Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೊಲೆಸ್ಟ್ರಾಲ್ ಕರಗಿಸುವ ಪರಿಣಾಮಕಾರಿ ಪಾನೀಯವಿದು

ಅದಕ್ಕೆ ಹೆಚ್ಚು ಶ್ರಮ ಪಡುವ ಅಗತ್ಯವೂ ಇಲ್ಲ. ರುಚಿಯೊಂದಿಗೆ ಕೊಬ್ಬು ಕರಗಿಸುವ ಈ ಪಾನೀಯ ಸುಲಭವಾಗಿ ನಿಮ್ಮನ್ನು ಸ್ಲಿಮ್ ಮಾಡುತ್ತೆ.
ತೂಕ ಕಡಿಮೆ ಮಾಡುವ ನಾಲ್ಕು ರೀತಿಯ ಪಾನೀಯ:
* ಗ್ರೀನ್ ಟೀ: ಗ್ರೀನ್ ಟೀ ಉಪಯೋಗದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ದೇಹಕ್ಕೆ, ಚರ್ಮಕ್ಕೆ ಮತ್ತು ಕೂದಲಿಗೆ ಆರೋಗ್ಯಕರವಾಗಿರುವ ಈ ಗ್ರೀನ್ ಟೀಯನ್ನು ಮನೆಯಲ್ಲೇ ಮಾಡಿ ಕುಡಿದರೆ ಹೊಟ್ಟೆಯಲ್ಲಿ ಸೇರಿಕೊಂಡ ಬೊಜ್ಜು ಕರಗುತ್ತದೆ.
ಅಂಗಡಿಯಲ್ಲಿ ಲಭ್ಯವಿರುವ ಗ್ರೀನ್ ಟೀ ಸೊಪ್ಪು ಅಥವಾ ಗ್ರೀನ್ ಟೀ ಬ್ಯಾಗ್ ಖರೀದಿಸಿ ಅದನ್ನು ನೀರಿನಲ್ಲಿ ನೆನೆಹಾಕಿ ಕೆಲವು ಹನಿ ನಿಂಬೆ ರಸ ಬೆರೆಸಿ ಒಂದು ರಾತ್ರಿ ಬಿಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸಿದರೆ ವಿಟಮಿನ್ ಸಿ, ಆಂಟಿಯಾಕ್ಸಿಡಂಟ್ ಸಂಪೂರ್ಣ ದೊರೆತು ಬೊಜ್ಜು ಕರಗುವುದಲ್ಲದೆ ದಿನವಿಡೀ ಚೈತನ್ಯದಿಂದಿರಲು ಸಹಕಾರಿ. ಗ್ರೀನ್ ಮಾತ್ರ ಅಲ್ಲ, ಬ್ಲಾಕ್ ಟೀ ಕೂಡ ಒಳ್ಳೇದು
* ಸಿಟ್ರಸ್ ಜ್ಯೂಸ್: ಇದು ತೂಕ ಇಳಿಸಿಕೊಳ್ಳಲು ಅತಿ ಪರಿಣಾಮಕಾರಿ ಮತ್ತು ಆರೋಗ್ಯಕರ ಮಾರ್ಗ. ಸಿಟ್ರಸ್ ಜ್ಯೂಸ್ ದೇಹದ ಬೊಜ್ಜನ್ನು ಕರಗಿಸುವುದಷ್ಟೇ ಅಲ್ಲ, ಚರ್ಮಕ್ಕೆ ಕಾಂತಿಯನ್ನೂ ನೀಡುತ್ತದೆ. ದೇಹದಲ್ಲಿರುವ ಅಧಿಕ ಕ್ಯಾಲೊರಿಗಳನ್ನು ಕರಗಿಸಿ ಆರೋಗ್ಯಕರವಾಗಿಡುತ್ತದೆ. ನಿಂಬೆ ಶರಬತ್ತು. ಕಿತ್ತಳೆ ಜ್ಯೂಸ್, ದ್ರಾಕ್ಷಿ ಜ್ಯೂಸ್ ಮುಂತಾದುವು ಇದಕ್ಕೆ ಸಹಕಾರಿ.
