ಚಳಿಗಾಲದಲ್ಲಿ ಬೆಚ್ಚಗಿರಲು ಕೆಲವು ಆಹಾರಗಳು

By Hemanth P

ವರ್ಷದ ಅತ್ಯಂತ ತಂಪಾದ ಋತುವಿನ ಆಗಮನವಾಗಿದ್ದು, ಇದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಬೇಕಾಗಿದೆ. ಕಪಾಟಿನಲ್ಲಿರುವ ಉಣ್ಣೆಯ ಶಿರೋವಸ್ತ್ರಗಳು ಮತ್ತು ಸ್ವೆಟರ್ ಗಳನ್ನು ಹೊರತೆಗೆದು ಎಲ್ಲವನ್ನು ಸಿದ್ಧಗೊಳಿಸಿ. ನಿಮ್ಮ ತ್ವಚೆ ಮತ್ತು ಕೂದಲು ಒಣಗುವುದರಿಂದ ಚಳಿಗಾಲವು ನಿಮಗೆ ತುಂಬಾ ಕಠಿಣ ಸಮಯ. ಕಠಿಣ ಋತುವನ್ನು ದಾಟಿ ಮುನ್ನಡೆಯಲು ಚಳಿಗಾಲದಲ್ಲಿ ದೇಹದ ಆರೈಕೆ ತುಂಬಾ ಮುಖ್ಯವಾಗಿರುತ್ತದೆ. ಚಳಿಗಾಲದ ಋತುವನ್ನು ಎದುರಿಸಲು ನೀವು ಸೂಕ್ತ ತಯಾರಿ ನಡೆಸಿದರೂ ಸೂಕ್ತ ಆಹಾರ ಮತ್ತು ಪೌಷ್ಠಿಕಾಂಶಗಳು ಮುಖ್ಯವಾಗಿರುತ್ತದೆ.

ಆಹಾರ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ದೇಹದಲ್ಲಿನ ಬಿಎಂಐಯನ್ನು ನಿರ್ವಹಿಸಲು ಸರಿಯಾದ ಆಹಾರ ಬೇಕಾಗುತ್ತದೆ. ನಿಮ್ಮ ದೇಹ ಋತುವಿಗೆ ಹೊಂದಿಕೊಳ್ಳಬೇಕು ಮತ್ತು ಇದಕ್ಕಾಗಿ ಸರಿಯಾದ ರೀತಿಯ ಆಹಾರ ಸೇವಿಸಬೇಕಾಗುತ್ತದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವಂತಹ ಆಹಾರ ಅತ್ಯಗತ್ಯ. ಚಳಿಗಾಲದಲ್ಲಿ ಬೆಚ್ಚಗಿನ ಆಹಾರ ಮತ್ತು ಬೇಸಿಗೆಯಲ್ಲಿ ತಂಪಾದ ಆಹಾರ ತಿನ್ನುವುದು ಸಾಮಾನ್ಯ. ಚಯಾಪಚಯ ಕ್ರಿಯೆ ಎಲ್ಲಾ ಋತುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲೂ ಚಳಿಗಾಲದಲ್ಲಿ. ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಿ, ರೋಗಗಳನ್ನು ದೂರವಿಡುತ್ತದೆ. ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಬಲ್ಲ ಕೆಲವೊಂದು ಆಹಾರಗಳು ಇಲ್ಲಿವೆ.

ಶುಂಠಿಯ ಚಿಕಿತ್ಸೆ

ಶುಂಠಿಯ ಚಿಕಿತ್ಸೆ

ಔಷಧಿಯ ಗುಣವುಳ್ಳ ಶುಂಠಿಯನ್ನು ಮಕ್ಕಳು ಮತ್ತು ವಯಸ್ಕರು ಸೇವಿಸುವುದು ಸಾಮಾನ್ಯ. ಇದು ಶೀತ ಮತ್ತು ಜ್ವರಕ್ಕೆ ತುಂಬಾ ಪರಿಣಾಮಕಾರಿ. ಇದು ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುವ ಆಹಾರ ಮತ್ತು ಶುಂಠಿ ಹಾಕಿದ ಒಂದು ಕಪ್ ಚಹಾ ಕೊಬ್ಬಿನ ಆಹಾರವನ್ನು ಜೀರ್ಣಿಸಲು ನೆರವಾಗುತ್ತದೆ. ಇದು ಆ್ಯಸಿಡಿಟಿಗೆ ಒಳ್ಳೆಯ ಚಿಕಿತ್ಸೆ

