Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತಿನ್ನುವ ವಿಷಯದಲ್ಲಿ ಈ 5 ತಪ್ಪು ಮಾಡಬೇಡಿ!

ಕೆಲವೊಂದು ಆರೋಗ್ಯಕರ ಆಹಾರವನ್ನು ಸರಿಯಾದ ಕ್ರಮದಲ್ಲಿ ತಿನ್ನದಿದ್ದರೆ ಅದರಿಂದ ದೇಹಕ್ಕೆ ಯಾವುದೇ ಪ್ರಯೋನವಿಲ್ಲ. ಆ ರೀತಿ ತಿನ್ನುವುದನ್ನು ಕೆಟ್ಟದಾಗಿ ತಿನ್ನುವ ಅಭ್ಯಾಸ ಎಂದು ಕರೆಯಬಹುದು. ಈಗ ನಿಮಗೆ ಯಾವ ರೀತಿ ತಿನ್ನುವುದು ಕೆಟ್ಟ ಸಂಶಯ ಬಂದಿರಬಹುದಲ್ಲವೇ? ಈ ಕೆಳಗಿನಂತೆ ತಿನ್ನುವ ಅಭ್ಯಾಸವನ್ನು ಕೆಟ್ಟದಾಗಿ ತಿನ್ನುವ ಅಭ್ಯಾಸ ಅನ್ನಬಹುದಾಗಿದ್ದು ಆರೋಗ್ಯದ ದೃಷ್ಟಿಯಿಂದ ಈ ರೀತಿ ತಿನ್ನುವ ಅಭ್ಯಾಸ ಬಿಡುವುದು ಒಳ್ಳೆಯದು.
1. ಓಡಾಡುತ್ತಾ ತಿನ್ನುವುದು: ಒಂದು ಕಡೆ ಕೂತು ತಿನ್ನಲು ಪುರುಸೊತ್ತು ಇರುವುದಿಲ್ಲ. ಬೆಳಗ್ಗೆ ಆಫೀಸ್‌ಗೆ ಹೊರಡುತ್ತಾ ಒಂದೊಂದು ಚಮಚ ಆಹಾರ ಬಾಯಿಗೆ ಹಾಕಿ ರೆಡಿಯಾಗುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ. ಈ ರೀತಿಯ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಈ ರೀತಿ ತಿಂದರೆ ಎಷ್ಟು ಪ್ರಮಾಣದಲ್ಲಿ ತಿಂದೆವು ಎಂದು ಗೊತ್ತಾಗುವುದಿಲ್ಲ, ಹೊಟ್ಟೆ ತುಂಬಿದ ರೀತಿ ಅನಿಸುವುದಿಲ್ಲ. ಆದ್ದರಿಂದ ಅಧಿಕ ತಿನ್ನುವ ಸಾಧ್ಯತೆ ಹೆಚ್ಚು. ಆದ್ದರಿಂದ ತಿನ್ನುವಾಗ ಕೆಲಸ ಮಾಡುತ್ತಾ ತಿನ್ನುವುದು, ಓಡಾಡುತ್ತಾ ತಿನ್ನುವುದು ಮಾಡದೆ ಒಂದು ಕಡೆ ಕೂತು ತಿನ್ನಿ, ಈ ರೀತಿ ಮಾಡಿದರೆ ಮನಸ್ಸಿಗೆ ತೃಪ್ತಿ, ಆರೋಗ್ಯಕ್ಕೆ ಒಳ್ಳೆಯದು.
