ಸಂಜೆಯ ವ್ಯಾಯಮದ ಹತ್ತಾರು ಅನುಕೂಲಗಳು

By Manu

ವ್ಯಾಯಮ ಮಾಡಬೇಕೆಂದು ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಆದರೆ ಈ ಆಸೆಯನ್ನು ನಿತ್ಯದ ಚಟುವಟಿಕೆಯನ್ನಾಗಿಸಿರುವವರು ಬೆರಳೆಣಿಯಷ್ಟು ಮಾತ್ರ. ಅಂದ ಹಾಗೇ ಈ ಚಟುವಟಿಕೆ ಮೈಗೂಡಿಸಿಕೊಂಡವರಿಗೆ ಬೇಕಾದಷ್ಟು ಸಮಯ ಇರುತ್ತದೆ ಎಂದು ಅಂದುಕೊಂಡಿದ್ದರೆ ಅದು ತಪ್ಪಾಗುತ್ತದೆ. ಕಟ್ಟುಮಸ್ತಾದ ದೇಹಕ್ಕೆ ಇಲ್ಲಿದೆ ಪರಿಣಾಮಕಾರಿ ವ್ಯಾಯಮ

ವಾಸ್ತವವಾಗಿ ದಿನವಿಡೀ ತಮ್ಮ ಕೆಲಸಕಾರ್ಯಗಳಲ್ಲಿ ವ್ಯಸ್ತರಿರುವವರೇ ನಿಯಮಿತವಾಗಿ ವ್ಯಾಯಮಕ್ಕಾಗಿ ಸಮಯ ತೆಗೆಯುತ್ತಾರೆ. ಆದರೆ ಹೆಚ್ಚಿನವರಿಗೆ ಬೆಳಗ್ಗಿನ ಹೊತ್ತು ವ್ಯಾಯಾಮಕ್ಕೆ ನೀಡಲು ಸಾಧ್ಯವಿಲ್ಲ. ಅಂತಹವರು ಸಂಜೆಯ ಹೊತ್ತಿನ ಕೊಂಚ ಸಮಯವನ್ನು ಮುಡಿಪಾಗಿಡುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು. ವಿಶೇಷವಾಗಿ ಉದ್ಯೋಗಸ್ಥರಿಗೆ ಸಂಜೆಯ ವ್ಯಾಯಮವೇ ಅನುಕೂಲಕರ. ಬನ್ನಿ, ಇದನ್ನು ಹೇಗೆ ಸಾಧಿಸಬಹುದು ಎಂಬ ನಿಮ್ಮ ದ್ವಂದ್ವವನ್ನು ಕೆಳಗಿನ ಸ್ಲೈಡ್ ಶೋ ನೋಡುವ ಮೂಲಕ ಪರಿಹರಿಸಿಕೊಳ್ಳೋಣ....

ಸಂಜೆಯ ತಿಂಡಿಯನ್ನು ತಡವಾಗಿಸಿ

ಸಂಜೆಯ ತಿಂಡಿಯನ್ನು ತಡವಾಗಿಸಿ

ಸಾಮಾನ್ಯವಾಗಿ ಸಂಜೆಯ ಟೀ ಜೊತೆಗೆ ಕೊಂಚ ತಿಂಡಿ ತಿನ್ನುವುದು ನಮಗೆಲ್ಲಾ ಅಭ್ಯಾಸವಾಗಿಬಿಟ್ಟಿದೆ. ಆದರೆ ತಿಂಡಿಯ ಬಳಿಕ ವ್ಯಾಯಮ ಮಾಡುವುದು ಅತ್ಯಂತ ಅನಾರೋಗ್ಯಕರ ಹಾಗೂ ಜೀರ್ಣಕ್ರಿಯೆಗೂ ತೊಂದರೆ. ಆದ್ದರಿಂದ ಮೊತ್ತ ಮೊದಲು ನಿಮ್ಮ ಕಛೇರಿಯ ಸಮಯದ ಬಳಿಕ ಸೂಕ್ತ ಸಮಯವೊಂದನ್ನು ಆರಿಸಿಕೊಂಡು ಅದಕ್ಕೂ ಮೊದಲು ಕನಿಷ್ಠ ಅರ್ಧ ಗಂಟೆಗೂ ಮೊದಲು ಏನೂ ತಿನ್ನದಿರುವಂತೆ ನೋಡಿಕೊಳ್ಳಿ. ಬಳಿಕ ನಿಗದಿತ ಸಮಯಕ್ಕೆ ಸರಿಯಾಗಿ ಅಥವಾ ಪರಿಸ್ಥಿತಿಗೆ ಅನುಗುಣವಾಗಿ ವ್ಯಾಯಮ ಮಾಡಿ ಕೊಂಚ ಕಾಲ ವಿಶ್ರಾಂತಿ ಪಡೆದ ಬಳಿಕ ಸಂಜೆಯ ಟೀ ಮತ್ತು ತಿಂಡಿಯನ್ನು ಸೇವಿಸಬಹುದು. ಇನ್ನೊಂದರ್ಥದಲ್ಲಿ ಇದು ಆರೋಗ್ಯಕರ ಸಹಾ.

