Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒತ್ತಡಕ್ಕೆ ಸ್ನಾಕ್ಸ್ ತಿನ್ನುವುದು ಪರಿಹಾರವಾಗಬಹುದೇ?
ದಿನನಿತ್ಯದ ಜಂಜಾಟದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಒತ್ತಡ ಇದ್ದೇ ಇರುತ್ತದೆ.ಒತ್ತಡ ಹೆಚ್ಚಾದಾಗ ಅರೋಗ್ಯ ಸಮಸ್ಯೆಗಳು ಕೂಡ ಹೆಚ್ಚುತ್ತವೆ ಆದ್ದರಿಂದ ಒತ್ತಡ ನಿಗ್ರಹಿಸಲು ಸರಿಯಾದ ಮಾರ್ಗ ಕೈಗೊಳ್ಳುವುದು ಅತ್ಯಗತ್ಯ.
ಇತ್ತೀಚಿಗೆ ಒತ್ತಡ ಎನ್ನುವುದು ಜೀವನದ ಒಂದು ಭಾಗವಾಗಿಬಿಟ್ಟಿದೆ.ಒತ್ತಡ ಎನ್ನುವುದು ಈಗ ಮಾನಸಿಕ ಮತ್ತು ದೈಹಿಕ ಕಾಯಿಲೆಗಳನ್ನು ನೀಡುವ ರೋಗವಾಗಿಬಿಟ್ಟಿದೆ.ಅಧಿಕ ಕೆಲಸ,ಅನಾರೋಗ್ಯಕರ ಆಹಾರ ಪದ್ಧತಿ,ಅನಿಯಮಿತ ಜೀವನ ಶೈಲಿ ಇವುಗಳು ಒತ್ತಡಕ್ಕೆ ಮುಖ್ಯ ಕಾರಣವಾಗಿದೆ.ಇವುಗಳಿಂದ ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆ,ರಕ್ತದೊತ್ತಡ ಮತ್ತು ಭಾವನಾತ್ಮಕ ಕುಸಿತಗಳು ಹೆಚ್ಚುತ್ತಿವೆ.ಹೀಗೆ ಒತ್ತಡ ಎನ್ನುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ ಆದ್ದರಿಂದ ಇದನ್ನು ತಪ್ಪಿಸಬೇಕು ಮತ್ತು ಒತ್ತಡ ನಿವಾರಿಸುವ ಕ್ರಮ ಕೈಗೊಳ್ಳಬೇಕು.
ಒತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಅನೇಕ ವಿಧಾನಗಳಿವೆ.ಅವುಗಳಲ್ಲಿ ಏನನ್ನಾದರೂ ತಿನ್ನುವುದು ಕೂಡ ಒಂದು ವಿಧಾನ.ನೀವು ಒತ್ತಡ ಹೆಚ್ಚುತ್ತಿದೆ ಎಂಬುದು ತಿಳಿದಾಗ ಏನಾದರೂ ತಿಂದರೆ ನಿಮ್ಮ ಒತ್ತಡ ಕಡಿಮೆ ಆಗುತ್ತದೆ ಎಂಬುದು ಸಾಬೀತಾಗಿದೆ.ಸ್ನಾಕ್ಸ್ ತಿನ್ನುವುದು ಒತ್ತಡ ನಿಗ್ರಹಿಸಲು ಉತ್ತಮ ವಿಧಾನಗಳಲ್ಲಿ ಒಂದು ಎನ್ನಲಾಗಿದೆ.ಅದರಲ್ಲೂ ಸಿಹಿ ತಿನಿಸುಗಳನ್ನು ತಿಂದಾಗ ಒತ್ತಡ ಕಡಿಮೆ ಆಗುತ್ತದೆ.ಕೆಲವು ಜನರು ಇದನ್ನು ನಂಬದಿದ್ದರೂ ಕೂಡ ಇದು ಸಾಬೀತಾಗಿದೆ.ಏನನ್ನಾದರೂ ತಿನ್ನುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸಲು ಕೆಲವು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

