Latest Updates
-
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ!
ಮಹಿಳೆಯರೇ, ಫಿಟ್ನೆಸ್ ಗೆ ಇಲ್ಲಿದೆ 20 ಸಲಹೆಗಳು
ಸ್ವಲ್ಪ ಕಾಲದ ಹಿಂದೆ ಗೃಹಿಣಿ ಎಂದರೆ, ಅದರಲ್ಲೂ ಭಾರತದಲ್ಲಿ ಗೃಹಿಣಿ, ಅಡುಗೆಮನೆಯಲ್ಲಿ ಕೆಲಸ ಮಾಡಿಕೊಂಡು, ಗಂಡ ಮಕ್ಕಳ ಬಗ್ಗೆ ಗಮನವಹಿಸಿ ಅವರ ಇಷ್ಟಾರ್ಥಗಳನ್ನು ನೋಡಿಕೊಂಡಿರುತ್ತಾಳೆ. ಅವಳು ಸದಾ ಮನೆ ಮತ್ತು ಅಡುಗೆಮನೆಯನ್ನು ಅಂಟಿಕೊಂಡೇ ತನ್ನ ಸಂಪೂರ್ಣ ಜೀವನವನ್ನು ಕಳೆಯಬೇಕು. ಆದರೆ ಇವೆಲ್ಲ ಹಳೆಯ ಮಾತು. ಇತ್ತೀಚಿನ ವರ್ಷಗಳಲ್ಲಿ ಹಳೆಯ ಕಟ್ಟುಪಾಡುಗಳು ದೂರವಾಗಿವೆ. ಮಹಿಳೆ ಇಂದು ಮನೆಯ ಜೊತೆಗೆ ಅವಳ ವೃತ್ತಿ ಜೀವನವನ್ನೂ ಕೂಡ ನಿಭಾಯಿಸಬಲ್ಲಳು. ಒಟ್ಟಿನಲ್ಲಿ ಆಕೆ ಸಂಪೂರ್ಣವಾಗಿ ಅವಳ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಲ್ಲಳು.
ಆದರೆ ಹೀಗೆ ನಿತ್ಯವೂ ದುಡಿಯುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಗಮನವಹಿಸುವುದನ್ನು ಮರೆತಿದ್ದಾಳೆ. ಮನೆಯ ಹೊರಗೂ, ಒಳಗೂ ದುಡಿಮೆಯನ್ನು ಮಾಡುತ್ತ ಕ್ರಮೇಣ ಹಲವಾರು ದೈಹಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಮಾನಸಿಕವಾಗಿಯೂ ಸಹ ಸಾಕಷ್ಟು ಒತ್ತಡಗಳನ್ನು ಅನುಭವಿಸಬೇಕಾಗುತ್ತದೆ.
ಮನೆ ಕೆಲಸ, ಕಚೇರಿಗಳಲ್ಲಿ ದುಡಿಮೆ ಮಾಡುತ್ತ ಯಾವುದೇ ರೀತಿಯ ವ್ಯಾಯಾಮ, ಇತರ ದೈಹಿಕ ಚಟುವಟಿಕೆಗಳು ಧ್ಯಾನ ಇವ್ಯಾವುದನ್ನೂ ಮಾಡದೇ ಕೇವಲ ವೃತ್ತಿ ಜೀವನದ ಬಗ್ಗೆ ಗಮನವಹಿಸುತ್ತಿರುವ ಮಹಿಳೆಯರು ದೈಹಿಕ ಸಮಸ್ಯೆಗಳನ್ನು ಅನುಭವಿಸುತ್ತಿರುವುದಂತೂ ನಿಜ. ಹಾಗೆಂದ ಮಾತ್ರಕ್ಕೆ ದುಡಿಮೆ ಹಾಗೂ ದೈಹಿಕ ಫಿಟ್ನೆಸ್ ಎರಡನ್ನೂ ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ!
ಇಂತಹ ದುಡಿಯುವ ಮಹಿಳೆ ನೀವಾಗಿದ್ದಲ್ಲಿ ಇದೂ ನಿಮಗಿಲ್ಲಿದೆ ಕೆಲವು ಸುಲಭವಾದ ಹಾಗೂ ಅಗತ್ಯವಾದ ಫಿಟ್ನೆಸ್ ಸಲಹೆಗಳು!

