Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಸಮತೂಕ ಪಡೆಯಲು ತುಂಬಾ ಕಷ್ಟಪಡಬೇಕಾಗಿಲ್ಲ!
ಸಮತೂಕದ ಮೈಕಟ್ಟು ನನ್ನದಾಗಿರಬೇಕೆನ್ನುವುದು ಪ್ರತಿಯೊಬ್ಬರ ಕನಸ್ಸಾಗಿರುತ್ತದೆ. ಆದರೆ ನಮ್ಮ ಜೀವನ ಶೈಲಿ ನಮ್ಮನ್ನು ದಪ್ಪಗಾಗಿಸುತ್ತಿದೆ. ಹೆಚ್ಚಿನವರು ತೆಳ್ಳಗಾಗಲು ಉಪವಾಸದಿಂದ ಇರುವುದನ್ನು ನೋಡಿದ್ದೇನೆ, ಆದರೆ ಅಂತವರು ಅರಿತುಕೊಳ್ಳಬೇಕಾದ ಮುಖ್ಯವಾದ ಅಂಶವೆಂದರೆ ಉಪವಾಸ ಮಾಡಿ ಆರೋಗ್ಯಕರವಾಗಿ ತೆಳ್ಳಗಾಗಲು ಯಾರಿದಂದಲೂ ಸಾಧ್ಯವಿಲ್ಲ.
ಎಷ್ಟು ದಿನಗಳವರೆಗೆ ಊಟ- ತಿಂಡಿ ಸರಿಯಾಗಿ ಮಾಡದೆ ಇರಬಹುದು? ಅಬ್ಬಾಬ್ಬವೆಂದರೆ 2 ತಿಂಗಳು, ಈ ಸಮಯದಲ್ಲಿ ಮೈ ತೂಕ ಕಮ್ಮಿಯಾದಂತೆ ಅನಿಸಬಹುದು, ಆದರೆ ನಿಮ್ಮ ದೇಹ ಪೋಷಕಾಂಶಗಳ ಕೊರತೆಯಿಂದ ಸೊರಗಿರುತ್ತದೆ ವಿನಾಃ ಆರೋಗ್ಯಕರವಾಗಿ ತೆಳ್ಳಗಾಗಿರುವುದಿಲ್ಲ. ಅಲ್ಲದೆ ಊಟ- ತಿಂಡಿ ಸರಿಯಾಗಿ ತಿನ್ನದಿದ್ದರೆ ಖಿನ್ನತೆ ಬರುವುದು.
ಆದ್ದರಿಂದ ಮೈ ತೂಕ ಕಮ್ಮಿ ಮಾಡಬೇಕೆಂದು ಬಯಸುವುದಾದರೆ ಆರೋಗ್ಯಕರವಾಗಿ ಪ್ರಯತ್ನಿಸಿ. ಇಲ್ಲಿ ನಾವು ಉತ್ತಮವಾದ ಕೆಲ ಸರಳ ಟಿಪ್ಸ್ ನೀಡಿದ್ದೇವೆ, ಈ ಟಿಪ್ಸ್ ಪಾಲಿಸಿದರೆ ಸಮತೂಕದ ಮೈ ಕಟ್ಟು ನಿಮ್ಮದಾಗುವುದು:

ಜಾಗಿಂಗ್
ನಿಮ್ಮ ವಯಸ್ಸು 40 ವರ್ಷಕ್ಕಿಂತ ಕಮ್ಮಿಯಿದ್ದರೆ ಜಾಗಿಂಗ್ ಮಾಡುವುದು ಒಳ್ಳೆಯದು. ಜಾಗಿಂಗ್ ಕ್ಯಾಲೋರಿಯನ್ನು ಬೇಗನೆ ಕರಗಿಸುವುದರಿಂದ ಮೈ ತೂಕ ಹೆಚ್ಚುತ್ತದೆ ಎಂಬ ಚಿಂತೆಯಿಲ್ಲದೆ ಜೀವನ ಮಾಡಬಹುದು. ಅಲ್ಲದೆ ಅನೇಕ ಕಾಯಿಲೆಗಳು ಬರುವುದನ್ನು ಕೂಡ ತಡೆಗಟ್ಟಬಹುದು. ಮಧ್ಯ ವಯಸ್ಸು ದಾಟಿದವರು ದಿನಾ ಅರ್ಧ ಗಂಟೆ ವಾಕ್ ಮಾಡುವುದು ಒಳ್ಳೆಯದು.