ಕಡಲೆಕಾಯಿಗಳು

ಕಡಲೆಕಾಯಿಗಳು

ಚಳಿಗಾಲದಲ್ಲಿ ಆಕ್ಸಿಜನ್ ಪ್ರಮಾಣ ತುಂಬಾ ಕಡಿಮೆಯಿರುತ್ತದೆ. ಸರಿಯಾದ ಚಳಿಗಾಲದ ಆಹಾರ ಕ್ರಮಕ್ಕೆ ಆಕ್ಸಿಜನ್ ನ್ನು ಸೂಕ್ತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ನೀವು ಕಡಲೆಕಾಯಿ ಸೇವಿಸಬೇಕು. ಇದು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತದೆ.

ಜೇನುತುಪ್ಪ

ಜೇನುತುಪ್ಪ

ಚಳಿಗಾಲದ ಆಹಾರ ಕ್ರಮದಲ್ಲಿ ನೀವು ಜೇನುತುಪ್ಪವನ್ನು ಸೇರಿಸಿ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಇದು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿ ಸೇವಿಸುವುದರಿಂದ ಹಲವಾರು ಲಾಭಗಳಿವೆ ಮತ್ತು ಇದು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಒಳ್ಳೆಯ ಆಹಾರ. ಚಳಿಗಾಲದಲ್ಲಿ ತುಂಬಾ ಸಾಮಾನ್ಯವಾಗಿರುವ ಮಲಬದ್ಧತೆ ನಿವಾರಿಸಲು ಇದು ನೆರವಾಗುತ್ತದೆ. ಬಾದಾಮಿ ಡಯಾಬಿಟಿಸ್ ಗೂ ಒಳ್ಳೆಯದು. ವಿಟಮಿನ್ ಇ ಹೊಂದಿರುವ ಬಾದಾಮಿ ನಿಮ್ಮ ತ್ವಚೆಗೂ ಉಪಯೋಗಿ.

ಸಾಕಷ್ಟು ಕಾಳುಗಳನ್ನು ಸೇರಿಸಿ

ಸಾಕಷ್ಟು ಕಾಳುಗಳನ್ನು ಸೇರಿಸಿ

ರಾಗಿ ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಅತ್ಯುತ್ತಮ ಆಹಾರ. ರಾಗಿ ರೊಟ್ಟಿ ಮಾಡಿ ಮತ್ತು ಇದನ್ನು ಮಕ್ಕಳು ತುಂಬಾ ಇಷ್ಟಪಡಬಹುದು. ಇದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳಿವೆ.

ನೀರು ಇರುವ ಹಣ್ಣುಗಳನ್ನು ಕಡಿಮೆ ಮಾಡಿ

ನೀರು ಇರುವ ಹಣ್ಣುಗಳನ್ನು ಕಡಿಮೆ ಮಾಡಿ

ನೀರಿನ ಆಹಾರ ಮತ್ತು ಹಣ್ಣುಗಳನ್ನು ಚಳಿಗಾಲದಲ್ಲಿ ಕಡೆಗಣಿಸಿ. ಚಳಿಗಾಲದಲ್ಲಿ ನೀವು ಬೆಚ್ಚಗಿರಬೇಕೆಂದರೆ ನೀವು ಪೀಚ್, ದ್ರಾಕ್ಷಿ ಮತ್ತು ಕಿತ್ತಳೆಯನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿ. ನೀರಿನ ಹಣ್ಣುಗಳನ್ನು ತಿಂದರೆ ಚಳಿಗಾಲದಲ್ಲಿ ನಿಮ್ಮ ದೇಹ ತಂಪಾಗುತ್ತದೆ.

ನಿಮ್ಮನ್ನು ಬೆಚ್ಚಗಿಡಲು

ನಿಮ್ಮನ್ನು ಬೆಚ್ಚಗಿಡಲು

ಎಳ್ಳನ್ನು ನೀವು ಚಳಿಗಾಲದ ಆಹಾರ ಕ್ರಮದಲ್ಲಿ ಅಗತ್ಯವಾಗಿ ಬಳಸಿಕೊಳ್ಳಬಹುದು. ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡುವಂತಹ ಆಹಾರವನ್ನು ನಿಮ್ಮ ಆಹಾರಕ್ರಮಕ್ಕೆ ಸೇರಿಸಿಕೊಳ್ಳಬೇಕು. ಎಳ್ಳು ದೇಹದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡಿ ಚಯಾಪಚಯಾ ಕ್ರಿಯೆಗೆ ನೆರವಾಗುತ್ತದೆ.

