Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಸ್ ತಿನ್ನುವುದರಿಂದ ಕ್ಯಾಲರಿ ಕಡಿಮೆಯಾಗುತ್ತಾ?
ನಿಮಗೆ ಐಸ್ ಕ್ರೀಂ ಎಂದರೆ ಪಂಚಪ್ರಾಣವೇ? ಎಷ್ಟೇ ಐಸ್ ಕ್ರೀಂ ತಿಂದರೂ ಅದರಿಂದ ತೂಕ ಹೆಚ್ಚಾಗಬಾರದೆಂದು ನೀವು ಬಯಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೆ ಶುಭಸಮಾಚಾರವಿದೆ. ಇದೇ ವೇಳೆ ಚಾಕಲೇಟ್ ಚಿಪ್ ತಿಂದೂ ನೀವು ಸಪೂರವಾಗಿರಬಹುದು. ಸಂಶೋಧನೆಗಳು ಐಸ್ ಕ್ರೀಂ ಬಗ್ಗೆ ಅದ್ಭುತ ಫಲಿತಾಂಶ ನೀಡಿದೆ ಮತ್ತು ಇದರಲ್ಲಿ ಕ್ಯಾಲರಿ ದಹಿಸುವ ಶಕ್ತಿಯಿದೆ. ನಿಮ್ಮ ಸೊಂಟದ ಸುತ್ತಳತೆ ಕಡಿಮೆ ಮಾಡುವುದು ಹೇಗೆಂದು ನೀವು ಚಿಂತಿತರಾಗಿದ್ದೀರಾ? ಹಾಗಾದರೆ ನೀವು ಐಸ್ ಕ್ರೀಂ ಸೇವಿಸುವ ಅಭ್ಯಾಸ ಬಿಡದೆ ಇದನ್ನು ಮಾಡಬಹುದು.
ವಿಶ್ವದಲ್ಲಿ ಐಸ್ ಕ್ರೀಂ ತುಂಬಾ ಆರೋಗ್ಯಕರ ಆಹಾರವೆಂದು ಯಾರೂ ಹೇಳುವುದಿಲ್ಲ. ಆದರೆ ಇದು ಹಾನಿಕಾರಕವೂ ಅಲ್ಲ ಎಂದು ಜನರು ಭಾವಿಸಿದ್ದಾರೆ. ನಿಮ್ಮ ಫ್ರಿಜ್ ನಲ್ಲಿರುವ ಐಸ್ ಕ್ರೀಂನ್ನು ತೆಗೆದುಹಾಕಿ ಎಂದು ಯಾರಾದರೂ ಹೇಳುತ್ತಿದ್ದರೆ ಆಗ ನೀವು ಕಿವಿ ಮುಚ್ಚಿಕೊಳ್ಳಿ.
ಸಂಶೋಧನೆ ಮತ್ತು ಅಧ್ಯಯನದ ಹೊಸ ಐಡಿಯ ಪ್ರಕಾರ ಐಸ್ ಕ್ರೀಂ ತೂಕ ಇಳಿಸಿಕೊಳ್ಳಲು ನಿಮಗೆ ಮೊದಲ ಆಹಾರವಾಗಬಹುದು ಮತ್ತು ಇದು ಕ್ಯಾಲರಿ ದಹಿಸಲು ನೆರವಾಗಲಿದೆ. ಈಗ ನಿಮ್ಮ ಆಹಾರ ಕ್ರಮ ತಯಾರಿ ಮಾಡಿ ಮತ್ತು ಐಸ್ ಕ್ರೀಂ ನಿಂದ ಕ್ಯಾಲರಿ ದಹಿಸಿ. ಇದು ತುಂಬಾ ವಿಚಿತ್ರವೆಂದನಿಸುವುದಿಲ್ಲವೇ? ಐಸ್ ಕ್ರೀಂ ತಿಂದು ತೂಕ ಇಳಿಸಿಕೊಳ್ಳಲು ನೀವು ತುದಿಗಾಲಿನಲ್ಲಿ ನಿಂತಿದ್ದೀರಾ? ಹಾಗಿದ್ದರೆ ತಕ್ಷಣ ನಿಮ್ಮ ಕಾರನ್ನು ಐಸ್ ಕ್ರೀಂ ಪಾರ್ಲರ್ ಕಡೆಗೆ ತಿರುಗಿಸಿ ಮತ್ತು ಮಜಾ ಮಾಡಿ. ಐಸ್ ಕ್ರೀಂ ಮತ್ತು ಅದು ಕ್ಯಾಲರಿ ದಹಿಸುವ ಬಗ್ಗೆ ಇರುವ ಕೆಲವೊಂದು ಸತ್ಯಗಳು ಇಲ್ಲಿವೆ.