ಆಫೀಸ್ ಕೆಲಸದ ಬಳಿಕ ನೇರವಾಗಿ ವ್ಯಾಯಾಮಸ್ಥಳಕ್ಕೆ ತೆರಳಿ

ಆಫೀಸ್ ಕೆಲಸದ ಬಳಿಕ ನೇರವಾಗಿ ವ್ಯಾಯಾಮಸ್ಥಳಕ್ಕೆ ತೆರಳಿ

ಆಫೀಸ್ ಕೆಲಸ ಮುಗಿದ ಬಳಿಕ ಸಾಮಾನ್ಯವಾಗಿ ಎಲ್ಲರೂ ಮನೆಗೆ ತೆರಳಿದ ಬಳಿಕ ವ್ಯಾಯಾಮಶಾಲೆಗೆ ಅಥವಾ ವ್ಯಾಯಾಮಸ್ಥಳಕ್ಕೆ ಹೋಗುತ್ತೇನೆ ಎಂಬ ಸಂಕಲ್ಪ ಮಾಡುತ್ತಾರೆ. ಆದರೆ ಮನೆ ತಲುಪಿದ ಬಳಿಕ ಬೇರಾವುದೋ ಕೆಲಸ ಅಥವಾ ಮನರಂಜನೆಯ ಆಕರ್ಷಣೆ ಎದುರಾಗಿ ವ್ಯಾಯಾಮದ ಇರಾದೆಯನ್ನು ಸಡಿಲಿಸುತ್ತದೆ. ಆದರೆ ಮನಸ್ಸು ಗಟ್ಟಿ ಮಾಡಿ ಆಫೀಸ್ ಕಾರ್ಯಗಳು ಅಥವಾ ನಿಮ್ಮ ನಿತ್ಯದ ಉದ್ಯೋಗನಿಮಿತ್ತ ಕೆಲಸಗಳು ಮುಗಿದೊಡನೇ ನೇರವಾಗಿ ವ್ಯಾಯಾಮಸ್ಥಳಕ್ಕೆ ತೆರಳಿ ಅಂದಿನ ವ್ಯಾಯಾಮ ಮುಗಿಸಿಯೇ ಮನೆಗೆ ತಲುಪುವುದು ಶ್ರೇಯಸ್ಕರ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ದಿನವಿಡೀ ಸಾಕಷ್ಟು ನೀರು ಕುಡಿಯದಿದ್ದರೆ ದೈನಂದಿನ ಚಟುವಟಿಕೆಗಳ ಜೊತೆಗೇ ದೈಹಿಕ ಕಾರ್ಯಗಳೂ ಸೊರಗುತ್ತವೆ. ಅಲ್ಲದೇ ವ್ಯಾಯಾಮ ಮಾಡುವವರಿಗೆ ನೀರಿನ ಪ್ರಮಾಣ ಉಳಿದವರಿಗಿಂತ ಕೊಂಚ ಹೆಚ್ಚೇ ಅಗತ್ಯವಿದೆ. ಆದರೆ ಈ ನೀರನ್ನು ಒಮ್ಮೆಲೇ ಕುಡಿಯುವ ಮೂಲಕ ದೇಹ ಬಳಸಿಕೊಳ್ಳಲು ಸಾಧ್ಯವಿಲ್ಲ. ಆ ಪ್ರಕಾರ ದಿನವೂ ಪ್ರತಿ ಘಂಟೆಗೊಂದು ಲೋಟ ನೀರು ಕುಡಿಯುತ್ತಿರುವುದೇ ಉತ್ತಮ ಮಾರ್ಗ.

ದಿನವೂ ಒಂದೇ ತರಹದ ವ್ಯಾಯಮ ಮಾಡಬೇಡಿ

ದಿನವೂ ಒಂದೇ ತರಹದ ವ್ಯಾಯಮ ಮಾಡಬೇಡಿ

ಯಾವುದೇ ಕೆಲಸವನ್ನು ಸತತವಾಗಿ ಪುನರಾವರ್ತಿಸಿದರೆ ಕೆಲದಿನಗಳಲ್ಲಿಯೇ ಅತೀವ ಬೇಸರ ಬಂದುಬಿಡುತ್ತದೆ. ಆದ್ದರಿಂದ ಪ್ರತಿದಿನ ಬೇರೆ ಬೇರೆ ಸ್ನಾಯುಗಳಿಗೆ ಬೇರೆ ಬೇರೆ ರೀತಿಯ ವ್ಯಾಯಾಮಗಳನ್ನು ಅನುಸರಿಸಿ. ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮ. ನಿಮ್ಮ ವ್ಯಾಯಾಮಶಾಲಾ ತರಬೇತುದಾರರು ಸೂಕ್ತ ಸಲಹೆ ನೀಡಬಲ್ಲರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದಿನವೂ ಒಂದೇ ತರಹದ ವ್ಯಾಯಮ ಮಾಡಬೇಡಿ

