ಲ. ಇದಕ್ಕೆ ಬಡವರ ಅಂಜಲ್ ಎಂದೂ ಕರೆಯುತ್ತಾರೆ. ಈ ಮೀನಿನ ಪ್ರಯೋಜನದ ಬಗ್ಗೆ ತಿಳಿದರೆ ವಾರಕ್ಕೊಮ್ಮೆಯಾದರೂ ನಿಮ್ಮ ಆಹಾರಕ್ರಮದಲ್ಲಿ ಸೇರಿಸಲು ಇಷ್ಟಪಡುತ್ತೀರಿ.

ಹೃದಯ, ಕಿಡ್ನಿ ಸಮಸ್ಯೆ ತಡೆಗಟ್ಟುವುದು, ಕ್ಯಾನ್ಸರ್ ವಿರುದ್ಧ ಹೋರಾಡುವುದು, ತ್ವಚೆ ಕಾಂತಿ ಹೆಚ್ಚಿಸುವುದು ಹೀಗೆ ಇದರ ಪ್ರಯೋಜನ ಒಂದಲ್ಲ-ಎರಡಲ್ಲ ತುಂಬಾನೇ ಇದೆ. ನೀವು ಮೀನು ತಿನ್ನುವವರಾದರೆ ತುನಾ ಮೀನು ತಿಂದರೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ:
ತುನಾ ಮೀನಿನಲ್ಲಿರುವ ಪೋಷಕಾಂಶಗಳು
ತುನಾ ಮೀನಿನಲ್ಲಿ ಪ್ರೊಟೀನ್, ಸೆಲೆನಿಯಮ್, ರಂಜಕ, ಕಬ್ಬಿಣದಂಶ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ, ವಿಟಮಿನ್ ಬಿ 12, ನಿಯಾಸಿನ್, ವಿಟಮಿನ್ ಬಿ6, ರಿಬೋಫ್ಲೇವಿನ್ ಅಂಶವಿದೆ.
ಈಗ ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ:

ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿದ್ದು ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಹಾಗೂ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ. ಒಮೆಗಾ 3 ಕೊಬ್ಬಿನಂಶ ದೇಹ ಸೇರಿದಷ್ಟೂ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಅಧಿಕ ರಕ್ತದೊತ್ತಡ ಸಮಸ್ಯೆ ತಡೆಗಟ್ಟಲು ತುನಾ ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶ ಸಹಾಯ ಮಾಡುತ್ತೆ. ಒಮೆಗಾ 3 ಕೊಬ್ಬಿನಂಶ ಸ್ಟ್ರೋಕ್ ತಡೆಗಟ್ಟುತ್ತೆ.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಒಮೆಗಾ43 ಕೊಬ್ಬಿನಾಮ್ಲ ಅಕ್ಷಿಪಟಲದಲ್ಲಿ ಸಮಸ್ಯೆಗಳು ಉಂಟಾಗುವುದನ್ನು ತಡೆಗಟ್ಟುತ್ತೆ. ಅದರಲ್ಲೂ ಮಧುಮೇಹಿಗಳಿಗೆ ಕಣ್ಣಿನ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು, ಅದನ್ನು ತಡೆಗಟ್ಟುವಲ್ಲಿ ಒಮೆಗಾ 3 ಪರಿಣಾಮಕಾರಿಯಾಗಿದೆ.

ಗಾಯ ಬೇಗನೆ ಒಣಗುವಂತೆ ಮಾಡುತ್ತದೆ
165 ಗ್ರಾಂ ತುನಾ ಮೀನು ತಿಂದರೆ ನಿಮ್ಮ ದಿನದ ಅವಶ್ಯಕತೆಯ ಶೇ. 80ರಷ್ಟು ಪ್ರೊಟೀನ್ ದೊರೆಯುತ್ತದೆ. ಪ್ರೊಟೀನ್ ನಮ್ಮ ಸ್ನಾಯುಗಳನ್ನು ಬಲಪಡಿಸುತ್ತೆ ಅಲ್ಲದೆ ಗಾಯ ಬೇಗನೆ ಒಣಗಲು ಸಹಕಾರಿ.