ನಿದ್ದೆ
ನಿಮ್ಮ ನಿದ್ದೆಯಲ್ಲಿ ವ್ಯತ್ಯಾಸವಾದರೆ ಮೈ ತೂಕದಲ್ಲೂ ವ್ಯತ್ಯಾಸವಾಗುವುದು ಎಂಬುದನ್ನು ಮರೆಯದಿರಿ. ಅತೀಯಾದ ನಿದ್ದೆಯಾಗಲಿ, ಅತೀ ಕಮ್ಮಿಯಾದ ನಿದ್ದೆಯಾಗಲಿ ಒಳ್ಳೆಯದಲ್ಲ. ದಿನಾ 6-8 ಗಂಟೆಗಳವರೆಗೆ ನಿದ್ದೆ ಮಾಡಿ.

ಗ್ರೀನ್ ಟೀ
ಮೈ ತೂಕ ಹೆಚ್ಚಬಾದೆಂದು ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಇದು ನಿಮ್ಮ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.

ಸೋಮಾರಿತನ ಬೇಡ
ನಮ್ಮಲ್ಲಿ ಸೌಲಭ್ಯಗಳು ಹೆಚ್ಚಾದಂತೆ ಸೋಮಾರಿತನವೂ ಹೆಚ್ಚಾಗುತ್ತಿದೆ. ಸಾಧ್ಯವಾದಷ್ಟು ಲಿಫ್ಟ್ ಬಳಸುವುದನ್ನು ಕಮ್ಮಿ ಮಾಡಿ. ಮೆಟ್ಟಿಲು ಹತ್ತಿದರೆ ಸ್ವಲ್ಪ ಸುಸ್ತಾದರೂ ದೇಹವನ್ನು ಫಿಟ್ ಆಗಿಡುವಲ್ಲಿ ಸಹಕಾರಿಯಾಗಿದೆ.

ಆಹಾರವನ್ನು ತಿನ್ನದಿರಬೇಡಿ
ನಮ್ಮ ದೇಹ ತನ್ನ ಕಾರ್ಯವನ್ನು ನಿರ್ವಹಿಸಿಲು ಇಂತಿಷ್ಟು ಪೋಷಕಾಂಶ ಮತ್ತು ಕ್ಯಾಲೋರಿ ಅವಶ್ಯಕ. ಆದ್ದರಿಂದ ಆರೋಗ್ಯಕರ ಆಹಾರಕ್ರಮವನ್ನು ತಪ್ಪದೆ ಪಾಲಿಸಿ.

ರಾತ್ರಿಯ ಊಟ ಮಿತವಾಗಿರಲಿ
ಬ್ರೇಕ್ ಫಾಸ್ಟ್ ಅನ್ನು ಚೆನ್ನಾಗಿ ತಿನ್ನಿ, ಲಂಚ್ ಮಿತವಾಗಿರಲಿ, ರಾತ್ರಿ ಊಟವನ್ನು ಕಮ್ಮಿಯಾಗಿ ತಿನ್ನಿ. ಈ ಆಹಾರಕ್ರಮ ಪಾಲಿಸಿ ಆಕರ್ಷಕ ಮೈ ಕಟ್ಟು ನಿಮ್ಮದಾಗುವುದು.