1.ತೂಕ ಇಳಿಸುವ ಗುರುಗಳು ಏನು ಹೇಳುತ್ತಾರೆ?
ತೂಕ ಇಳಿಸುವ ಗುರುಗಳು ಈಗ ಐಸ್ ಕ್ರೀಂ ಪಥ್ಯ ಮತ್ತು ಇದು ಕ್ಯಾಲರಿ ದಹಿಸುತ್ತದೆ ಹೇಳುತ್ತಾರೆ. ನೀವು ತಿಂಗಳೊಳಗೆ ಬೊಜ್ಜು ದೇಹ ಕಳಕೊಂಡು ಸಪೂರವಾಗಬಹುದು. ಕೇವಲ ಐಸ್ ಸೇವಿಸಿ ನಿಮ್ಮ ಭಾರ ಕಳಕೊಳ್ಳಬಹುದು, ಇದು ತುಂಬಾ ಆಸಕ್ತಿ ಕೆರಳಿಸುತ್ತಿದೆಯಲ್ಲವೇ? ಕೆಲವು ಮಂದಿ ತೂಕ ಇಳಿಸುವ ಗುರುಗಳು ಸಂಪೂರ್ಣವಾಗಿ ಐಸ್ ಪಥ್ಯ ಹೇಳಿದ್ದಾರೆ. ಐಸ್ ನಿಂದ ಕ್ಯಾಲರಿ ದಹಿಸಿ ಮತ್ತು ನಿಮ್ಮ ಹೊಸ ರೂಪದಿಂದ ಎಲ್ಲರನ್ನು ಬೆರಗುಗೊಳಿಸಿ.
2. ಐಸ್ ತ್ಯಜಿಸಿದರೆ ಏನಾಗುತ್ತದೆ
ಐಸ್ ಕ್ರೀಂ ನಿಮ್ಮ ಫೇವರಿಟ್ ಆಗಿರಬಹುದು ಮತ್ತು ಐಸ್ ಕ್ರೀಂ ನಿಮ್ಮ ಸೊಂಟದ ಸುತ್ತಳತೆ ಕಡಿಮೆ ಮಾಡಲು ಯಾವುದೇ ನೆರವು ನೀಡದು. ಆದರೆ ಇದನ್ನು ನೀವು ಕಡೆಗಣಿಸಿದರೆ ಆಗ ನಿಮ್ಮ ದೇಹದ ಮೇಲೆ ಋಣಾತ್ಮಕ ಪರಿಣಾಮವಾಗಬಹುದು. ನೀವು ವೇಗವಾಗಿ ತೂಕ ಕಳಕೊಳ್ಳಲು ಐಸ್ ಕ್ರೀಂ ಯಾವುದೇ ನೆರವು ನೀಡದು. ಆದರೆ ಇದು ದೇಹದ ತೂಕ ಇಳಿಸುವಲ್ಲಿ ಪರಿಣಾಮ ಬೀರಬಹುದು. ನಿಮ್ಮ ಫೇವರಿಟ್ ಆಹಾರವನ್ನು ತ್ಯಜಿಸಿದರೆ ಆಗ ತುಂಬಾ ಬೇಕೆಂಬ ಭಾವನೆಯಾಗಬಹುದು. ನಿಮ್ಮ ತೂಕ ಇಳಿಸುವ ಕ್ರಮವು ಒಂದು ಶಿಕ್ಷೆಯೆಂದು ನಿಮಗನಿಸಬಹುದು. ಇದರಿಂದ ನಿಮ್ಮ ತೂಕ ಕಳಕೊಳ್ಳುವ ಯೋಜನೆ ವಿಫಲವಾಗಬಹುದು. ಐಸ್ ನಿಂದ ಕ್ಯಾಲರಿ ದಹಿಸಲು ಯೋಜನೆ ಹಾಕಿದ್ದರೆ ಇದನ್ನು ಸಂಪೂರ್ಣವಾಗಿ ತ್ಯಜಿಸಬೇಡಿ.
