Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
200 ಕ್ಯಾಲೋರಿಗಳನ್ನು ವ್ಯಯಿಸಲು 20 ಮಾರ್ಗಗಳು
ಆರೋಗ್ಯ ತಜ್ಞರು ಹೇಳುವಷ್ಟು ಕ್ಯಾಲೋರಿಗಳನ್ನು ನಿಮ್ಮ ದೇಹದಿಂದ ವ್ಯಯಿಸಲು ನೀವು ಪ್ರತಿದಿನ ಜಿಮ್ ಗೆ ಹೋಗಬೇಕಾಗಿಲ್ಲ ಅಥವಾ ಬೆವರಿಳಿಸುವಂತಹ ವ್ಯಾಯಾಮ ಮಾಡಬೇಕಾಗಿಲ್ಲ. ನಿಮ್ಮ ದೇಹದ ತೂಕ ಇಳಿಸಬೇಕಾದರೆ ನೀವು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಬೇಕಾಗಿರುವುದು ನಿಜ. ಇದರ ಜೊತೆಗೆ ದೈನಂದಿನ ಕೆಲವು ದೈಹಿಕ ಚಟುವಟಿಕೆಗಳನ್ನೂ ಮಾಡಬೇಕು. ಆದರೆ ಇವೆಲ್ಲಾ ಜಿಮ್ ಗೆ ಹೋಗಿಯೇ ಮಾಡಬೇಕು ಎಂಬ ನಿರ್ಬಂಧವೇನೂ ಇಲ್ಲ.
ಇಲ್ಲಿ ನಾವು ನಿಮಗೆ ಪ್ರತಿದಿನ ನಿಮ್ಮ ದೇಹದಿಂದ 200 ಕ್ಯಾಲೋರಿಗಳಷ್ಟು ಶಕ್ತಿಯನ್ನು ವ್ಯಯಿಸಲು ಬೇಕಾಗಿರುವ ಅಥವಾ ಮಾಡಬೇಕಾಗಿರುವ ಕೆಲವು ಸರಳ ಮತ್ತು ಸೂಕ್ತ ವಿಧಾನಗಳನ್ನು ಹೇಳಿಕೊಡುತ್ತೇವೆ. ಇವುಗಳು ನೀವು ಇಷ್ಟಪಡುವ ಕೆಲಸಗಳೇ ಆದ ಕಾರಣ ಏನೂ ಬೇಸರವಿಲ್ಲದೇ ನೀವಿದನ್ನು ಮಾಡುತ್ತೀರಿ. ಇವುಗಳಲ್ಲಿ ನಿಮ್ಮ ಇಷ್ಟದ ಕೆಲವನ್ನು ಆರಿಸಿಕೊಳ್ಳಿ.

ಸ್ಕಿಪ್ಪಿಂಗ್
ನೀವು ಎಂದೋ ಸ್ಕಿಪ್ಪಿಂಗ್ ಮಾಡಬೇಕು ಎಂದು ತಂದ ಸ್ಕಿಪ್ಪಿಂಗ ಹಗ್ಗ ನಿಮ್ಮ ಕಪಾಟಿನಲ್ಲಿ ಇರುವುದು ನಿಜ ತಾನೇ? ಈಗ ಅದನ್ನು ಹೊರಗೆ ತೆಗೆಯುವ ಸಮಯ. ಒಂದು ಆರಾಮದಾಯಕ ಶೂ ತೆಗೆದುಕೊಳ್ಳಿ ಹಾಗೂ ಪ್ರತಿ ದಿನ ಸ್ಕಿಪ್ಪಿಂಗ್ ಆರಂಭಿಸಿ.
10-15 ನಿಮಿಷ ಸ್ಕಿಪ್ಪಿಂಗ್ ಎಂದರೆ 200 ಕ್ಯಾಲೋರಿಗಳು

