Latest Updates
-
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು!
ಶಿಲಾಯುಗದ ಆಹಾರ :- ಪೌಷ್ಟಿಕಾಂಶದ ಕೊಡುಗೆಯೇ?
ಸಾಮಾನ್ಯವಾಗಿ ಶಿಲಾಯುಗದ ಆಹಾರ ಅಥವಾ ಗುಹಾಂತರ ಆಹಾರ ಎಂದು ಕರೆಯಲ್ಪಡುವ ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರಗಳೆಂದರೆ ಕಾಡು ಸಸ್ಯಗಳು ಮತ್ತು ಕಾಡು ಪ್ರಾಣಿಗಳು.ಪ್ರತಿಪಾದಕರು ಹೇಳುವ ಪ್ರಕಾರ ಆಧುನಿಕ ಆಹಾರದ ಜೊತೆಗೆ ಪ್ರಾಚೀನ ಆಹಾರವನ್ನು ಬಳಸುವುದರಿಂದ ಮದುಮೇಹ(ಟೈಪ್ ೨),ಹೃದಯ ರೋಗ,ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಎನ್ನುತ್ತಾರೆ.
ವಿಮರ್ಶಕರು ಹೇಳುವ ಪ್ರಕಾರ ಈ ಆಹಾರಗಳು ದೇಹಕ್ಕೆ ಒಳ್ಳೆಯದಾದರೂ ಕೂಡ ಕೆಲವೊಂದು ಆಹಾರಗಳಲ್ಲಿ ಪೌಷ್ಟಿಕಾಂಶ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎನ್ನುತ್ತಾರೆ. ಇಂದಿನ ಅನಾರೋಗ್ಯಕರ ಆಹಾರಗಳ ಜೊತೆಗೆ ಬದುಕಲು ಸಹಾಯಕವಾಗುವ ಪ್ರಾಚೀನ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ಆಹಾರಗಳು ನಿಮ್ಮ ರಾತ್ರಿಯೂಟಕ್ಕೆ ಆರೋಗ್ಯದಾಯಕ!

ತೆಳುವಾದ ಕೆಂಪು ಮಾಂಸ (ರೆಡ್ ಮೀಟ್):
ಪ್ರಾಚೀನ ಆಹಾರ ಪದ್ಧತಿ ಅನುಯಾಯಿಗಳು ಕೆಂಪು ಮಾಂಸಗಳಾದ ಗೋಮಾಂಸ ಅಥವಾ ಕಾಡು ಮಾಂಸವನ್ನು ಶಿಫಾರಸು ಮಾಡುತ್ತಾರೆ.ದೇಶೀಯ ಮಾಂಸಗಳಿಗೆ ಹೋಲಿಸಿದಲ್ಲಿ ಈ ಮಾಂಸದಲ್ಲಿ ಅಧಿಕ ಒಮೇಗಾ-3 ಅಂಶವಿರುತ್ತದೆ.ಇದಲ್ಲದೆ ತೆಳು ಕೆಂಪು ಮಾಂಸದಲ್ಲಿ ಪ್ರೋಟಿನ್,ಮತ್ತು ಶಕ್ತಿ ಅಧಿಕವಿದ್ದು ಹೃದಯರೋಗ ಮತ್ತು ಅಧಿಕ ಕೊಲೆಸ್ಟ್ರಾಲ್ ತಡೆಯುವ ಗುಣವಿರುತ್ತದೆ.

ಪೊಟ್ಯಾಷಿಯಂ,ನಾರಿನಂಶ,ವಿಟಮಿನ್ ಅಧಿಕವಿರುವ ಹಣ್ಣುಗಳು:
ಬೇಟೆಗಾರರ ಇನ್ನೊಂದು ಮುಖ್ಯ ಆಹಾರವೆಂದರೆ ನಾರಿನಂಶ,ಪೊಟ್ಯಾಷಿಯಂ,ವಿಟಮಿನ್ ಅಧಿಕವಿರುವ ಹಣ್ಣುಗಳು ಮತ್ತು ಬೆರ್ರಿಗಳು.ಹೆಚ್ಚಿನ ಗ್ಲಿಸಮಿಕ್ ನಿಂದ ರಕ್ತದಲ್ಲಿ ಸಕ್ಕರೆ ಮಟ್ಟದ ಏರಿಕೆಯನ್ನು ತಡೆಯುತ್ತದೆ.ಇದಲ್ಲದೆ ಹಾನಿಕಾರಕ ಕಾಯಿಲೆಗಳನ್ನು ತಡೆಯುವ ಆಂಟಿ ಆಕ್ಸಿಡೆಂಟ್ ಗಳು ಇದರಲ್ಲಿರುತ್ತವೆ.ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿ ಸೇರುವ ಅನೇಕ ಬ್ಯಾಕ್ಟೀರಿಯ ಮತ್ತು ವೈರಲ್ ಗಳನ್ನು ತಡೆದು ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ.