1. ದಿನಪೂರ್ತಿ ಚಟುವಟುಕೆಯಿಂದಿರಿ
ಅತ್ಯಂತ ಸಾಮಾನ್ಯವಾಗಿ ನಡೆಯುವುದು ಮಾತನಾಡುವುದನ್ನು ರೂಢಿಸಿಕೊಳ್ಳಿ, ಕಚೇರಿಯಲ್ಲಿ ನಿಮಗೆ ಅಧಿಕ ಟೈಪಿಂಗ್ ಕೆಲಸವಿಲ್ಲದಿದ್ದಾಗ ಹೆಚ್ಚು ನಿಂತುಕೊಂಡೆ ಕೆಲಸ ಮಾಡಿ.

2. ಆರೋಗ್ಯಕರ ಸ್ನಾಕ್ಸ್ ನಿಮ್ಮಮನೆಯಲ್ಲಿರಲಿ
ನಿಮಗೆ ಆಗಾಗ ಸ್ನಾಕ್ಸ್ ತಿಂಡಿಗಳನ್ನು ತಿನ್ನುವವರಾಗಿದ್ದರೆ ಆರೋಗ್ಯಕರವಾದ ತಿಂಡಿಗಳನ್ನೇ ತಿನ್ನಿ.

3. ಪರಿಣಾಮಕಾರಿ ವ್ಯಾಯಾಮ ರೂಢಿಸಿಕೊಳ್ಳಿ
ನಿಮಗೆ ಅನುಕೂಲವಾಗುವಂತಹ ವ್ಯಾಯಾಮಕ್ರಮವನ್ನು ಅನುಸರಿಸಿ. ವಾರದಲ್ಲಿ ಕನಿಷ್ಠ ಎರಡುಬಾರಿ 20 ನಿಮಿಷಗಳ ಕಾಲ ವ್ಯಾಯಾಮ ತರಬೇತಿಗಳನ್ನು ಪಡೆಯಿರಿ.

4. ಉತ್ತಮ ಉಪಹಾರ ಸೇವಿಸಿ
ಆರೋಗ್ಯಕರವಾಗಿರಲು ದುಡಿಯುವ ಮಹಿಳೆಯರು ಸರಿಯಾದ ಆಹಾರಕ್ರಮವನ್ನು ಪಾಲಿಸಬೇಕು. ಕೆಲವು ತಾಜಾ ಹಣ್ಣುಗಳನ್ನು ಬೆಳಗಿನ ಉಪಹಾರದ ಜೊತೆಯಲ್ಲಿ ಸೇವಿಸುವುದು ಒಳ್ಳೆಯದು. ತಾಜಾ ಹಣ್ಣುಗಳಲ್ಲಿರುವ ಗ್ಲೂಕೋಸ್ ಅಂಶ ಆರೋಗ್ಯಕ್ಕೆ ಅತ್ಯಗತ್ಯ.

5. ಟ್ರೆಡ್ ಮಿಲ್ ಮ್ಯಾಜಿಕ್
10 ನಿಮಿಷಗಳ ಕಾಲ, ಟ್ರೆಡ್ ಮಿಲ್ ಅಭ್ಯಾಸ ಮಾಡಿ, ಇತರ ವ್ಯಾಯಾಮ ಆದರೂ ಸರಿಯೇ, ಒಟ್ಟಿನಲ್ಲಿ ವ್ಯಾಯಾಮ ಮಾಡಿ.

6. ಕ್ರಂಚಸ್ ತಂತ್ರ
ನಿಮ್ಮ ಕಿಬ್ಬೊಟ್ಟೆಯ ಸ್ನಾಯುವನ್ನು ಬಲಗೊಳಿಸಿ, ಹೊಟ್ಟೆ ಕರಗಿಸಲು ಕ್ರಂಚಸ್ ಮಾಡಿದರೆ ಒಳ್ಳೆಯದು.

7. ಸಾಕಷ್ಟು ನೀರು ಕುಡಿಯಿರಿ
ನಮ್ಮ ದೇಹದ ಆರೋಗ್ಯಕ್ಕೆ ಸಾಕಷ್ಟು ನೀರನ್ನು ಕುಡಿಯುವ ಅಗತ್ಯವಿದೆ. ಪ್ರತಿದಿನವೂ ಯಾವುದೇ ಕೆಲಸದಲ್ಲಿದ್ದರೂ ನೀರು ಕುಡಿಯುವುದನ್ನು ಮಾತ್ರ ಮರೆಯಬೇಡಿ. ಇದರಿಂದ ಡಿ-ಹೈಡ್ರೆಟ್ ಸಮಸ್ಯೆಯಿಂದ ದೂರ ಇರಬಹುದು.

