Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಜೇನುತುಪ್ಪ ಸೇವಿಸಿ ತೂಕ ಕಡಿಮೆಗೊಳಿಸಿ!
ನೀವು ಔಷಧಗಳನ್ನು ತೆಗೆದುಕೊಳ್ಳುವಾಗ ಅದೆಷ್ಟೋ ಆಯುರ್ವೇದ ಔಷಧಗಳನ್ನು ಜೇನುತುಪ್ಪದ ಜೊತೆ ತೆಗೆದುಕೊಂಡಿರಬಹುದು. ಇದು ಕೇವಲ ಔಷಧದ ಒಗರನ್ನು ತೆಗೆಯಲು ಅಲ್ಲ. ಜೇನುತುಪ್ಪವೂ ನಮ್ಮ ಆರೋಗ್ಯಕ್ಕೆ ಸಹಕಾರಿ. ನಿಯಮಿತವಾಗಿ ಜೇನುತುಪ್ಪವನ್ನು ಸೇವಿಸಿದರೆ ನಮ್ಮ ದೇಹ ಫಿಟ್ ಆಗಿರುತ್ತದೆ ಎಂದು ನಮ್ಮ ವೈದ್ಯರೇ ಹೇಳುತ್ತಾರೆ.
ಜೇನುತುಪ್ಪವನ್ನು ಹಾಗೆಯೇ ತೆಗೆದುಕೊಳ್ಳಬಹುದು ಹಾಗೂ ಬೇರೆ ಯಾವುದಾದರೂ ತಿನಿಸಿನ ಅಥವಾ ಪಾನೀಯದ ಜೊತೆಗೂ ಸೇವಿಸಬಹುದು. ಇದರ ಜೊತೆಗೆ ಕೇವಲ ನೀರಿನ ಜೊತೆಗೆ ಸೇವಿಸುವುದು ಒಳ್ಳೆಯ ಉಪಾಯವೇ.
ನೀರಿನೊಂದಿಗೆ ಜೇನುತುಪ್ಪವನ್ನು ಸೇರಿಸುವಾಗ ಕೆಲವು ಹನಿ ಲಿಂಬೆ ಹಣ್ಣನ್ನು ಸೇರಿಸಲು ಮರೆಯದಿರಿ. ಹೀಗೆ ಮಿಶ್ರಣ ಮಾಡಿ ಕುಡಿದಾಗ ನಿಮ್ಮ ತೂಕವನ್ನು ಕಡಿಮೆ ಮಾಡಲೂ ಇದು ನೆರವಾಗುತ್ತದೆ. ಹೇಗೆಲ್ಲಾ ಇದು ನಮ್ಮ ತೂಕ ಕಡಿಮೆ ಮಾಡಲು ನೆರವಾಗುತ್ತದೆ ಎಂದು ತಿಳಿಯುವ ಆಸಕ್ತಿಯೇ ಇಲ್ಲಿ ನೋಡಿ.

1.ಜೀರ್ಣಕಾರಕ: ನೀರಿನೊಂದಿಗೆ ಜೇನುತುಪ್ಪ ಮತ್ತು ಲಿಂಬೆಯನ್ನು ಹಾಕಿ ಬೆಳಗ್ಗೆ ಸೇವಿಸಿದರೆ ನಮ್ಮ ಜೀರ್ಣಕ್ರಿಯೆ ಬಹಳ ಸರಿಯಾಗಿರುತ್ತದೆ. ಇದು ಬೆಳಗ್ಗೆ ನಮ್ಮ ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಇದು ನಮ್ಮ ಜಠರದಲ್ಲಿ ದ್ರವವನ್ನು ಸ್ರವಿಸುತ್ತದೆ ಇದರಿಂದಾಗಿ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಲು ನೆರವಾಗುತ್ತದೆ. ಇದರಲ್ಲಿರುವ ಲಿಂಬೆ ಆಹಾರ ಸರಿಯಾಗಿ ಸರಬರಾಜಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಹೊಟ್ಟೆಯ ಭಾಗದಲ್ಲಿ ಮತ್ತು ದೇಹದ ಒಟ್ಟಾರೆ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಸಲು ಸೂಪ್ ಡಯಟ್
2.ಸ್ವಚ್ಛಕಾರಿ: ನಮ್ಮ ದೇಹದಲ್ಲಿರುವ ಬೇಡವಾದ ಪದಾರ್ಥಗಳನ್ನು ಹೊರಹಾಕುವಲ್ಲಿಯೂ ಇದು ಬಹಳ ನೆರವು ನೀಡುತ್ತದೆ. ಈ ಅಂಶಗಳು ನಮ್ಮ ದೇಹದಲ್ಲೇ ಉಳಿದರೆ ಉಬ್ಬುವುದು ಮತ್ತು ತೇಗುವ ಸಮಸ್ಯೆಗಳು ಉಂಟಾಗುತ್ತವೆ. ನೀರಿನಲ್ಲಿ ಬೆರೆಸಿದ ಜೇನು ಮತ್ತು ಲಿಂಬೆ ನಮ್ಮಲ್ಲಿ ಸರಿಯಾದ ಪ್ರಮಾಣದ ಮೂತ್ರವಿಸರ್ಜನೆ ಆಗುವಂತೆ ಮಾಡಿ ಈ ಬೇಡವಾದ ಅಂಶಗಳನ್ನು ದೇಹದಿಂದ ಹೊರಹಾಕುತ್ತದೆ. ಮೂತ್ರದ ಜೊತೆಗೆ ಹೊರಹೋಗುವ ಈ ಬೇಡವಾದ ಅಂಶಗಳಿಂದಾಗಿ ದೇಹ ಸ್ವಚ್ಛವಾಗುತ್ತದೆ. ಇದರಿಂದಾಗಿ ದೇಹದ ತೂಕ ಹೆಚ್ಚಾಗುವುದಿಲ್ಲ.
