ದೇಹದ ತೂಕ ಹೆಚ್ಚಾಗಬೇಕೆ? ಇಂತಹ ಆಹಾರಗಳನ್ನು ಸೇವಿಸಿ

By Super

ಆರೋಗ್ಯಯುತವಾದ ಶರೀರದ ರಹಸ್ಯವು ಎಂದೆಂದಿಗೂ ಸತ್ವಯುತವಾದ ಆಹಾರದ ಸೇವನೆಯೇ ಆಗಿದೆ. ಅನೇಕ ಮಂದಿ ತಮ್ಮ ತೂಕವನ್ನು ಕಳೆದುಕೊಳ್ಳಲು ಒದ್ದಾಡುತ್ತಿರುವಂತೆಯೇ, ಇನ್ನೂ ಅನೇಕರು ಒoದಷ್ಟು ತೂಕವನ್ನು ಹೆಚ್ಚಿಸಿಕೊಳ್ಳಲು ಹಾತೊರೆಯುತ್ತಿರುವುದು ಕೂಡ ಅಷ್ಟೇ ಸತ್ಯ. ಎಲ್ಲಾ ವಿಧವಾದ ಎಣ್ಣೆಯ, ಕರಿದ, ಮತ್ತು ಕೊಬ್ಬುಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ತೂಕವನ್ನು ಸುಲಭವಾಗಿ ಪಡೆಯಬಹುದು ಎಂದು ನಿಮ್ಮ ಭಾವನೆಯಾಗಿರಬಹುದು. ಆದರೆ, ಖಂಡಿತವಾಗಿಯೂ ಇದೊಂದು ಆರೋಗ್ಯಕಾರೀ ವಿಧಾನವಂತೂ ಅಲ್ಲವೇ ಅಲ್ಲ. ಆಯುರ್ವೇದದಿಂದ ಮೈ ತೂಕ ಇಳಿಸುವುದು ಹೇಗೆ?

ಆರೋಗ್ಯವಾಗಿದ್ದುಕೊಂಡೇ ತೂಕವನ್ನು ಗಳಿಸುವುದು ಒಂದು ಸವಾಲೇ ಸರಿ. ಆದರೆ, ಇದನ್ನು ಸಾಧಿಸುವುದು ಅಂತಹ ಕಷ್ಟವೇನೂ ಅಲ್ಲ. ಹೆಚ್ಚು ಕ್ಯಾಲರಿಗಳುಳ್ಳ ಮತ್ತು ಸಮರ್ಪಕವಾದ ಪೋಷಕಾoಶಗಳುಳ್ಳ ಆಹಾರ ಪದಾರ್ಥಗಳ ಮೊರೆ ಹೋಗಿರಿ. ಅಧಿಕ ಪ್ರೋಟೀನ್ ಯುಕ್ತ ಆಹಾರ ಪದಾರ್ಥಗಳು ನಿಮ್ಮ ಶರೀರದ ಸ್ನಾಯುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಮತ್ತು ನೀವು ಪರಿಣಾಮಕಾರಿಯಾಗಿ ತೂಕವನ್ನು ಗಳಿಸಿಕೊಳ್ಳುವಂತೆ ಮಾಡುತ್ತವೆ. ಸರಿಯಾದ ಪೋಷಕಾಂಶಗಳಿಂದ ಮತ್ತು ಕ್ಯಾಲರಿಗಳಿoದ ಕೂಡಿದ ಅಂತಹ ಕೆಲವು ಆಹಾರ ಪದಾರ್ಥಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.