8. ಚಾರ್ಟ್ ತಯಾರಿಸಿ
ದಿನವೂ ನಿಮ್ಮ ಫಿಟ್ನೆಸ್ ವಿಷಯದಲ್ಲಿ ಆದ ಬದಲಾವಣೆ ಹಾಗೂ ಮುಂದೆ ಮಾಡಬೇಕಾಗಿರುವ ಚಟುಚಟಿಕೆಗಳ ಬಗ್ಗೆ ನಿಮ್ಮದೇ ಆದ ಚಾರ್ಟ್ ತಯಾರಿಸಿಟ್ಟುಕೊಳ್ಳಿ. ನಿಮ್ಮ ಬದಲಾವಣೆ ಮಟ್ಟವನ್ನು ನೀವೇ ಗುರುತಿಸಿಕೊಳ್ಳಿ.

9. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸೇವನೆ ಕಡಿಮೆಗೊಳಿಸಿ
ಸಂಸ್ಕರಿಸಿದ ಕುಕ್ಕಿಸ್, ಚಾಕಲೇಟ್ಸ್, ಜೇನು ಮತ್ತು ಬಿಳಿ ಅಕ್ಕಿ(ವೈಟ್ ರೈಸ್) ತಿನ್ನುವುದನ್ನು ಕಡಿಮೆಮಾಡಿ. ಸಂಸ್ಕರಿಸಿದ ಇಂಥ ಕಾರ್ಬೋಹೈಡ್ರೇಟ್ ಆಹಾರಗಳು ಬ್ಲಡ್ ಶುಗರ್ (ಸಕ್ಕರೆ ಖಾಯಿಲೆ) ಮಟ್ಟವನ್ನು ಹೆಚ್ಚಿಸುತ್ತವೆ. ಮತ್ತು ದೇಹದಲ್ಲಿ ಬೊಜ್ಜು ಉಂಟಾಗುವ ಸಾಧ್ಯತೆಗಳಿರುತ್ತವೆ.

10. ಅತಿಯಾದ ಅಭ್ಯಾಸ ಬೇಡ
ವ್ಯಾಯಾಮ ಜಿಮ್ ನಂತಹ ಯಾವುದೇ ಅಭ್ಯಾಸಗಳು ಒಂದೇ ಸಮನೆ ಹೆಚ್ಚು ಸಮಯ ಮಾಡುವುದು ಒಳ್ಳೆಯದಲ್ಲ. ಮಿತಿಯಲ್ಲಿ ಮಾಡಿದರೆ ಮಾತ್ರ ಆರೋಗ್ಯಕರ.

11. ಕಚೇರಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ
ನಿಮ್ಮ ಕೂದಲಿನ ರಬ್ಬರ್ ಬ್ಯಾಂಡ್ ನ್ನು ಕಚೇರಿಯ ಉಚಿತ ಸಮಯದಲ್ಲಿ ಕೂದಲಿನಿಂದ ತೆಗೆದು ನಿಮ್ಮ ಕೈಯ ಐದು ಬೆರಳುಗಳನ್ನು ಕೂದಲಿನಲ್ಲಿ ಆಡಿಸಿ. ಇದರಿಂದ ಕೂದಲಿನ ಬೇರುಗಳಿಗೂ ವ್ಯಾಯಾಮ ದೊರೆತಂತಾಗುತ್ತದೆ. ಜೊತೆಗೆ ಬ್ಯಾಂಡ್ ಜೊತೆ ಕೈಬೆರಳುಗಳಿಂದ ಆಟ ಮಾಡುವುದರಿಂದ ಕೈಬೆರಳುಗಳಿಗೂ ವ್ಯಾಯಾಮ ದೊರೆಯುತ್ತದೆ. ಮನೆಯಲ್ಲಿ ಟಿ.ವಿ ನೋಡುವಾಗ ಪ್ರಯಾಣ ಮಾಡುವಾಗ ಈ ರೀತಿಯ ವ್ಯಾಯಾಮಗಳನ್ನು ಮಾಡುವುದು ಒಳ್ಳೆಯದು.