ಕ್ರೀಡೆ
ಇಡಿ ದಿನ ವಿಡಿಯೋ ಗೇಮ್ ಆಡುವುದು ಆಟವಲ್ಲ. ನಿಮ್ಮ ದೇಹಕ್ಕೆ ವ್ಯಾಯಾಮ ಆಗುವಂತಹ ನೀವು ಓಡಾಡಬೇಕಾದ ಯಾವುದಾದರೂ ನಿಮ್ಮ ಇಷ್ಟದ ಆಟವನ್ನು ಆರಿಸಿಕೊಳ್ಳಿ. ನಿಮ್ಮ ಗೆಳೆಯರನ್ನೂ ಇದಕ್ಕೆ ಹುರಿದುಂಬಿಸಿ. ಜೊತೆಗೆ ಸೇರಿ ಸ್ವಲ್ಪ ಆಟವಾಡಿ.
50 ನಿಮಿಷಗಳ ಆಟವೆಂದರೆ 200 ಕ್ಯಾಲೋರಿ ವ್ಯಯವಾಯ್ತು ಎಂದು ನೆನಪಿಡಿ.

ಹಸಿರುಮಾರ್ಗ
ನಿಮ್ಮ ಮನೆಯ ಆಸುಪಾಸಿನಲ್ಲಿ ಮರಗಿಡಗಳು ಸರಿಯಾಗಿ ಕಡಿದಿಲ್ಲ. ನಿಮ್ಮ ದಾರಿಯಲ್ಲಿರುವ ಗಿಡಗಳಿಗೆ ಸರಿಯಾಗಿ ಆಕಾರ ನೀಡಿಲ್ಲ ಎಂದು ಸುಮ್ಮನೆ ದೂರುವ ಬದಲು ನೀವೇ ಎರಡು ಗಾರ್ಡನಿಂಗ್ ಉಪಕರಣಗಳನ್ನು ಬಳಸಿ ಆ ಕೆಲಸವನ್ನು ಮಾಡಿ. ಇದು ಹಲವು ರೀತಿಯಲ್ಲಿ ಸಹಕಾರಿ. ಕ್ಯಾಲೋರಿಗಳೂ ವ್ಯಯವಾಗುತ್ತವೆ. ಹಸಿರಿನ ಮಧ್ಯೆ ಇದ್ದಾಗ ನಿಮ್ಮ ಚಿಂತೆಯೂ ಕಡಿಮೆಯಾಗುತ್ತದೆ.
40 ನಿಮಿಷದ ಇಂತಹ ಚಟುವಟಿಕೆ 215 ಕ್ಯಾಲೋರಿಗಳಿಗೆ ಸಮ.

ಸಾಕುಪ್ರಾಣಿಯೊಂದಿಗೆ ಒಂದು ಸುತ್ತು
ನಿಮ್ಮ ಸಾಕು ಪ್ರಾಣಿಯನ್ನು ತೆಗೆದುಕೊಂಡು ಒಂದು ಸುತ್ತು ತಿರುಗಾಡಿ. ನಾಯಿ ಮರಿಯ ಜೊತೆಗೆ ಸಮೀಪದ ಉದ್ಯಾನವನಕ್ಕೆ ಭೇಟಿ ನೀಡಿ ಸಾಧ್ಯವಾದರೆ ಒಂದೆರಡು ಸುತ್ತು ಓಡಿ.
25 ನಿಮಿಷ = 190 ಕ್ಯಾಲೋರಿಗಳು

ಗಾಡಿ ಸ್ವಚ್ಛಮಾಡಿ
ನೀವೇ ನಿಮ್ಮ ಕಾರು ಅಥವಾ ಬೈಕ್ ಅನ್ನು ಸ್ವಚ್ಛಮಾಡಲು ಸಾಧ್ಯ ಎಂದಾದರೆ ಯಾಕೆ ಸುಮ್ಮನೆ ಹೊರಗೆ ವಾಷಿಂಗ್ ಎಂದು ಹಣ ವ್ಯಯ ಮಾಡುತ್ತೀರಿ ಇದರ ಬದಲು ಇದೇ ಕೆಲಸ ನೀವೇ ಮಾಡಿ ಸ್ವಲ್ಪ ಕ್ಯಾಲೋರಿಗಳನ್ನು ವ್ಯಯಿಸಿ ಆರೋಗ್ಯಕರವಾಗಿರಿ. ಸೋಪಿನ ಹುಡಿ ಎರಡು ಬಕೆಟ್ ನೀರು ಸಾಕು ನಿಮ್ಮ ವಾಹನದ ಸ್ವಚ್ಛತೆಗೆ.
40 ನಿಮಿಷ ಕಾರು ವಾಷಿಂಗ್ ಗೆ ಬೇಕು ಎಂದಾದರೆ 216 ಕ್ಯಾಲೋರಿಗಳು ವ್ಯಯವಾದಂತೆ.

