Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ದೇಹವನ್ನು ಫಿಟ್ ಆಗಿಡಲು ಮನೆ ಮದ್ದುಗಳು
ಪ್ರತಿಯೊಬ್ಬರಿಗೂ ಅರೋಗ್ಯ ಎಂಬುದು ಬಹಳ ಮುಖ್ಯ. ಆರೋಗ್ಯಯುತವಾಗಿ ಇದ್ದಾಗ ಮಾತ್ರ ಕೆಲಸದಲ್ಲಿ ಮಗ್ನರಾಗಲು ಸಾಧ್ಯ. ಆದರೆ ಈ ಧೂಳಿ ನಿಂದ ಕೂಡಿದ ವಾತಾವರಣದಲ್ಲಿ, ಒತ್ತಡಯುತ ಜೀವನದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಫಿಟ್ ದೇಹ ಇದ್ದರೆ ಆರೋಗ್ಯಯುತ ಜೀವನ ಮತ್ತು ಆರೋಗ್ಯಯುತ ಮನಸ್ಸನ್ನು ಹೊಂದಿದ್ದೀರಿ ಎಂದೇ ಅರ್ಥ. ಫಿಟ್ನೆಸ್ ನಮಗೆ ಆರೋಗ್ಯಯುತವಾದ ಜೀವನವನ್ನು ನೀಡುತ್ತದೆ.
ಅನಾರೋಗ್ಯಗೊಂಡು ವೈದ್ಯರ ಬಳಿ ಸಾಕಷ್ಟು ಹಣ ತೆರುವುದಕ್ಕಿಂತ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಮನೆಯಲ್ಲಿಯೇ ಆರೋಗ್ಯಯುತವಾದ ಆಹಾರಗಳನ್ನು ಬಳಸಿದರೆ ವೈದ್ಯರಿಂದ ದೂರವಿರಬಹುದು. ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಸಣ್ಣ ಕಾಯಿಲೆಗಳು ನಮ್ಮಿಂದ ದೂರ ಹೋಗುತ್ತವೆ. ಅದರ ಜೊತೆಗೆ ಕೆಲವು ಮನೆಮದ್ದುಗಳ ಅಗತ್ಯ ಕೂಡ ಇದೆ. ನೀವು ಫಿಟ್ ಆಗಿ ಇರಬೇಕೆಂದರೆ ಕೇವಲ ಜಿಮ್ ಮತ್ತು ಆಹಾರದ ಜೊತೆಗೆ ಕೆಲವು ಜೀವನ ಶೈಲಿಯಲ್ಲಿ ಬದಲಾವಣೆ ಕೂಡ ಅಗತ್ಯವಾಗಿರುತ್ತದೆ.
ನೀವು ಫಿಟ್ ಆಗಿ ಇರಲು ಕೆಲವು ಮನೆ ಮದ್ದುಗಳನ್ನು ಇಲ್ಲಿ ನೀಡಲಾಗಿದೆ.ಓದಿ ನೋಡಿ.

ಸುಂದರ ಚರ್ಮಕ್ಕಾಗಿ ಸಮುದ್ರ ಆಹಾರಗಳು
ವಾರದಲ್ಲಿ 3 ದಿನ ಸಮುದ್ರ ಆಹಾರವನ್ನು ತಿನ್ನುವುದರಿಂದ ಮುಖದಲ್ಲಿ ಆಗುವ ನೆರಿಗೆಗಳನ್ನು ಶೇಖಡಾ 30 ರಷ್ಟು ತಡೆಯಬಹುದು. ಸಮುದ್ರ ಆಹಾರದಲ್ಲಿ ವಿಟಮಿನ್,ಪ್ರೋಟಿನ್,ಪೌಷ್ಟಿಕಾಂಶ ಮತ್ತು ಒಮೇಗಾ 3 ಇರುವುದರಿಂದ ಇದು ಕಾಲಜನ್ ಮತ್ತು ಸ್ನಾಯುಗಳನ್ನು ಪೋಷಿಸಿ ಚರ್ಮ ಮೃದುವಾಗಿ ಇರಲು ಸಹಕರಿಸುತ್ತದೆ. ಸಾಲ್ಮನ್ ಒಂದರಲ್ಲೇ antioxidants ಪ್ರಮಾಣ ಸಮೃದ್ಧವಾಗಿದೆ,ಇದು ಸುಕ್ಕನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

