Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ನೈಸರ್ಗಿಕ ಶಕ್ತಿಯ ಹಸಿರು ಪಾನೀಯಗಳು
ನೈಸರ್ಗಿಕವಾಗಿ ದೊರೆಯುವ ಆರೋಗ್ಯಕಾರಿ ಪಾನಿಯಗಳು ಅತ್ಯಂತ ಪೌಷ್ಠಿಕಾಂಶದಿಂದ ಕೂಡಿದ್ದು, ನಿಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ಇದನ್ನು ನೀವು ಕ್ರಮಾನುಗತವಾಗಿ ಸೇವಿಸಿದರೆ, ದೇಹದಲ್ಲಿ ಉಂಟಾಗುವ ಎಲ್ಲಾ ರೀತಿಯ ತೊಂದರೆಗಳಿಂದ ಕೂಡ ನೀವು ದೂರ ಇರಬಹುದು. ಇಲ್ಲಿ ಕೆಲವೊಂದು ನೈಸರ್ಗಿಕವಾಗಿ ದೊರೆಯುವ ನೈಸರ್ಗಿಕ ಆರೋಗ್ಯಕಾರಿ ಪಾನಿಯಗಳನ್ನು ಈ ಕೆಳಗೆ ನೀಡಲಾಗಿದೆ.
ದೇಹಕ್ಕೆ ಪೌಷ್ಠಿಕಾಂಶ ಮತ್ತು ಶಕ್ತಿ ಪಡೆಯಲು ಹಸಿರು ಆಹಾರ ಯಾವಾಗಲೂ ಆರೋಗ್ಯಕಾರಿ ಆಯ್ಕೆಯೆಂದು ಪರಿಗಣಿಸಲಾಗಿದೆ. ಪಾಲಕ, ಕೋಸುಗಡ್ಡೆ ಸೊಪ್ಪು, ಕೊತ್ತಂಬರಿ ಮತ್ತು ಪುದೀನಾ ಒಳ್ಳೆಯ ಪ್ರೋಟಿನ್, ಕಾಬ್ರೋಹೈಡ್ರೇಟ್ಸ್, ಮಿನರಲ್ಸ್ ಮತ್ತು ಪೌಷ್ಠಿಕಾಂಶಗಳನ್ನು ಹೊಂದಿರುವ ಹಸಿರು ತರಕಾರಿಗಳು. ಹಸಿರು ತರಕಾರಿಗಳಲ್ಲಿ ಅತ್ಯುತ್ತಮ ಆರೋಗ್ಯ ಲಾಭಗಳಿವೆ. ಪ್ರತೀ ದಿನದ ಆಹಾರ ಕ್ರಮದಲ್ಲಿ ಯಾವುದಾದರೂ ಒಂದು ಹಸಿರು ತರಕಾರಿ ಸೇರಿಸುವಂತೆ ವೈದ್ಯರು ಕೂಡ ಸಲಹೆ ಮಾಡುತ್ತಾರೆ.
ಹಸಿರು ತರಕಾರಿಗಳನ್ನು ಬೇಯಿಸಿ ಅಥವಾ ಜ್ಯೂಸ್ ಮೂಲಕ ಸೇವಿಸಬೇಕು. ನಿಮ್ಮ ದೇಹಕ್ಕೆ ಶಕ್ತಿ ಒದಗಿಸುವಂತಹ ಕೆಲವೊಂದು ಹಸಿರು ಜ್ಯೂಸ್ ಗಳಿವೆ. ನಿಯಮಿತವಾಗಿ ಹಸಿರು ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಕಡಿಮೆಯಿರುವ ಪೌಷ್ಠಿಕಾಂಶಗಳನ್ನು ಇದು ತುಂಬುತ್ತದೆ ಮತ್ತು ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ಇದು ಹಸಿರುವ ಜ್ಯೂಸ್‌ನ ಕೆಲವೊಂದು ಲಾಭಗಳು. ಸುಲಭವಾಗಿ ಮಾಡಬಹುದಾದ ಮತ್ತು ದೇಹದ ಆರೋಗ್ಯಕ್ಕೆ ಉತ್ತಮವಾಗಿರುವಂತಹ ಕೆಲವೊಂದು ಹಸಿರು ಜ್ಯೂಸ್ ಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಲೋವೆರಾ ಜ್ಯೂಸ್ ನ ಆರೋಗ್ಯ ಲಾಭಗಳು