ಕ್ರೀಡಾಭ್ಯಾಸ
ಬಾಡ್ಮಿಂಟನ್ ನಿಮ್ಮ ಇಷ್ಟದ ಆಟವೇ ಅಥವಾ ಕ್ರಿಕೆಟ್ ಕ್ರೀಡೇ ಯಾವುದಾದರೂ ಸರಿಯೆ ಪ್ರತಿದಿನ ಅಭ್ಯಾಸ ಮಾಡಿ. ಗೆಲ್ಲಬೇಕು ಅಥವಾ ಉತ್ಕೃಷ್ಟ ಮಟ್ಟದ ಆಟವಾಡಬೇಕೆಂದಿಲ್ಲ. ಸ್ವಲ್ಪ ಕಾಲ ಬೆವರಿಳಿಯುವಂತೆ ಆಟವಾಡಿದರೆ ಸಾಕು. ಆದರೆ ಆಡುವಾಗ ಸಂಪೂರ್ಣ ತನ್ಮಯತೆಯಿಂದ ಆಡಿ.
ಬರಿಯ 25 ನಿಮಿಷಗಳ ಆಟ ನಿಮ್ಮಿಂದ 218 ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ.

ಮನೆ ನೀಟಾಗಿಡಿ
ಪ್ರತೀ ಬಾರಿ ನೀವು ಮನೆಯಲ್ಲಿ ಕೂತು ನಿಮ್ಮ ಮನೆಯ ಬಗ್ಗೆ ಅಸ್ತವ್ಯಸ್ತವಾಗಿ ಬಿದ್ದಿರುವ ವಸ್ತುಗಳ ಬಗ್ಗೆ ಮಾತನಾಡುವ ಬದಲು ನೀವೇ ಎದ್ದು ನಿಮ್ಮ ಮನೆಯನ್ನು ನೀಟಾಗಿಡಿ. ಮನೆಯಲ್ಲಿರುವ ಧೂಳು, ಕೆಳಗೆ ಬಿದ್ದಿರುವ ಎಲ್ಲಾ ವಸ್ತುಗಳನ್ನು ಎತ್ತಿ ಮೇಲಿಡಿ.
25 ನಿಮಿಷ ಈ ಕೆಲಸ ಮಾಡಿದಿರಿ ಎಂದಾದರೆ 210 ಕ್ಯಾಲೋರಿಗಳು ವ್ಯಯವಾಗುತ್ತವೆ.

ಮೆಟ್ಟಿಲನ್ನು ಬಳಸಿ
ಲಿಫ್ಟ್ ಅನ್ನು ಆದಷ್ಟು ಕಡಿಮೆ ಬಳಸಿ. ನಿಮ್ಮಿಂದ ಸಾಧ್ಯ ಆದಷ್ಟು ಬಾರಿ ಮೆಟ್ಟಿಲುಗಳನ್ನು ಬಳಸಿ ಮನೆ ತಲುಪಿ. ಇದು ಕೇವಲ ಮನೆಯಲ್ಲೇ ಆಗಬೇಕೆಂದಿಲ್ಲ ಮಾಲ್ ಗೆ ಹೋದಾಗಲೂ ಇದನ್ನೇ ಅನುಸರಿಸಿ. ಅಥವಾ ಇನ್ಯಾವುದೇ ಕಟ್ಟಡವಾಗಿರಲಿ ಲಿಫ್ಟ್ ಬಳಕೆ ಕಡಿಮೆ ಮಾಡಿ.
ದಿನಕ್ಕೆ 30 ನಿಮಿಷ ಮೆಟ್ಟಿಲು ಹತ್ತಿದಿರಿ ಎಂದಾದರೆ 216 ಕ್ಯಾಲೋರಿ ಶಕ್ತಿ ವ್ಯಯವಾದಂತೆ.

