Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪ್ಯೂರ್ ವೆಜ್ ಡಯಟ್ ನಿಂದ ಬಾಡಿ ಬಿಲ್ಡ್ ಮಾಡಿ!
ಬಾಯ್ಸ್ ಗೆ ಬಾಡಿ ಬಿಲ್ಡ್ ಕಡೆ ಒಲವು ಇದ್ದೇ ಇರುತ್ತದೆ. ಬಾಡಿ ಬಿಲ್ಡ್ ಮಾಡಬೇಕಾದರೆ ಜಿಮ್ ಗೆ ಹೋಗಬೇಕು, ಕಠಿಣ ವ್ಯಾಯಾಮ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಡಯಟ್ ಸರಿಯಾಗಿರಬೇಕು. ಬಾಡಿ ಬಿಲ್ಡ್ ಗಾಗಿ ಮಾಡಲು ಮೊಟ್ಟೆ ಮಾಂಸಾಹಾರ ತಿನ್ನಬೇಕು, ಹಾಗಾದರೆ ಬರೀ ಸಸ್ಯಹಾರ ತಿನ್ನುವವರು ಏನು ಮಾಡಬೇಕು? ಸಸ್ಯಾಹಾರ ಮಾತ್ರ ತಿನ್ನುವವರಿಗೆ ಬಾಡಿ ಬಿಲ್ಡ್ ಮಾಡಲು ಡಯಟ್ ದೊಡ್ಡ ಸಮಸ್ಯೆಯಾಗಿರುತ್ತದೆ? ನೀವು ಕೂಡ ವೆಜೆಟೇರಿಯನ್ ಆಗಿದ್ದು ಸಲ್ಮಾನ್ ಖಾನ್ ತರಹ ಕಟ್ಟುಮಸ್ತಾದ ಬಾಡಿ ಬೇಕೆಂದು ಬಯಸುವುದಾದರೆ ವೆಜ್ ಡಯಟ್ ನಿಂದಲೂ ಮಾಡಬಹುದು. ಬಾಡಿ ಬಿಲ್ಡ್ ಗೆ ಸಹಕಾರಿಯಾದ ಆ ತರಕಾರಿಗಳು ಯಾವುವು ಎಂದು ನೋಡೋಣ ಬನ್ನಿ:

ಬ್ರೊಕೋಲಿ:
ತೆಳ್ಳಗಿನ ಮೈಕಟ್ಟಿಗೆ ಬ್ರೊಕೋಲಿ ತಿನ್ನಿ ಎಂದು ಅನೇಕ ಲೇಖನದಲ್ಲಿ ಹೇಳಿದ್ದೇವೆ. ಬ್ರೊಕೋಲಿಯನ್ನು ತೆಳ್ಳಗಾಗಲು ಮಾತ್ರವಲ್ಲ, ಬಾಡಿ ಬಿಲ್ಡ್ ಗೂ ತಿನ್ನಿ. ಏಕೆಂದರೆ ಇದರಲ್ಲಿರುವ ಪೋಷಕಾಂಶಗಳು ರಕ್ತಕಣಗಳನ್ನು ಹೆಚ್ಚು ಮಾಡಿ ದೇಹದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ.

ಪೀನಟ್ ಬಟರ್ :
ನೆಲಗಡಲೆಯಿಂದ ತಯಾರಿಸುವ ಈ ಬಟರ್ ನಲ್ಲಿ ಮೆಗ್ನಿಶಿಯಂ ಮತ್ತು ಫೋಲೆಟ್ ಅಂಶವಿದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ದವಸ ಧಾನ್ಯಗಳು:
ದವಸಧಾನ್ಯಗಳಲ್ಲಿರುವ ಕಾರ್ಬೋಹೈಡ್ರೇಟ್ ನಿಮ್ಮ ಮಸಲ್ ಪವರ್ ಅನ್ನು ಹೆಚ್ಚು ಮಾಡುತ್ತದೆ. ಇದನ್ನು ಪ್ರತಿನಿತ್ಯದ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಜೋಳದ ಹಿಟ್ಟು:
ಇದೊಂದು ಬಗೆಯ ಧಾನ್ಯವಾಗಿದ್ದು ಇದರಿಂದ ಆಹಾರ ಪದಾರ್ಥಗನ್ನು ತಯಾರಿಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಅಮೈನೊ ಆಸಿಡ್ ಬಾಡಿ ಬಿಲ್ಡ್ ಗೆ ಸಹಾಯವಾಗುತ್ತದೆ.

ಚೀಸ್ :
ಕಡಿಮೆ ಕೊಬ್ಬಿನಂಶವಿರುವ ಚೀಸ್ ಅನ್ನು ಆಹಾರದಲ್ಲಿ ಸೇರಿಸಿದರೆ ಸ್ನಾಯುಗಳು ಬಲವಾಗುತ್ತದೆ ಹಾಗೂ ಬಾಡಿ ಬಿಲ್ಡ್ ಗೆ ಸಹಾಯ ಮಾಡುತ್ತದೆ.

ಸಿಹಿ ಗೆಣಸು:
ವ್ಯಾಯಾಮ ಮಾಡುವಾಗ ಅಧಿಕ ಶಕ್ತಿ ಬೇಕಾಗುತ್ತದೆ. ಸಿಹಿಗೆಣಸು ತಿಂದರೆ ದೆಹಕ್ಕೆ ಶಕ್ತಿಯನ್ನು ತುಂಬುತ್ತದೆ.

ಬಾಳೆಹಣ್ಣು:
ಇದರಲ್ಲಿರುವ ಕ್ಯಾಲ್ಸಿಯಂ ಅಂಶ ಸ್ನಾಯು ಹಾಗೂ ಮೂಳೆಯನ್ನು ಬಲಪಡಿಸಲು ಸಹಕಾರಿಯಾಗಿದೆ.

ಜೋಳದ ಹಿಟ್ಟು:
ಇದೊಂದು ಬಗೆಯ ಧಾನ್ಯವಾಗಿದ್ದು ಇದರಿಂದ ಆಹಾರ ಪದಾರ್ಥಗನ್ನು ತಯಾರಿಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಅಮೈನೊ ಆಸಿಡ್ ಬಾಡಿ ಬಿಲ್ಡ್ ಗೆ ಸಹಾಯವಾಗುತ್ತದೆ.

ಟೊಮೆಟೊ ಸೂಪ್:
ಬಾಡಿ ಬಿಲ್ಡ್ ಮಾಡುವವರು ತಮ್ಮ ಆಹಾರಕ್ರಮದಲ್ಲಿ ಟೊಮೆಟೊ ಸೂಪ್ ಅನ್ನು ಸೇರಿಸುವುದು ಒಳ್ಳೆಯದು. ಟೊಮೆಟೊದಲ್ಲಿರುವ ಲೈಕೊಪೆನೆ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ.

ಅಣಬೆ:
ಅಣಬೆಯನ್ನು ಕೆಲವು ಸಸ್ಯಾಹಾರಿಗಳು ತಿನ್ನುವುದಿಲ್ಲ. ಆದರೆ ಅಣಬೆಯಲ್ಲಿ ಅಧಿಕ ವಿಟಮಿನ್ ಗಳು ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆ ತಿನ್ನದವರು ಬಾಡಿ ಬಿಲ್ಡ್ ಗೆ ಅಣಬೆಯನ್ನು ತಿನ್ನಬಹುದು. ಅಣಬೆ ಬೇಡದ ಕಣಗಳ ಉತ್ಪತ್ತಿಯನ್ನು ತಡೆದು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.



Click it and Unblock the Notifications
