For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ದಾಳಿಂಬೆ ಹಣ್ಣು ತಿನ್ನಿ!

By Hemanth P
|

ತಾಯ್ತನವೆನ್ನುವುದು ಮಹಿಳೆಯ ಜೀವನದ ಅತ್ಯಂತ ಸಂಭ್ರಮದ ಕ್ಷಣಗಳಲ್ಲಿ ಒಂದು. ಗರ್ಭಧಾರಣೆಯ ಸಮಯವು ವಿಪ್ಲವತೆ ಉಂಟುಮಾಡುತ್ತದೆ. ಕೆಲವೊಂದು ಸಲ ನೀವು ತುಂಬಾ ಸಂಭ್ರಮ ಮತ್ತು ಉಲ್ಲಾಸದಿಂದ ಇದ್ದರೆ ಮರುಕ್ಷಣವೇ ನೀವು ತುಂಬಾ ಆಲಸಿ ಮತ್ತು ನಿರಾಶೆಗೊಳಗಾದವರಂತೆ ವರ್ತಿಸಬಹುದು.

ಗರ್ಭಧಾರಣೆಯ ಮೊದಲ ಅವಧಿಯಲ್ಲಿ ಕಡೆಗಣಿಸಬೇಕಾದ ಕೆಲವೊಂದು ಆಹಾರಗಳಿವೆ ಮತ್ತು ನಿಮ್ಮ ಆಹಾರಕ್ರಮವು ಗರ್ಭದಲ್ಲಿರುವ ಮಗುವಿಗೆ ಎಲ್ಲಾ ರೀತಿಯ ಪೌಷ್ಠಿಕಾಂಶಗಳನ್ನು ಒದಗಿಸುತ್ತಿದೆಯಾ ಎಂದು ಮನವರಿಕೆ ಮಾಡಿಕೊಳ್ಳಬೇಕು.

ಗರ್ಭಧಾರಣೆ ವೇಳೆ ನೀವು ಸರಿಯಾದ ಮತ್ತು ತೂಕ ಹೆಚ್ಚಿಸುವ ಆಹಾರ ಸೇವಿಸಬೇಕು. ಗರ್ಭದಲ್ಲಿರುವ ನಿಮ್ಮ ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಗೆ ಕೆಲವೊಂದು ರೀತಿಯ ಆಹಾರಗಳಿಗೆ ನೀವು ಗುಡ್ ಬೈ ಹೇಳಬೇಕಾಗುತ್ತದೆ. ಗರ್ಭಧಾರಣೆಯ ಆರಂಭದಲ್ಲಿ ಕಡೆಗಣಿಸಬೇಕಾದ ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ದಾಳಿಂಬೆ ಹಣ್ಣಿನ ರಸದಿಂದ ಬಾಳು ಸರಸಮಯ

Pomegranate fruit to lose weight

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜ್ವರದ ಚಿಕಿತ್ಸೆಗೆ ಹತ್ತು ಆಹಾರಗಳು

ಪಪ್ಪಾಯಿ ಮತ್ತು ಅನಾನಸು
ಗರ್ಭಧಾರಣೆಯ ಸಮಯದಲ್ಲಿ ನೀವು ತರಕಾರಿ ಮತ್ತು ಹಣ್ಣುಗಳ ಸೇವನೆ ಹೆಚ್ಚಿಸಬೇಕು. ಆದರೆ ಕೆಲವೊಂದು ಹಣ್ಣುಗಳನ್ನು ನೀವು ಗರ್ಭಧಾರಣೆ ವೇಳೆ ಕಡೆಗಣಿಸಬೇಕಾಗುತ್ತದೆ. ಅವುಗಳೆಂದರೆ ಪಪ್ಪಾಯಿ, ಅನಾನಸು ಮತ್ತು ದ್ರಾಕ್ಷಿ.