ನಿಯಮಿತ ಚಟುವಟಿಕೆಗಳನ್ನು ಮಾಡಿ
ರಾತ್ರಿಯ ಊಟ, ಟಿ.ವಿ. ಕಾರ್ಯಕ್ರಮಗಳು ನೋಡಿ ಆದಮೇಲೆ ನೇರವಾಗಿ ನಿಮ್ಮ ರೂಮಿಗೆ ತೆರಳಿ ಮಲಗಬೇಡಿ. ಏನಾದರೂ ಆಟವಾಡಿ ಅಥವಾ ಏನಾದರೊಂದು ಚಟುವಟಿಕೆಯನ್ನು ಮಾಡಿ. ಏನಾದರೂ ಓದಿ ಸ್ವಲ್ಪ ಕಾಲ ಮಾತನಾಡಿ.
60 ನಿಮಿಷಗಳು ಹೀಗೆ ಮಾಡಿದರೆ 200 ಕ್ಯಾಲೋರಿ ವ್ಯಯವಾದಂತೆ

ಕ್ರಿಕೆಟ್
ಕ್ರಿಕೆಟ್ ಭಾರತದಲ್ಲಿ ದೊಡ್ಡ ಮೈದಾನದಿಂದ ಆರಂಭಗೊಂಡು ಎಷ್ಟೇ ಚಿಕ್ಕ ಬಾಲ್ಕನಿಯಲ್ಲೂ ಆಡಲಾಗುತ್ತದೆ. ನಿಮ್ಮದೇ ಸಹಮನಸ್ಕರ ಒಂದು ತಂಡ ಮಾಡಿ ಕ್ರಿಕೆಟ್ ಆಡಿ. ಆದಷ್ಟು ದೊಡ್ಡ ಆಟದ ಮೈದಾನ್ ಆರಿಸಿಕೊಳ್ಳಿ ಹೀಗೆ ಮಾಡಿದರೆ ಹೆಚ್ಚು ಓಡಾಟ ಅಗತ್ಯ ಹಾಗಾಗಿ ಹೆಚ್ಚು ಕ್ಯಾಲೋರಿಗಳು ವ್ಯಯವಾಗುತ್ತವೆ.
50 ನಿಮಿಷಗಳ ಕ್ರಿಕೆಟ್ 210 ಕ್ಯಾಲೋರಿಗಳಿಗೆ ಸಮ.

ಈಜುವಿಕೆ
ನಿಮ್ಮ ಈಜಿನ ವಸ್ತ್ರಗಳನ್ನು ಧರಿಸಿ ಸ್ವಲ್ಪ ಹೊತ್ತು ಸ್ವಿಮ್ಮಿಂಗ್ ಪೂಲ್ ನಲ್ಲಿ ಸಮಯ ಕಳೆಯಿರಿ. ಈಜುವುದು ನಿಮ್ಮ ದೇಹದ ಎಲ್ಲಾ ಭಾಗಕ್ಕೆ ಸರಿಯಾದ ಚಟುವಟಿಕೆ ಒದಗಿಸುತ್ತದೆ. ಇದು ಉತ್ತಮ ಚಟುವಟಿಕೆ.
ಬರಿಯ 30 ನಿಮಿಷದ ಈಜುವಿಕೆ 215 ಕ್ಯಾಲೋರಿಗಳಷ್ಟು ಶಕ್ತಿಯ ವ್ಯಯ.

ಸೈಕ್ಲಿಂಗ್
ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಒಂದು ಸುತ್ತು ಸೈಕಲ್ ಹೊಡೆಯುವುದು ನೀವು ಅಂದಾಜಿಸದ ಪರಿಣಾಮವನ್ನು ನೀಡುತ್ತದೆ. ಸುಮಾರಾದ ವೇಗದಲ್ಲಿ ಸ್ವಲ್ಪ ಹೊತ್ತು ಸೈಕಲ್ ಅಭ್ಯಾಸ ಮಾಡಿ. ನೀವು ಹೆಚ್ಚಿನ ಕ್ಯಾಲೋರಿಗಳನ್ನು ವ್ಯಯಿಸಬೇಕಾದರೆ ಸ್ವಲ್ಪ ಎತ್ತರದ ಸ್ಥಳಗಳಿಗೆ ಸೈಕಲಿನಲ್ಲಿ ತೆರಳಿ
30 ನಿಮಿಷಗಳು = 210 ಕ್ಯಾಲೋರಿಗಳು