ತೂಕ ಇಳಿಕೆಗೆ ಸಹಕಾರಿ
ತುನಾ ಮೀನಿನಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನಂಶ ಕಡಿಮೆ ಇರುತ್ತದೆ. ಅಲ್ಲದೆ ಇದನ್ನು ತಿಂದಾಗ ಲೆಪ್ಟಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತೆ, ಇದು ತಿನ್ನುವ ಬಯಕೆಗೆ ಕಡಿವಾಣ ಹಾಕುತ್ತೆ. ಅಲ್ಲದೆ ಮೈ ತೂಕ ಹೆಚ್ಚಾಗುವುದನ್ನು ಕೂಡ ತಡೆಗಟ್ಟುತ್ತೆ.

ರೋಗ ನಿರೊಧಕ ಶಕ್ತಿ ಹೆಚ್ಚಿಸುವುದು
ಇದರಲ್ಲಿ ವಿಟಮಿನ್ ಸಿ, ಸತು, ಮ್ಯಾಂಗನೀಸ್ ಇದ್ದು ಇದು ಚಯಪಚಯ ಕ್ರಿಯೆ ಉತ್ತಮಗೊಳಿಸುತ್ತದೆ, ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುವುದು ಅಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

ಕಿಡ್ನಿ ಸಮಸ್ಯೆ ಇರುವವರಿಗೆ ಅತ್ಯುತ್ತಮವಾದ ಆಹಾರ
ತುನಾದಲ್ಲಿ ಪೊಟಾಷ್ಯಿಯಂ ಮತ್ತು ಸೋಡಿಯಂ ಸಮತೋಲನದಲ್ಲಿದೆ, ಜೊತೆಗೆ ದೇಹದಲ್ಲಿ ದ್ರವಾಂಶ ಸಮತೋಲನದಲ್ಲಿ ಇಡುತ್ತದೆ. ಆದ್ದರಿಂದ ಯಾರಿಗೆ ಕಿಡ್ನಿ ಸಮಸ್ಯೆ ಇದೆಯೋ ಅವರ ಆಹಾರಕ್ರಮದಲ್ಲಿ ತುನಾ ಮೀನನ್ನು ಸೇರಿಸುವುದು ಒಳ್ಳೆಯದು.

ಜೀವ ಕಣಗಳಿಗೆ ಹಾನಿಯಾಗಿದ್ದರೆ ಸರಿಪಡಿಸುತ್ತೆ ಹಾಗೂ ಉರಿಯೂತ ಕಡಿಮೆ ಮಾಡುವುದು
ತುನಾಮೀನು ಸೇವನೆ ದೇಹದ ಎಲ್ಲಾ ಅಂಗಗಳಿಗೆ ಒಳ್ಳೆಯದು. ಇನ್ನು ಸಂಧಿವಾತ ಸಮಸ್ಯೆ ಇರುವವರು ದಿನಾ ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು. ಅಲ್ಲದ ಇದು ದೇಹದಲ್ಲಿರುವ ಎಲ್ಲಾ ಅಂಗಗಳಿಗೂ ಒಳ್ಳೆಯದು. ಇದು ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುತ್ತೆ ಇದರಿಂದ ದೇಹಕ್ಕೆ ಒಳ್ಳೆಯದು. ತುನಾ ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು.

ಖಿನ್ನತೆ ಕಡಿಮೆ ಮಾಡುತ್ತೆ
ಖಿನ್ನತೆ ಎಂಬುವುದು ಮಾನಸಿಕ ಸಮಸ್ಯೆಯಾದರೂ ಇದರಿಂದ ದೈಹಿಕ ಆರೋಗ್ಯ ಕೂಡ ಹಾಳಾಗುತ್ತೆ. ಖಿನ್ನತೆ ಕಡಿಮೆ ಮಾಡುವಲ್ಲಿ ಈ ತುನಾ ಮೀನಿನಲ್ಲಿರುವ ಪೋಷಕಾಂಶಗಳು ಸಹಕಾರಿಯಾಗಿದೆ.
ಈ ತುನಾ ಮೀನಿನಲ್ಲಿ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ, ಆದ್ದರಿಂದ ಇದನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಒಳ್ಳೆಯದು.
ಅಡ್ಡಪರಿಣಾಮವಿದೆಯೇ?
ತುನಾ ಮೀನಿನಲ್ಲಿ ಪಾದರಸದ ಅಂಶವೂ ಇರುವುದರಿಂದ ಚಿಕ್ಕ ಮಕ್ಕಳಿಗೆ ತುಂಬಾ ನೀಡಿದರೆ ವಾಂತಿಯಾಗಬಹುದು, ಮಿತಿಯಲ್ಲಿ ತಿಂದರೆ ಏನೂ ತೊಂದರೆಯಿಲ್ಲ.



Click it and Unblock the Notifications