ಮೀನು
ಸೀಫುಡ್ ಮತ್ತು ಹೆಚ್ಚಿನ ಮರ್ಕುರಿ ಹೊಂದಿರುವಂತ ಸ್ವಾರ್ಡ್ ಫಿಶ್, ಶಾರ್ಕ್ ಮತ್ತು ಕಿಂಗ್ ಮಾರ್ಕೆಲ್ ನಂತಹ ಕೆಲವೊಂದು ರೀತಿಯ ಮೀನುಗಳನ್ನು ಗರ್ಭಧಾರಣೆಯ ಮೊದಲ ಅವಧಿಯಲ್ಲಿ ತಿನ್ನಬಾರದು. ಸುಶಿ ಆಹಾರದಲ್ಲಿ ಕಂಡುಬರುಂತಹ ಹಸಿ ಅಥವಾ ಅರೆಬೇಯಿಸಿದ ಮೀನನ್ನು ನೀವು ತಿನ್ನಬಾರದು ಎನ್ನುವ ಬಗ್ಗೆ ಗಮನವಿರಲಿ.

ಮಾಂಸ
ಗರ್ಭಧಾರಣೆಯ ಮೊದಲ ಅವಧಿಯಲ್ಲಿ ಹಸಿ ಮತ್ತು ಅರೆಬೇಯಿಸಿದ ಮಾಂಸವನ್ನು ಕಡೆಗಣಿಸಬೇಕು. ಮಾಂಸ ಸರಿಯಾಗಿ ಬೇಯಿಸಿರಬೇಕು ಮತ್ತು ಅದು ಬಿಸಿಯಾಗಿರುವಾಗಲೇ ತಿನ್ನಿ. ಗರ್ಭಿಣಿ ಮಹಿಳೆಯರಿಗೆ ಬೇಗಆಹಾರ ವಿಷವಾಗುವ ಕಾರಣ ಸಂಸ್ಕರಿತ ಮಾಂಸವನ್ನು ತಿನ್ನಲೇಬಾರದು.

ಹಸಿಹಾಲು
ಹಾಲಿನಲ್ಲಿ ಪ್ರೋಟಿನ್ ಮತ್ತು ಮಿನರಲ್ ಗಳು ಸಮೃದ್ಧವಾಗಿದೆ. ಆದರೆ ಗರ್ಭಿಣಿ ಮಹಿಳೆಯರು ಪಾಶ್ಚೀಕರಿಸಿದ ಹಾಲನ್ನು ಮಾತ್ರ ಕುಡಿಯಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪಾಶ್ಚೀಕರಿಸದಿರುವ ಅಥವಾ ಹಸಿ ಹಾಲನ್ನು ಗರ್ಭಧಾರಣೆಯ ಮೊದಲ ಅವಧಿಯಲ್ಲಿ ಕಡಗಣಿಸಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಸ್ತಮಾ ತಡೆಗೆ ನಿರ್ಲಕ್ಷಿಸಲೇಬೇಕಾದ ಅಂಶಗಳು

ಮೊಟ್ಟೆ
ಹೆಚ್ಚಿನವರು ಮೊಟ್ಟೆಯನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಹಸಿ ಅಥವಾ ಅರೆಬೆಂದ ಮೊಟ್ಟೆಯು ಗರ್ಭಿಣಿ ಮಹಿಳೆಯರು ಕಡೆಗಣಿಸಬೇಕಾದ ಆಹಾರಗಳ ಪಟ್ಟಿಗೆ ಸೇರಲ್ಪಡುತ್ತದೆ. ಹಸಿ ಮೊಟ್ಟೆ ಹಾಕಿರುವಂತಹ ಪದಾರ್ಥಗಳಾದ ಕುಕ್ಕಿ ಡೌಗ್, ಕೇಕ್, ಮನೆಯಲ್ಲೇ ತಯಾರಿಸಿದ ಸಾಸ್ ಇತ್ಯಾದಿ.

ಚೀಸ್
ಎಲ್ಲಾ ರೀತಿಯ ಚೀಸ್ ಹಾನಿಕಾರಕವಲ್ಲ. ಮೌಲ್ಡ್ ಮಾಡಿದ ಚೀಸ್ ಅಥವಾ ಮೃದು ಚೀಸ್ ನ್ನು ಪಾಶ್ಚೀಕರಿಸದ ಹಾಲಿನಿಂದ ಮಾಡಲಾಗಿರುವ ಕಾರಣ ಇದನ್ನು ಗರ್ಭಧಾರಣೆಯ ಮೊದಲ ಅವಧಿಯಲ್ಲಿ ಕಡೆಗಣಿಸಬೇಕು. ನಿಮಗೆ ಮೃದು ಚೀಸ್ ಬೇಕೆಂದರೆ ಅದನ್ನು ಪಾಶ್ಚೀಕರಿಸಿದ ಹಾಲಿನಿಂದ ಮಾಡಲಾಗಿದೆಯಾ ಎಂದು ತಿಳಿದುಕೊಳ್ಳಿ.