ಒಮೆಗಾ-3 ಕೊಬ್ಬಿನ ಆಮ್ಲ

ಒಮೆಗಾ-3 ಕೊಬ್ಬಿನ ಆಮ್ಲ

ಒಮೆಗಾ-3 ಕೊಬ್ಬಿನ ಆಮ್ಲವಿರುವ ಆಹಾರ ಚಳಿಗಾಲದಲ್ಲಿ ತುಂಬಾ ಒಳ್ಳೆಯದು. ಒಮೆಗಾ-3 ಕೊಬ್ಬಿನ ಆಮ್ಲವು ಸಾಮಾನ್ಯವಾಗಿ ಮೀನುಗಳಲ್ಲಿ ಕಂಡುಬರುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಮೀನು ಸೇವನೆಯಿಂದ ನೀವು ಆರೋಗ್ಯವಾಗಿರಬಹುದು. ಇದರಲ್ಲಿ ಸತುವಿದ್ದು, ಇದು ಬಿಳಿ ರಕ್ತ ಕಣಗಳು ಕ್ರಿಯಾಶೀಲವಾಗಿರಲು ನೆರವಾಗುತ್ತದೆ. ರೋಗನಿರೋಧಕ ವ್ಯವಸ್ಥೆಗೆ ಬಿಳಿರಕ್ತ ಕಣಗಳು ಜವಾಬ್ದಾರಿ. ರೋಗನಿರೋಧಕ ವ್ಯವಸ್ಥೆಯಿಂದ ರೋಗಗಳು ದೂರವಿರುತ್ತದೆ.

ತರಕಾರಿಗಳನ್ನು ಸೇರಿಸಿ

ತರಕಾರಿಗಳನ್ನು ಸೇರಿಸಿ

ತರಕಾರಿಗಳನ್ನು ಸೇರಿಸುವುದರಿಂದ ನಿಮ್ಮ ಆಹಾರ ಕ್ರಮ ಪರಿಪೂರ್ಣವಾಗುತ್ತದೆ. ತರಕಾರಿಗಳು ನಿಮಗೆ ಸೂಕ್ತ ಶಕ್ತಿ ನೀಡಿ ಚಳಿಗಾಲಕ್ಕೆ ನಿಮ್ಮನ್ನು ತಯಾರುಗೊಳಿಸಬಹುದು. ಹಸಿರು, ಕ್ಯಾರೆಟ್ ಮತ್ತು ಬೀಟ್ ರೂಟ್ ನ್ನು ನಿಮ್ಮ ಆಹಾರಕ್ರಮಕ್ಕೆ ಸೇರಿಸಿ.

ಬಾಳೆಹಣ್ಣು ತಿನ್ನಿ

ಬಾಳೆಹಣ್ಣು ತಿನ್ನಿ

ಬಾಳೆಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಬಿ ಹಾಗೂ ಮೆಗ್ನಿಷಿಯಮ ಇದ್ದು ಇದು ಥೈರಾಯ್ಡ್ ಗ್ರಂಥಿ ಹಾಗೂ ಅಡ್ರೀನಲ್ ಗ್ರಂಥಿ ಚೆನ್ನಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಈ ಗ್ರಂಥಿಗಳು ದೇಹದ ಉಷ್ಣತೆ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಬಾಳೆಹಣ್ಣು ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಕಾಡುವ ಸ್ನಾಯುಸೆಳೆತ ತಡೆಗಟ್ಟುವಲ್ಲಿ ಬಾಳೆಹಣ್ಣು ಸಹಕಾರಿ, ರಕ್ತದೊತ್ತಡವನ್ನು ಸಮತೊಲನದಲ್ಲಿಡುತ್ತದೆ. ಅಸಿಡಿಟಿ ಸಮಸ್ಯೆ ಇರುವವರು ಬಾಳೆಹಣ್ಣು ತಿನ್ನುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.

