Latest Updates
-
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ತೂಕ ಇಳಿಸಲು ಸೆಲೆಬ್ರಿಟಿ ಡಯಟ್ ಮಾಡಿನೋಡಿ!
ಇನ್ನೇನು ಕ್ರಿಸ್ ಮಸ್ ರಜಾದಿನಗಳು ಹತ್ತಿರ ಬರುತ್ತಿವೆ. ತೂಕಹೆಚ್ಚಿಸಿಕೊಳ್ಳಲು ಕೇಕ್ ಸೀಸನ್ ಕಾಯುತ್ತಿದೆ. ಬೇಡಪ್ಪ ಹೆಚ್ಚಿರುವ ತೂಕ ಇಳಿಸಿಕೊಂಡು ಬಿಡೋಣ ಅಂದುಕೊಂಡಿದ್ದರೆ ಕ್ರಿಸ್ ಮಸ್ ರಜದಲ್ಲಿ ಪ್ರಯತ್ನಿಸಬಹುದು. ಬಾಡಿ ಫಿಟ್ಟಿಂಗ್ ಡ್ರೆಸ್ ಗಳಲ್ಲಿ ತಮ್ಮ ನೆಚ್ಚಿನ ತಾರೆಯರ ಹಾಗೆ ಕಾಣಬೇಕು ಎಂದುಕೊಂಡಿದ್ದರೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಹಾರ ಸೇವಿಸಿದ ಬಳಿಕವೂ ಹಸಿವಾಗಲು ಕಾರಣಗಳು
ಯಾವಾಗಲೂ ಹೆಂಗಸರಿಗೆ ತೂಕ ಇಳಿಸಿಕೊಳ್ಳುವ ವಿಧಾನಗಳ ಬಗ್ಗೆ ಹೇಳುವುದನ್ನು ಕೇಳಿರುತ್ತೇವೆ. ಈವತ್ತು ಸುಂದರ ಮೈಕಟ್ಟನ್ನು ಪಡೆಯಲು ಪುರುಷರು ಏನು ಮಾಡಬಹುದು ಎಂದು ನೋಡೋಣ. ನಿಮ್ಮ ತೋಳು, ಭುಜ ಮತ್ತು ಹೊಟ್ಟೆಯ ಸುತ್ತ ನಿಂತಿರುವ ಕೊಬ್ಬನ್ನು ಕರಗಿಸಬೇಕೆಂದುಕೊಂಡಿದ್ದರೆ ಒಂದು ವಾರದ ಮಟ್ಟಿಗಾದರೂ ಪ್ರೊಟೀನ್ ಡಯಟ್ ಮಾಡಿ.
ಪರಿಣಿತರ ಪ್ರಕಾರ ನೀವು ಮಾಂಸದಲ್ಲಿನ ಕೊಬ್ಬನ್ನು ಇಳಿಸಬೇಕೆಂದಿದ್ದರೆ ಈ ಸೆಲೆಬ್ರಿಟಿ ಡಯಟ್ ಮಾಡಿದರೆ ಒಳ್ಳೆಯದು. ನೆನಪಿಡಿ ಆಹಾರವನ್ನು ತಿನ್ನದೆ ಹೋಗುವುದರಿಂದ ಅಪೌಷ್ಟಿಕತೆ ಕಾಡಬಹುದು ಆದ್ದರಿಂದ ನೀವು ಮಲ್ಟಿವಿಟಮಿನ್ ಗಳನ್ನು ತೆಗೆದುಕೊಳ್ಳಬೇಕಾಗಬಹುದು.
ಪರಿಣಿತರು ಹೇಳುವಂತೆ ತಾಜಾ ಆಗಿರುವ ಸಂಸ್ಕರಿಸದ, ಮತ್ತು ಹಸಿಯಾದ ಆಹಾರಗಳನ್ನು ತಿನ್ನುವುದು ಮಾಂಸದ ಕೊಬ್ಬನ್ನು ಇಳಿಸಲು ಸಹಕಾರಿ. ಟೋನ್ಡ್ ಮಸಲ್ಸ್ ಮತ್ತು ಆಬ್ಸ್ ಪಡೆಯಲು ಈ ರೀತಿಯ ಆಹಾರ ಪದ್ಧತಿಯನ್ನು ನಿಮ್ಮದಾಗಿಸಿಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಾರದೊಳಗೆ ಹೊಟ್ಟೆಯ ಕೊಬ್ಬು ಕರಗಲು ಹೀಗೆ ಮಾಡಿ!

