Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಸಿಕ್ಸ್ ಪ್ಯಾಕ್ ಬೇಕೆಂದರೆ ಈ ಆಹಾರ ತ್ಯಜಿಸಿ

ಸಿಕ್ಸ್ ಪ್ಯಾಕ್ ಪಡೆಯಲು ಯಾವ ಆಹಾರ ಸೇವಿಸಬಾರದು?
* ಪಾಲಿಶ್ ಮಾಡಿದ ಅಕ್ಕಿ: ಪಾಲಿಶ್ ಮಾಡಿದ ಅಕ್ಕಿ ಮತ್ತು ಸಕ್ಕರೆಯಲ್ಲಿ ಕೇವಲ ಸ್ಟಾರ್ಚ್ ಅಂಶ ಇದೆ ಎನ್ನಲಾಗಿದೆ. ಈ ಅಕ್ಕಿಯನ್ನು ಸಂಸ್ಕರಿಸುವಾಗ ಇದರಲ್ಲಿರುವ ಎಲ್ಲಾ ಪೋಷಕಾಂಶಗಳೂ ಕಳೆದುಹೋಗುವುದರಿಂದ ನೀವು ನಿಮ್ಮ ಡಯಟ್ ನಲ್ಲಿ ಬ್ರೆಡ್, ಮೈದಾ ಮತ್ತು ಅನ್ನ ಸೇರಿಸಿಕೊಂಡರೆ ಉಪಯೋಗಕ್ಕೆ ಬರುವುದಿಲ್ಲ.
* ಆಲೂ ಚಿಪ್ಸ್ ಮುಟ್ಟಲೇಬೇಡಿ: ಸಿಕ್ಸ್ ಪ್ಯಾಕ್ ಪಡೆಯಬೇಕಾದರೆ ಸ್ಟಾರ್ಚ್ ಇರುವ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಆಲೂಗಡ್ಡೆ ಚಿಪ್ಸ್ ತಿನ್ನುವ ಮೊದಲು ಯೋಚಿಸಿದರೆ ಒಳ್ಳೆಯದು. ಏಕೆಂದರೆ ಈ ಆಲೂ ಜೊತೆಯ ಎಣ್ಣೆ ದೇಹದಲ್ಲಿ ಬೊಜ್ಜಾಗಿ ಪರಿವರ್ತನೆಗೊಳ್ಳುತ್ತದೆ. ಆದ್ದರಿಂದ ಆಲೂಗಡ್ಡೆಯನ್ನು ಅಥವಾ ಹುರಿದ ಪದಾರ್ಥವನ್ನು ತಿನ್ನುವುದನ್ನು ತ್ಯಜಿಸಬೇಕು.
* ಸಕ್ಕರೆ ಬದಲಿಗಳನ್ನು ಗಮನಿಸಿ: ಡಯಟ್ ಗೆಂದು ಸಕ್ಕರೆ ಬಳಸದೆ ಅದರ ಬದಲಾಗಿ ಬೆಲ್ಲದ ಪಾಕ ಮತ್ತು ಕೆಲವು ಸಕ್ಕರೆ ಬದಲಿಗಳನ್ನು ಉಪಯೀಗಿಸುತ್ತಿದ್ದರೆ ಅವುಗಳಲ್ಲಿ ಗ್ಲೂಕೋಸ್ ಮತ್ತು ಕಾರ್ಬೊಹೈಡ್ರೇಡ್ ಹೆಚ್ಚಿರುತ್ತದೆ ಎಂಬುದನ್ನು ಗಮನಿಸಿ. ಸಕ್ಕರೆ ಬದಲಾಗಿ ಬಳಸುವ ಕಾರ್ನ್ ಶುಗರ್ ನಲ್ಲಿ ಲಿವರ್ ಗೆ ಹಾನಿ ಮಾಡುವ ಅಂಶವಿದೆ ಎನ್ನಲಾಗಿದೆ. ಸಕ್ಕರೆ ಬದಲಾಗಿ ಜೇನನ್ನು ಬಳಸಿದರೆ ತೊಂದರೆಯಿಲ್ಲ. ಸಕ್ಕರೆ ದೇಹದಲ್ಲಿ ಕೊಬ್ಬು ಸೇರಿಕೊಳ್ಳುವಂತೆ ಮಾಡುತ್ತದೆ. ಇದರೊಂದಿಗೆ ಟೈಪ್ 2 ಡಯಾಬಿಟೀಸ್ ಕೂಡ ಬರುವ ಸಾಧ್ಯತೆಯಿದೆ.
* ಪ್ಯಾಕ್ ಅಥವಾ ಶೇಖರಿಸಿಟ್ಟ ಆಹಾರ: ಶೇಖರಿಸಿಟ್ಟ ಆಹಾರ ಪದಾರ್ಥಗಳನ್ನು ಮುಂಚೆಯೇ ಫ್ರೀಝ್ ಮಾಡಲಾಗಿರುವುದರಿಂದ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಈ ಪ್ಯಾಕ್ ಮಾಡಿದ ಆಹಾರದಲ್ಲಿನ ಸ್ವಲ್ಪ ಎಣ್ಣೆಯೂ ಕೂಡ ವಿಷಕಾರಿ ಬೊಜ್ಜಾಗಿ ಬದಲಾಗುತ್ತದೆ. ಇದರ ಮೇಲೆ ಲೋ ಫ್ಯಾಟ್ ಎಂದು ಲೇಬಲ್ ಇದ್ದರೂ ಸಹ ಇದು ಅಪಾಯಕಾರಿ ಎಂದೇ ಹೇಳಬಹುದು.
* ಬೀದಿ ಬದಿಯ ಆಹಾರಕ್ಕೆ ನೋ ಎನ್ನಿ: ಪಿಜ್ಜಾ ಮತ್ತು ಇನ್ನಿತರ ಬೀದಿ ಬದಿ ಮಾರಾಟ ಮಾಡುವ ಆಹಾರಗಳಲ್ಲಿ ಕ್ಯಾಲೊರಿ ಅಧಿಕವಿರುತ್ತದೆ. ಇವುಗಳನ್ನು ಹಳೆಯ ಎಣ್ಣೆಯಿಂದ ತಯಾರಿಸುವುದರಿಂದ ಬೊಜ್ಜನ್ನು ಸುಲಭವಾಗಿ ತರುತ್ತದೆ. ಅಷ್ಟೇ ಅಲ್ಲ, ಇದು ರಕ್ತನಾಳಗಳನ್ನು ತಡೆಹಿಡಿಯುತ್ತದೆ ಮತ್ತು ಸಕ್ಕರೆ ಕಾಯಿಲೆ ತರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