 ಓಟ್ಸ್ ತಿನ್ನಿ

ಓಟ್ಸ್ ತಿನ್ನಿ

ಬೆಳಗ್ಗಿನ ಬ್ರೇಕ್‌ಫಾಸ್ಟ್ ಒಟ್ಸ್ ಜತೆ ಪ್ರಾರಂಭಿಸಿದರೆ ತುಂಬಾ ಒಳ್ಳೆಯದು. ಓಟ್ಸ್‌ನಲ್ಲಿ ನಾರಿನಂಶ ಅಧಿಕವಿದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡುತ್ತದೆ ಹಾಗೂ ದೇಹವನ್ನು ಬೆಚ್ಚಗಿಡುತ್ತದೆ. ಓಟ್ಸ್‌ ತಿನ್ನುವುದರಿಂದ ಸ್ನಾಯುಗಳಿಗೆ ಹೆಚ್ಚಿನ ಪ್ರೊಟೀನ್ ಸಿಗುತ್ತದೆ, ಇದರಲ್ಲಿ ವಿಟಮಿನ್ ಬಿ ಹಾಗೂ ಕಾರ್ಬೋಹೈಟ್ರೇಟ್ಸ್ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಓಟ್ಸ್‌ನಲ್ಲಿಆ್ಯಂಟಿಆಕ್ಸಿಡೆಂಟ್ ಅದಿಕವಿರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು. ಒಟ್ಸ್ ಜತೆಗೆ ಕಿತ್ತಳೆ ಜ್ಯೂಸ್‌ ಸೇವಿಸಿದರೆ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಸಿಹಿ ಗೆಣಸು ತಿನ್ನಿ

ಸಿಹಿ ಗೆಣಸು ತಿನ್ನಿ

ಸಿಹಿ ಗೆಣಸು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಹಾಗೂ ಇದನ್ನು ತಿನ್ನುವುದರಿಂದ ದೇಹದ ಉಷ್ಣತೆ ಹೆಚ್ಚುವುದು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪೊಟಾಷ್ಯಿಯಂ ಇದ್ದು ಚಳಿಗಾಲದಲ್ಲಿ ತಿನ್ನಬೇಕಾದ ಆಹಾರಗಳಲ್ಲಿ ಇದು ಒಂದಾಗಿದೆ. ಇನ್ನು ಮಧುಮೇಹಿಗಳು ಇದನ್ನು ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಚಳಿಗಾಲದಲ್ಲಿ ಕಾಡುವ ಶೀತ, ಕೆಮ್ಮುವನ್ನು ತಡೆಗಟ್ಟಿ ರೋಗ ನಿರೋಧಕ ಸಕ್ತಿ ಹೆಚ್ಚಿಸುವಲ್ಲಿ ಸಿಹಿಗೆಣಸು ಸಹಕಾರಿಯಾಗಿದೆ.

ಆಗಾಗ ಬಿಸಿ ಬಿಸಿಯಾದ ನೀರು ಕುಡಿಯಿರಿ

ಆಗಾಗ ಬಿಸಿ ಬಿಸಿಯಾದ ನೀರು ಕುಡಿಯಿರಿ

ಮೈಯನ್ನು ಬೆಚ್ಚಗೆ ಇಡಲು ಮತ್ತೊಂದು ವಿಧಾನವೆಂದರೆ ಅಗಾಗ ಬಿಸಿ ನಿರು ಕುಡಿಯಿರಿ. ಬಿಸಿ ನಿರು ಕುಡಿಯುವುದರಿಂದ ಜೀರ್ಣಕ್ರಿಯೆ ಕೂಡ ಚೆನ್ನಾಗಿ ನಡೆಯುತ್ತದೆ. ಇದು ಶೀತದಿಂದ ಮೂಗುಕಟ್ಟಿದ್ದರೆ ಸರಿಪಡಿಸುವಲ್ಲಿ ಸಹಕಾರಿ. ದೇಹದಲ್ಲಿ ರಕ್ತಪರಿಚಲನೆ ಉತ್ತಮವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಮಲಬದ್ಧತೆ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿ.

ಮದ್ಯಪಾನ ಮಾಡಬೇಡಿ

ಮದ್ಯಪಾನ ಮಾಡಬೇಡಿ

ಚಳಿಗೆ ಸ್ವಲ್ಪ ಮದ್ಯ ತೆಗೆದುಕೊಂಡರೆ ಮೈ ಬೆಚ್ಚಗಾಗುವುದು ಎಂದು ಹೇಳುವುದನ್ನು ಕೇಳಿರಬಹುದು, ಮದ್ಯ ಕುಡಿದಾಗ ಮೊದಲಿಗೆ ಬೆಚ್ಚಗೆ ಅನಿಸಿದರೂ ನಂತರ ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಮೈ ಬೆಚ್ಚಗಾಗಲು ಮನೆಯಿಂದ ಹೊರಗಡೆ ಬಂದು ಆಟ ಆಡಿ. ಇದರಿಂದ ಮೈ ಹಾಗೂ ಮನಸ್ಸು ಉಲ್ಲಾಸವಾಗುವುದು.

X
Desktop Bottom Promotion