ಅವಕ್ಯಾಡೊ
ತೂಕ ಇಳಿಸಿಕೊಳ್ಳಲು ಈ ಹಣ್ಣು ಸಹಕಾರಿ. ಹ್ಯೂ ಗ್ರಾನ್ಟ್ ಎನ್ನುವ ತಾರೆ ಈ ಹಣ್ಣನ್ನು ಎರಡು ವಾರಗಳಿಗೊಮ್ಮೆ ಈ ಪ್ರೊಟಿನ್ ಹೆಚ್ಚಿರುವ ಹಣ್ಣನ್ನು ತಿನ್ನುತ್ತಾರಂತೆ. ಇದರಲ್ಲಿ ಆರೋಗ್ಯಕರ ಕೊಬ್ಬಿನ ಅಂಶಗಳಿವೆ.

ಬೀಜಗಳು
ಸೂರ್ಯಕಾಂತಿಯ ಬೀಜಗಳಲ್ಲಿ ಆರೋಗ್ಯಕರ ಪ್ರೊಟೀನ್ ಗಳಿರುತ್ತವೆ. ಇದು ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಒಂದು ಹಿಡಿಯಷ್ಟು ಇದರ ಬೀಜಗಳನ್ನು ತಿನ್ನುವುದು ಈ ನಿಟ್ಟಿನಲ್ಲಿ ಸಹಕಾರಿ.

ಒಣ ಹಣ್ಣುಗಳು
ಬಾದಾಮಿ ಎಲ್ಲರಿಗೂ ಇಷ್ಟ. ಶಾಹಿದ್ ಕಪೂರ್ ಒಂದು ಹಿಡಿ ಬಾದಾಮಿಯನ್ನು ತಿನ್ನುತ್ತಾನಂತೆ. ಪ್ರೊಟಿನ್ ಹೆಚ್ಚಿರುವ ಬಾದಾಮಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಕಾರಿ.

ಆಲಿವ್ ಎಣ್ಣೆ
ತರಕಾರಿ ಎಣ್ಣೆಗೆ ಹೋಲಿಸಿದಲ್ಲಿ ಈ ಎಣ್ಣೆ ತೂಕ ಇಳಿಸಲು ಸಹಕಾರಿ. ಈವತ್ತು ಹಲವು ಮಂದಿ ಸೆಲೆಬ್ರಿಟಿಗಳು ಆಲಿವ್ ಎಣ್ಣೆಯು ಉತ್ತಮ ಪ್ರೊಟಿನ್ ಆಹಾರ ಎನ್ನುವ ಕಾರಣಕ್ಕೆ ಇದನ್ನು ಬಳಸುತ್ತಿದ್ದಾರೆ.

ಲೀನ್ ಮೀಟ್
ಟರ್ಕಿ ಮತ್ತು ಚಿಕನ್ ನೀವು ಬಳಸಬಹುದಾದ ಉತ್ತಮ ಲೀನ್ ಮೀಟ್ ಗಳು. ಇವೆರಡರಲ್ಲೂ ಪ್ರೊಟಿನ್ ಹೆಚ್ಚಿರುತ್ತದೆ.

ಮೀನು
ಸಾಲಮೊನ್ ಮೀನಿನಲ್ಲಿ ಪ್ರೊಟಿನ್ ಹೆಚ್ಚಿರುತ್ತದೆ. ಇದರಲ್ಲಿನ ಒಮೆಗ ಫ್ಯಾಟಿ ಆಸಿಡ್ ಗಳು ಕೂಡ ನಿಮಗೆ ಪ್ರಯೋಜನಕಾರಿ.