12. ಹೊಂದಿಕೊಳ್ಳುವ ಗುಣ ನಿಮ್ಮದಾಗಿರಲಿ
ಎಲ್ಲಾ ದಿನವೂ ಇದೇ ಸಮಯದಲ್ಲಿ ಇದೇ ಕೆಲಸವನ್ನು ಮಾಡುತ್ತೇನೆ ಎಂದುಕೊಳ್ಳುವುದು ತಪ್ಪು. ಯಾಕೆಂದರೆ ದಿನವೂ ಹಾಗೆಯೇ ಮಾಡಲಿಕ್ಕಾಗುತ್ತದೆ ಎನ್ನಲಾಗುವುದಿಲ್ಲ. ಆದ್ದರಿಂದ ದಿನದ ಯಾವುದೇ ಸಮಯದಲ್ಲಾದರೂ ಜಿಮ್ ಇತ್ಯಾದಿ ವ್ಯಾಯಾಮಗಳನ್ನು ಮಾಡುವುದಕ್ಕೆ ಮಾನಸಿಕವಾಗಿ ಸಿದ್ಧರಾಗಬೇಕು. ಆಗ ಯಾವುದೇ ಅಡಚಣಿಯೂ ಇಲ್ಲದೇ ದಿನವೂ ವ್ಯಾಯಾಮವನ್ನು ಮಾಡಬಹುದು.

13. ಸ್ನೇಹಿತರು ಜೊತೆಗಿರಲಿ
ಜಿಮ್, ವರ್ಕ್ ಔಟ್ಸ್ ಮಾಡಲು ನಿಮಗೊಬ್ಬರಿಗೆ ಬೇಸರವಾದರೆ ನಿಮ್ಮ ಸ್ನೇಹಿತರನ್ನು ಜೊತೆಯಲ್ಲಿಯೇ ಕರೆದೊಯ್ಯಿರಿ. ಇದರಿಂದ ನಿಮ್ಮ ಗುರಿಯನ್ನು ಮುಟ್ಟಲೂ ಕೂಡ ನಿಮ್ಮ ಸ್ನೇಹಿತರು ನಿಮಗೆ ಸಹಾಯಮಾಡಬಲ್ಲರು.

14. ಕಾರ್ಬೋಹೈಡ್ರೇಟ್ಸ್ ಅತ್ಯಗತ್ಯ
ಕಾರ್ಬೋಹೈಡ್ರೇಟ್ಸ್ ನಿಮ್ಮ ದೇಹಕ್ಕೆ ಬೇಕಾಗುವ ಶಕ್ತಿಯನ್ನು ನೀಡಬಲ್ಲವು. ಆದ್ದರಿಂದ ನಿಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ಅಗತ್ಯ ಅಧಿಕವಾಗಿದೆ. ಇದರ ಜೊತೆಗೆ ಪ್ರೋಟೀನ್ ಯುಕ್ತ ಆಹಾರಗಳನ್ನು ದಿನವೂ ಸೇವಿಸಿ.

15. ಪೂರ್ವಾಭ್ಯಾಸ
ಸ್ನಾಯು ಬಲ ಹೆಚ್ಚಿಸುವ ವ್ಯಾಯಾಮಗಳು ಅಥವಾ ವರ್ಕ್ ಔಟ್ಸ್ ಮಾಡುವಾಗ ಪೂರ್ವಾಭ್ಯಾಸ ಅತ್ಯಂತ ಅಗತ್ಯ. ಆದ್ದರಿಂದ ಯಾವುದೇ ವರ್ಕ್ ಔಟ್ಸ್ ಮಾಡುವಾಗ ಸ್ನಾಯುಗಳಿಗೆ ಅಥವಾ ದೇಹದ ಯಾವುದೇ ಭಾಗಗಳಿಗೆ ತೊಂದರೆಗಳಾಗದಂತೆ ಮುಂಜಾಗ್ರತೆವಹಿಸಿ. ಮೊದಲು ಕಡಿಮೆ ವೇಗದಿಂದ ಅಭ್ಯಾಸಮಾಡಿ ನಂತರ ನಿಧಾನವಾಗಿ ವೇಗವನ್ನು ಹೆಚ್ಚಿಸುತ್ತಾ ಹೋಗಿ.

16. ತೂಕ ಕಳೆದುಕೊಳ್ಳುವುದರ ಬಗ್ಗೆ ಚಿಂತೆ ಬೇಡ
ನೀವು ನಿಮ್ಮ ತೂಕವನ್ನು ಇಳಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮ್ಮ ಗಮನ ಸಂಪೂರ್ಣವಾಗಿ ಇದೊಂದೆ ವಿಷಯದ ಬಗ್ಗೆ ಇರುತ್ತದೆ. ಆದ್ದರಿಂದ ನಿಮ್ಮ ಗುರಿ ಕೇವಲ ನಿಮ್ಮ ಆರೋಗ್ಯಕರವಾದ ಫಿಟ್ನೆಸ್ ಬಗ್ಗೆ ಮಾತ್ರವಿರಲಿ. ಹೀಗಾದಾಗ ನೀವು ಸುಲಭವಾಗಿ ನಿಮ್ಮ ಆರೋಗ್ಯಕರ ಜೀವನವನ್ನು ಕಂಡುಕೊಳ್ಳಲು ಸಾಧ್ಯ!