3. ಐಸ್ ನಿಂದ ಕ್ಯಾಲರಿ ದಹಿಸಿ
ಐಸ್ ನಿಂದ ಸುಲಭ ಮತ್ತು ಒಳ್ಳೆಯ ರೀತಿಯಿಂದ ಕ್ಯಾಲರಿ ದಹಿಸಿ ಎಂದು ಇಂದಿನ ದಿನಗಳಲ್ಲಿ ಹಲವಾರು ಮಂದಿ ಡಯೆಟೀಶಿಯನ್ ಗಳು ಸಲಹೆ ನೀಡಬಹುದು. ಐಸ್ ನಿಂದ ನೀವು ವೇಗವಾಗಿ ತೂಕ ಕಳಕೊಳ್ಳಲು ಸಾಧ್ಯವಿಲ್ಲ. ಆದರೆ ಇದು ನಿಜವಾಗಿಯೂ ನಿಮ್ಮಲ್ಲಿರುವ ಹೆಚ್ಚಿನ ಕ್ಯಾಲರಿ ದಹಿಸಲಿದೆ. ಐಸ್ ಸೇವನೆಯಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸ್ವಲ್ಪ ಕೆಲಸ ಮಾಡುತ್ತದೆ. ನೀವು ಸೇವಿಸಿದ ಐಸ್ ನ್ನು ಬಿಸಿ ಮಾಡಲು ಅದಕ್ಕೆ ಸ್ವಲ್ಪ ಶಕ್ತಿ ಬೇಕಾಗುತ್ತದೆ. ಈ ರೀತಿ ಐಸ್ ನಿಂದ ಕ್ಯಾಲರಿ ದಹಿಸಬಹುದು. ಐಸ್ ನಿಂದ ನೀವು ಕ್ಯಾಲರಿ ದಹಿಸಿದರೂ ತೂಕ ಕಳಕೊಳ್ಳಬಹುದು ಅಥವಾ ಕಳಕೊಳ್ಳದೆಯೂ ಇರಬಹುದು. ಐಸ್ ಕ್ರೀಂ ಸೇವನೆಯಿಂದ ಮಾತ್ರ ಕ್ಯಾಲರಿ ದಹಿಸುವುದಲ್ಲ, ಐಸ್ ನೀರಿನಿಂದ ಕೂಡ ನೀವು ಕ್ಯಾಲರಿ ದಹಿಸಬಹುದು.
4. ಸ್ವಲ್ಪ ಕೆಟ್ಟದ್ದು
ಆಹಾರ ಕ್ರಮವನ್ನು ನಿರ್ವಹಿಸುವ ವಿಷಯಕ್ಕೆ ಬಂದರೆ ಐಸ್ ಕ್ರೀಂ ಯಾವಾಗಲೂ ಕೆಟ್ಟದ್ದು. ಯಾಕೆಂದರೆ ಇದರಲ್ಲಿ ಇರುವ ಕೆಲವೊಂದು ಬೀಜಗಳು ಮತ್ತು ಇತರ ಕೊಬ್ಬಿನಾಂಶಗಳು ತೂಕ ಹೆಚ್ಚಿಸಬಹುದು. ಬೀಜಗಳನ್ನು ಒಳಗೊಂಡಿರುವ ಅರ್ಧ ಕಪ್ ಐಸ್ ಕ್ರೀಂನಲ್ಲಿ 250 ಕ್ಯಾಲರಿ ಇರುತ್ತದೆ. ಕ್ಯಾಲರಿ ದಹಿಸಲು ಬಯಸುವುದಾದರೆ ನೀವು ಆಗ ಬೀಜ ಹಾಕದಿರುವ ಐಸ್ ಕ್ರೀಂ ತಿನ್ನಿ. ಆಹಾರ ಕ್ರಮದಲ್ಲಿ ಅತೀ ಮುಖ್ಯವಾಗಿರುವುದು ಏನೆಂದರೆ ನೀವು ದಿನನಿತ್ಯ ತೆಗೆದುಕೊಳ್ಳುವ ಕ್ಯಾಲರಿ ಮತ್ತು ದಹಿಸುವ ಕ್ಯಾಲರಿಯನ್ನು ಗಮನಿಸಬೇಕು. ಇದರೆಡರ ಮಧ್ಯೆ ಸಮತೋಲನ ಕಾಪಾಡಿದರೆ ಆಗ ತೂಕ ಇಳಿಸುವುದು ಸುಲಭವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