ಸ್ಪಿನಾಚ್
ಸ್ಪಿನಾಚ್ ಕೂಡ ಪ್ರೊಟಿನ್ ಡಯೆಟ್ ನಲ್ಲಿ ಬಳಸಬಹುದಾದ ಆಹಾರ. ಇದು ಕೂಡ ತೂಕ ಇಳಿಸುವಲ್ಲಿ ಸಹಕಾರಿ.

ಮೆಣಸು
ಟೋನ್ಡ್ ಆಬ್ಸ್ ಮತ್ತು ಗಾತ್ರ ಕಡಿಮೆಗೊಳಿಸಿಕೊಳ್ಳಬೇಕೆನ್ನುವವರು ಈ ಕಲರ್ ಫುಲ್ ಪೆಪ್ಪರ್ ಸಲಾಡ್ ಡಯೆಟ್ ಅನುಸರಿಸಿದರೆ ಒಳ್ಳೆಯದು. ಇದು ವೇಗವಾಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ಬ್ರೊಕೊಲಿ
ಇದು ಕಹಿ ಆದರೆ ಒಳ್ಳೆಯ ಪ್ರೊಟಿನ್ ಯುಕ್ತ ಆಹಾರ. ಆದ್ದರಿಂದ ಡಯೆಟ್ ಆಹಾರದಲ್ಲಿ ಬಳಸುವ ಹಸಿರು ತರಕಾರಿಗಳೊಂದಿಗೆ ಇದನ್ನು ಸೇರಿಸಿಕೊಳ್ಳಿ.

ಗೆಣಸು
ಹಲವು ಮಂದಿ ತಾರೆಯರು ತಮ್ಮ ಡಯೆಟ್ ನಲ್ಲಿ ಗೆಣಸನ್ನು ಬಳಸುತ್ತಾರೆ. ಇದನ್ನು ಬೇಯಿಸಿ ತಿನ್ನಬಹುದು.

ಕುಚ್ಚಲಕ್ಕಿ
ಬಿಳಿ ಅಕ್ಕಿಗಿಂತ ಕುಚ್ಚಲಕ್ಕಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು 20 ದಿನ ಬಿಡದೆ ಬಳಸಿದಿರಾದರೆ ಖಂಡಿತವಾಗಿಯೂ ತೂಕ ಕಳೆದುಕೊಳ್ಳುವಿರಿ ಬಳಸಿ ನೋಡಿ. ಆದ್ದರಿಂದಲೇ ಹಲವು ಮಂದಿ ಸೆಲೆಬ್ರಿಟಿಗಳು ಬಿಳಿ ಅಕ್ಕಿಯನ್ನು ಬಿಟ್ಟು ಕುಚ್ಚಲಕ್ಕಿಯನ್ನು ಬಳಸುತ್ತಾರೆ.

ಕಾಳುಗಳು
ಕಾಳುಗಳಲ್ಲಿ ಪ್ರೊಟಿನ್ ಹೆಚ್ಚಿರುತ್ತದೆ. ಇದನ್ನು ದಿನವೂ ನಿಮ್ಮ ಡಯೆಟ್ ಆಹಾರದಲ್ಲಿ ಬಳಸಿ.

ಕ್ಯಾರೆಟ್
ಕ್ಯಾರೆಟ್ ಜ್ಯೂಸ್ ಅಥವ ಹಸಿ ಕ್ಯಾರೆಟ್ ತೂಕ ಇಳಿಸಲು ಬಳಸಬಹುದಾದ ತರಕಾರಿಗಳಲ್ಲಿ ಉತ್ತಮವಾದ ಆಯ್ಕೆ. ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯನ್ನು ಬೇಗ ಕರಗಿಸಬಹುದು.

ಅನಾನಸ್
ಅನಾನಸ್ ತಿನ್ನುವುದರಿಂದ ಹೆಚ್ಚುವರಿ ಸೊಂಟದ ಕೊಬ್ಬನ್ನು ಕರಗಿಸುತ್ತದೆ. ಆದ್ದರಿಂದಲೇ ಸೆಲೆಬ್ರಿಟಿಗಳು ಇದನ್ನು ಬಳಸುತ್ತಾರೆ.

ಸೇಬು
ವಾರಕ್ಕೊಮ್ಮೆ ಸೇಬನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳಬಹುದು.



Click it and Unblock the Notifications