Latest Updates
-
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ?
ದೇಹದ ತೂಕ ಇಳಿಸಿಕೊಳ್ಳಬೇಕೇ? ಅಡುಗೆಯಲ್ಲಿ ಹರಳೆಣ್ಣೆ ಬಳಸಿ ಸಾಕು!
ರಿಸಿನಸ್ ಕಮ್ಯೂನಿಸ್ ಎಂಬ ಸಸ್ಯ ಪ್ರಬೇಧಕ್ಕೆ ಸೇರಿದ ಸಸ್ಯದ ಕಾಯಿಗಳ ಬೀಜಗಳನ್ನು ಚೆನ್ನಾಗಿ ಒಣಗಿಸಿ ಹಿಂಡಿ ತೆಗೆದ ಎಣ್ಣೆಯೇ ಹರಳೆಣ್ಣೆ. ಸುಮಾರು ಜೇನಿನಷ್ಟು ಸ್ನಿಗ಼್ಧವಾಗಿರುವ ಈ ಎಣ್ಣೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಹಿಂದಿನ ಕಾಲದಲ್ಲಿ ಚಕ್ರಗಳಿಗೆ ಜಾರುಕವಾಗಿ, ದೀಪ ಹಚ್ಚಲು ಮೊದಲಾದ ಕಾರ್ಯಗಳಿಗೆ ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಈ ಎಣ್ಣೆಯ ಬಳಕೆಯನ್ನು ಇಂದು ದಿನಬಳಕೆಯ ಹಲವಾರು ವಸ್ತುಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತಿದೆ. ಸೋಪು, ಔಷಧಿಗಳು ಹಾಗೂ ಸೌಂದರ್ಯ ಪ್ರಸಾದನಗಳಲ್ಲಿ ಹರಳೆಣ್ಣೆ ಹೆಚ್ಚಾಗಿ ಬಳಸಲ್ಪಡುತ್ತಿದೆ.
ತನ್ನ ಅದ್ಭುತ ಗುಣಗಳಿಂದ ಹರಳೆಣ್ಣೆ ತೂಕ ಇಳಿಸಲೂ ನೆರವಾಗುತ್ತದೆ. ಇದರಲ್ಲಿ ವಿಟಮಿನ್ ಇ, ಖನಿಜಳು ಹಾಗೂ ಪ್ರೋಟೀನುಗಳು ಸಮೃದ್ಧವಾಗಿವೆ. ಅಲ್ಲದೇ ಈ ಎಣ್ಣೆಯಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳೂ ಇವೆ. ಈ ಗುಣಗಳಿಂದಾಗಿಯೇ ಹರಳೆಣ್ಣೆ ಔಷಧಿಗಳಲ್ಲಿ ಸ್ಥಾನ ಪಡೆದಿದೆ. ತೂಕ ಇಳಿಸುವ ಸಲುವಾಗಿ ಹಿಂದಿನ ಕಾಲದ ನೆಚ್ಚಿನ ಎಣ್ಣೆಯ ಬಳಕೆ ಇಂದು ಹೆಚ್ಚುತ್ತಿದೆ ಹಾಗೂ ಹರಳೆಣ್ಣೆ ಉಪಯೋಗಿಸಿ ತಯಾರಿಸುವ ಖಾದ್ಯಗಳಲ್ಲೂ ಈಗ ಹೆಚ್ಚಳವಾಗಿದೆ. ಹರಳೆಣ್ಣೆ ಒಂದು ಅದ್ಭುತ ವಿರೇಚಕವಾಗಿದ್ದು ಈ ಗುಣವೇ ತೂಕ ಇಳಿಕೆಗೆ ಬಳಕೆಯಾಗಿದೆ. ದೇಹದ ಕಲ್ಮಶಗಳನ್ನು ಹೊರಹಾಕಲು ಕೊಬ್ಬನ್ನು ಬಳಸಿಕೊಳ್ಳುವುದೇ ತೂಕ ಇಳಿಕೆಯ ಗುಟ್ಟು.