1. ಪಾಲಕ ಮತ್ತು ತೆಂಗಿನಕಾಯಿ ಜ್ಯೂಸ್
ಈ ಜ್ಯೂಸ್ ಮಾಡಲು ನಿಮಗೆ ಒಂದು ಕಪ್ ತೆಂಗಿನಕಾಯಿ ಹಾಲು, ಹದ ಮಾಡಿದ ಪಾಲಕ, ಒಂದು ಕಪ್ ಕೊತ್ತಂಬರಿ ಸೊಪ್ಪು, ಸೆಲರಿ ತುಂಡುಗಳು, ಒಂದು ಬಾಳೆಹಣ್ಣು ಮತ್ತು ದಾಲ್ಚಿನಿ ಚಕ್ಕೆ. ಎಲ್ಲವನ್ನು ಮಿಕ್ಸ್ ಮಾಡಿ ಬ್ಲೆಂಡರ್ ಬಳಸಿ ಜ್ಯೂಸ್ ಮಾಡಿ. ಹಸಿರು ಜ್ಯೂಸ್ ಬಾಳೆಹಣ್ಣು ಮತ್ತು ದಾಲ್ಚಿನಿಯಿಂದಾಗಿ ಸಿಹಿಯಾಗುತ್ತದೆ. ಜ್ಯೂಸ್ ನಿಮ್ಮ ದೇಹಕ್ಕೆ ಶಕ್ತಿ, ಪ್ರೋಟಿನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ನ್ನು ಒದಗಿಸುತ್ತದೆ. ಇದು ದೇಹ ಮತ್ತು ಜೀರ್ಣಾಂಗ ವ್ಯವಸ್ಥೆ ಶುದ್ದೀಕರಿಸುತ್ತದೆ ಮತ್ತು ದೇಹದ ಚಟುವಟಿಕೆಯನ್ನು ಉತ್ತೇಜಿಸುತ್ತದೆ.

2. ಅಲೋವೆರಾ ಜ್ಯೂಸ್
ಅಲೋವೆರಾ ಜ್ಯೂಸ್ ಶಕ್ತಿ ಒದಗಿಸುವುದು ಮಾತ್ರವಲ್ಲದೆ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಅಲೋವೆರಾ ಜ್ಯೂಸ್ ನಲ್ಲಿ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುವ ಗುಣವಿದೆ. ಇದು ದೇಹವನ್ನು ಶುದ್ದೀಕರಿಸಿ, ದೇಹದ ಚಟುವಟಿಕೆ ವೃದ್ಧಿಸುತ್ತದೆ. ಇದು ದೇಹದ ಪುನರ್ಜಲೀಕರಣಕ್ಕೆ ಒಳ್ಳೆಯದು. ಅಲೋವೆರಾದ ಎಲೆಯ ಒಳಗಿರುವ ಲೋಳೆಯನ್ನು ಬಳಸಿ ಜ್ಯೂಸ್ ಮಾಡಲಾಗುತ್ತದೆ. ಅಲೋವೆರಾದ ಜ್ಯೂಸ್ ನ ಆರೋಗ್ಯಕಾರಿ ಲಾಭಗಳ ಬಗ್ಗೆ ತಿಳಿಯಲು ಅಲೋವೆರಾ ಜ್ಯೂಸ್ ಗೆ ಸಂಬಂಧಿಸಿದ ಲೇಖನಗಳನ್ನು ಓದಿ.