ಸ್ವಚ್ಛವಾಗಿಡಿ ಮತ್ತು ನೀಟಾಗಿಡಿ
ನಿಮ್ಮ ಕಪಾಟು ಅಥವಾ ಗ್ಯಾರೇಜನ್ನು ನೋಡಿ ಸ್ವಚ್ಚವಾಗಿಡಬೇಕು ಎಂದು ಮನಸಲ್ಲೇ ಅಂದುಕೊಳ್ಳುವ ಬದಲು ಅದನ್ನು ಕಾರ್ಯರೂಪಕ್ಕೆ ತನ್ನಿ. ಇದರಿಂದ ನಿಮಗೆ ಬೇಕಾದ ವಸ್ತುಗಳು ಬೇಕಾದ ಸಮಯದಲ್ಲಿ ಸಿಗುತ್ತವೆ ಹಾಗೂ ಮನೆಯೂ ಅಂದವಾಗುತ್ತದೆ. ಆದರೆ ಎಲ್ಲಕ್ಕಿಂದ ಮುಖ್ಯವಾಗಿ ನಿಮ್ಮ ದೇಹಕ್ಕೆ ಸ್ವಲ್ಪ ವ್ಯಾಯಾಮ ಆಗುತ್ತದೆ.
25 ನಿಮಿಷಗಳ ಈ ಚಟುವಟಿಕೆ ಎಂದರೆ 210 ಕ್ಯಾಲೋರಿಗಳು

ಚಿಂತೆಯಿಂದ ದೂರವಾಗಲು ಒಂದು ಮಸಾಜ್
ಇಡಿಯ ದಿನದ ಬಳಲುವಿಕೆಯಿಂದ ದೂರವಾಗಲು ಸ್ವಲ್ಪ ಕಾಲದ ಮಸಾಜ್ ಅನ್ನು ಮಾಡಿ. ನೀವು ನಿಮ್ಮ ಸಂಗಾತಿಗೂ ಅವರ ಇಷ್ಟದ ಎಣ್ಣೆಯನ್ನು ಬಳಸಿ ಮಸಾಜ್ ಮಾಡಬಹುದು. ಇದರಿಂದ ಇಬ್ಬರ ಮೂಡ್ ಕೂಡ ಚೆನ್ನಾಗಿರುತ್ತದೆ.
42 ನಿಮಿಷಗಳು = 200 ಕ್ಯಾಲೋರಿಗಳು

ಬೂಟ್ ಕ್ಯಾಂಪ್
ನೀವು ನಿಮ್ಮದೇ ಆದ ಬೂಟ್ ಕ್ಯಾಂಪ್ ಅನ್ನು ಸಿದ್ಧಪಡಿಸಿ. ಕೆಲವು ಹೊತ್ತಿನ ಜಂಪ್ ಗಳು, ಕೆಲವು ಬಗೆಯ ವ್ಯಾಯಾಮಗಳು ಮತ್ತು ಸ್ವಲ್ಪ ಹೊತ್ತು ಮಾರ್ಚಿಂಗ್ ಮಾಡಿ. ಎಲ್ಲವನ್ನೂ ಎರಡು ಅಥವಾ ಮೂರು ನಿಮಿಷಗಳಷ್ಟು ಹೊತ್ತು ಮಾಡಿ.
30 ನಿಮಿಷಗಳು = 200 ಕ್ಯಾಲೋರಿಗಳು

ಗೋಡೆಗೆ ಸುಣ್ಣ-ಬಣ್ಣ ಬಳಿಯಿರಿ
ನಿಮ್ಮ ಮೆಚ್ಚಿನ ಕೋಣೆಗೆ ನಿಮ್ಮ ಮೆಚ್ಚಿನ ಬಣ್ಣ ಬಳಿಯಲು ಆರಂಭಿಸಿ. ಹೀಗೆ ನಿಮ್ಮ ಮನೆಯ ಎಲ್ಲಾ ಕೋಣೆಗಳನ್ನು ನೀವೇ ಬಣ್ಣ ಹಚ್ಚಿ.
40 ನಿಮಿಷಗಳು = 208 ಕ್ಯಾಲೋರಿಗಳು