ಒತ್ತಡ ಕಡಿಮೆ ಮಾಡಲು ಗ್ರೀನ್ ಟೀ
ಹಸಿರು ಟೀ ನಿಮ್ಮ ಮಿದುಳಿನ ಸಕ್ಕರೆ ಅಂಶ ಉತ್ತೇಜಿಸಿ ಹಾರ್ಮೋನ್ ಗಳಿಗೆ ಶಕ್ತಿ ಒದಗಿಸಿ ಎಂಡಾರ್ಫಿನ್ ಉತ್ಪತ್ತಿಗೆ ಕಾರಣವಾಗುತ್ತದೆ. ಇದು ನಿಮ್ಮ ದೇಹದ ಆಯಾಸ ಕಡಿಮೆ ಮಾಡುತ್ತದೆ. ಆದ್ದರಿಂದ ವೈದ್ಯರು ಹಸಿರು ಟೀ ಕುಡಿದು ಶಕ್ತಿ ಪಡೆದುಕೊಂಡು ಉಲ್ಲಾಸ ಹೆಚ್ಚಿಸಿಕೊಳ್ಳಲು ಸಲಹೆ ನೀಡುತ್ತಾರೆ.

ಪ್ರಬಲ ಹೃದಯಕ್ಕಾಗಿ ವಾಲ್ನಟ್
ಹೃದಯ ತಜ್ಞರು ಹೃದಯಾಘಾತ ತಡೆಯಲು ಪ್ರತಿದಿನ 5-6 ವಾಲ್ ನಟ್ ತಿನ್ನಬೇಕು ಎಂದು ಸಲಹೆ ನೀಡುತ್ತಾರೆ. ಈ ನೈಸರ್ಗಿಕ ಶ್ರೀಮಂತ ವಾಲ್ ನಟ್ ನಲ್ಲಿ ಎಕಪರ್ಯಾಪ್ತ ಕೊಬ್ಬನ್ನು ಕಡಿಮೆ ಮಾಡಿ ಅಪದಮನಿಯನ್ನು ಸರಿಯಾಗಿ ಇಡಲು ಸಹಕರಿಸುತ್ತದೆ.

ಉತ್ತಮ ನೆನಪಿನ ಶಕ್ತಿಗೆ ಅರಿಶಿಣ
ನಿಮ್ಮ ಆಹಾರಕ್ಕೆ ಅರಿಶಿಣವನ್ನು ಬಳಸುವುದರಿಂದ ನಿಮ್ಮ ನೆನಪಿನ ಶಕ್ತಿಯು 30 ರಷ್ಟು ಹೆಚ್ಚುತ್ತದೆ ಎನ್ನಲಾಗಿದೆ. ಇದುವರೆಗೆ ಪತ್ತೆಯಾದುದರ ಪ್ರಕಾರ ಅರಿಶಿಣದಲ್ಲಿ ಇರುವ ಕರ್ಕ್ಯುಮಿನ್, ಅತ್ಯಂತ ಶಕ್ತಿಶಾಲಿ ಬುದ್ಧಿ ಬೆಳೆಸುವ ಉತ್ಕರ್ಷಣ ನಿರೋಧಕಗಳಲ್ಲಿ ಒಂದಾಗಿದೆ.

ಉತ್ತಮ ಉಸಿರಾಟದ ಮೂಲಕ ಒತ್ತಡ ನಿವಾರಣೆ
ಹೊಟ್ಟೆಯ ಉಸಿರಾಟದ ಮೂಲಕ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ನಿಧಾನವಾಗಿ ಮೂಗಿನ ಮೂಲಕ ಧೀರ್ಘ ಉಸಿರನ್ನು ಒಳಗೆ ತೆಗೆದುಕೊಂಡು 6 ಎಣಿಸಿ ನಂತರ ಹೊಟ್ಟೆಗೆ ವಿರಾಮ ನೀಡಿ, ಎಷ್ಟು ಸಾಧ್ಯವೋ ಅಷ್ಟು ಮಾಡಿ. ನಂತರ ಬಾಯಿಯ ಮೂಲಕ ಉಸಿರನ್ನು ಹೊರಗೆ ಬಿಡಿ ಮತ್ತು ವಿರಾಮ ತೆಗೆದುಕೊಳ್ಳಿ. ಇದೆ ರೀತಿ ಮುಂದುವರಿಸಿ.