1.ಹಾರ್ಮೋನುಗಳು:
ಕೆಲಸದ ಒತ್ತಡ,ಸ್ತ್ರೈನ್ ಇವುಗಳಿಂದಾದ ಒತ್ತಡದಿಂದಾಗಿ ಹಾರ್ಮೋನುಗಳ ಮೇಲೆ ಅವಲಂಬಿತವಾಗಿರುತ್ತದೆ.ಈ ಸಮಯದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು ಒತ್ತಡವನ್ನು ಹೆಚ್ಚಿಸಲು ಮುಖ್ಯ ಕಾರಣವಾಗುತ್ತದೆ.ಇದು ನಮ್ಮ ದೇಹಕ್ಕೆ ಸುಸ್ತಾಗುವಂತೆ ಮತ್ತು ಬಲ ಕಡಿಮೆ ಆಗುವಂತೆ ಮಾಡುತ್ತದೆ.ಈ ಸಮಯದಲ್ಲಿ ಸಿಹಿ ತಿನಿಸುಗಳನ್ನು ತಿನ್ನುವುದರಿಂದ ಒತ್ತಡ ಕಡಿಮೆ ಆಗುತ್ತದೆ.ಸಿಹಿ ತಿನಿಸುಗಳು ಒತ್ತಡ ಹೆಚ್ಚಿಸುವ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ.ಈ ಹಾರ್ಮೋನುಗಳ ಬಿಡುಗಡೆ ಕಡಿಮೆ ಆದಾಗ ಒತ್ತಡ ಕೂಡ ಕಡಿಮೆ ಆಗುತ್ತದೆ.
2.ಆರೋಗ್ಯಯುತ :
ತಿನಿಸುಗಳನ್ನು ತಿನ್ನುವುದು ಒತ್ತಡ ಕಡಿಮೆ ಮಾಡಲು ಆರೋಗ್ಯಯುತ ವಿಧಾನವಾಗಿದೆ.ನಾವು ಆರೋಗ್ಯಯುತ ಆಹಾರವನ್ನು ತಿಂದಾಗ ಮಾತ್ರ ಇದು ಆರೋಗ್ಯಯುತ ವಿಧಾನವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ!. ಈ ರೀತಿ ಆರೋಗ್ಯಯುತವಾದ ಮತ್ತು ಒತ್ತಡ ಕಡಿಮೆ ಮಾಡುವ ಅಹಾರಗಳೆಂದರೆ ಹಣ್ಣುಗಳು,ಬೆರ್ರಿಗಳು,ಡಾರ್ಕ್ ಚಾಕೊಲೇಟ್ ,ಹಾಲಿನ ಉತ್ಪನ್ನಗಳು ಇತ್ಯಾದಿ.ಈ ಆಹಾರಗಳು ಒತ್ತಡದ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ.
3.ಶಾಂತಗೊಳಿಸುತ್ತದೆ:
ಸ್ನಾಕ್ಸ್ ತಿನ್ನುವುದು ಒತ್ತಡ ನಿವಾರಿಸಲು ಉತ್ತಮ ವಿಧಾನ,ಏಕೆಂದರೆ ಇದು ಕೇವಲ ಒತ್ತಡ ನಿವಾರಿಸುವುದು ಮಾತ್ರವಲ್ಲ ಜೊತೆಗೆ ದೇಹ ಮತ್ತು ಮೆದುಳಿಗಾಗುವ ಆತಂಕವನ್ನು ಕಡಿಮೆ ಮಾಡುತ್ತದೆ.ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.ಆದರೆ ಒತ್ತಡ ಹೆಚ್ಚಿದಾಗ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವುದು ಬಹಳ ಕಷ್ಟದ ಕೆಲಸ.ಆದ್ದರಿಂದ ಏನನ್ನಾದರೂ ಸ್ವಲ್ಪ ತಿನ್ನುವುದರಿಂದ ಮನಸ್ಸು ಸ್ವಲ್ಪ ಶಾಂತವಾಗುತ್ತದೆ.
