Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಯೋಗ ಮಾಡುವ ಮುನ್ನ ತಿನ್ನಬಹುದಾದ ಆಹಾರಗಳು
ಯೋಗ ಮಾಡುತ್ತಿರುವ ಮಾನಸಿಕ ಮತ್ತು ದೈಹಿಕ ಆರೋಗ್ಯ ಯೋಗ ಮಾಡದ ವ್ಯಕ್ತಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ದಿನನಿತ್ಯ ಯೋಗ ಮಾಡುವ ವ್ಯಕ್ತಿಯ ಮೈ ಕಟ್ಟು ಆಕರ್ಷಕವಾಗಿರುತ್ತದೆ ಹಾಗೂ ಬೊಜ್ಜು, ಒಬೆಸಿಟಿ ಈ ಸಮಸ್ಯೆಗಳ ಭಯವಿಲ್ಲದೆ ಹಾಯಾಗಿ ಇರುತ್ತದೆ, ಅವರಿಗೆ ಮನಸ್ಸಿನ ಮೇಲೆ ಹಿಡಿತ ಸಾಧಿಸುವುದು ಹೇಗೆ ಎಂದು ಗೊತ್ತಿರುತ್ತದೆ. ಮಾನಸಿಕ ಒತ್ತಡವನ್ನು ಹೊರಹಾಕಲು, ಕೋಪವನ್ನು ನಿಯಂತ್ರಿಸಲು ಯೋಗ ಮಾಡುವವರಿಗೆ ಸಾಧ್ಯ. ದಿನಾ ಅರ್ಧ ಗಂಟೆ ಯೋಗಕ್ಕೆ ವಿನಿಯೋಗಿಸಿದರೆ ನಮ್ಮನ್ನು ಕಾಡುವ ಹಲವಾರು ಮಾನಸಿಕ ಮತ್ತು ದೈಹಿಕ ಸಮಸ್ಯೆಯಿಂದ ದೂರವಿರಬಹುದು.
ಯೋಗವನ್ನು ನಮ್ಮ ಮನಸ್ಸು ಬಂದಂತೆ ಮಾಡಲು ಸಾಧ್ಯವಿಲ್ಲ, ಅದಕ್ಕೆ ಕೆಲವೊಂದು ನಿಯಮಗಳಿವೆ. ಏಕೆಂದರೆ ಯೋಗದಲ್ಲಿ ನೀವು ದೇಹದ ಚಲನೆಗಿಂತ ಮನಸ್ಸಿನ ಮೇಲೆ ಗಮನ ಹರಿಸಬೇಕಾಗುತ್ತದೆ. ಮನಸ್ಸಿನ ಮೇಲೆ ನಿಯಂತ್ರಣ ತಂದರೆ ಯೋಗ ಪೋಸ್ ಗಳಿಗೆ ತಕ್ಕಂತೆ ನಿಮ್ಮ ದೇಹವನ್ನು ಭಾಗಿಸಬಹುದು. ಯೋಗ ಮಾಡುವ ಮುನ್ನ ಹೊಟ್ಟೆ ಹಗುರವಾಗಿರಬೇಕು. ಆದ್ದರಿಂದ ಲಘ ಆಹಾರ ತಿನ್ನುವುದು ಒಳ್ಳೆಯದು.
ಯೋಗ ಮಾಡುವ ಯಾವ ಆಹಾರಗಳನ್ನು ತಿಂದರೆ ಒಳ್ಳೆಯದು ಎಂಬ ಪಟ್ಟಿಯನ್ನು ಈ ಕೆಳಗೆ ನೀಡಿದ್ದೇವೆ ನೋಡಿ:
ಸೂಚನೆ: ಈ ಆಹಾರಗಳನ್ನು ಯೋಗ ಕ್ಲಾಸ್ ಗೆ ಹೋಗುವ ಅರ್ಧ ಗಂಟೆ ಮುಂಚೆ ತಿನ್ನಿ.

ಬಾದಾಮಿ
ಯೋಗ ಮಾಡುವ ಮುನ್ನ 3-4 ನೆನೆ ಹಾಕಿದ ಬಾದಾಮಿಯನ್ನು ತಿನ್ನುವುದು ಒಳ್ಳೆಯದು.

ಓಟ್ಸ್
ಹೊಟ್ಟೆ ಹಸಿವು ತಡೆಯಲು ಸ್ವಲ್ಪ ಓಟ್ಸ್ ತಿಂದು ಯೋಗ ಮಾಡುವುದು ಒಳ್ಳೆಯದು. ಇದು ನಿಮ್ಮ ಸ್ಟ್ಯಾಮಿನವನ್ನು ಕೂಡ ಹೆಚ್ಚಿಸುತ್ತದೆ.

ಪಿಯರ್ ಅಥವಾ ಆಪಲ್
ಯೋಗ ಮಾಡುವ ಒಂದು ಪಿಯರ್ ಹಣ್ಣು ಅಥವಾ ಬೇಕಾದರೆ ತಿನ್ನಬಹುದು. ಇವುಗಳಲ್ಲಿ ನಾರಿನಂಶ ಹಸಿವನ್ನು ನಿಯಂತ್ರಿಸಿ, ಯೋಗದ ಮೇಲೆ ನಿಮ್ಮ ಗಮನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಒಣದ್ರಾಕ್ಷಿ
ಒಣದ್ರಾಕ್ಷಿಯಲ್ಲಿರುವ ಸಕ್ಕರೆಯಂಶ ನಿಮ್ಮನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಆದ್ದರಿಂದ ಯೋಗ ಮಾಡುವ ಮುನ್ನ ಸ್ವಲ್ಪ ಒಣದ್ರಾಕ್ಷಿಯನ್ನು ಬಾಯಿಗೆ ಹಾಕಿದರೆ ಒಳ್ಳೆಯದು.

ಬಾಳೆಹಣ್ಣು
ಯೋಗ ಕ್ಲಾಸ್ ಗೆ ಹೋಗುವ 15 ನಿಮಿಷಕ್ಕೆ ಮುನ್ನ 1 ಬಾಳೆ ಹಣ್ಣು ತಿಂದು ಹೋದರೆ ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ಆಪ್ರಿಕಾಟ್
ಯೋಗ ಮಾಡುವ ಮುನ್ನ ತಿನ್ನಬಹುದಾದ ಮತ್ತೊಂದು ಉತ್ತಮವಾದ ಹಣ್ಣೆಂದರೆ ಆಪ್ರಿಕಾಟ್.

ಕಲ್ಲಂಗಡಿ ಹಣ್ಣು
ಒಂದು ಪೀಸ್ ಕಲ್ಲಂಗಡಿ ಹಣ್ಣು ದೇಹದಲ್ಲಿ ಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ಬಾಯಾರಿಕೆಯಾಗುವುದನ್ನು ತಡೆಯುತ್ತದೆ.

ಮೊಸರು
ಒಂದು ಕಪ್ ಮೊಸರನ್ನು ಬೇಕಾದರೆ ಯೋಗ ಮಾಡುವ ಅರ್ಧ ಗಂಟೆಗೆ ಮುನ್ನ ಸೇವಿಸಬಹುದು.

ಚಾಕಲೇಟ್
ಚಾಕಲೇಟ್ ತಿನ್ನುವುದಾದರೆ ಡಾರ್ಕ್ ಚಾಕಲೇಟ್ ನ ಆಯ್ಕೆ ಒಳ್ಳೆಯದು.



Click it and Unblock the Notifications