ಸಣ್ಣ ನಿದ್ದೆ ಮೂಲಕ ನೋವುಗಳನ್ನು ಕಡಿಮೆ ಮಾಡಿಕೊಳ್ಳಿ
ನಿಮಗೆ ತಲೆನೋವು,ಸಂಧಿ ನೋವು,ಬೆನ್ನು ನೋವುಗಳ ತೊಂದರೆ ಇದೆಯೇ? ಅದಕ್ಕಾಗಿ ಚಿಂತಿಸಬೇಡಿ. ಸ್ವಲ್ಪ ಹೊತ್ತು ನಿದ್ರಿಸಿ.ಅಧ್ಯಯನದ ಪ್ರಕಾರ ನಿದ್ರಿಸುವುದರಿಂದ ಒಂದು ತಿಂಗಳಲ್ಲಿ ಅರ್ಧದಷ್ಟು ನೋವುಗಳನ್ನು ಕಡಿಮೆ ಮಾಡಬಹುದು. ನಿದ್ದೆ ಉರಿಯೂತ ಮತ್ತು ಹಾನಿಗೊಳಗಾದ ಅಂಗಾಂಶ ಗಳ ವೇಗವನ್ನು ಕಡಿಮೆ ಮಾಡಿ ಹಾರ್ಮೋನ್ ಗಳ ಬೆಳವಣಿಗೆಗೆ ಸಹಕರಿಸುತ್ತದೆ.

ರಕ್ತದ ಒತ್ತಡವನ್ನು ಕಡಿಮೆ ಮಾಡಲು ಚಕ್ಕೆ
ಸಂಶೋಧನೆಯ ಪ್ರಕಾರ ಪ್ರತಿದಿನ ಅರ್ಧ ಚಮಚ ಚಕ್ಕೆ ಪುಡಿಯನ್ನು ಅಡುಗೆಗೆ ಬಳಸುವುದರಿಂದ ಶೇಖಡ 29 ರಷ್ಟು ಸಕ್ಕರೆ ಅಂಶವನ್ನು ಸುಧಾರಿಸುತ್ತದೆ.ಇದು ನಿಮ್ಮ ಸಣ್ಣ ಕರುಳಿನ ಕಾರ್ಬನ್ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ.

ಬಲ ಹೆಚ್ಚಿಸಲು ತರಕಾರಿಗಳು
ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಸಾಕಷ್ಟು ತರಕಾರಿಗಳನ್ನು ತಿನ್ನಿ.ಕ್ಯಾರೆಟ್,ದಪ್ಪ ಮೆಣಸು,ಬೆಂಡೆಕಾಯಿ ಇವುಗಳೆಲ್ಲ ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುವ ತರಕಾರಿಗಳು. ವರ್ಣಮಯ ತರಕಾರಿಗಳು ಹೆಚ್ಚು ಉತ್ತಮ.ಸಸ್ಯದ ವರ್ಣದ್ರವ್ಯಗಳು ಶ್ವಾಸನಾಳದ ಒಳಪದರವನ್ನು ಆರೋಗ್ಯಕರವಾಗಿ ಇರಿಸುತ್ತದೆ ಇದರಿಂದ ವೈರಸ್ ಬಂದು ಅನಾರೋಗ್ಯ ಹರಡುವುದನ್ನು ತಪ್ಪಿಸಬಹುದು. ಆರೋಗ್ಯಯುತವಾಗಿ ಇರಬಹುದು.

ವೈರಸ್ ನಾಶಗೊಳಿಸಲು ಜೇನು
ನೈಸರ್ಗಿಕವಾಗಿ ದೊರಕುವ ಜೇನನ್ನು ನಿಮಗೆ ಅನಾರೋಗ್ಯವಾದಾಗ ತಿನ್ನುವುದರಿಂದ 3 ದಿನದ ಅನಾರೋಗ್ಯವನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ತಂಡಿ ಮತ್ತು ಸೈನಸ್ ಗೆ ಕಾರಣವಾದ ವೈರಸ್ ಅನ್ನು ನಾಶಗೊಳಿಸಲು ಸಹಕರಿಸುತ್ತದೆ.



Click it and Unblock the Notifications