4.ಚಯಾಪಚಯವನ್ನು ಸುಧಾರಿಸುತ್ತದೆ:
ಒತ್ತಡಗೊಂಡಾಗ ಆರೋಗ್ಯಯುತ ಆಹಾರವನ್ನು ತಿನ್ನುವುದರಿಂದ ಒತ್ತಡ ಹೆಚ್ಚಾಗಿ ಬಿಡುಗಡೆಯಾಗುವ ಹಾರ್ಮೋನುಗಳನ್ನು ತಡೆಯುತ್ತದೆ.ಆರೋಗ್ಯಯುತವಾದ ಸ್ನಾಕ್ಸ್ ತಿನ್ನುವುದರಿಂದ ದೇಹ ಮೊದಲಿನ ಸ್ಥಿತಿಗೆ ಮರಳಿ ಒತ್ತಡವನ್ನು ನಿಗ್ರಹಿಸುತ್ತದೆ.ಜೊತೆಗೆ ಉತ್ತಮ ಆಹಾರಗಳನ್ನು ತಿನ್ನುವುದರಿಂದ ದೇಹಕ್ಕೆ ಪೌಷ್ಟಿಕಾಂಶ ಮತ್ತು ಖನಿಜಾಂಶಗಳು ಹೆಚ್ಚು ದೊರೆಯುವುದರಿಂದ ಒತ್ತಡವನ್ನು ಸುಧಾರಿಸುವ ಶಕ್ತಿ ದೊರಕುತ್ತದೆ.ಒಟ್ಟಾರೆ ಹೆಚ್ಚು ಒತ್ತಡ ಹೊಂದಿದಾಗ ಏನನ್ನಾದರೂ ತಿನ್ನುವುದು ಒಳ್ಳೆಯದು.
5.ಮೂಡ್ ಅನ್ನು ಸುಧಾರಿಸುತ್ತದೆ:
ಕೆಟ್ಟ ಭಾವನೆಗಳು ಒತ್ತಡಕ್ಕೆ ಮುಖ್ಯ ಕಾರಣ.ಇದು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ ಮತ್ತು ಅಸಾಮಾಧಾನ ಉಂಟುಮಾಡುತ್ತದೆ.ಒತ್ತಡದಿಂದಾಗಿ ಕೆಲವೊಮ್ಮೆ ಮನಸ್ಸು ನಿಗ್ರಹದಲ್ಲಿರುವುದಿಲ್ಲ ಅಂತಹ ಸಮಯದಲ್ಲಿ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಉತ್ತಮ ಮೂಡ್ ತರಿಸಿಕೊಳ್ಳಬಹುದು.ಡಾರ್ಕ್ ಚಾಕೊಲೇಟ್ ಒತ್ತಡಕ್ಕೆ ಸಂಬಂಧಪಟ್ಟ ಹಾರ್ಮೋನುಗಳನ್ನು ನಿಗ್ರಹಿಸುವುದರ ಮೂಲಕ ಮನಸ್ಸಿಗೆ ಉಲ್ಲಾಸ ನೀಡುತ್ತವೆ.ಕೆಲವು ಆಹಾರಗಳು ಶಕ್ತಿ ಮಟ್ಟ ಬದಲಾವಣೆ ಮತ್ತು ಮೂಡ್ ಬದಲಾವಣೆ ಮಾಡುವುದರ ಮೂಲಕ ಒತ್ತಡವನ್ನು ನಿಗ್ರಹಿಸುತ್ತವೆ.
ಮೇಲಿನ ಈ ಎಲ್ಲಾ ಕಾರಣಗಳು ಒತ್ತಡವನ್ನು ನಿವಾರಿಸಲು ಸ್ನಾಕ್ಸ್ ತಿನ್ನುವದು ಉತ್ತಮ ವಿಧಾನ ಎಂಬುದನ್ನು ತಿಳಿಸುತ್ತವೆ.ಒತ್ತಡ ನಿವಾರಿಸಲು ಪುಸ್ತಕ ಓದುವುದು,ಸಂಗೀತ ಆಲಿಸುವುದು ಮತ್ತು ಸಣ್ಣ ನಿದ್ದೆ ಮಾಡುವುದು,ಸ್ವಲ್ಪ ದಿನಗಳ ಮಟ್ಟಿಗೆ ಹೊರಗೆ ಪ್ರವಾಸ ಕೈಗೊಳ್ಳುವುದು ಇವುಗಳು ಕೂಡ ಉತ್ತಮ ವಿಧಾನಗಳಾಗಿವೆ.ಸಮಸ್ಯೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು ಮತ್ತು ಬಗೆಹರಿಸಿಕೊಳ್ಳುವುದು ಕೂಡ ಒತ್ತಡ ನಿಗ್ರಹಿಸಲು ಸಹಕರಿಸುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications