ಉಪಹಾರಕ್ಕೆ ಅತ್ಯಂತ ಕೆಟ್ಟ ಆಹಾರಗಳು

By Hemanth P

ಉಪಹಾರದ ಪ್ರಾಮುಖ್ಯತೆ ಚಿರಪರಿಚಿತ ಸತ್ಯ. ಇದು ಹಲವಾರು ಗಂಟೆಗಳ ವಿಶ್ರಾಂತಿ ಬಳಿಕ ತೆಗೆದುಕೊಳ್ಳುವುದರಿಂದ ದಿನದ ಅತ್ಯಂತ ಮಹತ್ವದ ಆಹಾರವಾಗಿದೆ. ಮಧ್ಯಾಹ್ನ ಅಥವಾ ರಾತ್ರಿಯ ಊಟ ಸಾಮಾನ್ಯವಾಗಿ ಹಿಂದಿನ ಊಟಕ್ಕಿಂತ 3-4 ಗಂಟೆಗಳ ಬಳಿಕ ಸೇವಿಸುತ್ತೀರಿ.

ಆದರೆ ಬೆಳಗ್ಗಿನ ಉಪಹಾರ ಸೇವಿಸುವುದು ಹಿಂದಿನ ದಿನದ ರಾತ್ರಿಯ ಊಟದ 7-8 ಗಂಟೆಯ ವಿಶ್ರಾಂತಿ ಬಳಿಕ. ಇದರಿಂದ ಇದು ದೇಹಕ್ಕೆ ತುಂಬಾ ಮಹತ್ವದ್ದು, ಯಾಕೆಂದರೆ ದೀರ್ಘ ಸಮಯ ದೇಹವು ಆಹಾರವಿಲ್ಲದೆ ಅದು ಪೌಷ್ಠಿಕಾಂಶ ಮತ್ತು ಪ್ರೋಟಿನ್ ಬಯಸುತ್ತಿರುತ್ತದೆ.

ಯಾವುದೇ ಕಾರಣಕ್ಕೂ ಉಪಹಾರ ತ್ಯಜಿಸಿದರೆ ಅದು ನಿಮ್ಮ ದೇಹದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಉಪಹಾರ ಸೇವಿಸದೆ ಇದ್ದರೆ ತೂಕ ಕಳಕೊಳ್ಳಬಹುದು ಎನ್ನುವ ತಪ್ಪು ತಿಳುವಳಿಕೆಯಿದೆ. ಪಾಲಿಶ್ ಮಾಡಿರುವ ಅನ್ನದಿಂದ ಮಾಡಿರುವಂತಹ ಉಪಹಾರ ಕಡೆಗಣಿಸಬೇಕು. ಇದನ್ನು ತಿಂದರೆ ನೀವು ಮಧ್ಯಾಹ್ನದ ಊಟದ ತನಕ ತಿನ್ನುತ್ತಲೇ ಇರುತ್ತೀರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೈಸರ್ಗಿಕ ಹಣ್ಣುಗಳಿಂದ ತಲೆನೋವನ್ನು ಕಡಿಮೆಗೊಳಿಸಿ

ಸಿರಪ್ ನೊಂದಿಗೆ ಪಾನ್ ಕೇಕ್

ಸಿರಪ್ ನೊಂದಿಗೆ ಪಾನ್ ಕೇಕ್

ಇದನ್ನು ಯೋಚಿಸುವಾಗಲೇ ಅದರ ರುಚಿ ಮತ್ತು ಸುವಾಸನೆ ನಿಮ್ಮ ಬಾಯಿಯಲ್ಲಿ ನೀರುರಿಸುವಂತೆ ಮಾಡಬಹುದು. ಪಾನ್ ಕೇಕ್ ನ್ನು ನಿಯಮಿತವಾಗಿ ಉಪಹಾರಕ್ಕೆ ಬಳಸುವಂತಹ ಆರೋಗ್ಯಕಾರಿ ಆಹಾರವಲ್ಲ. ಇದನ್ನು ಧಾನ್ಯದ ಹಿಟ್ಟು ಮತ್ತು ಸಕ್ಕರೆ ಹೆಚ್ಚಿರುವ ಸಿರಪ್ ನ್ನು ಒಳ್ಳೆಯ ರುಚಿ ಬರಲು ಬಳಸುತ್ತಾರೆ. ಅತಿಯಾದ ಕೊಲೆಸ್ಟ್ರಾಲ್ ಮತ್ತು ನಾರಿನಾಂಶವಿಲ್ಲದ ಉಪಹಾರ ಸೇವನೆ ಒಳ್ಳೆಯದಲ್ಲ.

ಸಿಹಿಯಾದ ಮತ್ತು ಬಣ್ಣದ ಧಾನ್ಯಗಳು

ಸಿಹಿಯಾದ ಮತ್ತು ಬಣ್ಣದ ಧಾನ್ಯಗಳು

ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಲು ಕಂಪನಿಗಳು ಯಾವ ಮಟ್ಟಕ್ಕೂ ಇಳಿಯುತ್ತದೆ. ಕೆಲವೊಂದು ಧಾನ್ಯಗಳಿಂದ ಮಾಡಿರುವಂತಹ ಉಪಹಾರದ ತಿನಿಸುಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಇದಕ್ಕೆ ಬಣ್ಣ, ಅನಾರೋಗ್ಯಕರ ವಿಧಾನ ಮತ್ತು ಕೆಲವೊಂದು ಬೇಡದ ವಸ್ತುಗಳನ್ನು ಸೇರಿಸಲಾಗುತ್ತದೆ. ಬಣ್ಣಬಣ್ಣದಿಂದ ಇದು ನಮ್ಮನ್ನು ಸೆಳೆಯುತ್ತದೆ. ಆದರೆ ಇದು ಉಪಹಾರಕ್ಕೆ ಅತ್ಯಂತ ಕೆಟ್ಟ ಆಯ್ಕೆ.

ಸಂಸ್ಕರಿತ ಮಾಂಸ

ಸಂಸ್ಕರಿತ ಮಾಂಸ

ಉಪಹಾರಕ್ಕೆ ಮಾಂಸ ಒಂದು ಆರೋಗ್ಯಕರ ಆಯ್ಕೆ. ಆದಾಗ್ಯೂ ಸಂಸ್ಕರಿತ ಮಾಂಸಗಳಾದ ಬೇಕನ್, ಸಾಸೇಜ್ ಅಥವಾ ಹ್ಯಾಮ್ ಒಳ್ಳೆಯ ಆಯ್ಕೆಯಲ್ಲ. ಸಂಸ್ಕರಿತ ಮಾಂಸದಲ್ಲಿ ಅಧಿಕ ಮಟ್ಟದ ನೈಟ್ರೇಟ್ ಒಳಗೊಂಡಿದ್ದು, ಇದು ಕರುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದು. ಈ ಹವ್ಯಾಸವನ್ನು ನೀವು ತ್ಯಜಿಸಬೇಕು ಅಥವಾ ಬದಲಾಯಿಸಬೇಕು. ಆರೋಗ್ಯಕರ ಬದಲಾವಣಿಗೆ ಕರಿದ ಮೀನು ತಿನ್ನಿ.

ಕರಿದ ಆಯ್ಕೆಗಳು

ಕರಿದ ಆಯ್ಕೆಗಳು

ಉಪಹಾರ ದಿನದ ಅತ್ಯಂತ ಮಹತ್ವದ ಆಹಾರ. ಇದರಿಂದ ತುಂಬಾ ಕರಿದ ಆಹಾರಗಳಾದ ಅತಿಯಾದ ಕರಿದ ಮೀನು, ಬಟಾಟೆ ಫಿಂಗರ್, ಪೂರಿ, ಬಟುರ್ ಅಥವಾ ಸಮೋಸ ಸೇವಿಸಬೇಡಿ. ಈ ಆಹಾರಗಳು ನಿಮ್ಮ ದೇಹಕ್ಕೆ ದಿನವಿಡಿ ಬೇಕಾಗುವ ಕೊಲೆಸ್ಟ್ರಾಲ್ ನೀಡಿ ದೇಹದಲ್ಲಿ ಅನಗತ್ಯ ಕೊಬ್ಬು ಉಂಟುಮಾಡುತ್ತದೆ.

ಸಿಹಿ

ಸಿಹಿ

ಭಾರತದ ಕೆಲವೊಂದು ಭಾಗಗಳಾದ ಬಂಗಾಳ ಮತ್ತು ಉತ್ತರ ಭಾರತದಲ್ಲಿ ಉಪಹಾರಕ್ಕೆ ಸಿಹಿ ತಿಂಡಿ ಸೇವಿಸುವುದು ಜನಪ್ರಿಯ. ಇದು ನಿಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ತುಂಬಿ ಅಪಧಮನಿಗಳನ್ನು ತಡೆಯುತ್ತದೆ. ಪ್ಯಾಸ್ಟ್ರಿ ಮತ್ತು ಡೊನುಟ್ಸ್ ಮತ್ತು ಬಗೆಲ್ಸ್ ಕೂಡ ಅತ್ಯಂತ ಕೆಟ್ಟ ಆಯ್ಕೆ. ದಿನದ ಪ್ರಾಮುಖ್ಯ ಆಹಾರ ಸೇವನೆಗೆ ಮೊದಲು ನೀವು ಯೋಚಿಸಬೇಕು.

ವಡಾ ಪಾವ್

ವಡಾ ಪಾವ್

ಹೊಟ್ಟೆಗೆ ದೀರ್ಘ ವಿಶ್ರಾಂತಿ ನೀಡಿದ ಬಳಿಕ ಜಂಕ್ ಫುಡ್ ಸೇವನೆ ಉಪಹಾರಕ್ಕೆ ಅತ್ಯಂತ ಕೆಟ್ಟ ಆಯ್ಕೆ. ವಡಾಪಾವ್, ಬರ್ಗರ್, ಫಿಜ್ಜಾ, ಸಮೋಸ, ಕಚೋರಿ ಉಪಹಾರಕ್ಕೆ ಅತ್ಯಂತ ಕೆಟ್ಟ ಆಯ್ಕೆ. ಇದರಲ್ಲಿ ಶೂನ್ಯ ಪೌಷ್ಠಿಕಾಂಶ ಮತ್ತು ಉನ್ನತ ಮಟ್ಟದ ಟ್ರಾನ್ಸ್ ಫ್ಯಾಟ್ ಇದೆ. ಇದು ಆಹಾರ ಮತ್ತು ಪೌಷ್ಠಿಕಾಂಶದಲ್ಲಿ ನಿಮ್ಮ ದೇಹಕ್ಕೆ ಯಾವುದೇ ಮೌಲ್ಯ ನೀಡುವುದಿಲ್ಲ.

Story first published: Tuesday, January 21, 2014, 17:48 [IST]
X
Desktop Bottom Promotion