1. ಒಣ ಹಣ್ಣುಗಳು (Dry fruits) ಮತ್ತು ಕಾಳುಗಳು

1. ಒಣ ಹಣ್ಣುಗಳು (Dry fruits) ಮತ್ತು ಕಾಳುಗಳು

ಒಣ ಹಣ್ಣುಗಳು (Dry fruits) ಮತ್ತು ಕಾಳುಗಳು; ಕ್ಯಾಲರಿಗಳು, ಪೋಷಕಾಂಶಗಳು, ಮತ್ತು ನಾರಿನ ಸಮೃದ್ಧ ಮೂಲಗಳಾಗಿವೆ. ಹೀಗಾಗಿ, ನಿಮ್ಮ ಆಹಾರ ಕ್ರಮಕ್ಕೆ, ಒಂದಿಷ್ಟು ಒಣದ್ರಾಕ್ಷಿ, ಬಾದಾಮಿ, ಅಕ್ರೋಟ, ಮತ್ತು ಗೇರು ಬೀಜ, ಇವುಗಳನ್ನು ಸೇರಿಸಿ. ಒಂದು ಕಪ್ ನಷ್ಟು ಒಣದ್ರಾಕ್ಷಿಯು ಸುಮಾರು 449 ಕ್ಯಾಲೋರಿಗಳಷ್ಟು ಮತ್ತು ಒಂದು ಕಪ್ ನಷ್ಟು ಬಾದಾಮಿಯು ಸರಿಸುಮಾರು 529 ಕ್ಯಾಲರಿಗಳಷ್ಟು ಶಕ್ತಿಯನ್ನು ಹೊಂದಿದೆ. ಇವುಗಳ ಸವಿಯನ್ನು ನೀವು icecream ಮತ್ತು ಮೊಸರಿಗೆ ಅಲಂಕಾರಕವಾಗಿ ಅಥವಾ ಸಲಾಡ್ ಮತ್ತು ಧಾನ್ಯಗಳೊoದಿಗೆ ಸೇರಿಸಿಯೋ ಸೇವಿಸಬಹುದು.

2. ಗಿಣ್ಣು

2. ಗಿಣ್ಣು

ಇತರ ಎಲ್ಲಾ ಹೈನುಗಾರಿಕಾ ಉತ್ಪನ್ನಗಳಂತೆ, ಗಿಣ್ಣು ಕೂಡಾ ಎಲ್ಲಾ ಅವಶ್ಯಕ ಪೋಷಕಾಂಶಗಳನ್ನು ಒಳಗೊಂಡಿದೆ. ನೀವು ಬೇಗನೇ ತೂಕವನ್ನು ಪಡೆದುಕೊಳ್ಳಲು ಬೇಕಾದ ಆರೋಗ್ಯಯುತ ಕೊಬ್ಬಿನಿoದ ಇದು ಸಮೃದ್ಧವಾಗಿದೆ. ಬರಿದೇ ಕ್ಯಾಲರಿಗಳು ಮಾತ್ರವಲ್ಲದೇ, ಇದು ಪ್ರೋಟೀನ್, ಕ್ಯಾಲ್ಸಿಯಂ, ಮತ್ತು ಒಳ್ಳೆಯ ಕೊಲೆಸ್ಟರಾಲ್ ನಿಂದಲೂ ಸಂಪನ್ನವಾಗಿದೆ. ಅದ್ದರಿಂದ, ನಿಮ್ಮ ತಿನಿಸುಗಳ ಮೇಲೊoದಿಷ್ಟು ಗಿಣ್ಣನ್ನು ಸಿಂಪಡಿಸಿ ಮತ್ತು ಅವು ಮತ್ತಷ್ಟು ಬಾಯಲ್ಲಿ ನೀರೂರಿಸುವoತೆ ಮಾಡಿರಿ. ನೀವು ಒಂದು ಬಾರಿಗೆ ತೆಗೆದುಕೊಳ್ಳುವ cheddar ಗಿಣ್ಣು, ಸುಮಾರು 69 ಕ್ಯಾಲರಿಗಳನ್ನು ಹೊಂದಿದೆ.

3. ಪೀನಟ್ ಬಟರ್

3. ಪೀನಟ್ ಬಟರ್

ಪೀನಟ್ ಬಟರ್, ಪ್ರೋಟೀನ್ ಮತ್ತು ಕೊಬ್ಬುಗಳ ಒಂದು ಸಮೃದ್ಧ ಅಗರವಾಗಿದ್ದು, ತೂಕವನ್ನು ಹೊಂದಲು ಇಚ್ಚಿಸುವವರಿಗೆ ಇಂದೊಂದು ಉತ್ತಮ ಆಯ್ಕೆಯಾಗಬಹುದು. ಒಂದು ಟೇಬಲ್ ಚಮಚದಷ್ಟು Peanut butter, ಹತ್ತಿರ ಹತ್ತಿರ 100 ಕ್ಯಾಲರಿಗಳನ್ನು ಒಳಗೊಂಡಿದೆ. ಅಲ್ಲದೇ, ಇದು ಇನ್ನೂ ಅನೇಕ ಅವಶ್ಯಕ ಪೋಷಕಾಂಶಗಳನ್ನು ಒಳಗೊಂಡಿದೆ. ಪೀನಟ್ ಬಟರ್ ನಲ್ಲಿರುವ ಕೊಬ್ಬು, ಅಸoತೃಪ್ತ ಕೊಬ್ಬಿನ ವರ್ಗಕ್ಕೆ (unsaturated type) ಸೇರಿದ್ದು, ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ. Peanut butter ಅನ್ನು ನೀವು ಕಂದು ಬಣ್ಣದ ಬ್ರೆಡ್ಡುಗಳೊಂದಿಗೆಯೋ ಅಥವಾ ಸೇಬಿಗೆ ಅದ್ದುವುದರ ಮೂಲಕವೋ ಅಥವಾ workout ಪೇಯದ (workout shake) ನ ನoತರವೂ ಆಸ್ವಾದಿಸಬಹುದು.

4. ಕೆನೆಭರಿತ ಹಾಲು

4. ಕೆನೆಭರಿತ ಹಾಲು

ಕೊಬ್ಬುಯುಕ್ತ ಕೆನೆಭರಿತ ಹಾಲನ್ನು ನೀವು ಓಟ್ ಮಿಲ್, ಧಾನ್ಯಗಳೊoದಿಗೆ, ಅಥವಾ ಹಾಗೆಯೇ ಒಂದು ಲೋಟದಷ್ಟು ಚಾಕಲೇಟ್ ಸ್ವಾದಭರಿತ ಪೇಯವಾಗಿಯೂ ಬಳಸಬಹುದು. ಇದು ಕ್ಯಾಲರಿಗಳಿoದ ಸಮೃದ್ಧವಾಗಿದ್ದು, ಅನ್ನಾಂಗ A ಮತ್ತು ಅನ್ನಾಂಗ D ಗಳನ್ನು ಸಹ ಹೊಂದಿದೆ. ತೂಕವನ್ನು ಅಲ್ಪಾವಧಿಯಲ್ಲಿ ಗಳಿಸಿಕೊಳ್ಳಲು ನೀವು ಕೆನೆರಹಿತ ಹಾಲಿಗೆ ಬದಲಾಗಿ ಕುಬ್ಬುಯುಕ್ತ ಕೆನೆಭರಿತ ಹಾಲನ್ನು ಆರಿಸಿಕೊಳ್ಳಿರಿ. ಒಂದು ಲೋಟದಷ್ಟು ಕೆನೆಭರಿತ ಹಾಲು ಸುಮಾರು 120 ರಿಂದ 150 ಕ್ಯಾಲರಿಗಳನ್ನು ಹೊಂದಿದೆ.

5. ಆಲೂಗಡ್ಡೆ

5. ಆಲೂಗಡ್ಡೆ

ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ, ಸಾಮಾನ್ಯವಾಗಿ ಜನರು ಆಲೂಗಡ್ಡೆಯನ್ನು ತ್ಯಜಿಸಲು ಮುಂದಾಗುತ್ತಾರೆ. ಆದರೆ ತೂಕವನ್ನು ಹೊಂದಲು ಬಯಸುವವರು ಹೀಗೆ ಮಾಡುವುದರ ಅಗತ್ಯವಾದರೂ ಏನು ? ಇದು ಸಂಕೀರ್ಣ ಸಕ್ಕರೆಗಳ (complex carbohydrates) ಒಂದು ಅತ್ಯುತ್ತಮ ಮೂಲವಾಗಿದ್ದು, ತೂಕವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ. ಇದು ಅತ್ಯಧಿಕ ಪೌಷ್ಟಿಕ ಮೌಲ್ಯವನ್ನು ಹೊಂದಿದ್ದು, ಪಿಷ್ಟ, ನಾರು, ಮತ್ತು ಅನ್ನಾಂಗ C ನಿಂದ ಸಮೃದ್ಧವಾಗಿದೆ. ಆಲೂಗಡ್ಡೆಗಳನ್ನು ಅವುಗಳ ಸಿಪ್ಪೆಯೊಂದಿಗೆ ಬಳಸಿದರೆ ಸಮೃದ್ಧ ಪ್ರೋಟೀನ್ ನ ಲಾಭವನ್ನು ಪಡೆಯಬಹುದು ಅಥವಾ ಅವುಗಳನ್ನು ಇತರ ತರಕಾರಿಗಳೊಂದಿಗೆ ಬೆರೆಸಿಯೂ ಬಳಸಬಹುದು. ಒಂದು ಮಧ್ಯಮ ಗಾತ್ರದ ಆಲೂಗಡ್ಡೆಯು ಸುಮಾರು 150 ಕ್ಯಾಲರಿಗಳನ್ನು ಹೊಂದಿದೆ.

6. ಪಾಸ್ತಾ (Pasta)

6. ಪಾಸ್ತಾ (Pasta)

ಪಾಸ್ತಾಗೆ (Pasta) ಯು ಒಂದು ರುಚಿಕರವಾದ ಮತ್ತು ಕ್ಯಾಲರಿಯುಕ್ತ ಆಹಾರಪದಾರ್ಥವಾಗಿದೆ. ಇದು ಶರ್ಕರಪಿಷ್ಟಗಳ ಒಂದು ಸಮೃದ್ಧ ಮೂಲವಾಗಿದೆ. ವಿವಿಧ ತರಕಾರಿಗಳೊಂದಿಗೆ ಇದನ್ನು ಸೇರಿಸಿದರೆ, ಇದು ಅವಶ್ಯಕ ಪೋಶಕಾoಶಗಳಿoದ ಸಂಪನ್ನವಾಗುತ್ತದೆ. ಒಂದು ಕಪ್ ನಷ್ಟು macaroni ಯು ಸುಮಾರು 390 ಕ್ಯಾಲರಿಗಳನ್ನು ಹೊಂದಿದ್ದರೆ, ಬೇಯಿಸಿದ spaghetti ಯು ಸರಿಸುಮಾರು 220 ಕ್ಯಾಲರಿಗಳನ್ನು ಹೊಂದಿದೆ.

7. ಬೆಣ್ಣೆ

7. ಬೆಣ್ಣೆ

ಬೆಣ್ಣೆಯು ಸಂತೃಪ್ತ ಕೊಬ್ಬುಗಳ ಒಂದು ಅಗರವಾಗಿದ್ದು, ಇದನ್ನು ಸಣ್ಣಪ್ರಮಾಣದಲ್ಲಿ ಅಡುಗೆಯಲ್ಲಿ ಬಳಸಬಹುದು. ಇದನ್ನು ಬ್ರೆಡ್ ನೊಂದಿಗೆ ಸವಿಯಬಹುದು ಅಥವಾ ಖಾದ್ಯಗಳನ್ನು ಕರಿಯುವಾಗ, ಮತ್ತು ಸಿಹಿತಿನಿಸುಗಳoತಹ ಶ್ರೀಮಂತ, ಸ್ವಾಧಭರಿತ ತಿಂಡಿಗಳ ಸವಿಯನ್ನು ಹೆಚ್ಚಿಸಲು ಬಳಸಬಹುದು. ಬೆಣ್ಣೆ ಅಥವಾ ತುಪ್ಪವು ಹೆಪ್ಪುಗಟ್ಟಿದ ರುಚಿಯನ್ನು ಮತ್ತು ಸಾಕಷ್ಟು ಉತ್ತಮ ಕ್ಯಾಲರಿಗಳನ್ನು ಹೊಂದಿದ್ದು ನೀವು ಬಹಳ ಬೇಗನೇ ತೂಕವನ್ನು ಗಳಿಸಿಕೊಳ್ಳಲು ಸಹಕಾರಿಯಾಗಿದೆ.