2. ಅಗತ್ಯಕ್ಕಿಂತ ಹೆಚ್ಚು ತಿನ್ನುವುದು: ರುಚಿಯಾದ ಆಹಾರ ತಟ್ಟೆಯಲ್ಲಿದ್ದರೆ ಅಗತ್ಯಕ್ಕಿಂತ ಅಧಿಕ ತಿನ್ನುತ್ತೇವೆ. ಆದರೆ ಈ ಅಭ್ಯಾಸವನ್ನು ಬಿಡಬೇಕು, ಆದ್ದರಿಂದ ತಟ್ಟೆಗೆ ಹಾಕುವಾಗ ಮಿತಿಯಲ್ಲಿ ಹಾಕಿದರೆ ಒಳ್ಳೆಯದು. ಒಂಟಿಯಾಗಿರುವಾಗ ಏನಾದರೂ ತಿನ್ನುತ್ತಿರುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ. ಅಂತಹವರು ತಮ್ಮ ಗಮನವನ್ನು ಬೇರೆ ಕಡೆ ಹರಿಸುವುದು ಆರೋಗ್ಯಕ್ಕೆ ಒಳ್ಳೆಯದು.
3. ಕೆಲಸದ ಒತ್ತಡ ಕಳೆಯಲು ತಿನ್ನುವುದು: ತುಂಬಾ ಕೆಲಸವಿದ್ದಾಗ ವಿಪರೀತ ಒತ್ತಡವಿರುತ್ತದೆ. ಈ ಒತ್ತಡ ಕಡಿಮೆಯಾಗಲು ಚಿಪ್ಸ್ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಇದರ ಬದಲು ವಿಶ್ರಾಂತಿ ಪಡೆಯಲು ಹೊರಗೆ ಬಂದು ಸ್ವಲ್ಪ ಹೊತ್ತು ಅಡ್ಡಾಡುವುದು, ಸ್ನೇಹಿತರನ್ನು ಮಾತನಾಡಿಸುವುದು ಅಥವಾ 5 ನಿಮಿಷ ಸುಮ್ಮನೆ ಕೂರುವುದು ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ.
4. ಊಟ ಬಿಡುವುದು: ಸ್ವಲ್ಪ ದಪ್ಪ ಅಧಿಕವಿರುವವರಗೆ ಈ ಅಭ್ಯಾಸ ಜಾಸ್ತಿ. ಒಂದು ಅಥವಾ 2 ಹೊತ್ತು ತಿನ್ನದಿದ್ದರೆ ತೂಕ ಕಡಿಮೆಯಾಗಬಹುದೆಂದು ಭಾವಿಸುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ದೇಹದ ತೂಕ ಮತ್ತು ಅನಾರೋಗ್ಯ ಅಧಿಕವಾಗುತ್ತದೆ. ಏಕೆಂದರೆ 2 ಹೊತ್ತು ಹಸಿವಿನಿಂದ ಕೂತು ನಂತರ ಸ್ವಾಭಾವಿಕವಾಗಿ ಸ್ವಲ್ಪ ಅಧಿಕ ಊಟ ಮಾಡಿಬಿಡುತ್ತೇವೆ, ಅಲ್ಲದೆ ಊಟ ಬಿಟ್ಟು ನಿಶ್ಯಕ್ತಿ , ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಬರಲು ಕಾರಣವಾಗುತ್ತದೆ. ಆದ್ದರಿಂದ ಊಟವನ್ನು ಮಿತಿಯಲ್ಲಿ 3 ಹೊತ್ತು ತಿನ್ನುವ ಅಭ್ಯಾಸ ಒಳ್ಳೆಯದು. ಇದರಿಂದ ದೇಹದ ತೂಕ ಹೆಚ್ಚುವುದಿಲ್ಲ, ಆರೋಗ್ಯ ಕೆಡುವುದಿಲ್ಲ.
5. ತಡರಾತ್ರಿ ತಿನ್ನುವುದು: ರಾತ್ರಿ 8-10 ಗಂಟೆ ಒಳಗೆ ತಿನ್ನುವುದು ಒಳ್ಳೆಯದು. ಊಟವಾದ ನಂತರ ನಿದ್ದೆ ಮಾಡಬಾರದು, ಆದರೆ ತಡರಾತ್ರಿ ನಿದ್ದೆ ಮಾಡಿದರೆ ಊಟವಾದ ನಂತರ ನಿದ್ದೆ ಮಾಡುತ್ತೇವೆ. ಇದರಿಂದ ದಪ್ಪಗಾಗುವ ಸಾಧ್ಯತೆ ಹೆಚ್ಚು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