ದಿನವೂ ಒಂದೇ ತರಹದ ವ್ಯಾಯಮ ಮಾಡಬೇಡಿ

ಪರಿಣಿತರ ಸಲಹೆಯಂತೆ ಪ್ರತಿದಿನ ಎರಡು ಸ್ನಾಯುಗಳ ವ್ಯಾಯಾಮ, ಮರುದಿನ ಇದಕ್ಕೆ ವಿರುದ್ದವಾದ ಬೇರೆ ಸ್ನಾಯುಗಳ ವ್ಯಾಯಾಮ ಹೀಗೇ ಪ್ರತಿದಿನ ಬದಲಿಸುತ್ತಾ ಹೋಗುವುದು ಉತ್ತಮವಾದ ಕ್ರಮವಾಗಿದೆ. ಉದಾಹರಣೆಗೆ ಇಂದು ಕೈ ಮತ್ತು ಭುಜದ ಸ್ನಾಯುಗಳ ವ್ಯಾಯಾಮ ಆಚರಿಸಿದರೆ ನಾಳೆ ಕಾಲಿನ ಮತ್ತು ಹೊಟ್ಟೆಯ, ನಾಡಿದ್ದು ಭುಜದ ಮತ್ತು ಬೆನ್ನಿನ ಇತ್ಯಾದಿ. ಬದಲಾವಣೆಗಾಗಿ ಯೋಗ, ಸೈಕ್ಲಿಂಗ್, ಸ್ಪಿನ್ನಿಂಗ್ ಅಥವಾ ತಂಡದೊಂದಿಗಿನ ಅಭ್ಯಾಸವನ್ನೂ ಅನುಸರಿಸಬಹುದು.

ವ್ಯಾಯಮಕ್ಕೂ ಮೊದಲು ಸಲಕರಣೆಗಳನ್ನು ಅರಿತುಕೊಳ್ಳಿ

ವ್ಯಾಯಮಕ್ಕೂ ಮೊದಲು ಸಲಕರಣೆಗಳನ್ನು ಅರಿತುಕೊಳ್ಳಿ

ಒಂದು ವೇಳೆ ವ್ಯಾಯಾಮ ಮಾಡಲು ಸಲಕರಣೆ ಅಥವಾ ಆಧುನಿಕ ಉಪಕರಣಗಳನ್ನು ಉಪಯೋಗಿಸುವುದಾದರೆ ವ್ಯಾಯಾಮಕ್ಕೂ ಮುನ್ನ ಇದರ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳುವುದು ಅಗತ್ಯ. ಟ್ರೆಡ್ ಮಿಲ್, ಎಲಿಪ್ಟಿಕಲ್ ಟ್ರೇನರ್ ಮೊದಲಾದವು ಕೊಂಚ ಆಯ ತಪ್ಪಿದರೂ ಬಿದ್ದು ಗಾಯಗೊಳ್ಳುವ ಸಂಭವವಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವ್ಯಾಯಮಕ್ಕೂ ಮೊದಲು ಸಲಕರಣೆಗಳನ್ನು ಅರಿತುಕೊಳ್ಳಿ

ವ್ಯಾಯಮಕ್ಕೂ ಮೊದಲು ಸಲಕರಣೆಗಳನ್ನು ಅರಿತುಕೊಳ್ಳಿ

ಆದ್ದರಿಂದ ಈ ಉಪಕರಣಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ಇದರ ನಿಯಂತ್ರಣಗಳನ್ನು ಹೇಗೆ ನಿರ್ವಹಿಸಬೇಕು ಎಂದು ಇದರ ಬಗ್ಗೆ ಅರಿತಿರುವವರಿಂದ ಪ್ರಾತ್ಯಕ್ಷಿಕೆ ಪಡೆದೇ ಮುಂದುವರೆಯಬೇಕು.

English summary

Tips to get the best evening workout ever

If you don’t have time to exercise in the morning, an evening workout might be the only thing that could fit your busy schedule. However, before hitting the gym, you need to make sure that your energy level is at the peak and you are well-rested. These tips will help you stick and get the most out of your evening workout.
Story first published: Tuesday, March 1, 2016, 15:15 [IST]
X
Desktop Bottom Promotion