ತಾಜಾ ಹಣ್ಣಿನ ಜ್ಯೂಸ್
ಹೋಟೆಲ್ ಮತ್ತು ಜ್ಯೂಸ್ ಅಂಗಡಿಗಳಲ್ಲಿ ನಾವು ಕುಡಿಯುವಂತಹ ತಾಜಾ ಹಣ್ಣಿನ ಜ್ಯೂಸ್ ಆರೋಗ್ಯಕರವಾಗಿರುವುದಿಲ್ಲ. ಇದು ಗರ್ಭಿಣಿ ಮಹಿಳೆಗೆ ಹಾನಿಕಾರಕ ಮತ್ತು ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಕಡೆಗಣಿಸಬೇಕಾದ ಆಹಾರಗಳ ಪಟ್ಟಿಗೆ ಸೇರಲ್ಪಡುತ್ತದೆ. ಮನೆಯಲ್ಲೇ ಹಣ್ಣಿನ ಜ್ಯೂಸ್ ಮಾಡಿ, ಕುಡಿಯಿರಿ.

ಲಿವರ್ ಮತ್ತು ಲಿವರ್ ನ ಪದಾರ್ಥಗಳು
ಗರ್ಭಧಾರಣೆಯ ಮೊದಲ ಅವಧಿಯಲ್ಲಿ ಕಡೆಗಣಿಸಬೇಕಾದ ಆಹಾರವೆಂದರೆ ಲಿವರ್ ಮತ್ತು ಲಿವರ್ ನಿಂದ ಮಾಡಿದಂತಹ ಪದಾರ್ಥಗಳು. ಇದರಲ್ಲಿ ವಿಟಮಿನ್ ಎ ಅಧಿಕ ಮಟ್ಟದಲ್ಲಿರುತ್ತದೆ ಮತ್ತು ಇದು ಮೊದಲ ಮೂರು ತಿಂಗಳಲ್ಲಿ ಮಗುವಿಗೆ ಹಾನಿಯನ್ನುಂಟು ಮಾಡಬಹುದು.

ಕೆಫಿನ್
ಕೆಫಿನ್ ಗರ್ಭಧಾರಣೆಯ ಮೊದಲ ಹಂತದಲ್ಲಿ ಕಡೆಗಣಿಸಬೇಕಾದ ಆಹಾರಗಳ ಪಟ್ಟಿಗೆ ಬರುವುದಿಲ್ಲ. ಆದರೆ ಗರ್ಭಿಣಿ ಮಹಿಳೆಯರು ಕೆಫಿನ್ ಸೇವನೆಯನ್ನು ಮಿತಿಯಲ್ಲಿಡಬೇಕು. ಕೆಫಿನ್ ಅಂಶವು ಚಹಾ, ಕಾಫಿ, ತಂಪು ಪಾನೀಯ, ಚಾಕಲೇಟ್ ಇತ್ಯಾದಿಗಳಲ್ಲಿ ಕಂಡುಬರುತ್ತದೆ.

ಆಲ್ಕೋಹಾಲ್
ಆಲ್ಕೋಹಾಲ್ ಮಗುವಿನ ಬೆಳವಣಿಗೆಗೆ ಅತೀ ಹಾನಿಕಾರಕ ಮತ್ತು ಗರ್ಭಧಾರಣೆ ವೇಳೆ ಕಡೆಗಣಿಸಬೇಕು. ಆಲ್ಕೋಹಾಲ್ ಯುಕ್ತ ಇತರ ಆಹಾರಗಳನ್ನು ಕೂಡ ಕಡೆಗಣಿಸುವುದು ಒಳ್ಳೆಯದು.

English summary

Pomegranate fruit to lose weight

Pomegranate Fruits have a host of hidden benefits which are not so well known in comparison to those of other fruits. One of the most significant benefits of the pomegranate fruit is in its ability to help in weight loss.
X
Desktop Bottom Promotion