ಹರಳೆಣ್ಣೆಯ ಈ ಗುಣದಿಂದಾಗಿಯೇ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಒಂದು ಪ್ರಾಮಾಣಿತ ಪರಿಗಣನೆಯ ಪ್ರಕಾರ ದಿನಕ್ಕೆ ಎರಡು ಔನ್ಸ್ (ಸುಮಾರು 59.14 ಮಿ.ಲೀ) ನಷ್ಟು ಹರಳೆಣ್ಣೆಯನ್ನು ಗರಿಷ್ಟ ಸೇವಿಸುವ ಮೂಲಕ ತೂಕ ಇಳಿಕೆಯನ್ನು ಸಾಧ್ಯವಾಗಿಸಬಹುದು. ಆದರೆ ಇದಕ್ಕೂ ಹೆಚ್ಚಾದರೆ ಮಾತ್ರ ಆರೋಗ್ಯಕ್ಕೆ ತಿರುಗುಬಾಣವಾಗಿ ಪರಿಣಮಿಸಬಹುದು. ಆದ್ದರಿಂದ ಇದರ ಅರ್ಧದಷ್ಟು ಪ್ರಮಾಣವನ್ನು ಮಾತ್ರವೇ ಸೇವಿಸಿದರೆ ಸಾಕಾಗುತ್ತದೆ. ಬನ್ನಿ, ಹರಳೆಣ್ಣೆಯ ಇತರ ಆರೋಗ್ಯಕರ ಗುಣಗಳ ಬಗ್ಗೆ ಅರಿಯೋಣ:
ಕಲ್ಮಶಗಳ ನಿವಾರಣೆ
ಹರಳೆಣ್ಣೆಯ ಸೇವನೆಯಿಂದ ದೇಹದಲ್ಲಿರುವ ಕಲ್ಮಶಗಳು ನಿವಾರಣೆಯಾಗುತ್ತವೆ. ಈ ಮೂಲಕ ದೇಹ ಸ್ವಚ್ಛಗೊಳ್ಳುತ್ತದೆ ಹಾಗೂ ಈ ಮೂಲಕ ಎದುರಾಬಹುದಾಗಿದ್ದ ತೊಂದರೆಗಳಿಂದ ಮುಕ್ತಿ ದೊರಕುತ್ತದೆ. ಹರಳೆಣ್ಣೆ ಕರುಳುಗಳಿಗೆ ತಲುಪಿದ ಬಳಿಕ ದೇಹದ ಪ್ರಮುಖ ಅಂಗಗಳಿಗೇ ಪ್ರಚೋದನೆ ದೊರಕುತ್ತದೆ ಹಾಗೂ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.
ಕೊಬ್ಬನ್ನು ಕರಗಿಸುತ್ತದೆ
ಹರಳೆಣ್ಣೆಯನ್ನು ಸೇವಿಸುವ ಹೊರತಾಗಿ ಹರಳೆಣ್ಣೆಯನ್ನು ಚರ್ಮದ ಮೇಲೆ ನೇರವಾಗಿ ಹಚ್ಚಿಕೊಳ್ಳಬಹುದು. ಇದರಿಂದಲೂ ತೂಕ ಇಳಿಕೆಗೆ ನೆರವಾಗುತ್ತದೆ. ಚರ್ಮಕ್ಕೆ ಹಚ್ಚಿದಾಗ ಈ ಎಣ್ಣೆ ನಿಧಾನವಾಗಿ ಚರ್ಮದಾಳಕ್ಕೆ ಇಳಿದು ಕೊಬ್ಬನ್ನು ಕರಗಿಸಲು ಪ್ರಚೋದನೆ ನೀಡುತ್ತದೆ.
ಸೂಕ್ಷ್ಮಜೀವಿ ನಿವಾರಕ
ತೂಕ ಇಳಿಸಲು ಹರಳೆಣ್ಣೆಯನ್ನು ಸೇವಿಸುವ ಮೂಲಕ ಇದರ ಸೂಕ್ಷ್ಮಜೀವಿನಿವಾರಕ ಗುಣ ದೇಹವನ್ನು ಆವರಿಸುವ ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸುತ್ತದೆ. ಇದರ ಬ್ಯಾಕ್ತೀರಿಯಾ ನಿವಾರಕ ಗುಣ ದೇಹದ ನೋವನ್ನು ಕಡಿಮೆಮಾಡುತ್ತದೆ ಹಾಗೂ ಚರ್ಮದ ತುರಿಕೆಯನ್ನೂ ನಿವಾರಿಸುತ್ತದೆ.
ಕಟ್ಟಿಕೊಂಡಿದ್ದ ನಾಳಗಳನ್ನು ತೆರೆಯುತ್ತದೆ
ಒಂದು ವೇಳೆ ದುಗ್ಧಗ್ರಂಥಿಗಳ ನಾಳಗಳು ಕಟ್ಟಿಕೊಂಡಿದ್ದು ಚರ್ಮದ ಮೇಲೆ ಚಿಕ್ಕ ಗಂಟುಗಳಂತೆ ಮೂಡಿದ್ದರೆ ಈ ಭಾಗದ ಮೇಲೆ ಹರಳೆಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ ಇದನ್ನು ಕಡಿಮೆ ಮಾಡುತ್ತದೆ. ದುಗ್ಧಗ್ರಂಥಿಗಳ ನಾಳಗಳು ಕಟ್ಟಿಕೊಂಡಿದ್ದರೆ ದೇಹದಲ್ಲಿ ನೀರು ಸಹಾ ಹೆಚ್ಚು ತುಂಬಿಕೊಂಡು ತೂಕ ಏರಿಸಲು ಕಾರಣವಾಗುತ್ತದೆ. ಈ ನಾಳಗಳು ತೆರೆದುಕೊಳ್ಳುವ ಮೂಲಕ ದೇಹದ ತೂಕ ಇಳಿಯಲು ನೆರವಾಗುತ್ತದೆ. ಅಲ್ಲದೇ ಹರಳೆಣ್ಣೆ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಹಾಗೂ ಬೆಚ್ಚಗಿನ ಅನುಭವವನ್ನು ನೀಡುತ್ತದೆ.
