Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಖುಷ್ಬೂ ಸ್ಟನ್ನಿಂಗ್ ಲುಕ್: ತೂಕ ಇಳಿಕೆಯ ಸೀಕ್ರೆಟ್ ಏನು?
ಖುಷ್ಬೂ ... ದಕ್ಷಿಣ ಭಾರತದ ಸಿನಿ ಪ್ರಿಯರಲ್ಲಿ ಈ ಹೆಸರು ಕೇಳಿಲ್ಲದವರೇ ಇಲ್ಲ. ಮಧ್ಯವಯಸ್ಸು ದಾಟಿದರೂ ಇಂದಿಗೂ ಜನಪ್ರಿಯ ನಟಿ. ಅಂದಿಗೂ- ಇಂದಿಗೂ ಖುಷ್ಬೂ ಆಕರ್ಷಕವಾಗಿಯೇ ಕಾಣುತ್ತಾರೆ.
ಚಿತ್ರರಂಗಕ್ಕೆ ಬರುವಾಗ ತೆಳ್ಳಗೆ ಇದ್ದ ಖುಷ್ಬೂ ನಂತರ ದಿನಗಳಲ್ಲಿ ಸ್ವಲ್ಪ ಗುಂಡು-ಗುಂಡಗೆ ಕಾಣಲಾರಂಭಿಸಿದರು, ಗುಂಡಗೆ ಇದ್ದರೂ ಆಕರ್ಷಕವಾಗಿಯೇ ಕಾಣುತ್ತಿದ್ದ ಖುಷ್ಬೂ ತನ್ನ ಚಬ್ಬಿ-ಚಬ್ಬಿ ಲುಕ್‌ನಿಂದಲೇ ಗಮನ ಸೆಳೆದಿದ್ದರು.

ಆದರೆ ಕೊರೊನಾ ಲಾಕ್‌ಡೌನ್ ಖುಷ್ಬೂ ಅವರನ್ನು ತುಂಬಾ ಬದಲಾಯಿಸಿದೆ. ಗುಂಡಗೆ ಇದ್ದ ಖುಷ್ಬೂ ಮತ್ತೆ ತೆಳ್ಳಗಾಗಿ ಒಂದು ಇಪ್ಪತ್ತು ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರೆ. ಖುಷ್ಬೂ ತೆಳ್ಳಗಾಗಿರುವುದು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ತೆಳ್ಳಗಾಗಲು ಲಾಕ್‌ಡೌನ್ ಆಯ್ತು ಎಂದ ಖುಷ್ಬೂ
ಎಲ್ಲರೂ ಲಾಕ್‌ಡೌನ್‌ನಲ್ಲಿ ದಪ್ಪಗಾದೆ ಎಂದು ಲಾಕ್‌ಡೌನ್ ದೂಷಿಸಿದರೆ ಖುಷ್ಬೂ ತಾನು ತೆಳ್ಳಗಾಗಲು ಲಾಕ್‌ಡೌನ್ ಕಾರಣವೆಂದಿದ್ದಾರೆ. ತೆಳ್ಳಗಾಗಬೇಕೆಂದು ಬಯಸುವವರಿಗೆ ಮನಸ್ಸಿದ್ದರೆ ಮಾರ್ಗ ಎಂದ ಸ್ಪೂರ್ತಿ ತುಂಬುವಂತಿದೆ ಖುಷ್ಬೂ ಅವರ ಈ ಟ್ರಾನ್ಸ್‌ಫಾರ್ಮೇಷನ್.

ಖುಷ್ಬೂ ಸ್ಟನ್ನಿಂಗ್ ಲುಕ್
ಮೈ ತೂಕವನ್ನು ಕರಗಿಸಿಕೊಂಡಿರುವ ಖುಷ್ಬೂ ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದ್ದು, ಫೋಟೋ ನೋಡಿದರೆ ಖುಷ್ಬೂ ಅವರ ಹಳೆಯ ಫೋಟೋ ಇರಬಹುದು ಎಂಬಷ್ಟು ಭಿನ್ನ ಲುಕ್‌ನಲ್ಲಿ ಕಾಣಿಸುತ್ತಿದ್ದಾರೆ. ಟೀನೇಜ್ ಹೆಣ್ಮಕ್ಕಳ ತಾಯಿ ಖುಷ್ಬೂ ಈಗ ಮಕ್ಕಳ ಜೊತೆ ನಿಂತರೆ ಅವರ ಸಹೋದರಿ ಇರಬಹುದು ಎಂದು ಹೇಳುವಷ್ಟರ ಮಟ್ಟಿಗೆ ಕಂಗೊಳಿಸುತ್ತಿದ್ದಾರೆ.

ಖುಷ್ಬೂಗೆ ತೂಕ ಇಳಿಕೆಗೆ ಸಹಕಾರಿಯಾದ ಲಾಕ್‌ಡೌನ್
ಎಲ್ಲರೂ ಖುಷ್ಬೂ ತೂಕ ಇಳಿಕೆಯ ರಹಸ್ಯವೇನು ಎಂದು ಕೇಳುತ್ತಿದ್ದರೆ ಖುಷ್ಬೂ ಲಾಕ್‌ಡೌನ್ ಕಾರಣ ಎಂದಿದ್ದಾರೆ. 70 ದಿನ ಮನೆಯ ಎಲ್ಲಾ ಕೆಲಸವನ್ನು ನಾನೊಬ್ಬಳೇ ಮಾಡುತ್ತಿದ್ದೆ ಹಾಗಾಗಿ ತೆಳ್ಳಗಾದೆ ಎಂದು ಹೇಳುತ್ತಿದ್ದಾರೆ.
ಚಿತ್ರ: ತೂಕ ಇಳಿಕೆಯ ಮುನ್ನದ ಚಿತ್ರ

ವರ್ಕೌಟ್, ಯೋಗ ಕೂಡ ತೂಕ ಇಳಿಕೆಗೆ ಸಹಾಯ ಮಾಡಿತು
ಮನೆಯಲ್ಲಿ ಗುಡಿಸುವುದು, ಒರೆಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಸ್ವಚ್ಛತೆ, ಗಾರ್ಡಿನಿಂಗ್, ಕ್ಲೀನಿಂಗ್ ಅಷ್ಟೇ ಏಕೆ ಟಾಯ್ಲೆಟ್ ಕ್ಲೀನಿಂಗ್ ಕೂಡ ಮಾಡುತ್ತಿದ್ದೆ. ಅಲ್ಲದೆ ಯೋಗ ಹಾಗೂ ದಂಡಾಸನ ಕೂಡ ತೂಕ ಇಳಿಕೆಗೆ ಸಹಾಯ ಮಾಡಿತು, ಇನ್ನು ಆಹಾರ ಕೂಡ ಮಿತವಾಗಿ ತೆಗೆದುಕೊಳ್ಳುತ್ತೇನೆ. ಇವೆಲ್ಲಾ ತೂಕ ಇಳಿಕೆಗೆ ಸಹಕಾರಿವಾಯಿತು ಎಂದು ಹೇಳಿದ್ದಾರೆ.
Many ask me the reason behind my transformation.blame it on lockdown..no help for 70days..was singlehandedly dng all work at home;sweeping,dusting,mopping,dishes,laundry,gardening n cleaning the toilets too. Ofcz workout(yoga+plank)played a major role.And I am not a big eater😊🙏
— KhushbuSundar ❤️ (@khushsundar) June 9, 2020



Click it and Unblock the Notifications