3. ಸೌತೆಕಾಯಿ ಮತ್ತು ಪಾಲಕ
ಈ ಜ್ಯೂಸ್ ಮಾಡಲು ಹದಮಾಡಿದ ಪಾಲಕ ಎಲೆಗಳು ಮತ್ತು ಕತ್ತರಿಸಿದ ಸೌತೆಕಾಯಿಯ ಮಿಶ್ರಣ ಮಾಡಿ. ಸ್ವಲ್ಪ ಉಪ್ಪು, ಮೆಣಸು ಮತ್ತು ಸ್ವಲ್ಪ ರುಚಿಗೆ ದಾಲ್ಚಿನಿ ಹಾಕಿ. ಇದೆಲ್ಲವನ್ನು ಮಿಶ್ರಣ ಮಾಡಿ ಬ್ಲೆಂಡರ್ ಗೆ ಹಾಕಿದಾಗ ಸ್ವಲ್ಪ ನೀರು ಹಾಕಿ. ಸೌತೆಕಾಯಿ ದೇಹವನ್ನು ಶುದ್ದೀಕರಿಸುತ್ತದೆ ಮತ್ತು ಇದರಲ್ಲಿ ಉನ್ನತ ಮಟ್ಟದ ಪ್ರೋಟಿನ್ ಇದೆ. ಪಾಲಕದಲ್ಲಿ ಹಲವಾರು ಆ್ಯಂಟಿ ಆಕ್ಸಿಡೆಂಟ್, ಪ್ರೋಟಿನ್ ಮತ್ತು ಇತರ ಪೌಷ್ಠಿಕಾಂಶಗಳಿವೆ. ಇದರಿಂದ ಈ ಜ್ಯೂಸ್ ಆರೋಗ್ಯಕಾರಿ ಮತ್ತು ಶಕ್ತಿಯ ಮೂಲ.

4. ಪುದೀನಾ ಮತ್ತು ನಿಂಬೆ
ಪುದೀನಾ ಚೇತೋಹಾರಿ ಮತ್ತು ಪುನಶ್ಚೇತನಗೊಳಿಸುವ ಗುಣ ಹೊಂದಿದೆ. ಪುದೀನಾದೊಂದಿಗೆ ನಿಂಬೆ ಜ್ಯೂಸ್ ಕುಡಿದರೆ ಅದು ನಮ್ಮನ್ನು ಚೇತೋಹಾರಿ ಮಾಡಿ, ಶಕ್ತಿ ಒದಗಿಸುತ್ತದೆ ಮತ್ತು ದೇಹವನ್ನು ಮತ್ತೆ ಪುನರ್ಜಲೀಕರಿಸುತ್ತದೆ. ಈ ಜ್ಯೂಸ್ ನಲ್ಲಿರುವ ಪುನರ್ಜಲೀಕರಿಸುವ ಗುಣವು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಈ ಜ್ಯೂಸ್ ಮಾಡಲು ಪುದೀನಾವನ್ನು ಅರೆದು ಪೇಸ್ಟ್ ಮಾಡಿ. ಅದಕ್ಕೆ ನಿಂಬೆ ರಸ, ಉಪ್ಪು, ಸಕ್ಕರೆ ಮತ್ತು ದಾಲ್ಚಿನಿ ಹಾಕಿ. ಇದು ತುಂಬಾ ಆರೋಗ್ಯಕಾರಿ ಮತ್ತು ತಯಾರಿಸಲು ಸುಲಭ.

5. ಹಸಿರು ಗಾರ್ಡನ್ ಜ್ಯೂಸ್
ಈ ಜ್ಯೂಸ್ ಮಾಡಲು ನಾಲ್ಕು ಕೋಸುಗಡ್ಡೆ ಸೊಪ್ಪಿನ ಎಲೆಗಳು, ಒಂದು ಕಪ್ ಕತ್ತರಿಸಿದ ಸೌತೆಕಾಯಿ, ಒಂದು ಕಪ್ ಪಾಲಕ, ಸೆಲರಿ ಮತ್ತು ಪಾರ್ಸ್ಲಿ. ಎಲ್ಲವನ್ನು ಮಿಶ್ರಣ ಮಾಡಿ ಮತ್ತು ಸ್ವಲ್ಪ ನೀರು, ಉಪ್ಪು ಮತ್ತು ಮೆಣಸು ಹಾಕಿ ಮಿಕ್ಸಿಗೆ ಹಾಕಿ. ಜ್ಯೂಸ್ ಎಲ್ಲಾ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಇದನ್ನು ಒಂದು ಪರಿಪೂರ್ಣ ಶಕ್ತಿ ಪೇಯವಾಗಿ ಮಾಡಬಹುದು. ಇದನ್ನು ಬೆಳಗ್ಗೆ ಶಕ್ತಿ ಪೇಯವಾಗಿ ಕುಡಿಯಬಹುದು. ನೈಸರ್ಗಿಕವಾಗಿ ಮಾಡಬಹುದಾದಂತಹ ಅತ್ಯುತ್ತಮ ಹಸಿರು ಜ್ಯೂಸ್ ಗಳಲ್ಲಿ ಇದು ಒಂದಾಗಿದೆ.



Click it and Unblock the Notifications