ನೃತ್ಯಾಭ್ಯಾಸ
ನಿಮ್ಮದೇ ಮನೆಯಲ್ಲಿ ನಿಮ್ಮ ಇಷ್ಟದ ಹಾಡಿಗೆ ನಾಲ್ಕು ಸ್ಟೆಪ್ ಹಾಕಿ. ಬೇಕಿದ್ದರೆ ಜೊತೆಗೆ ನಿಮ್ಮ ಸಂಗಾತಿ ಅಥವಾ ಮಕ್ಕಳನ್ನು ಜೊತೆಗೆ ಸೇರಿಸಿಕೊಳ್ಳಿ. ಕೈ ಕಾಲು ಹಾಗೂ ದೇಹದ ಎಲ್ಲಾ ಅಂಗಗಳನ್ನು ನೃತ್ಯದಲ್ಲಿ ಬಳಸಿಕೊಳ್ಳಿ. ಆದರೆ ಇದರಿಂದ ನಿಮ್ಮ ಮನೆಯ ವಸ್ತುಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ.
40 ನಿಮಿಷಗಳು = 216 ಕ್ಯಾಲೋರಿಗಳು

ಕಾಲ್ಚೆಂಡಾಟ (ಫುಟ್ಬಾಲ್)
ಗೆಳೆಯರನ್ನು ಕೆಫೆಯಲ್ಲಿ ಭೇಟಿಯಾಗುವುದು ಈಗಿನ ಫ್ಯಾಷನ್ ಅಲ್ಲ. ಇದರ ಬದಲಿಗೆ ಗೆಳೆಯರೆಲ್ಲ ಸೇರಿ ಯಾಕೆ ನಿಮ್ಮ ಸಮೀಪದ ಆಟದ ಅಂಗಳದಲ್ಲಿ ಫುಟ್ಬಾಲ್ ಆಡಬಾರದು. ಇದು ನಿಮ್ಮ ಗೆಳೆತೆನವನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ.
20 ನಿಮಿಷ ಆಟವಾಡಿದರೆ 192 ಕ್ಯಾಲೋರಿಗಳು ವ್ಯಯಿಸಿದಂತೆ.

ಜಾಗಿಂಗ್
ನೀವು ನಿಮ್ಮ ಗೆಳೆಯರನ್ನು ಸೇರಿಸಿಕೊಂಡು ಜಾಗಿಂಗ್ ಗೆ ಹೋಗುವ ಅಭ್ಯಾಸ ಮಾಡಿಕೊಳ್ಳಿ. ಗಂಟೆಗೆ 5 ಮೈಲಿನಷ್ಟು ವೇಗದಲ್ಲಿ ಓಡುವಂತೆ ನೋಡಿಕೊಳ್ಳಿ.
20 ನಿಮಿಷಗಳು = 192 ಕ್ಯಾಲೋರಿಗಳು

ಮನೆಯನ್ನು ವ್ಯಾಕ್ಯೂಮ್ ಕ್ಲೀನರ್ ನಲ್ಲಿ ಸ್ವಚ್ಛಗೊಳಿಸಿ
ನಿಮ್ಮ ಇಷ್ಟದ ಹಾಡನ್ನು ಹಾಕಿ, ತಲೆಗೆ ಒಂದು ಸುತ್ತು ಬಟ್ಟೆ ಕಟ್ಟಿ, ಆರಾಮದಾಯಕ ಬಟ್ಟೆಗಳನ್ನು ಧರಿಸಿ ಹಾಗೂ ಆರಂಭಿಸಿ. ಇದನ್ನು ಆದಷ್ಟು ಬೇಗನೆ ಆಗುವಂತೆ ಮಾಡಿ.
40 ನಿಮಿಷಗಳು = 216 ಕ್ಯಾಲೋರಿಗಳು.



Click it and Unblock the Notifications