ದ್ರಾಕ್ಷಿಯಲ್ಲಿ ಹೆಚ್ಚಿನ ನಾರಿನಂಶ, ಪೋಷಕಾಂಶ, ಕಾರ್ಬೊಹೈಡ್ರೇಡ್ ಇರುವುದರಿಂದ ತೂಕ ಇಳಿಸಲು ಇದರ ಅವಶ್ಯಕತೆ ಹೆಚ್ಚು. ನಿಂಬೆ ಜ್ಯೂಸ್ ಕುಡಿಯಬೇಕೆಂದರೆ ಸಕ್ಕರೆರಹಿತ ಒಳ್ಳೆಯದು. ಉಪ್ಪಿನೊಂದಿಗೆ ನಿಂಬೆ ಜ್ಯೂಸ್ ಕುಡಿಯಬಹುದು. ಒಂದು ಲೋಟ ಬಿಸಿ ನೀರಿಗೆ ಕೆಲವು ಹನಿ ನಿಂಬೆರಸ ಸೇರಿಸಿ ಕುಡಿದರೆ ತೂಕ ಇಳಿಯುವುದು ಸುಲಭವಾಗುತ್ತೆ.
* ಆಪಲ್ ಸೈಡರ್ ವೆನಿಗರ್: ತಣ್ಣಗಿನ ನೀರು ಮತ್ತು ಜೇನಿನೊಂದಿಗೆ ಆಪಲ್ ಸೈಡರ್ ವೆನಿಗರ್ ಬೆರೆಸಿ ಕುಡಿದರೆ ಕೊಬ್ಬನ್ನು ಕರಗಿಸುವ ಪಾನೀಯವಾಗುತ್ತೆ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ದೇಹದಲ್ಲಿ ಬೊಜ್ಜಾಗುವ ವಿಷಕಾರಿ ಅಂಶವನ್ನು ನಿವಾರಣೆ ಮಾಡುತ್ತೆ. ಊಟಕ್ಕೆ ಮುನ್ನ ಈ ಪಾನೀಯ ಸೇವಿಸಿದರೆ ಉತ್ತಮ. ಇದು ಹಸಿವು ನಿಯಂತ್ರಿಸಿ ಹೆಚ್ಚು ತಿನ್ನುವುದನ್ನು ತಪ್ಪಿಸುತ್ತದೆ. ಹೊಟ್ಟೆಯಲ್ಲಿ ಬೊಜ್ಜು ತುಂಬಿಕೊಂಡಿದ್ದರೆ ಈ ಪಾನೀಯವನ್ನು ದಿನಕ್ಕೆ ಎರಡು ಬಾರಿ ಸೇವಿಸಬಹುದು.
* ಕಾಫಿ: ತೂಕ ಕಡಿಮೆ ಮಾಡುವಲ್ಲಿ ಕಾಫಿ ಸೇವನೆ ಕೂಡ ಸಹಾಯ ಮಾಡುತ್ತೆ. ಕಾಫಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಬೊಜ್ಜು ನಿವಾರಣೆಯಾಗುತ್ತದೆ. ಕೋಕೊ, ಕಾಫಿ, ಟೀ, ಕೋಲಾ ನಟ್ ಮುಂತಾದುವನ್ನು ದಿನಕ್ಕೆ ಒಂದು ಕಪ್ ಸೇವಿಸಿದರೆ ಸಾಕು. ಕಾಫಿ ಸೇವನೆ ಹೆಚ್ಚಾದರೆ ವ್ಯತಿರಿಕ್ತ ತೊಂದರೆಯುಂಟಾಗುತ್ತದೆ.
ಯಾವುದೇ ಹೆಚ್ಚು ಶ್ರಮ ಪಡದೆ ದೇಹದ ತೂಕವನ್ನು ಇಳಿಸುವ ಮಾರ್ಗ ಈ ನಾಲ್ಕು ಪಾನೀಯಗಳ ಸೇವನೆ. ತೂಕ ಕಡಿಮೆ ಮಾಡಿಕೊಳ್ಳುವುದರೊಂದಿಗೆ ದಿನವಿಡೀ ಚೈತನ್ಯದಿಂದಿರಲು ಈ ಪಾನೀಯ ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