ಮೂರು ಬಾರಿ ತಿನ್ನುವ ಆಹಾರವನ್ನು 6 ಬಾರಿ ತಿನ್ನಿ
ಈಗ ಬೆಳಗ್ಗೆ ಎರಡು ದೋಸೆ ತಿನ್ನುವ ಅಭ್ಯಾಸವಿದ್ದರೆ ಬೆಳಗ್ಗೆ 1 ದೋಸೆ ತಿಂದು 2 ಗಂಟೆಯ ಬಳಿಕ ಮತ್ತೊಂದು ದೋಸೆ ತಿನ್ನಿ. ಈ ರೀತಿ ನಿಮ್ಮ ಆಹಾರವನ್ನು ಸ್ವಲ್ಪ- ಸ್ವಲ್ಪವಾಗಿ ತಿನ್ನಿ. ಮೈ ತೂಕ ಹೆಚ್ಚಿಸದಿರಲು ಸೂಪರ್ ಟಿಪ್ಸ್ ಇದಾಗಿದೆ.

ನೀರು
ಊಟವಾದ ಬಳಿಕ ಒಂದು ಲೋಟ ಬಿಸಿ ನೀರು ಕುಡಿಯುವುದು ಒಳ್ಳೆಯದು.

ಸಿಹಿಯನ್ನು ಮಿತಿಯಲ್ಲಿ ತಿನ್ನಿ
ಸಿಹಿ ತಿಂಡಿಯನ್ನು ನೋಡುವಾಗ ಎಲ್ಲರ ಬಾಯಲ್ಲಿ ನೀರೂರುತ್ತದೆ. ಆದರೆ ಇದನ್ನು ಮಿತಿಯಲ್ಲಿ ತಿನ್ನಿ.

ಆಟವಾಡಿ
ಸಮಯ ಸಿಕ್ಕಾಗ ಟೆನ್ನೀಸ್, ಕ್ರಿಕೆಟ್ ಈ ರೀತಿಯ ಆಟವಾಡಿ, ಇದು ಮೈ ತೂಕವನ್ನು ಕರಗಿಸುವುದರ ಜೊತೆಗೆ ಮನಸ್ಸಿಗೆ ಉಲ್ಲಾಸವನ್ನು ತುಂಬುವುದು.

ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರ
ನಿಧಾನಕ್ಕೆ ಜೀರ್ಣವಾಗುವ, ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದ್ದು, ನಾರಿನಂಶ ಅಧಿಕವಿರುವ ಆಹಾರವನ್ನು ತಿನ್ನಿ.

ಆರೋಗ್ಯಕರ ಕೊಬ್ಬನ್ನು ತಿನ್ನಿ
ಕೆಲವರು ದಪ್ಪಗಾಗುತ್ತೇವೆ ಎಂದು ಕೊಬ್ಬಿನಂಶ ತಿನ್ನುವುದನ್ನೇ ನಿಲ್ಲಿಸಿ ಬಿಡುತ್ತಾರೆ. ಆದರೆ ದೇಹ ಆರೋಗ್ಯಕರವಾಗಿರಲು ಒಮೆಗಾ 3 ಕೊಬ್ಬಿನಂಶವನ್ನು ತಿನ್ನಬೇಕು.

ಸರಿಯಾದ ಸಮಯಕ್ಕೆ ತಿನ್ನುವುದು
ಎಷ್ಟೇ ಕೆಲಸದ ಒತ್ತಡವಿರಲಿ ಸಮಯಕ್ಕೆ ಸರಿಯಾಗಿ ಆಹಾರವನ್ನು ತಿನ್ನುವ ಅಭ್ಯಾಸ ಒಳ್ಳೆಯದು.

ಜ್ಯೂಸ್
ಹಣ್ಣು ಮತ್ತು ತರಕಾರಿಗಳ ಜ್ಯೂಸ್ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ ಹಾಗೂ ತ್ವಚೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.



Click it and Unblock the Notifications