3.ಶಕ್ತಿ ವರ್ಧಕ: ಜೇನು ಮತ್ತು ನೀರು ಶಕ್ತಿ ವರ್ಧಕವೂ ಹೌದು. ಹೆಚ್ಚಿನ ಶಕ್ತಿಯಿಂದಾಗಿ ನಮ್ಮ ಚಯಾಪಚಯ ಕ್ರಿಯೆಗಳು ಸರಿಯಾಗಿ ನಡೆಯುತ್ತವೆ. ಜೇನು ನಮ್ಮ ದೇಹದ ಎಲ್ಲಾ ಅಂಗಗಳು ತಮ್ಮ ಕ್ರಿಯೆಗಳನ್ನು ಸರಿಯಾಗಿ ಮಾಡಲು ನೆರವಾಗುತ್ತದೆ. ಕ್ಯಾಲರಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವುದಿಲ್ಲ.
4.ಹಸಿವು ಕಡಿಮೆ ಮಾಡುತ್ತದೆ: ನಮ್ಮ ದೇಹದ ಹಸಿವು ಕಡಿಮೆ ಮಾಡುವ ಕಾರಣದಿಂದಲೂ ಇದು ಆರೋಗ್ಯ ವರ್ಧಕ. ಬೆಳಗ್ಗೆ ಹೆಚ್ಚಿನ ಪ್ರಮಾಣದ ನೀರು ಸೇವಿಸಿದಷ್ಟೂ ನಮ್ಮ ಹಸಿವು ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ಹೆಚ್ಚಿನ ನಾರಿನಂಶ ಹಸಿವು ಮತ್ತು ಶರ್ಕರದ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಹೀಗಾಗಿ ನಾವು ಸೇವಿಸುವ ಆಹಾರವೂ ಮಿತಿಯಲ್ಲಿರುತ್ತದೆ ಹಾಗೂ ದೇಹದ ತೂಕ ವೃದ್ಧಿಯಾಗುವುದಿಲ್ಲ.
5.ಪೋಷಕಾಂಶಗಳು ಮತ್ತು ವಿಟಮಿನ್ ಗಳು: ಜೇನು ತುಪ್ಪ ಸೇರಿಸಿದ ನೀರು ನಮ್ಮ ದೇಹದ ರೋಗ ನಿವಾರಕಶಕ್ತಿಯನ್ನೂ ಹೆಚ್ಚಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು, ವಿಟಮಿನ್ ಗಳು, ಪೋಷಕಾಂಶಗಳು ದೇಹದ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರಲ್ಲಿರುವ ಉರಿಯೂತ ವಿರೋಧಿ ಅಂಶದಿಂದಾಗಿ ಹೊಟ್ಟೆ ಉಬ್ಬುವುದನ್ನು ಕಡಿಮೆ ಮಾಡುತ್ತದೆ. ಈ ಎಲ್ಲಾ ಪರಿಣಾಮಗಳಿಂದಾಗಿ ನಮ್ಮ ದೇಹ ತೂಕ ನಿಯಂತ್ರಣದಲ್ಲಿಡಲು ನೀರು, ಜೇನುತುಪ್ಪ ಹಾಗೂ ಲಿಂಬೆ ಹಣ್ಣಿನ ರಸ ನೆರವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