17. ವರ್ಕ್ ಔಟ್ ಮಾಡಲು ಎನರ್ಜಿ
ವರ್ಕ್ ಔಟ್ಸ್ ಮಾಡುವಾಗ ಮುಖ್ಯವಾಗಿ ಸಾಕಷ್ಟು ಎನರ್ಜಿ ಬೇಕಾಗುತ್ತದೆ. ಈ ಶಕ್ತಿಗಾಗಿ ನೀವು ಸೂಕ್ತ ಆಹಾರವನ್ನು ಸೇವಿಸಬೇಕು. ಹೀಗೆ ಜಿಮ್ ಮಾಡುವ ಮುನ್ನ ನಿಮಗೆ ಅತಿಯಾಗಿ ಹಸಿವಾಗಿದ್ದರೆ ಅತ್ಯಂತ ಬೇಗ ಜೀರ್ಣವಾಗುವಂತಹ ಬಾಳೆಹಣ್ಣು ಮೊದಲಾದ ಆಹಾರಗಳನ್ನು ಸೇವಿಸಬಹುದು.

18. ಹೃದಯ ಬಡಿತದ ಬಗ್ಗೆ ಗಮನವಿರಲಿ
ಹೃದಯ ಬಡಿತವನ್ನು ಮಾಪನ ಮಾಡುವ ಸಾಧನ ಸದಾ ನಿಮ್ಮ ಬಳಿಯಲ್ಲಿರಲಿ. ನಿಮ್ಮ ಹೃದಯ ಬಡಿತ ಕಡಿಮೆ ಇದ್ದರೆ ನೀವು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸುತ್ತಿಲ್ಲ ಎಂದರ್ಥ. ಹೃದಯ ಬಡಿತವು ಅಧಿಕವಾಗಿದ್ದರೆ ಅದು ಅಪಾಯ. ಆದ್ದರಿಂದ ಸರಿಯಾದ ನಿರ್ವಹಣೆ ಅತ್ಯಗತ್ಯ.

19. ಕುಳಿತುಕೊಳ್ಳುವುದರ ಬಗ್ಗೆ ಗಮನವಿರಲಿ
ನೀವು ಕುಳಿತುಕೊಳ್ಳುವಾಗ ನಿಮಗೆ ಅತ್ಯಂತ ಸರಿಯೆನಿಸುವ ರೀತಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಕಣ್ಣಿನ ನೇರಕ್ಕೆ ವಸ್ತುಗಳು ಕಾಣುವ ಹಾಗೆಯೇ ಕುಳಿತುಕೊಳ್ಳಿ.

20. ಸಂತೋಷದಿಂದಿರಿ
ನೀವು ಜೋರಾಗಿ ನಗುವಾಗ ಅಥವಾ ಸಂತೋಷದಿಂದಿರುವಾಗ ನಿಮ್ಮ ದೇಹವು ಸರಳವಾಗಿ ನಿಮ್ಮ ದೇಹ ಉತ್ತಮ ಹಾರ್ಮೋನ್ ಗಳನ್ನು ಬಿಡುಗಡೆಮಾಡುತ್ತದೆ. ಇದು ಒತ್ತಡಮಟ್ಟವನ್ನು ಕಡಿಮೆಗೊಳಿಸುತ್ತದೆ. ಕಾಮೆಡಿ ವಿಡೋಯೋಗಳನ್ನು ಹೆಚ್ಚಾಗಿ ನೋಡಿ. ಇದರಿಂದ ನಿಮ್ಮ ಮನಸ್ಸು ಕೂಡ ಉಲ್ಲಾಸದಿಂದಿರುತ್ತದೆ.
ಫಲಿತಾಂಶಕ್ಕಾಗಿ ಆತುರ ಬೇಡ: ಈ ಎಲ್ಲಾ ಸಲಹೆಗಳನ್ನು ಪಾಲಿಸುವಾಗ ಅದರಲ್ಲಿ ಏಳು ಬೀಳುಗಳಿರುತ್ತವೆ. ಅದರ ಬಗ್ಗೆ ಹೆಚ್ಚಾಗಿ ಯೋಚಿಸದೇ ತಾಳ್ಮೆಯಿಂದ ಫಲಿತಾಂಶವನ್ನು ನಿರೀಕ್ಷಿಸಿ.



Click it and Unblock the Notifications











