Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಾರಾಂತ್ಯದ ಪಾರ್ಟಿಯಲ್ಲಿ ಡಯಟ್ ಹೇಗೆ?

1. ಮಿತಿ ಆಹಾರ: ತೂಕ ಕಡಿಮೆಯಾಗಬೇಕೆಂದು ಬಯಸುವವರು ಅಧಿಕ ತರಕಾರಿ ಹಾಕಿರುವ ಆಹಾರವನ್ನು ಆಯ್ಕೆ ಮಾಡಬೇಕು. ಚಿಕ್ಕನ್, ಫಿಶ್ ಬೇಕೆನ್ನುವವರು ಅವುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು.
2. ರೆಸ್ಟೋರೆಂಟ್ ಆಯ್ಕೆ: ಅಧಿಕ ಕೊಬ್ಬಿನಂಶದ ಆಹಾರದ ಬದಲು ಸಲಾಡ್ , ಕಡಿಮೆ ಕೊಬ್ಬಿನ ಮಾಂಸಾಹಾರ ಮತ್ತು ಆರೋಗ್ಯಕರ ಸ್ಯಾಂಡ್ ವಿಚ್ ದೊರೆಯುವ ರೆಸ್ಟೋರೆಂಟ್ ಆಯ್ಕೆ ಮಾಡಬೇಕು. ಅಲ್ಲಿ ನಿಮ್ಮ ಆಯ್ಕೆ ಅಂದರೆ ನೀವು ಕಡಿಮೆ ಕೊಬ್ಬಿನಂಶ ಹಾಕಿದ ಆಹಾರ ಕೇಳಿದರೆ ಆ ರೀತಿ ಮಾಡಿ ಕೊಡುವ ರೆಸ್ಟೋರೆಂಟ್ ಗಳ ಆಯ್ಕೆ ಒಳ್ಳೆಯದು.
3. ಜ್ಯೂಸ್: ಹೊರಗಡೆ ತಿನ್ನುವಾಗ ತಂಪು ಪಾನೀಯ ಬದಲು ತಾಜಾ ಜ್ಯೂಸ್ ಕುಡಿಯಬೇಕು.
4. ಆಹಾರದ ತಯಾರಿ: ಹೋಟೆಲ್ ಗಳಿಗೆ ಹೋಗುವಾಗ ಅದನ್ನು ಯಾವ ರೀತಿಯಲ್ಲಿ ತಯಾರಿಸುತ್ತಾರೆ ಎನ್ನುವುದು ಕೂಡ ಗಮನದಲ್ಲಿರಬೇಕು. ಏಕೆಂದರೆ ಅಣಬೆ ಆರೋಗ್ಯಕ್ಕೆ ಒಳ್ಳೆಯದು ಆದರೆ ಅಧಿಕ ಬೆಣ್ಣೆ ಹಾಕಿ ತುಂಬಾ ಹುರಿದ ಅಣಬೆ ಪದಾರ್ಥ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಎಣ್ಣೆಯಲ್ಲಿ ಕರಿದ ಪದಾರ್ಥವನ್ನು ಮಿತವಾಗಿ ಸೇವಿಸಬೇಕು.
5. ಇಷ್ಟವಾದ ಪದಾರ್ಥದ ಆಯ್ಕೆ: ಇಷ್ಟವಾದ ಪದಾರ್ಥ ಆಯ್ಕೆ ಅಂದರೆ ಒಂದು ವೇಳೆ ನೀವು ಆಲೂಗೆಡ್ಡೆ ಪದಾರ್ಥ ಮತ್ತು ಫಿಂಗರ್ ಚಿಪ್ಸ್ ತುಂಬಾ ಇಷ್ಟ ಪಡುವವರಾದರೆ ಅವತ್ತು ಆಲೂಗೆಡ್ಡೆ ಪದಾರ್ಥ ಸೇವಿಸಿ, ಫಿಂಗರ್ ಚಿಪ್ಸ್, ಬ್ರೆಡ್ ಮುಂತಾದವುಗಳ ಕಡೆ ತಿರುಗಿ ಕೂಡ ನೋಡ ಬೇಡಿ. ಎಲ್ಲಾ ಇಷ್ಟ ಪದಾರ್ಥ ಜೊತೆಗೆ ಸೇವಿಸುವ ಬದಲು ಅದರಲ್ಲಿ ಆಯ್ಕೆ ಮಾಡಿ.
6. ಗ್ರಿಲ್ಡ್: ಗ್ರಿಲ್ಡ್ ಪದಾರ್ಥಗಳಲ್ಲಿ ಕಡಿಮೆ ಕೊಬ್ಬಿನಂಶ ಇರುವುದರಿಂದ ಕರಿದ ಪದಾರ್ಥ ಕ್ಕಿಂತ ಬೇಯಿಸಿದ ಅಥವಾ ಗ್ರಿಲ್ಡ್ ಆಹಾರ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