ಡ್ರೈ ಫ್ರೂಟ್ ಹೆಚ್ಚು ಬಳಸಿ:
ಮೆದುಳಿನ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಪ್ರಾಚೀನ ಆಹಾರವಾದ ವಾಲ್ನಟ್,ಗೋಡಂಬಿ ಇನ್ನಿತರ ಡ್ರೈ ಫ್ರೂಟ್ ಗಳು ಹೆಚ್ಚು ಸಹಾಯಕವಾಗುತ್ತವೆ.ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆ ತಿಳಿಸಿರುವ ಪ್ರಕಾರ ಪ್ರತಿದಿನ 1.5 oz ನಷ್ಟು ನಟ್ಸ್ ತಿನ್ನುವುದರಿಂದ ಹೃದಯ ಸಂಬಂಧಿ ರೋಗಗಳಿಂದ ದೂರವಿರಬಹುದು.ಇದರಲ್ಲಿ ನಾರಿನಂಶ,ಆಂಟಿ ಆಕ್ಸಿಡೆಂಟ್,ಫೈಟೋನ್ಯೂಟ್ರಿಯೆಂಟ್ಸ್ ಅಧಿಕವಾಗಿರುತ್ತದೆ.

ಮೀನು ಮತ್ತು ಸಮುದ್ರಾಹಾರ:
ಪ್ರತಿದಿನ ಮೀನು ಅಥವಾ ಸಮುದ್ರಾಹಾರ ಸೇವಿಸುವುದರಿಂದ ಇದರಲ್ಲಿ ಒಮೇಗಾ 3 ಆರೋಗ್ಯವನ್ನು ಉತ್ತಮ ಪಡಿಸುತ್ತದೆ.ದಿನಕ್ಕೆ 0.5 ಇಂದ 0.8 ಗ್ರಾಂ ನಷ್ಟು ಮೀನು ಅಥವಾ ಸಮುದ್ರಾಹಾರ ತೆಗೆದುಕೊಳ್ಳುವುದು ಸೂಕ್ತ.ಇದನ್ನು ಪ್ರತಿದಿನ ಸೇವಿಸುವುದರಿಂದ ಸ್ಟ್ರೋಕ್,ಹೃದಯಾಘಾತ,ರಕ್ತ ಹೆಪ್ಪುಗಟ್ಟುವಿಕೆ ಇವುಗಳನ್ನು ತಡೆಯಬಹುದು.ಈ ಸಮುದ್ರಾಹಾರವನ್ನು ಪ್ರಾಚೀನ,ಶಿಲಾಯುಗ ಆಹಾರವಾಗಿ ಬಳಸಲಾಗುತ್ತಿತ್ತು.

ಬೇರು ಹೊಂದಿರುವ ತರಕಾರಿಗಳು:
ಕ್ಯಾರೆಟ್,ಆಲೂಗಡ್ಡೆ,ಮೂಲಂಗಿ ಇವುಗಳೆಲ್ಲ ಬೇರು ಹೊಂದಿರುವ ತರಕಾರಿಗಳಾಗಿದ್ದು ಇದರಲ್ಲಿ ಕರ್ಬೋಹೈಡ್ರೆಟ್,ನಾರಿನಂಶ ಮತ್ತು ವಿಟಮಿನ್ ಗಳು ಅಧಿಕವಾಗಿರುತ್ತವೆ.ಇವುಗಳು ಅನಾದಿಕಾಲದಿಂದಲೂ ಬೇಟೆಗಾರರ ಪ್ರಮುಖ ಆಹಾರವಾಗಿತ್ತು.

ಹಸಿರು ತರಕಾರಿಗಳು:
ಪೌಷ್ಟಿಕಾಂಶವನ್ನು ಅಧಿಕವಾಗಿ ಹೊಂದಿರುವ ಹಸಿರು ಎಲೆಗಳು,ತರಕಾರಿಗಳು ಹೆಚ್ಚಿನ ಖನಿಜಾಂಶ,ವಿಟಮಿನ್ ಗಳನ್ನು ಹೊಂದಿದ್ದು ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.ಯು ಎಸ್ ಡಿ ಎ ಹೇಳುವ ಪ್ರಕಾರ ವಾರದಲ್ಲಿ ಕನಿಷ್ಠ ಮೂರು ಕಪ್ ಹಸಿರು ತರಕಾರಿಗಳನ್ನು ಸೇವಿಸಬೇಕು.

ಮೊಟ್ಟೆ :
ಪ್ರೋಟಿನ್ ಹೇರಳವಾಗಿ ದೊರೆಯುವ ಮೊಟ್ಟೆ ಮೆದುಳಿನ ಬೆಳವಣಿಗೆಗೆ ಸಹಾಯಕವಾಗಿವೆ.ಇದಲ್ಲದೆ ಅನೇಕ ಹಾನಿಕಾರಕ ಕಾಯಿಲೆಗಳನ್ನು ತಡೆಯುವ ವಿಟಮಿನ್,ಕೊಲೆಸ್ಟ್ರಾಲ್ ಇವುಗಳೆಲ್ಲ ಇದರಿಂದ ದೊರೆಯುತ್ತವೆ.



Click it and Unblock the Notifications