8. ಆರೋಗ್ಯಯುತ, ಸಿಹಿಯಾದ ಹಣ್ಣುಗಳು

8. ಆರೋಗ್ಯಯುತ, ಸಿಹಿಯಾದ ಹಣ್ಣುಗಳು

ಮಾವು, ಪಪ್ಪಾಯಿ, ಬಾಳೆಹಣ್ಣು, ಮತ್ತು ಅನಾನಾಸುಗಳಂತಹ ಹಣ್ಣುಗಳು ನೀವು ತೂಕವನ್ನು ಹೊಂದಲು ಸಹಕಾರಿಯಾಗಬಲ್ಲವು. ಇವು ಸಹಜವಾದ ಸಕ್ಕರೆಯನ್ನು ಹೊಂದಿದ್ದು, ಶಕ್ತಿಯ ಸಮೃದ್ದ ಮೂಲಗಳಾಗಿವೆ. ತೂಕವನ್ನು ವೃದ್ಧಿಸಿಕೊಳ್ಳಲು ಹಂಬಲಿಸುವವರಿಗೆ avocado ಹಣ್ಣುಗಳು ಅತ್ಯುತ್ತಮ ಆಯ್ಕೆಗಳಾಗಿವೆ. ಇವು ಕೊಬ್ಬು ಮತ್ತು ಕ್ಯಾಲರಿಯುಕ್ತವಾಗಿವೆ. ಒಂದು avocado ವು ಸುಮಾರು 300 ಕ್ಯಾಲರಿಗಳನ್ನು ಹೊಂದಿದೆ. ಅದ್ದರಿಂದ, ಈ ಸಿಹಿಯಾದ ಮತ್ತು ಆರೋಗ್ಯಯುತ ಹಣ್ಣುಗಳನ್ನು, ಫ್ರೂಟ್ ಸಲಾಡ್, ಸಿಹಿ ತಿನಿಸು, ಮತ್ತು ಮಿಲ್ಕ್ ಶೇಕ್ ನoತಹ ವಸ್ತುಗಳಿಗೆ ಬೆರೆಸಿ ಸೇವಿಸಬಹುದು.

9. ಮೊಟ್ಟೆಗಳು

9. ಮೊಟ್ಟೆಗಳು

ಮೊಟ್ಟೆಗಳು ಕ್ಯಾಲರಿಭರಿತವಾಗಿದ್ದು, ಪೋಷಕಾಂಶಗಳು ಮತ್ತು ಪ್ರೋಟೀನ್ ಅನ್ನೂ ಸಹ ಹೊಂದಿವೆ. ಒಂದು ಮೊಟ್ಟೆಯು ಸರಾಸರಿ 70 ಕ್ಯಾಲರಿಗಳನ್ನು ಮತ್ತು 5 ಗ್ರಾಂ ಗಳಷ್ಟು ಕೊಬ್ಬನ್ನು ಹೊಂದಿರುತ್ತದೆ. ಆದ್ದರಿಂದಲೇ, ಮೊಟ್ಟೆಯು ದೇಹಧಾರ್ಡ್ಯ ಪಟುಗಳಿಗೆ ಪ್ರಿಯವಾದುದಾಗಿದೆ. ಇವು ಒಮೇಗಾ - 3 ಕೊಬ್ಬಿನಾಮ್ಲಗಳಿoದ ಸಂಪನ್ನವಾಗಿದ್ದು, ಮೊಟ್ಟೆಯ ಹಳದಿ ಲೋಳೆಯು ಅತಿ ಹೆಚ್ಚಿನ ಕೊಲೆಸ್ಟರಾಲ್ ಅನ್ನು ಹೊಂದಿದ್ದು ಇದೇನೂ ಅನಾರೋಗ್ಯಕಾರಿಯಲ್ಲ. ಅದ್ದರಿಂದ, ಶೀಘ್ರವಾಗಿ ತೂಕವನ್ನು ಗಳಿಸಲು ಮೊಟ್ಟೆಯನ್ನು ಬೇಯಿಸಿದ ರೂಪದಲ್ಲೋ, ಅಥವಾ ಕುದಿಸಿದ ರೂಪದಲ್ಲೋ, ಅಥವಾ ಹಸಿಯಾಗಿಯೋ ನಿಮಗೆ ಸೂಕ್ತವೆನಿಸುವ ರೀತಿಯಲ್ಲಿ ಅಸ್ವಾದಿಸಿರಿ.

10. ಕೆಂಪು ಮಾಂಸ

10. ಕೆಂಪು ಮಾಂಸ

ಮಾಂಸವು ಕ್ಯಾಲರಿಯುಕ್ತವಾಗಿದ್ದು, ತೂಕವನ್ನು ಬಹು ಬೇಗನೆ ವೃದ್ಧಿಸುತ್ತದೆ. ಇದನ್ನು ಆರೋಗ್ಯಯುತ ಶರೀರಕ್ಕಾಗಿ, ಆರೋಗ್ಯಯುತ ಆಹಾರಕ್ರಮದಲ್ಲಿ ಬಳಸಬಹುದು. ಇವು ಪ್ರೋಟೀನ್ ಗಳ ಒಂದು ಅಗರವಾಗಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಿವೆ. ತೂಕವನ್ನು ಗಳಿಸಲು ಇದನ್ನು ಕರಿಯುವುದರ ಮೂಲಕವೋ ಅಥವಾ ಬೇಯಿಸುವುದರ ಮೂಲಕವೋ ಆನಂದಿಸಿರಿ.

X
Desktop Bottom Promotion