ಆರೋಗ್ಯಕರ ತ್ವಚೆ
ಹರಳೆಣ್ಣೆಯ ಬಳಕೆಯಿಂದ ತೂಕ ಇಳಿಸಲು ನೆರವಾಗುವ ಜೊತೆಗೇ ತ್ವಚೆಯ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಇದು ಗಾಢವಾದ ದ್ರವವಾಗಿದ್ದರೂ ಇದರ ಆಣ್ವಿಕ ತೂಕ (molecular weight) ಕಡಿಮೆ ಇರುವ ಕಾರಣ ಇದು ಚರ್ಮದಾಳಕ್ಕೆ ಇಳಿಯುವ ಕ್ಷಮತೆ ಹೊಂದಿದೆ. ಇದು ಚರ್ಮದ ಆಳದಿಂದ ಹಾಗೂ ಕೂದಲ ಬುಡದಿಂದ ಆರೈಕೆ ನೀಡುವ ಮೂಲಕ ಚರ್ಮದ ಸೆಳೆತ ಹೆಚ್ಚಿಸಲು ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುವ ಮೂಲಕ ತ್ವಚೆ ಮೃದು ಹಾಗೂ ಆರೋಗ್ಯಕರವಾಗಿರಲು ನೆರವಾಗುತ್ತದೆ.
ಮೂಳೆ ಸಂಧುಗಳ ಕ್ಷಮತೆ ಹೆಚ್ಚಿಸುತ್ತದೆ
ತೂಕ ಇಳಿಕೆಯ ಹೊರತಾಗಿ ಹರಳೆಣ್ಣೆಯ ಬಳಕೆಯಿಂದ ಸಂಧಿವಾತ ಹಾಗೂ ಮೂಳೆಗಳ ನೋವು ಸಹಾ ಕಡಿಮೆಯಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನೋವನ್ನು ಗುಣಪಡಿಸುವ ಪೋಷಕಾಂಶಗಳಿದ್ದು ವಿಶೇಷವಾಗಿ ಸಂಧಿವಾತಕ್ಕೆ ಉತ್ತಮ ಪರಿಹಾರ ದೊರಕಿಸುತ್ತದೆ. ನಿಮ್ಮ ನಿತ್ಯದ ಆಹಾರದಲ್ಲಿ ಕೊಂಚ ಹರಳೆಣ್ಣೆಯನ್ನು ಬೆರೆಸಿ ಸೇವಿಸುವ ಮೂಲಕ ತೂಕದಲ್ಲಿ ಇಳಿಕೆಯಾಗುವುದು ಮಾತ್ರವಲ್ಲ ಆರೋಗ್ಯ ಸಹಾ ಉತ್ತಮಗೊಳ್ಳುತ್ತದೆ. ಆದರೆ ಹರಳೆಣ್ಣೆಯನ್ನು ನೈಸರ್ಗಿಕ ರೂಪದಲ್ಲಿದ್ದಾಗ ಮಾತ್ರವೇ ಸೇವಿಸಬೇಕು. ತಲೆಗೆ ಹಚ್ಚುವ ಹರಳೆಣ್ಣೆಯಲ್ಲಿ ಸುಗಂಧ ಸೇರಿಸಿರಲಾಗುತ್ತದೆ. ಈ ಎಣ್ಣೆ ಸೇವಿಸಲು ಉತ್ತಮವಲ್ಲ. ಅಲ್ಲದೇ ಹರಳೆಣ್ಣೆಯನ್ನು ಹಾಗೇ ಸೇವಿಸಿದರೆ ಇದರ ವಿರೇಚಕ ಗುಣ ಜೀರ್ಣಕ್ರಿಯೆಯನ್ನು ಕೊಂಚ ಹೆಚ್ಚೇ ಬಾಧಿಸಬಹುದು. ಆದ್ದರಿಂದ ನಿಮ್ಮ ನೆಚ್ಚಿನ ಜ್ಯೂಸ್ ನೊಂದಿಗೆ ಬೆರೆಸಿ ಕುಡಿಯುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














